ರಾಹುಲ್ ಗಾಂಧಿ. ಕಾಂಗ್ರೆಸ್ಸಿನಲ್ಲೀಗ ಅವರಿಗೆ ಯಾವ ಉನ್ನತ ಹುದ್ದೆಯೂ ಇಲ್ಲ. ಅವರೀಗ ರಾಯ್ ಬರೇಲಿಗೆ ಹೋಗಿದ್ಧಾರೆ. ಅಮೇಥಿಯಲ್ಲಿ ಕಳೆದ ಬಾರಿಯೇ ಸೋತಿದ್ದಾರೆ. ವಯನಾಡುವಿನಲ್ಲಿ ಏನೋ ಡೇಂಜರ್ ಸಿಗ್ನಲ್ ಹೊಡೆದಂತೆ ಕಾಣುತ್ತಿದೆ. ಅಲ್ಲದೆ.. ಉತ್ತರ ಪ್ರದೇಶವನ್ನು ಬಿಡಬಾರದು. ಬಿಟ್ಟರೆ.. ಯುದ್ಧದಲ್ಲಿ ಶತ್ರುಗಳಿಗೆ ಮೇಲುಗೈ ಒದಗಿಸಿಕೊಟ್ಟಂತೆ ಎಂಬ ದೂರಾಲೋಚನೆಯೂ ಇದೆ. ಆದರೆ.. ರಾಯ್ ಬರೇಲಿ ಹಾಗೂ ಅಮೇಥಿಯಲ್ಲಿ ರಾಹುಲ್ ಗೆಲುವಿಗೆ ಬೆವರು ಹರಿಸುತ್ತಿರುವುದು ತಂಗಿ ಪ್ರಿಯಾಂಕಾ ಗಾಂಧಿ.
ಬಹುತೇಕರು ರಾಹುಲ್ ತಮ್ಮ, ಪ್ರಿಯಾಂಕಾ ಅಕ್ಕ ಎಂದೇ ಭಾವಿಸುತ್ತಾರೆ. ಆದರೆ.. ಅಧಿಕೃತ ದಾಖಲೆಗಳ ಪ್ರಕಾರವೇ.. ರಾಹುಲ್ ಗಾಂಧಿ ಅಣ್ಣ. ರಾಹುಲ್ ಅವರು ಹುಟ್ಟಿದ್ದು 1970. ಜೂನ್ 19ರಂದು. ಅವರಿಗೀತ 53 ವರ್ಷ. ಪ್ರಿಯಾಂಕಾ ಗಾಂಧಿ ಈಗ ಪ್ರಿಯಾಂಕಾ ವಾದ್ರಾ ಹುಟ್ಟಿದ್ದು 19772ರ ಜನವರಿ 12ರಂದು. ಅವರಿಗೀಗ 52 ವರ್ಷ. ರಾಹುಲ್ ಗಾಂಧಿಗಿಂತ ಒಂದೂವರೆ ವರ್ಷ ಚಿಕ್ಕವರು.
ಪ್ರಿಯಾಂಕಾ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ಧಾರೆ. ಹೀಗಾಗಿ.. ಹಲವರಿಗೆ ಹಾಗನ್ನಿಸಬಹುದೇನೋ.. ಅದೆಲ್ಲದರ ಹೊರತಾಗಿ.. ರಾಜಕೀಯದಲ್ಲಿ ಆಸಕ್ತಿ ಇರುವ ಪ್ರಿಯಾಂಕಾ, ಚುನಾವಣೆಯಲ್ಲಿ ಮಾತ್ರ ಸ್ಪರ್ಧೆ ಮಾಡುವುದಿಲ್ಲ. ಪ್ರತಿಬಾರಿಯಂತೆ.. ಈ ಬಾರಿಯೂ ಅಷ್ಟೆ. ಕಡೆಯ ಗಳಿಗೆಯವರೆ ಪ್ರಿಯಾಂಕಾ ಅವರ ಹೆಸರು ಕೇಳಿ ಬಂತಾದರೂ.. ಪ್ರಿಯಾಂಕಾ ಸ್ಪರ್ಧೆ ಮಾಡಲಿಲ್ಲ. ಆದರೆ.. ಅಣ್ಣನ ಗೆಲುವಿಗೆ ರಾಯ್ ಬರೇಲಿ ಮತ್ತು ಅಮೇಥಿಯಲ್ಲೇ ಓಡಾಡುತ್ತಿರುವ ಪ್ರಿಯಾಂಕಾ, ಹಗಲಿರುಳೂ ಓಡಾಡುತ್ತಿದ್ಧಾರೆ.
ರಾಯ್‌ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆ ಸಂಪೂರ್ಣ ಅಚ್ಚರಿಯಾಗದೆ ಇದ್ದರೂ, ಪ್ರಿಯಾಂಕಾ ಗಾಂಧಿ ಅವರು ಗಾಂಧಿ ಕುಟುಂಬದ ಭದ್ರ ಕೋಟೆಯಿಂದ ರಾಜಕೀಯ ಪದಾರ್ಪಣೆಗೆ ಏಕೆ ಮುಂದಾಗಿಲ್ಲ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಪ್ರಿಯಾಂಕಾ ಗಾಂಧಿ ಅವರ ಪಾತ್ರವು ಒಂದು ಕ್ಷೇತ್ರಕ್ಕೆ ಸೀಮಿತವಾಗಬಾರದು ಎನ್ನುವುದು ಬಹಳ ಮುಖ್ಯ. ಹೀಗಾಗಿ ಅವರು ಕಣಕ್ಕೆ ಇಳಿದಿಲ್ಲ ಎಂದು ಕಾಂಗ್ರೆಸ್ ಸಮಜಾಯಿಷಿಗೆ ಬೇರೆಯದೇ ಉತ್ತರ ಸಿಗುತ್ತಿದೆ.
ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಓಡಾಡುತ್ತಿರುವ ಪ್ರಿಯಾಂಕಾ, ದೇಶದ ಇನ್ಯಾವ ಕ್ಷೇತ್ರಗಳ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ. ಪ್ರಿಯಾಂಕಾ ಅವರು ಹುರುಪಿನಿಂದ ಪ್ರಚಾರ ನಡೆಸುತ್ತಿದ್ದಾರೆ ಮತ್ತು ನರೇಂದ್ರ ಮೋದಿ ಅವರ ಸುಳ್ಳುಗಳನ್ನು ಒಬ್ಬರೇ ಮಟ್ಟ ಹಾಕುತ್ತಿದ್ದಾರೆ ಎನ್ನುವ ಸಂಭ್ರಮ ಕಾಂಗ್ರೆಸ್ಸಿಗರದ್ದು.
ವೇದಿಕೆಗಳಲ್ಲಿ ತಂಗಿಯನ್ನು ಮುದ್ದು ಮಾಡುವ ರಾಹುಲ್ ಗಾಂಧಿ ಅಪರೂಪದ ಅಣ್ಣ ತಂಗಿ ಬಾಂಧವ್ಯಕ್ಕೆ ಸಾಕ್ಷಿಯಾಗಿದ್ದಾರೆ. ರಾಯ್ ಬರೇಲಿಯಲ್ಲಿ ಪ್ರಚಾರ ಮಾಡುವಾಗಲೂ ಅಷ್ಟೆ.. ಇಲ್ಲಿ ಜನ ಕೇಳುತ್ತಿರುವ ಪ್ರಶ್ನೆಯೂ ವಿಚಿತ್ರ. ಅಭಿವೃದ್ಧಿಗೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗಿಂತ ಹೆಚ್ಚಾಗಿ ಮದುವೆ ಯಾವಾಗ ಆಗ್ತೀರ ಅನ್ನೋ ಪ್ರಶ್ನೆ ತೂರಿಬರುತ್ತಿದೆ.
ರಾಹುಲ್ ಗಾಂಧಿ ನೆಹರು ಕುಟುಂಬದವರು. ಇಂದಿರಾ ಗಾಂಧಿಯ ಮೊಮ್ಮಗ. ರಾಜೀವ್ & ಸೋನಿಯಾ ಕೂಡಾ ಇಲ್ಲಿಂದ ಸ್ಪರ್ಧಿಸಿ ಗೆದ್ದಿದ್ದವರು. ಈ ಕ್ಷೇತ್ರದ ಜನರಿಗೆ ರಾಹುಲ್ ಗಾಂಧಿ ಒಂದು ರೀತಿಯಲ್ಲಿ ಕುಟುಂಬ ಸದಸ್ಯನೇ ಆಗಿದ್ಧಾರೆ.
ಆದರೆ.. ಮದುವೆ ಯಾವಾಗ ಅನ್ನೋ ಪ್ರಶ್ನೆಗೆ , ಈಗ ಬೇಗ ಆಗಲೇಬೇಕಾಗಿದೆ..’ ಎಂದು ರಾಹುಲ್ ಗಾಂಧಿ ತಮಾಷೆಯಾಗಿ ಹೇಳಿ ಸಾಗುತ್ತಿದ್ಧಾರೆ. ಇನ್ನು ಈ ಪ್ರಶ್ನೆಗೆ ಅತೀ ಹೆಚ್ಚು ಉತ್ತರ ಕೊಡುತ್ತಿರುವುದು ಪ್ರಿಯಾಂಕಾ. ಬೇಗ ನಿಮ್ಮಣ್ಣನಿಗೊಂದು ಮದುವೆ ಮಾಡಿ ಎಂಬ ಒತ್ತಾಯ ರಾಯಬರೇಲಿಯಲ್ಲಿ ಕೇಳಿ ಬರುತ್ತಿದೆ.



