ಪ್ರೀತಿಗೂ.. ರಾಶಿಗೂ ಏನು ಸಂಬಂಧ.. ರಾಶಿ ನೋಡಿ ಲವ್ ಆಗುತ್ತಾ.. ಎಂದೆಲ್ಲ ಪ್ರಶ್ನೆ ಬೇಡ. ಇಂತಾದ್ದೊಂದು ಭವಿಷ್ಯವೂ ಇದೆ. ಸದ್ಯದ ಮಟ್ಟಿಗೆ ಕೆಲವು ರಾಶಿಯವರಿಗೆ ಹಳೆಯ ಪ್ರೇಮಿಗಳು ಐ ಲವ್ ಯೂ ಹೇಳೋ ಸಾಧ್ಯತೆ ಇದೆಯಂತೆ. ಅಂದಹಾಗೆ ಯಾವ ರಾಶಿಯವರಿಗೆ ಈ ರೀತಿಯ ಲಾಭ ಇದೆ..
ಸಿಂಹ ರಾಶಿ : ಸಿಂಹ ರಾಶಿಯವರಿಗೆ ಹಳೆಯ ಸ್ನೇಹಿತ ಅಥವಾ ಗೆಳತಿಯೊಬ್ಬರಿಂದ ಪ್ರೇಮ ಪ್ರಸ್ತಾಪ ಬರಬಹುದು. ಸಂಬಂಧ ಮೊದಲಿಗಿಂತಲೂ ಉತ್ತಮವಾಗಲಿದೆ. ಈ ಸಮಯದಲ್ಲಿ, ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ದೂರವಾಗಿ, ನೀವು ಇಬ್ಬರೂ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಆದರೆ.. ಇದು ವಿವಾಹಿತರಿಗೆ ಅಪ್ಲೈ ಆಗುವುದಿಲ್ಲವಂತೆ. ಮದುವೆ ಆಗಿರುವವರಿಗೆ ವೈವಾಹಿಕ ಪ್ರೇಮ ಬದುಕು ಚೆನ್ನಾಗಿಯೇ ಇರುತ್ತದೆ.
ಕರ್ಕಾಟಕ ರಾಶಿ : ಸಿಂಗಲ್ ಆಗಿರುವವರ ಜೀವನದಲ್ಲಿ ಇಂದು ಯಾರಾದರೂ ಪ್ರವೇಶಿಸಬಹುದು. ನಿಮ್ಮ ಕುಟುಂಬದವರಿಗೂ ಈ ಸಂಬಂಧ ಇಷ್ಟವಾಗಲಿದೆ. ವಿವಾಹಿತರಲ್ಲಿ ಪ್ರೀತಿ ಹೆಚ್ಚಲಿದ್ದು, ಇಬ್ಬರೂ ಒಬ್ಬರಿಗೊಬ್ಬರು ಸಮರ್ಪಿತರಾಗಿರುವ ಭಾವನೆ ಮೂಡಲಿದೆ.
ಕನ್ಯಾ ರಾಶಿ : ಹಿಂದೆ ಪ್ರೀತಿಯಲ್ಲಿ ನೋವು ಅನುಭವಿಸಿದ್ದರೆ, ಬ್ರೇಕಪ್ ಆಗಿದ್ದರೆ ಹೊಸ ಸಂಬಂಧ ಆರಂಭಿಸುವ ಸಮಯ ಹತ್ತಿರವಾಗಿದೆ ಎಂದರ್ಥ. ಸ್ನೇಹದಲ್ಲೂ ಅದೃಷ್ಟವಂತರು. ಆದರೆ, ಮದುವೆಗೆ ಸೂಕ್ತ ಪ್ರಸ್ತಾಪವೂ ಬರಬಹುದು. ಒಟ್ಟಿನಲ್ಲಿ ಪ್ರೇಮ ಕಾಲ.
ಮಕರ ರಾಶಿ : ಲವ್ ಲೈಫ್ ಮೊದಲಿಗಿಂತ ಚೆನ್ನಾಗಿರುತ್ತಂತೆ. ಆದರೆ, ಸಂಗಾತಿಯ ಜೊತೆ ಹಳೆಯ ವಿಷಯಗಳಿಗೆ ಜಗಳ ಗ್ಯಾರಂಟಿಯಂತೆ. ನಿಮ್ಮ ಗೌರವದ ಮೇಲೆ ಪ್ರೀತಿಯಿರಲಿ. ಅದನ್ನು ಕಳೆದುಕೊಳ್ಳಬೇಡಿ.
ಧನು ರಾಶಿ : ಹೊಸ ಸಂಬಂಧ ಶುರುವಾಗುವುದಕ್ಕೆ ಇದು ಪ್ರಶಸ್ತ ಕಾಲ. ನಿಮ್ಮ ಜೀವನದಲ್ಲಿ ಹೊಸ ಆರಂಭದ ಅನುಭವವಾಗಬಹುದು. ಯುವಕರು ತಮ್ಮ ಸ್ನೇಹಕ್ಕೆ ಪ್ರಾಮಾಣಿಕರಾಗಿರುತ್ತಾರೆ.
ಮೀನ ರಾಶಿ : ಇದು ಪ್ರೇಮ ಸಂದೇಶಗಳು ಹೆಚ್ಚಿರುತ್ತವೆ. ಆದರೆ, ಅದೇ ಗರ್ಲ್ ಫ್ರೆಂಡ್ ಜೊತೆ ಡೇಟಿಂಗ್‌ಗೆ ಹೋಗುವ ಸಾಧ್ಯತೆ ಹೆಚ್ಚಿದೆ.
ಕುಂಭ ರಾಶಿ : ಪ್ರೀತಿ ಪ್ರೇಮದಲ್ಲಿ ಅದ್ಭುತ ಸಂಪರ್ಕ, ಸಂವಹನ ಶುರುವಾಗಲಿದೆ. ಸಂಗಾತಿಯ ಜೊತೆ ಹೊಂದಾಣಿಕೆ ಹೆಚ್ಚಾಗಲಿದೆ.
ವೃಶ್ಚಿಕ ರಾಶಿ : ಸಂಗಾತಿಯ ಜೊತೆ ಜಗಳ ಫಿಕ್ಸ್. ಹಾದಿಬೀದಿ ರಂಪ ಮಾಡಿ ಮರ್ಯಾದೆ ಕಳೆದುಕೊಳ್ಳೋಕೆ ಹೋಗಬೇಡಿ.
ತುಲಾ ರಾಶಿ : ವಯಸ್ಸಿಗೆ ಬಂದಿರುವ ತುಲಾ ರಾಶಿಯವರಿಗೆ ಸಂಗಾತಿ ಕಾಯುತ್ತಿದ್ದಾರೆ. ತಡ ಮಾಡಬೇಡಿ. ಪಾರ್ಟಿ ವ್ಯವಸ್ಥೆ ಮಾಡಿಕೊಳ್ಳಿ.
ಮಿಥುನ ರಾಶಿ : ದಿನವೀಡಿ ಪ್ರೀತಿ ಪ್ರೇಮ ಪ್ರಣಯ. ಪ್ರೇಮ ಜೀವನ ಅದ್ಭುತವಾಗಿರಲಿದೆ.
ಇದು ಈ ವಾರದ ಭವಿಷ್ಯ.



