ಇಡೀ ದೇಶದಲ್ಲಿ ಇರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (Pradhan Mantri Krushi Samman) ಜಾರಿಯಲ್ಲಿದೆ. ದೇಶದ ಕೋಟ್ಯಂತರ ರೈತರಿಗೆ ವಾರ್ಷಿಕ 6 ಸಾವಿರ ರೂ. ಹಣ ನೀಡುವ ಯೋಜನೆಯದು. ಪ್ರತಿ 4 ತಿಂಗಳಿಗೊಮ್ಮೆ ಅರ್ಹ ರೈತರ ಖಾತೆಗೆ 2 ಸಾವಿರ ರೂ.ನಂತೆ ವರ್ಷಕೆಕ ಒಟ್ಟು ಸಾವಿರ ಜಮೆ ಆಗುತ್ತದೆ. ಈ ಯೋಜನೆಗೆ ರಾಜ್ಯದಲ್ಲಿ ಮತ್ತೆ 4 ಸಾವಿರ ರೂ. ನೀಡುವ ಯೋಜನೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿ ಮಾಡಲಾಗಿತ್ತು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗಲೂ ಅದು ಮುಂದುವರೆದಿತ್ತು. ಈಗ ಆಡಳಿತಕ್ಕೆ ಬಂದಿರುವ ಕಾಂಗ್ರಸ್ ಸರ್ಕಾರವು, ಈ ಹಿಂದಿನ ಬಿಜೆಪಿ ಸರ್ಕಾರ ನೀಡುತ್ತಿದ್ದ ವಾರ್ಷಿಕ ಲಾ 4 ಸಾವಿರ ರೂ. ಹಣ ನೀಡುವ ಕೃಷಿ ಸಮ್ಮಾನ್ ಯೋಜನೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಮಾಡಿದಂತಿದೆ. ವಿಧಾನಸಭೆಯಲ್ಲಿ ಶಾಸಕ ಸುನಿಲ್ ಕುಮಾರ್ ಈ ಕುರಿತು ಪ್ರಶ್ನೆ ಎತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಸ್ಪಷ್ಟ ಉತ್ತರ ಕೊಟ್ಟಿಲ್ಲ.
ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು, ಕೃಷಿ ಸಮ್ಮಾನ್ ಯೋಜನೆ (Pradhan Mantri Krushi Samman) ನಿಲ್ಲಿಸಿದ್ದೀರೋ ಇಲ್ವೋ ಎಂದು ಪ್ರಶ್ನೆಯನ್ನು ಕೇಳಿದರು.
ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕೃಷಿ ಭಾಗ್ಯ (Krushi Bhagya) ಯೋಜನೆಯನ್ನು ಬಿಜೆಪಿಯವರು ಬಂದು ನಿಲ್ಲಿಸಿಬಿಟ್ಟಿದ್ದರು. ಆದರೆ, ಈಗ ನಾವು ಬಂದು ಮತ್ತೆ ಅದನ್ನು ಮುಂದುವರಿಸಿದ್ದೇವೆ ಎಂದು ಹೇಳಿದರು.
ಆಗಲೂ ರಾಜ್ಯ ಕೃಷಿ ಸಮ್ಮಾನ್ ನಿಲ್ಲಿಸುವ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟ ಉತ್ತರ ಕೊಡಲಿಲ್ಲ.
ಈ ವೇಳೆ ಪುನಃ ಕೃಷಿ ಸಮ್ಮಾನ್ ಬಗ್ಗೆ ಹೇಳಿ ಎಂದು ಶಾಸಕ ಸುನೀಲ್ ಕುಮಾರ್ ಸಿಎಂ ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರ ಕೊಟ್ಟ ಸಿದ್ದರಾಮಯ್ಯ ನಮ್ಮ ಕೃಷಿಭಾಗ್ಯ ಬೇಕೋ ಬೇಡವೋ.. ಹೇಳ್ರಿ.. ಕೃಷಿ ಸಮ್ಮಾನ್ ಯೋಜನೆಯನ್ನು ನೀವು ರಾಜ್ಯದಲ್ಲಿರುವ 87 ಲಕ್ಷ ರೈತರಲ್ಲಿ, ಕೇವಲ 51 ಲಕ್ಚ ರೈತರಿಗೆ ಮಾತ್ರ ಕೊಟ್ಟಿದ್ದೀರಿ. ಎಲ್ಲರಿಗೂ ಕೊಟ್ಟಿಲ್ಲ. ಹೀಗಾಗಿ ನಾವು ಬೇರೆ ಕಾರ್ಯಕ್ರಮ ಮಾಡಿದ್ದೇವೆ” ಎಂದು ಮಾಹಿತಿ ನೀಡಿದರು.
ಆಗಲೂ ರಾಜ್ಯ ಕೃಷಿ ಸಮ್ಮಾನ್ ನಿಲ್ಲಿಸುವ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟ ಉತ್ತರ ಕೊಡಲಿಲ್ಲ.
ಕೊನೆಗೆ ಸುನಿಲ್ ಕುಮಾರ್ ‘ಕೃಷಿ ಸಮ್ಮಾನ್ ಯೋಜನೆ’ ನಿಲ್ಲಿಸಿದ್ದೀರಾ ಇಲ್ವಾ ಎಂದು ಪ್ರಶ್ನೆ ಮಾಡಿದರಾದರೂ, ಸಿದ್ದರಾಮಯ್ಯ ಸ್ಪಷ್ಟ ಉತ್ತರ ಕೊಡಲಿಲ್ಲ. ಹೌದು ಅಥವಾ ಇಲ್ಲ ಎಂದು ಹೇಳಲೇ ಇಲ್ಲ.
ರಾಜ್ಯದಲ್ಲಿ 51 ಲಕ್ಷ ರೈತರು ವಾರ್ಷಿಕ ಕೃಷಿ ಸಮ್ಮಾನ್ ಯೋಜನೆ ಅಡಿಯಲ್ಲಿ ತಲಾ 4 ಸಾವಿರ ರೂ.ಗಳನ್ನು ಪಡೆಯುತ್ತಿದ್ದರು. ಜೊತೆಗೆ, ಕೇಂದ್ರ ಸರ್ಕಾರದಿಂದ ವಾರ್ಷಿಕ ತಲಾ 6 ಸಾವಿರ ರೂ. ಸೇರಿ ಕರ್ನಾಟಕದ ರೈತರು ವಾರ್ಷಿಕ 10 ಸಾವಿರ ರೂ. ಹಣವನ್ನು ಪಡೆದುಕೊಳ್ಳುತ್ತಿದ್ದರು. ಕರ್ನಾಟಕದ ಕೃಷಿ ಸಮ್ಮಾನ್ ಯೋಜನೆ ನಿಲ್ಲಿಸಿದರೆ ರೈತರಿಗೆ ಸಿಗುತ್ತಿದ್ದ 4 ಸಾವಿರ ರೂ. ಹಣ ಬರುವುದು ಸ್ಥಗಿತವಾಗಲಿದೆ.
ಏನಿದು ಸಿದ್ದರಾಮಯ್ಯ ಕೃಷಿಭಾಗ್ಯ..?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ಅವಧಿಯಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದರು. ರೈತರು ಕೃಷಿ ಹೊಂಡ ನಿರ್ಮಾಣಕ್ಕೆ ಹಾಗೂ ಯಾಂತ್ರೀಕೃತ ಕೃಷಿ ಉಪಕರಣ ಖರೀದಿಗೆ ನೆರವು ನೀಡುವ ಯೋಜನೆ ಅದು. ಇದೀಗ ಕೃಷಿಭಾಗ್ಯ ಯೋಜನೆ ಮತ್ತೆ ಜಾರಿಯಾಗುತ್ತಿದೆ. ಆದರೆ ಈ ಯೋಜನೆಗೆ ರೈತರು ಅರ್ಜಿ ಸಲ್ಲಿಸಲೇಬೇಕು.



