ಪ್ರಧಾನಿ ನರೇಂದ್ರ ಮೋದಿ ಯಶಸ್ವಿ ಅಮೆರಿಕ ಪ್ರವಾಸ ಮುಗಿಸಿ ಈಜಿಪ್ಟಿಗೆ ಬಂದಿದ್ದಾರೆ. 26 ವರ್ಷಗಳ ಬಳಿಕ ಈಜಿಪ್ಟ್`ಗೆ ಭೇಟಿ ಕೊಟ್ಟ ಮೊದಲ ಭಾರತೀಯ ಪ್ರಧಾನಿ ನರೇಂದ್ರ ಮೋದಿ. ಹೀಗಾಗಿಯೇ ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್ಬೌಲಿ ಆತ್ಮೀಯವಾಗಿ ಬರಮಾಡಿಕೊಂಡಿದ್ದು. ಇದೇ ವೇಳೆ ಮೋದಿ ಐತಿಹಾಸಿಕ ಅಲ್ ಹಕೀಮ್ ಮಸೀದಿಗೆ ಭೇಟಿ ಕೊಟ್ಟರು. ಇದು 11ನೇ ಶತಮಾನದಲ್ಲಿ ನಿರ್ಮಾಣ ಮಾಡಲ್ಪಟ್ಟ ಮಸೀದಿ ಎನ್ನುವುದು ವಿಶೇಷ.ಇದೇ ವೇಳೆ ಈಜಿಪ್ಟ್ ಪ್ರಧಾನಿಯವರಿಗೆ ತಮ್ಮ ದೇಶದ ಅತ್ಯುನ್ನತ ಪುರಸ್ಕಾರವಾದ ಆರ್ಡರ್ ಆಫ್ ನೇಲ್ ಪ್ರಶಸ್ತಿ ನೀಡಿ ಗೌರಿವಿಸಿತು. ಕಳೆದ 9 ವರ್ಷಗಳಲ್ಲಿ ಮೋದಿ ಪಡೆಯುತ್ತಿರುವ 13ನೇ ದೇಶದ ಅತ್ಯುನ್ನತ ಪ್ರಶಸ್ತಿ ಇದು.
1. ಈಜಿಪ್ಟ್: ಆರ್ಡರ್ ಆಫ್ ದಿ ನೈಲ್– 2023ರಲ್ಲಿ
2. ಪಪುವಾ ನ್ಯೂಗಿನಿಯಾ: ಕಂಪೇನಿಯನ್ ಆಫ್ ದಿ ಆರ್ಡರ್ ಆಫ್ ಲೋಗೋಹು. ಇದು ಆ ದೇಶದ ಅತ್ಯುಚ್ಚ ನಾಗರಿಕ ಪ್ರಶಸ್ತಿ. ಪೆಸಿಫಿಕ್ ಐಲ್ಯಾಂಡ್ ದೇಶಗಳ ಒಗ್ಗಟ್ಟಿಗೆ ಕಾರಣರಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2023 ಮೇ ತಿಂಗಳಲ್ಲಿ ಈ ಪ್ರಶಸ್ತಿ ಸಿಕ್ಕಿತ್ತು.
3. ಫಿಜಿ: ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ. ಮೋದಿ ಅವರ ಜಾಗತಿಕ ನಾಯಕತ್ವಕ್ಕೆ ಗೌರವವಾಗಿ ಫಿಜಿ 2023 ಮೇ ತಿಂಗಳಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಿತು.
4. ರಿಪಬ್ಲಿಕ್ ಆಫ್ ಪಲೋ: ಎಬಕಲ್ ಅವಾರ್ಡ್. ಇದೂ ಕೂಡ 2023 ಮೇ ತಿಂಗಳಲ್ಲಿ ಮೋದಿಗೆ ಸಿಕ್ಕಿದೆ. ಪಪುವಾ ನ್ಯೂಗಿನಿಯಾ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಿಪಬ್ಲಿಕ್ ಆಫ್ ಪಲೋನ ಅಧ್ಯಕ್ಷ ಸುರೇಂಜಲ್ ಎಸ್ ವಿಪ್ಸ್ ಜೂನಿಯರ್ ಮೋದಿಗೆ ಈ ಪ್ರಶಸ್ತಿ ನೀಡಿದರು.
5. ಭೂತಾನ್ : ಆರ್ಡರ್ ಆಫ್ ಡ್ರುಕ್ ಗ್ಯಾಲ್ಪೋ, ಭೂತಾನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು 2021 ಡಿಸೆಂಬರ್ನಲ್ಲಿ ಮೋದಿಗೆ ಕೊಡಲಾಯಿತು.
6. ಅಮೆರಿಕ ಲೆಜಿಯನ್ ಆಫ್ ಮೆರಿಟ್: ಇದನ್ನು ಅಸಾಧಾರಣ ಸಾಧನೆ ಮತ್ತು ಸೇವೆಗಳನ್ನು ಗುರುತಿಸಿ ಅಮೆರಿಕದ ಸಶಸ್ತ್ರ ಪಡೆ ಕೊಡುವ ಗೌರವವಾಗಿದೆ. 2020ರಲ್ಲಿ ಮೋದಿಗೆ ಇಂಥದ್ದೊಂದು ಅಪೂರ್ವ ಪ್ರಶಸ್ತಿ ಸಿಕ್ಕಿತ್ತು.
7. ಬಹರೇನ್: ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್: 2019ರಲ್ಲಿ
8. ಮಾಲ್ಡೀವ್ಸ್: ಆರ್ಡರ್ ಆಫ್ ದಿ ಡಿಸ್ಟಿಂಗ್ಯುಶ್ಡ್ ರೂಲ್ ಅಫ್ ನಿಶಾನ್ ಇಜ್ಜುದ್ದೀನ್– ಇದು ವಿದೇಶೀ ಗಣ್ಯರಿಗೆ ಕೊಡಗುವ ಅತ್ಯುನ್ನತ ಗೌರವವಾಗಿದೆ. ಮೋದಿಗೆ 2019ರಲ್ಲಿ ಇದು ದೊರಕಿದೆ.
9. ರಷ್ಯಾ: ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಅವಾರ್ಡ್– ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಇದು 2019ರಲ್ಲಿ ಮೋದಿಗೆ ಸಿಕ್ಕಿದೆ.
10. ಯುಎಇ: ಆರ್ಡರ್ ಆಫ್ ಝಾಯೆದ್ ಅವಾರ್ಡ್– ಸಂಯುಕ್ತ ಅರಬ್ ಸಂಸ್ಥಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ 2019ರಲ್ಲಿ ನರೇಂದ್ರ ಮೋದಿ ಅವರಿಗೆ ಲಭಿಸಿದೆ.
11. ಪ್ಯಾಲೆಸ್ತೀನ್ : ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲಸ್ಟೀನ್ ಅವಾರ್ಡ್: 2018ರಲ್ಲಿ ಮೋದಿಗೆ ಇದು ಸಿಕ್ಕಿತು. ವಿದೇಶೀ ಗಣ್ಯರಿಗೆ ಪ್ಯಾಲಸ್ಟೀನ್ ದೇಶ ನೀಡುವ ಅತ್ಯುಚ್ಚ ಪ್ರಶಸ್ತಿ ಇದು.
12. ಅಫ್ಘಾನಿಸ್ತಾನ: ಸ್ಟೇಟ್ ಆರ್ಡರ್ ಆಫ್ ಘಾಜಿ ಆಮಿರ್ ಅಮಾನುಲ್ಲಾ ಖಾನ್– 2016ರಲ್ಲಿ ಅಫ್ಘಾನಿಸ್ತಾನದ ಈ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರಧಾನಿ ಮೋದಿಗೆ ದೊರಕಿತು.
13. ಸೌದಿ ಅರೇಬಿಯಾ: ಆರ್ಡರ್ ಆಫ್ ಅಬ್ದುಲಜೀಜ್ ಅಲ್ ಸೌದ್– 2016ರಲ್ಲಿ ಸೌದಿ ಅರೇಬಿಯಾದ ಮುಸ್ಲಿಮೇತರರಿಗೆ ಕೊಡಲಾಗುವ ಅತ್ಯುನ್ನತ ಗೌರವ ನರೇಂದ್ರ ಮೋದಿಗೆ ಸಿಕ್ಕಿತು.



