ಕಳೆದ ನಾಲ್ಕೂವರೆ ವರ್ಷಗಳಿಂದ ಆಸ್ತಿ ನೋಂದಣಿ ಶುಲ್ಕ ಏರಿಕೆಯಾಗಿಲ್ಲ. ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಆಸ್ತಿ ನೋಂದಣಿ ಶುಲ್ಕ ಆಸ್ತಿಯ ಒಟ್ಟಾರೆ ಮೊತ್ತದ ಶೇ.1ರಷ್ಟು ಇದೆ. ಅಂದರೆ 10 ಲಕ್ಷ ಮೌಲ್ಯದ ಆಸ್ತಿಗೆ ರಿಜಿಸ್ಟ್ರೇಷನ್ ಫೀ ಶೇ.1ರಂತೆ ಲೆಕ್ಕ ಹಾಕಿದರೆ 10 ಸಾವಿರ ರೂ. ಇದೆ. ಸ್ಟಾಂಪ್ ಡ್ಯೂಟಿ ಪ್ರತ್ಯೇಕ. 35 ಲಕ್ಷಕ್ಕೂ ಮೇಲ್ಪಟ್ಟ ಆಸ್ತಿಗೆ ಸರ್`ಚಾರ್ಜ್ ಇರುತ್ತದೆ. ಅವುಗಳೇ ಇನ್ನೇನು ಕೆಲವೇ ದಿನಗಳಲ್ಲಿ ಬದಲಾವಣೆ ಆಗಲಿವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಜುಲೈ 7ಕ್ಕೆ ರಾಜ್ಯ ಬಜೆಟ್ ಇದ್ದು, ಬಜೆಟ್`ನಲ್ಲಿ ಈ ಬಗ್ಗೆ ತೀರ್ಮಾನ ಆಗಲಿದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಮಾರ್ಗಸೂಚಿ ದರ ಏರಿಕೆಯಾಗಿಲ್ಲ. ಮಾರುಕಟ್ಟೆ ದರಕ್ಕೆ ತಕ್ಕಂತೆ ಮಾರ್ಗಸೂಚಿ ದರ ಇರಬೇಕೆಂದು ಅಧಿಕಾರಿಗಳು ಹೇಳಿದ್ದಾರೆ. ಎಷ್ಟು ದರ ಏರಿಕೆ ದರ ಏರಿಕೆ ಮಾಡಬೇಕೆಂದು ಈ ವಾರದಲ್ಲಿ ಸಭೆ ಮಾಡಿ ತಿರ್ಮಾನ ಮಾಡುತ್ತೇವೆ ಎಂದಿದ್ದಾರೆ ಕೃಷ್ಣ ಬೈರೇಗೌಡ. ಇದರ ಜೊತೆಗೆ ರಿಜಿಸ್ಟ್ರೇಷನ್ ತಂತ್ರಾಂಶವನ್ನೂ ಬದಲಾವಣೆ ಮಾಡಿದ್ದಾರೆ. ಕಾವೇರಿ 2.0 ಸಾಫ್ಟ್‍ವೇರ್`ಗೆ ಬದಲಿಸುದ್ದಾರೆ.
ಕಾವೇರಿ 2 ಮೂಲಕ ದಾಖಲೆಗಳನ್ನು ಆನ್ ಲೈನ್ ನಲ್ಲಿ ಸಬ್ಮಿಟ್ ಮಾಡಬಹುದು. ಉಪನೋಂದಣಾಧಿಕಾರಿ ಆನ್ ಲೈನ್ ನಲ್ಲೇ ದಾಖಲಾತಿ ಪರಿಶೀಲನೆ ಮಾಡುತ್ತಾರೆ. ನೋಂದಣಿ ಮಾಡುವವರು ತಮಗೆ ಬೇಕಾದ ಸಮಯದಲ್ಲಿ ಅಪಾಯ್ನ್ಮೆಂಟ್ ಪಡೆದುಕೊಳ್ಳಲು ಅವಕಾಶ ಇದೆ. ಹತ್ತರಿಂದ ಹದಿನೈದು ನಿಮಿಷನಲ್ಲಿ ನೋಂದಣಿ ಕಾರ್ಯ ಮುಗಿಸಲು ಅವಕಾಶ ಇದೆ . ಶನಿವಾರದೊಳಗಾಗಿ 256 ಉಪ ನೋಂದಣಿ ಕಚೇರಿಯಲ್ಲಿ ಅನುಷ್ಠಾನ ಮಾಡಲಾಗುವುದು. ಆನ್ ಲೈನ್ ನೋಂದಣಿಯಿಂದ ರಾಜ್ಯದಲ್ಲಿ ಎಷ್ಟು ನೋಂದಣಿ ನಡೆಯಿತು ಎಂಬ ಮಾಹಿತಿ ಸರ್ಕಾರಕ್ಕೆ ಪ್ರತಿದಿನ ತಿಳಿಯಲಿದೆ. ಇದರಿಂದ ತಪ್ಪುಗಳು ಕಡಿಮೆಯಾಗುತ್ತದೆ. ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ ಎಂದು ಮಾಹಿತಿ ನೀಡಿದ್ದಾರೆ ಕೃಷ್ಣ ಬೈರೇಗೌಡ.
ಜಮೀನು ಯಾರ ಹೆಸರಲ್ಲಿದೆ ಎಂಬುದು ದಾಖಲೆಯಲ್ಲೇ ತಿಳಿಯಲಿದೆ. ವಂಚನೆಗೆ ಅವಕಾಶ ಇಲ್ಲ ಎಂದಿರುವ ಕೃಷ್ಣ ಬೈರೇಗೌಡ, ಈ ಸಾಫ್ಟ್‍ವೇರ್ ಅಳವಡಿಸಿದ ಕೇಂದ್ರಗಳಲ್ಲಿ ಈಗಾಗಲೇ ನೋಂದಣಿಗಳು ಹೆಚ್ಚಾಗಿವೆ ಎಂದು ತಿಳಿಸಿದ್ದಾರೆ.



