ಪುನೀತ್ ರಾಜ್ ಕುಮಾರ್ ಮಗಳೀಗ ಪದವೀಧರೆ. ಡಿಗ್ರಿ ಮಾಡಿರೋದು ಅಮೆರಿಕದ ಯುನಿವರ್ಸಿಟಿಯಲ್ಲಿ. ಪುನೀತ್ ರಾಜ್ ಕುಮಾರ್ ಅವರಿಗೆ ತಾನು ಹೆಚ್ಚು ಓದಲಿಲ್ಲ ಅನ್ನೋ ಕೊರಗನ್ನು ಮಗಳು ನೀಗಿಸಿದ್ದಾರೆ. ಪುನೀತ್ ಅವರಿಗೆ ತಾನು ಹೆಚ್ಚು ಕಾಡುತ್ತಲೇ ಇತ್ತು. ಅದನ್ನು ಹಲವು ವೇದಿಕೆಗಳಲ್ಲಿ ಹೇಳಿಕೊಂಡಿದ್ದರೂ ಕೂಡಾ. ವಿದ್ಯಾಭ್ಯಾಸಕ್ಕಾಗಿ ಹಾತೊರೆಯುವವರಿಗೆ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿಯೇ ಕರ್ನಾಟಕ ರತ್ನವಾದವರು ಪುನೀತ್ ರಾಜ್ ಕುಮಾರ್. ತಮ್ಮ ಮಕ್ಕಳು ಹೆಚ್ಚು ಹೆಚ್ಚು ಓದಬೇಕು ಎಂದು ಕನಸು ಕಂಡಿದ್ದ ಅಪ್ಪು ಅವರ ಕನಸನ್ನು ಈಗ ಅವರ ಮಗಳು ಧೃತಿ ಈಡೇರಿಸಿದ್ದಾರೆ.
ಪುನೀತ್ ಅವರ ದೊಡ್ಡ ಮಗಳು ಧೃತಿ ನ್ಯೂಯಾರ್ಕ್ ಸಿಟಿಯಲ್ಲಿನ ʻಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್-ದಿ ನ್ಯೂ ಸ್ಕೂಲ್ʼ ಸಂಸ್ಥೆಯಲ್ಲಿ ಶಿಕ್ಷಣ ಪಡೆದು, ಪದವಿ ಪೂರೈಸಿದ್ದಾರೆ. ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಧೃತಿ ಪದವಿಯನ್ನು ಸ್ವೀಕರಿಸಿದ್ದಾರೆ. ಈ ವೇಳೆ ಅವರ ತಾಯಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ತಂಗಿ ವಂದಿತಾ, ಅಣ್ಣ ವಿನಯ್ ರಾಜ್ ಕುಮಾರ್ ಕೂಡ ಘಟಿಕೋತ್ಸವದಲ್ಲಿ ಭಾಗಿಯಾಗಿ ಶುಭ ಕೋರಿದ್ದಾರೆ.
ಮಗಳ ಸಾಧನೆಗೆ ದೊಡ್ಡಪ್ಪ ಶಿವ ರಾಜ್ ಕುಮಾರ್ ಫುಲ್ ಖುಷಿಯಾಗಿದ್ದಾರೆ. ಶಿವರಾಜ್ ಕುಮಾರ್ ಪುನೀತ್ ಮಗಳ ಸಾಧನೆಗೆ ಖುಷಿ ಹಂಚಿಕೊಂಡಿದ್ದು “ಹಾಯ್.. ಟೋಟೊ, ಕಂಗ್ರ್ಯಾಜುಲೇಷನ್ಸ್. ಈ ದಿನ ಬಹಳ ವಿಶೇಷವಾದ ದಿನ, ನಮ್ಮೆಲ್ಲರಿಗೂ ಬಹಳ ಹೆಮ್ಮೆಯ ದಿನ. ನೀನು ದೊಡ್ಡಪ್ಪನನ್ನು ತುಂಬಾ ಹೆಮ್ಮೆ ಪಡುವಂತೆ ಮಾಡಿದ್ದೀಯಾ. ಅಪ್ಪು, ಅಶ್ವಿನಿ, ನೀನು ಮತ್ತು ನುಕ್ಕಿ ಜೊತೆಗಿನ ಬಹಳಷ್ಟು ಒಳ್ಳೆಯ ನೆನಪುಗಳಿವೆ. ನೀನು ನಗುವಾಗ, ನಡೆಯುವಾಗ ಅಪ್ಪು ಬಂದಂತೆ, ನಿನ್ನಲಿಯೇ ಅಪ್ಪು. ನಮ್ಮೆಲ್ಲರ ಪ್ರೀತಿಯ ಅಪ್ಪುಗೆ. ನಿಮ್ಮ ಪದವಿಗಾಗಿ ಮತ್ತೊಮ್ಮೆ ಅಭಿನಂದನೆಗಳು ಟೋಟೊ” ಎಂದು ಶುಭ ಕೋರಿದ್ದಾರೆ. ಅಭಿಮಾನಿಗಳು ಖುಷಿಯಾಗಿದ್ದಾರೆ.
ಶಿವಣ್ಣ.. ಟೋಟೋ.. ನುಕ್ಕಿ.. ಅಂದ್ರೆ ಏನು ಅನ್ನೋ ಪ್ರಶ್ನೆ ಹಾಕಿದ್ದಾರೆ. ಟೋಟೋ ಅಂದ್ರೆ ಧೃತಿಯ ಪೆಟ್ ನೇಮ್. ಅಪ್ಪು ಇದ್ದಾಗಲೇ ನ್ಯೂಯಾರ್ಕ್‌ನಲ್ಲಿ ಡಿಸೈನರ್ ವಿಭಾಗದಲ್ಲಿ ಪದವಿ ಮಾಡಲು ಅಮೆರಿಕಾಗೆ ಫ್ಲೈಟ್ ಏರಿದ್ದರು ಧೃತಿ. ನ್ಯೂಯಾರ್ಕ್‌ನ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಸಂಸ್ಥೆಯಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿರುವಾಗಲೇ ಅಪ್ಪು ಹೃದಯಾಘಾತದಿಂದ ಇನ್ನಿಲ್ಲವಾದರು. ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಗೆ ಬಂದು ಹೋಗಿದ್ದ ಧೃತಿ, ನಂತರದ ತಿಂಗಳ ತಿಥಿಯ ಕಾರ್ಯಕ್ಕೂ ಇರಲಿಲ್ಲ. ಅಪ್ಪನ ಕನಸಿನಂತೆ ಡಿಗ್ರಿ ಮಾಡುವುದಕ್ಕೆ ಪರೀಕ್ಷೆ ಬರೆಯಲು ಹೋಗಿದ್ದರು ಧರತಿ. ಇದೀಗ ಅಪ್ಪನ ಆ ಆಶಯವನ್ನು ಸಾಕಾರಗೊಳಿಸಿದ್ದಾರೆ. ಹೌದು.. ಧೃತಿ ಪುನೀತ್ ರಾಜ್‌ಕುಮಾರ್ ಈಗ ಡಿಗ್ರಿ ಗ್ರಾಜುಯೇಟ್. ಮಗಳು ಗ್ರಾಜುಯೇಟ್ ಆದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಅಪ್ಪು ಇಲ್ಲ. ಆದರೆ, ತಾಯಿ ಆಶ್ವಿನಿ ಸೇರಿದಂತೆ ಇಡೀ ಅಪ್ಪು ಅಭಿಮಾನಿ ಬಳಗ ಅಪ್ಪು ಮಗಳ ಸಾಧನೆಗೆ ಕಂಗ್ರಾಟ್ಸ್ ಹೇಳ್ತಿದೆ.



