ಪುನೀತ್ ಕೆರೆಹಳ್ಳಿ (Puneeth kerehalli). ಹಿಂದೂಪರ ಹೋರಾಟಗಳಲ್ಲಿ (Hindu activist) ಮುಂಚೂಣಿಯಲ್ಲಿದ್ದ ವ್ಯಕ್ತಿ. ಗೋವುಗಳ ಕಳ್ಳ ಸಾಗಣೆ ಸೇರಿದಂತೆ ಹಲವು ವಿಷಯಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ಪುನೀತ್ ಕೆರೆಹಳ್ಳಿ, ಸುಮಾರು ಒಂದೂವರೆ ತಿಂಗಳ ಹಿಂದೆ ದೊಡ್ಡ ಸುದ್ದಿಯಾಗಿದ್ದರು. ಗೂಂಡಾ ಆಕ್ಟ್ (goonda act) ಅಡಿ ರಾಜ್ಯ ಸರ್ಕಾರ ಕೇಸು ದಾಖಲಿಸಿ ಬಂಧಿಸಿತ್ತು. ಇನ್ನೊಂದು ವರ್ಷ ಜಾಮೀನು ಸಿಗುವುದೇ ಅನುಮಾನವಾಗಿತ್ತು. ಆದರೆ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಆಕ್ಟ್ (goonda act) ದಾಖಲಿಸುವುದಕ್ಕೆ ಸಾಕ್ಷಿಗಳೇ ಇಲ್ಲ ಎಂಬ ತೀರ್ಪು ಹೊರಬರುವ ಮೂಲಕ ಪುನೀತ್ ಕೆರೆಹಳ್ಳಿ (Puneeth kerehalli) ಬಿಡುಗಡೆಯಾಗಿದ್ದರು. ಬಿಡುಗಡೆಯಾಗಿ ಹೊರ ಬಂದ ಮೇಲೆ ಪುನೀತ್ ಕೆರೆಹಳ್ಳಿ, (Puneeth kerehalli) ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಹೋರಾಟ ಶುರು ಮಾಡಿದ್ದಾರೆ.
ತಮ್ಮ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಹಾಕಿದ್ದಕ್ಕೆ ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು ಹಾಗೂ ಹಿಂದೂ ಹೋರಾಟಗಾರರ ವಿರುದ್ಧ ಸುಳ್ಳು ಕೇಸ್ ಹಾಕುವುದನ್ನು ಕೈಬಿಡಬೇಕು ಎನ್ನುವುದು ಪುನೀತ್ ಕೆರೆಹಳ್ಳಿ (Puneeth kerehalli) ಆಗ್ರಹ. ರಾಜ್ಯ ಸರ್ಕಾರದ ಕ್ಷಮೆಗಾಗಿ ಒತ್ತಾಯಿಸಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಹೋರಾಟ ಇದೀಗ ಮತ್ತೊಂದು ಮಜಲು ತಲುಪಿದೆ. ಪುನೀತ್ ಕೆರೆಹಳ್ಳಿ ಅವರನ್ನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಕಾರಣಕ್ಕೆ ಉಪವಾಸ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಪೀಕಲಾಟಕ್ಕೆ ಸಿಲುಕಿರುವ ವೈದ್ಯರು ಪುನೀತ್ ಕೆರೆಹಳ್ಳಿ ಅವರಿಂದ ಆಸ್ಪತ್ರೆಯಲ್ಲಿ ತಮ್ಮ ಸಾವಾದರೆ ವೈದ್ಯರು ಜವಾಬ್ದಾರರಲ್ಲ ಎಂದು ಬರೆಸಿಕೊಂಡು ಸಹಿ ಮಾಡಿಸಿಕೊಂಡಿದ್ದಾರೆ. Cow vigilante`s fast. Doctors refuse to take responsibility. ಪುನೀತ್ ಕೆರೆಹಳ್ಳಿಯವರೇ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿರುವಂತೆ ಅವರ ಶುಗರ್ ಲೆವೆಲ್ ಶೇ.60ಕ್ಕಿಂತ ಕಡಿಮೆಯಾಗಿದೆ. ಆದರೆ ಯಾವುದೇ ರೀತಿಯ ಚಿಕಿತ್ಸೆಗೆ ಪುನೀತ್ ಸಹಕಾರ ನೀಡುತ್ತಿಲ್ಲ. ಅತ್ತ ಪೊಲೀಸ್ ಕಮಿಷನರ್ ಸೇರಿದಂತೆ ರಾಜ್ಯ ಸರ್ಕಾರವೂ ಹಠ ಬಿಡುತ್ತಿಲ್ಲ. ಹೀಗಾಗಿ ವೈದ್ಯರು ಬೇರೆ ದಾರಿ ಕಾಣದೆ ಪುನೀತ್ ಕೆರೆಹಳ್ಳಿ ಆಸ್ಪತ್ರೆಯಲ್ಲೇ ಮೃತಪಟ್ಟರೆ ನಾವು ಜವಾಬ್ದಾರರಲ್ಲ ಎಂಬ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ.
ಪುನೀತ್ ಕೆರೆಹಳ್ಳಿ ಅವರನ್ನು ಆಸ್ಪತ್ರೆಗೆ ಹೋಗಿ ಭೇಟಿ ಮಾಡಿರುವ ಶಾಸಕರಾದ ಸಿಟಿ ರವಿ (CT Ravi), ಚಲವಾದಿ ನಾರಾಯಣ ಸ್ವಾಮಿ (Chalavadi narayana swamy), ಮಹೇಶ್ ಟೆಂಗಿನಕಾಯಿ (Mahesh tenginakayi), ಭಗೀರಥ ಮುರುಳಯ್ಯ, ಭಾಸ್ಕರ್ ರಾವ್, ಪುತ್ತೂರು ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ (Arun kumar puttila) ಮೊದಲಾದವರು ಧೈರ್ಯ ಹೇಳಿದ್ಧಾರೆ. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. Cow vigilante`s fast. Doctors refuse to take responsibility.



