ಪುಟ್ಟಗೌರಿ ಮದುವೆ, ಕನ್ನಡತಿ ಧಾರಾವಾಹಿಗಳ ಮೂಲಕ ಕನ್ನಡದ ಮನೆ ಮನೆಯ ಮಾತನಾದ ರಂಜನಿ ರಾಘವನ್, ಇದೀಗ ಸೈಕಾಲಜಿಸ್ಟ್ ಆಗಿದ್ದಾರೆ. ಇದು ಪಕ್ಕಾ ಥ್ರಿಲ್ಲರ್ ಕಥೆ. ಆದಿತ್ಯ ಹೀರೋ ಆಗಿದ್ದು, ಇನ್ಸ್`ಪೆಕ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಿಶೋರ್ ಮೇಗಳಮನೆ ಡೈರೆಕ್ಟರ್. ಅವರಿಗೂ ಇದು ಮೊದಲ ಸಿನಿಮಾ.
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಫ್ಯಾಕ್ಟರಿ ಮಾಲೀಕರಾದ ಚನ್ನಕೇಶವ ಬಿ.ಸಿ. ನರಸಿಂಹಮೂರ್ತಿ ಚಕ್ರಭಾವಿ, ಸ್ವಾಮಿ ಚಕ್ರಭಾವಿ, ರಮೇಶ್ ಬಂಡೆ, ರವಿ ಕೀಲರ ಮಂಡ್ಯ ಮತ್ತು ರಾಮಚಂದ್ರಯ್ಯ ಕೆ.ಜಿ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿಂಗರ್ ಆಗಿ ಖ್ಯಾತಿ ಪಡೆದಿರುವ ಶಶಾಂಕ್ ಶೇಷಗಿರಿ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಉದಯ್ ಲೀಲಾ ಅವರ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಅವರ ಸಂಕಲನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.
ರಂಜನಿ ರಾಘವನ್-ಆದಿತ್ಯ ಕಾಂಬಿನೇಷನ್ನಿನ ಸಿನಿಮಾದಲ್ಲಿ ಶಿವಮಣಿ, ಅಶ್ವಿನ್ ಹಾಸನ್, ಕರಿಸುಬ್ಬು ಕೂಡಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಟೈಟಲ್ ಫೈನಲ್ ಆಗಿಲ್ಲ.
ಪದೇ ಪದೇ ಬರುವ ಮಿಸ್ಸಿಂಗ್ ಕಂಪ್ಲೇಂಟ್ಸ್, ಕ್ರೈಂ ಥ್ರಿಲ್ಲರ್ ಕಥೆ. ಪತಿ-ಪತ್ನಿಯಾಗಿರುವ ಆದಿತ್ಯ-ರಂಜನಿ ಅದನ್ನು ಭೇದಿಸಲು ಹೊರಡುತ್ತಾರೆ. ಇಡೀ ಕಥೆ ನಮ್ಮಿಬ್ಬರ ಪಾತ್ರದ ಮೇಲೆಯೇ ನಿಂತಿದೆ. ನಿರ್ದೇಶಕರಿಗೆ ಏನು ಬೇಕು ಅನ್ನೋದು ಪಕ್ಕಾ ಗೊತ್ತಿದೆ. ಸ್ಪಷ್ಟತೆ ಇದೆ ಎಂದಿದ್ದಾರೆ ರಂಜನಿ ರಾಘವನ್.



