ಅವನಿಗೆ 19 ವರ್ಷ. ಇನ್ನೂ ಕಾಲೇಜು ಓದುತ್ತಿದ್ದ. ಅವನಿಗೆ ಹೀರೋ ಅನ್ನಿಸಿಕೊಳ್ಳಬೇಕು ಅನ್ನೋ ಆಸೆ. ಅದು ಅವನು ಪ್ರೀತಿಸ್ತಾ (Crime Love story) ಇದ್ದ ಪಿಯು ವಿದ್ಯಾರ್ಥಿನಿಯ ಎದುರು ಹೀರೋ ಅನ್ನಿಸಿಕೊಳ್ಳೋ ಆಸೆ. ಹಾಗೆ ಮಾಡಿದರೆ ಅವಳು ನನ್ನನ್ನು ಪ್ರೀತಿಸ್ತಾಳೆ (Crime Love story) ಅನ್ನೋ ವಿಚಿತ್ರ ಬಯಕೆ. ಹಂಬಲ. ಅದಕ್ಕಾಗಿ ಕೊಲೆಯನ್ನೇ ಮಾಡಿಬಿಟ್ಟಿದ್ದಾನೆ ಈತ.
ಹುಡುಗನ ಹೆಸರು ಆಕಾಶ್ ಪಟ್ಟಣಗೆರೆಯ ಗೊಲ್ಲಳ್ಳಿಯವನು. ಕೊಲೆಯಾದವನ ಹೆಸರು ಹೇಮಂತ್. ಆನೇಕಲ್ ತಾಲೂಕಿನ ಮೇಣಸಿಗನಹಳ್ಳಿಯವನು. ಹೇಮಂತ್ ಯಾರು ಎಂಬುದು ಆಕಾಶ್`ಗೆ ಗೊತ್ತೂ ಇಲ್ಲ. ಶತ್ರುತ್ವವೂ ಇಲ್ಲ. ಪರಿಚಯವೂ ಇಲ್ಲ. ಹಾರ್ಡ್‍ವೇರ್ ಶಾಪಿನಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ್, ಮನೆಗೆ ಹೋಗುತ್ತಿದ್ದ. ಹತ್ತಿರದ ದಾರಿ ಎಂದು ತಮಿಳುನಾಡಿನ ಕನಮನಹಳ್ಳಿಯಲ್ಲಿ ಬೈಕಿನಲ್ಲಿ ಹೋಗುವಾಗ ಆಕಾಶ್ ಕಾರಲ್ಲಿ ಬಂದು ಗುದ್ದಿದ್ದಾನೆ. ಕೆಳಗೆ ಬಿದ್ದ ಹೇಮಂತನನ್ನು ಡ್ಯಾಗರ್`ನಿಂದ ಇರಿದು ಇರಿದೂ ಕೊಂದಿದ್ದಾನೆ. ಆಕಾಶ್ ಜೊತೆ ಇನ್ನಿಬ್ಬರು ಕೊಲ್ಲುವುದಕ್ಕೆ ಸಹಾಯ ಮಾಡಿದ್ದಾರೆ. ಆಕಾಶ್ ಜೊತೆಯಲ್ಲಿದ್ದ ಅಪ್ರಾಪ್ತ ಬಾಲಕರು ಇದನ್ನು ವಿಡಿಯೊದಲ್ಲಿ ಸೆರೆ ಹಿಡಿದಿದ್ದಾರೆ. ಇದೆಲ್ಲವನ್ನೂ ತನ್ನ ಗೆಳತಿಯನ್ನು ಇಂಪ್ರೆಸ್ (Love story) ಮಾಡುವುದಕ್ಕೆ. ಆಕೆಯ ಕಣ್ಣಲ್ಲಿ ಹೀರೋ ಆಗುವುದಕ್ಕೆ ಮಾಡಿದ್ದಾನೆಂದು ತನಿಖೆಯಲ್ಲಿ ಗೊತ್ತಾಗಿದೆ. ಇದೆಲ್ಲವನ್ನೂ ಈತನ ಜೊತೆಯಲ್ಲಿದ್ದ ಅಪ್ರಾಪ್ತ ಬಾಲಕ ಗೆಳೆಯರಲ್ಲಿ ಬಿಲ್ಡಪ್ ತೆಗೆದುಕೊಳ್ಳೋಕೆ ಹೇಳಿಕೊಂಡಿದ್ದಾನೆ. ಅದು ಅಲ್ಲಿಂದ ಹೇಗೋ ಪೊಲೀಸರಿಗೆ ತಲುಪಿದೆ.
ಪೊಲೀಸರು ಸರ್ಚಿಂಗ್ ಶುರು ಮಾಡಿದಾಗ ಆಕಾಶ್ ತಲೆ ಮರೆಸಿಕೊಂಡಿದ್ದನಂತೆ. ಆಗ ಆಕಾಶ್ ಗೆಳತಿ ಇದ್ದಳಲ್ಲ, ಅದೇ ಪಿಯು ಹುಡುಗಿ. (College students Love story) ಆಕೆಯ ಮೂಲಕವೇ ಟ್ರ್ಯಾಪ್ ಮಾಡಿಸಿದ್ದಾರೆ ಪೊಲೀಸರು. ಯುವತಿಯ ಮೇಲಿನ ಪ್ರೀತಿಗಾಗಿ ಆಕಾಶ್ ತಾನಿರುವ ಜಾಗದ ಹೆಸರು ಹೇಳಿದ್ದಾನೆ. ಕನ್ಸ್`ಟ್ರಕ್ಷನ್ ನಡೆಯುತ್ತಿರುವ ಕಟ್ಟಡವೊಂದರಲ್ಲಿ ಅಡಗಿದ್ದ ಅಕಾಶ್`ನನ್ನು ಪೊಲೀಸರು ಸುತ್ತುವರೆದಿದ್ದಾರೆ. ಇನ್ಸ್`ಪೆಕ್ಟರ್ ಚಂದ್ರಪ್ಪ, ಎಸ್‍ಐ ಪ್ರದೀಪ್, ಪೇದೆ ಮಣಿ ಅವರು ಮತ್ತು ತಂಡ ಆಕಾಶ್`ಗೆ ಸರೆಂಡರ್ ಆಗುವಂತೆ ಸೂಚಿಸಿದೆ. ಆರೋಪಿ ಪ್ರತಿಯಾಗಿ ಮಾಡಿದ ಹಲ್ಲೆಯಲ್ಲಿ ಪೇದೆ ಮಣಿ ಅವರಿಗೆ ಗಾಯವಾಗಿದೆ. ಆಕಾಶ್ ಕಾಲಿಗೆ ಗುಂಡು ಹೊಡೆದು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈತ ಕೃತ್ಯಕ್ಕೆ ತನ್ನ ತಂದೆಯ ಕಾರು ಬಳಸಿದ್ದ. ಅಪ್ಪನನ್ನು ಯಾಮಾರಿಸಿ ಗೋಗರೆದು ಕಾರ್ ಕೀ ತೆಗೆದುಕೊಂಡು ಸ್ವಲ್ಪ ಹಣವನ್ನೂ ತೆಗೆದುಕೊಂಡಿದ್ದ. ಈ ಆಕಾಶ್`ಗೆ ಇಬ್ಬರು ಚಿಕ್ಕ ಬಾಲಕರೂ (juveniles crimes) ಹಾಗೂ ಇನ್ನಿಬ್ಬರು ಯುವಕರು ಸಾತ್ ಕೊಟ್ಟಿದ್ದರು. ಈಗ ಎಲ್ಲರೂ ಜೈಲು ಸೇರಿದ್ದಾರೆ.
ಹೀರೋ ಆಗುವುದಕ್ಕೆ ಕೊಲೆ ಮಾಡ್ತಾರಾ..? ಅದೂ 19ನೇ ವಯಸ್ಸಿನಲ್ಲಿ ಇಂತಹ ವಿಕೃತ ಆಸೆಗಳು ಇರ್ತವಾ? ಪಿಯು ಓದುವ ಹುಡುಗಿಯರು, ಇಂತಹ ಕೊಲೆ ಮಾಡುವವರ ಕ್ರೇಜಿಗೆ ಬೀಳ್ತಾರಾ? ಕೊಲೆ ಮಾಡುವುದೂ ಒಂದು ಕ್ರೇಜ್ ಆಗಿದೆಯಾ? ಬಿಲ್ಡಪ್ ಸಿಗುತ್ತಾ? ಹದಿಹರೆಯದವರ (juveniles crimes) ಹುಚ್ಚಾಟ ಅರ್ಥವಾಗದೆ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಅಂದಹಾಗೆ ಘಟನೆ ನಡೆದಿದ್ದು ಜುಲೈ 31ರಂದು. ಆರೋಪಿಗಳು ಅರೆಸ್ಟ್ ಆಗಿರುವುದು ಆಗಸ್ಟ್ 7ನೇ ತಾರೀಕು.



