ಶಿವಣ್ಣ ಮತ್ತು ಪುನೀತ್ ರಾಜಕುಮಾರ್ ನಡುವಿನ ಬಾಂಧವ್ಯ ಅದ್ಭುತವಾಗಿತ್ತು. ಶಿವಣ್ಣನೇ ಹೇಳೋ ಪ್ರಕಾರ ಅಪ್ಪು ಹುಟ್ಟಿದಾಗ ಶಿವಣ್ಣಂಗೆ ೧೩ ವರ್ಷ. ಪುನೀತ್ ಓಡಿ ಆಡುವ ಹೊತ್ತಿಗೆ ಶಿವಣ್ಣ ೨೦ರ ಗಡಿಯಲ್ಲಿದ್ದರು. ನಾವು ಚೆನ್ನೈನಲ್ಲಿದ್ದಾಗ ಪುನೀತ್ʻನನ್ನು ಹೊರಗೆ ಕರೆದುಕೊಂಡು ಹೋಗುತ್ತಿದ್ದರೆ ಗೆಳೆಯರೆಲ್ಲ ಹಾಸ್ಯ ಮಾಡ್ತಾ ಇದ್ರು ಅನ್ನೋದನ್ನು ಹಲವು ಕಡೆ ಹೇಳಿಕೊಂಡಿದ್ದಾರೆ ಶಿವಣ್ಣ. ವಯಸ್ಸಿನ ಅಂತರ ಹೆಚ್ಚಿದ್ದ ಕಾರಣವೋ ಏನೋ.. ಪುನೀತ್ ನನಗೆ ತಮ್ಮನಂತಲ್ಲದೆ ಮಗನಂತಿದ್ದ ಎಂದೂ ಹೇಳಿಕೊಂಡಿದ್ದಾರೆ. ಆದರೆ ಇಂತಹ ಶಿವಣ್ಣ ಪುನೀತ್ ಸಮಾಧಿಗೆ ಹೋಗುವುದಿಲ್ಲ. ಹೋದರೂ.. ಅಲ್ಲಿ ಜಾಸ್ತಿ ಹೊತ್ತು ನಿಲ್ಲುವುದಿಲ್ಲ. ಏಕೆ..?
ತಮ್ಮನನ್ನು ಕಳೆದುಕೊಂಡಿರುವ ನೋವು ಹೆಚ್ಚಿದೆ. ಅಲ್ಲಿ ಕೇಳುತ್ತಾರೆ ಯಾಕೆ ಸರ್ ನೀವು ಸಮಾಧಿ ಬಳಿ ಬರುವುದಿಲ್ಲ ಅಂತ… ಸಮಾಧಿಗೆ ಭೇಟಿ ನೀಡಿ ತಮ್ಮನ್ನು ನೋಡುವುದನ್ನು.. ಇದರಲಿ ನನಗೆ ನಂಬಿಕೆ ಇಲ್ಲ. ಎಲ್ಲೋ ಹೋಗಿದ್ದಾನೆ ಮುಂದಿನ ವರ್ಷ ಬರ್ತಾನೆ ಅಂತ ಕಾಯುತ್ತಿರುವೆ.. ನಾನು ಕಾಯುತ್ತಲೇ ದಿನ ಕಳೆಯುತ್ತೀನಿ. ಅಪ್ಪು ಬಗ್ಗೆ ಮಾತನಾಡದೆ ಒಂದು ದಿನವೂ ಕಳೆದಿಲ್ಲ. ದಿನ ಅವನ ಬಗ್ಗೆ ಯಾವುದಾದರೂ ಒಂದು ವಿಚಾರ ಬರುತ್ತದೆ ಎಂದಿದ್ದಾರೆ ಶಿವಣ್ಣ.
ನನಗಷ್ಟೇ ಅಲ್ಲ, ನನ್ನ ಕುಟುಂಬಕ್ಕೇ ಬಲವಾಗಿದ್ದ ಅಪ್ಪು. ನಮ್ಮ ಇಡೀ ಕುಟುಂಬಕ್ಕೆ ಅಪ್ಪು ದೊಡ್ಡ ಬಲ. ಅವರ ಮಕ್ಕಳಿಗೆ ಬಲ. ಎಂದೂ ಕೂಡ ಕುಟುಂಬ ಸಫರ್ ಮಾಡುವಂತೆ ಅಪ್ಪು ಮಾಡಿಲ್ಲ..ಈಗಲೂ ಆ ಕುಟುಂಬ ಖುಷಿಯಾಗಿದೆ. ಒಂಟಿಯಾಗಿ ಕುಳಿತಿರುವಾಗ ನೆನಪಾಗುತ್ತಾನೆ ಅಗ ಅವನ ಹುಡುಗಳನ್ನು ಹಾಡುತ್ತೀನಿ ಎಂದು ಹೇಳಿಕೊಂಡಿದ್ಧಾರೆ ಶಿವಣ್ಣ. ಅಷ್ಟೇ ಅಲ್ಲ ಎಷ್ಟು ಸಾಧ್ಯವೋ ಅಷ್ಟು ಪುನೀತ್ ಕುರಿತು ಮಾತನಾಡುವುದನ್ನು ಅವಾಯ್ಡ್ ಮಾಡುವ ಶಿವಣ್ಣ ಒಳಗೊಳಗೆ ಪ್ರತಿಕ್ಷಣವೂ ಇನ್ನೂ ನೋವು ಅನುಭವಿಸುತ್ತಲೇ ಇದ್ದಾರೆ.
ನಾನು ನಟ ಆದ ಮೇಲೆ ಅಪ್ಪು ಕೂಡ ನಾಯಕನಟ ಆದ ಮೇಲೆ ಹೆಚ್ಚಿಗೆ ಸಮಯ ಕೊಡುತ್ತಿದ್ವಿ..ಒಟ್ಟಿಗೆ ಪಾರ್ಟಿ ಮಾಡುತ್ತಿದ್ವಿ. ಅಪ್ಪ 2006ರಲ್ಲಿ ಅಗಲಿದರು. ಮೂರ್ನಾಲ್ಕು ತಿಂಗಳ ನಂತರ ನನ್ನ ಸಿನಿಮಾ ಕೆಲಸಗಳು ಇತ್ತು. ಆಗ ಬ್ಯಾಂಕಾಕ್ ಮತ್ತು ಸಿಂಗಪೂರ್ ಕಡೆ ಪ್ರಯಾಣ ಮಾಡಿ ಶಾಪಿಂಗ್ ಮಾಡಬೇಕಿತ್ತು ಆದ ಅಪ್ಪು ನಾನು ಬರ್ತೀನಿ ಅಂದ್ರು. ನಮ್ಮ ಜೊತೆ ಮೂರು ದಿನ ಇದ್ದರೂ..ಶಾಪಿಂಗ್ ಮಾಡಿದರು. ಅಪ್ಪ ಇಲ್ಲದ ನೋವು ಇದ್ದರೂ ಅಣ್ಣನ ಕೆಲಸದ ಸಮಯದಲ್ಲಿ ನನಗೆ ಒಟ್ಟಿಗೆ ನಿಂತು ಧೈರ್ಯ ಕೊಟ್ಟರು. ನನ್ನ ಮಗನ ಸ್ಥಾನದಲ್ಲಿ ನಿಂತುಕೊಳ್ಳುತ್ತಾನೆ ಅಪ್ಪು’ ಎಂದಿದ್ದಾರೆ ಶಿವರಾಜ್‌ಕುಮಾರ್.
ಹಲವು ವೇದಿಕೆಗಳಲ್ಲಿ ಪುನೀತ್ ಅವರನ್ನು ಅಭಿಮಾನಿಗಳು ಪವರ್ ಸ್ಟಾರ್ ಪವರ್ ಸ್ಟಾರ್ ಎಂದು ಕೂಗುತ್ತಿದ್ದೃರೆ, ಸುಮ್ನಿರ್ರಯ್ಯ.. ಪವರ್ ಸ್ಟಾರ್ ಅನ್ನೋ ಹೆಸರು ಕೊಟ್ಟಿದ್ದೇ ನಾನು ಎನ್ನುತ್ತಿದ್ದರು ಶಿವಣ್ಣ. ಯಾವುದದರೂ ವೇದಿಕೆಗಳಲ್ಲಿ ಪುನೀತ್ ಸ್ಟೆಪ್ ಹಾಕುತ್ತಿದ್ದರೆ ಪ್ರತಿಕ್ಷಣವೂ ಬೆರಗಾಗಿ ನೋಡುತ್ತಿದ್ದರು. ಪುನೀತ್ʻಗೆ ಅಪ್ಪು ಸಿನಿಮಾ ಕಥೆ, ಟೈಟಲ್ ಸೇರಿದಂತೆ ಎಲ್ಲವನ್ನೂ ಆಯ್ಕೆ ಮಾಡಿದ್ದವರೂ ಶಿವಣ್ಣ. ಬೇಸರ ಸಹಜವೇ..
ಅಪ್ಪು, ಶಿವಣ್ಣನಿಗೆ ತಮ್ಮನಲ್ಲ, ಮಗನಂತಿದ್ದರು. ಪುನೀತ್ ಅವರನ್ನು ತೆರೆ ಮೇಲೆ ನೋಡಿದವರೇ ಪುನೀತ್ ಸಾವನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲದೇ ಇರುವಾಗ ಸ್ವತಃ ಅಣ್ಣನಿಗೆ ಅದು ಅಸಾಧ್ಯವೇ ಸರಿ.



