ಕನ್ನಡ ಟಿವಿ ಸೀರಿಯಲ್ ನೋಡುವವರಿಗೆಲ್ಲ ರಂಜನಿ ರಾಘವನ್ ಪರಿಚಯ ಇರುತ್ತದೆ. ಅದು ಪುಟ್ಟಗೌರಿ ಮಹಾತ್ಮೆ. ಕಿರುತೆರೆ ವೀಕ್ಷಕರು ಮನೆ ಮಗಳೆಂದೇ ಪರಿಗಣಿಸಲ್ಪಟ್ಟಿರುವ ಪುಟ್ಟ ಗೌರಿ ಕನ್ನಡತಿ ರಂಜನಿ ರಾಘವನ್. ಪುಟ್ಟಗೌರಿಯ ಮುಗ್ಧ ಹುಡುಗಿ ಪಾತ್ರದಲ್ಲಿ ವೀಕ್ಷಕರ ಮನ ಗೆದ್ದಿದ್ದ ರಂಜನಿ, ನಂತರ ಕನ್ನಡತಿ ಧಾರಾವಾಹಿಯ ಮೂಲಕ ಮನಗೆದ್ದರು. ಪುಟ್ಟಗೌರಿಯ ಪಾತ್ರಕ್ಕೆ ಹೋಲಿಸಿದರೆ, ಪ್ರಬುದ್ಧ ಪಾತ್ರವಾಗಿತ್ತು ಕನ್ನಡತಿ ಧಾರಾವಾಹಿಯ ಪಾತ್ರ. ಅವರಿಗೆ ಎಲ್ಲೇ ಹೋಗಲಿ.. ಮದುವೆ ಯಾವಾಗ ಅನ್ನೋ ಪ್ರಶ್ನೆ ಎದುರಾಗುತ್ತಲೇ ಇತ್ತು.
ಇದೀಗ ತಮ್ಮ ಬಾಯ್ ಫ್ರೆಂಡ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಸಾಗರ್ ಭಾರದ್ವಾಜ್ ಜೊತೆಗಿನ ಫೋಟೋ ಹಂಚಿಕೊಂಡ ರಂಜನಿ ರಾಘವನ್ ಅವರು “ನನ್ ಹುಡುಗ, ಜೀವನ ಸಂಗಾತಿ, BFF” ಎಂದು ಹೇಳಿಕೊಂಡಿದ್ದಾರೆ.
ರಂಜನಿ ರಾಘವನ್ ಅವರಿಗೆ ಈಗ 30 ವರ್ಷ ದಾಟಿದೆ. ಹೀಗಾಗಿ ಎಲ್ಲಿಯೇ ಹೋದರ.. ಮದ್ವೆ ಯಾವಾಗ ಅನ್ನೋ ಪ್ರಶ್ನೆ ಎದುರಾಗುತ್ತಲೇ ಇತ್ತು. ಅವರ ಜೊತೆ ಪ್ರೀತಿ ಇದ್ಯಂತೆ, ಇವರ ಜೊತೆ ಲವ್ ಇದ್ಯಂತೆ ಎಂದೆಲ್ಲ ಸುದ್ದಿಗಳು ಹಬ್ಬಿದ್ದವು. ಅವುಗಳನ್ನೆಲ್ಲ ನಿರಾಕರಿಸಿದ್ದ ರಂಜನಿ, ತಮ್ಮ ಬಾಯ್ ಫ್ರೆಂಡ್ ಪರಿಚಯ ಮಾಡಿಕೊಟ್ಟಿದ್ದಾರೆ.
ರಂಜನಿ ರಾಘವನ್ ಅವರ ಹುಡುಗನ ಹೆಸರು ಸಾಗರ್ ಭಾರದ್ವಾಜ್. ಅಂತಾರಾಷ್ಟ್ರೀಯ ಬ್ಯಾಂಕ್ ಉದ್ಯೋಗಿ. ಸೈಕ್ಲಿಸ್ಟ್, ಬೈಕರ್, ರನ್ನರ್ ಕೂಡ ಹೌದು. ಇಲ್ಲಿಯವರೆಗೆ ಅವರು 20000 ಕಿಮೀ ಸೈಕಲ್ ರೈಡ್ ಮಾಡಿದ್ದು, 2000 ಕಿಮೀ ರನ್ನಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ 100000 ಕಿಮೀಗಳಿಗೂ ಜಾಸ್ತಿ ಬೈಕ್ ರೈಡ್ ಮಾಡಿದ್ದಾರೆ. ಅಂದಹಾಗೆ ಸಾಗರ್ ಮತ್ತು ರಂಜನಿ ಪಿಯುಸಿಯಿಂದ ಒಟ್ಟಿಗೇ ಓದಿದವರಂತೆ.
ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್. ಬೆಸ್ಟ್ ಫ್ರೆಂಡ್ಸ್ ಅಂತ ಇರುವವರೇ ಲೈಫ್ ಪಾರ್ಟ್ನರ್ ಆದ್ರೆ ಚೆನ್ನಾಗಿರುತ್ತೆ. ಪ್ರೀತಿ ಅಂದರೆ ಅದೊಂದು ಕಮಿಟ್‌ಮೆಂಟ್. ಇವತ್ತು ಪ್ರೀತಿ ಮಾಡಿ ನಾಳೆ ಕೋಪ ಮಾಡ್ಕೊಂದು ಬದಲಾಗೋದು ಪ್ರೇಮ ಅಲ್ಲ. ಅವರು ಹೇಗೆ ಇರುತ್ತಾರೆ ಹಾಗೆ ಒಪ್ಪಿಕೊಂಡು ಮುಂದೆ ಹೋಗೋದೇ ಕಮಿಟ್‌ಮೆಂಟ್ ಎಂದಿರುವ ರಂಜನಿ ರಾಘವನ್ ನಮ್ಮ ಎರಡು ಕುಟುಂಬದ ಕಡೆಯಿಂದಲೂ ಮದುವೆಗೆ ಸಮ್ಮತಿ ಇದೆ. ಮೊದಲಿಂದಲೂ ನಮ್ಮಿಬ್ಬರ ಬಗ್ಗೆ ಫ್ಯಾಮಿಲಿಯಲ್ಲಿ ಗೊತ್ತಿತ್ತು. ನನ್ನ ವೃತ್ತಿಗೆ ಸಾಗರ್ ಅವರ ಕುಟುಂಬದಿಂದಲೂ ಬೆಂಬಲವಿದೆ ಎಂದಿದ್ದಾರೆ.
ಸದ್ಯಕ್ಕೆ ಮದುವೆ ಪ್ಲಾನ್ ಮಾಡಿಲ್ಲ. ಇಬ್ಬರೂ ಕೆಲಸಗಳಲ್ಲಿ ಬ್ಯುಸಿ ಇದ್ದೇವೆ ಎಂದಿದ್ದಾರೆ ರಂಜನಿ ರಾಘವನ್. ಬರವಣಿಗೆಯಲ್ಲೂ ತೊಡಗಿಸಿಕೊಂಡಿರುವ ರಂಜನಿ ಅವರದ್ದು ಬಹುಮುಖ ಪ್ರತಿಭೆ. ಸದ್ಯಕ್ಕೆ ಸತ್ಯಂ, ಕಾಂಗರೂ, ನೈಟ್ ಕರ್ಫ್ಯೂ, ಸ್ವಪ್ನ ಮಂಟಪ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.
ಅತ್ತ ಸಾಗರ್ ಭಾರದ್ವಾಜ್ ಅವರು ತಮ್ಮ ಪಾಡಿಗೆ ತಾವು ಕೆಲಸ ಮತ್ತು ಸೈಕ್ಲಿಂಗ್ʻನಲ್ಲಿ ಬ್ಯುಸಿ. ಅವರ ಸೋಷಿಯಲ್ ಮೀಡಿಯಾ ಅಕೌಂಟ್ ಏನೋ ಇದೆ. ನೋಡಬಹುದಷ್ಟೇ.. ಕಾಂಟ್ಯಾಕ್ಟ್ ಮಾಡೋಕೆ ಆಗಲ್ಲ. ಒಟ್ಟಿನಲ್ಲಿ ಒಂದು ಹೊಸ ಲವ್ ಸ್ಟೋರಿ ಶುರುವಾಗಿದೆ.



