ನಂಟು ಪಕ್ಷದ ನುಡಿ ಕಂಟಕ..
ಎದೆಯೋಳ್ ಉಂಟಾಗಿಹನ ನೆರವಲ್ಲ..
ತುಂಟತನವ ಮಾಡಿ ತೊಡಗಿಸಿ ಹಲವರ..
ಗಂಟಲಾ ಕೊಯ್ವ ಘಾತುಕನಾ..
ಇದು ಕಾಲಜ್ಞಾನಿ ಕೊಡೇಕಲ್ ಬಸವಣ್ಣನ (kalagnani kodekal basavanna) ಭವಿಷ್ಯವಾಣಿ. ಇದು ರಾಜ್ಯ ರಾಜಕೀಯದ ಬಗ್ಗೆ ಕಾಲಜ್ಞಾನಿ ಕೊಡೇಕಲ್ ಬಸವಣ್ಣನ ಭವಿಷ್ಯವಾಣಿ ಕೊಟ್ಟಿರುವ ಸುಳಿವು ಮತ್ತು ಎಚ್ಚರಿಕೆ ಎಂದೇ ಅರ್ಥೈಸಲಾಗುತ್ತಿದೆ.
ಯಾರಿದು ಕಾಲಜ್ಞಾನಿ ಕೊಡೇಕಲ್ ಬಸವಣ್ಣ.?
15ನೇ ಶತಮಾನದಲ್ಲಿ ಬದುಕಿದ್ದ ಕಾಲಜ್ಞಾನಿ. ಬ್ರಹ್ಮಜ್ಞಾನಿ. ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೇಕಲ್ನಲ್ಲಿ ನೆಲೆಸಿದ್ದಾರೆ. ವಿಜಯ ನಗರದಿಂದ ಶುರುವಾದ ಲೋಕಸಂಚಾರ, ಕೊಡೆಕಲ್ನಲ್ಲಿ ಸ್ಥಿರವಾಯ್ತು. ಕಾಲಜ್ಞಾನ ರಚನೆಯಾಗಿದ್ದು ಅಲ್ಲಿಯೇ. ಸಮುದ್ರದಲ್ಲಿ ತೇಗದ ಎಲೆಯ ರೂಪದ ಎಲೆ ಮೇಲೆ ಜನ್ಮವೆತ್ತಿ ಬಂದ ಈ ಅವತಾರ ಪುರುಷ ಎನ್ನುವುದು ನಂಬಿಕೆ. 5 ಶತಮಾನದ ಹಿಂದಿನ ಭವಿಷ್ಯವಾಣಿಯನ್ನ ವರ್ಷಕ್ಕೆ ಎರಡು ಬಾರಿ ಪ್ರಕಟಿಸಲಾಗುತ್ತೆ. ಈ ಬಾರಿಯ ದೀಪಾವಳಿಯ ನರಕ ಚತುರ್ದಶಿಯ ವೇಳೆಗೆ ನುಡಿದ ಕಾಲಜ್ಞಾನ, ಇಡೀ ರಾಜ್ಯ ರಾಜಕೀಯವನ್ನೇ ಅಲ್ಲೋಲಕಲ್ಲೋದ ಸುಳಿವು ನೀಡಿದೆ. ಅಂದಹಾಗೆ ಈ ಭವಿಷ್ಯವಾಣಿಗಳು ಕನ್ನಡದಲ್ಲಿಯೇ ಇದ್ದರೂ, ಒಗಟು ರೂಪದಲ್ಲಿವೆ. ಸರಳವಾಗಿ ಅರ್ಥವಾಗುವುದಿಲ್ಲ.
ತಮ್ಮ ತಾವರಿತರೆ ತಮಗ್ಯಾಕೆ ದುರ್ಮರಣ. ತಮ್ಮ ತಾವರಿತರೆ ತಮಗ್ಯಾಕೆ ದುರಿತಗಳು. ತಮ್ಮಲ್ಲೆ ಇಹ ಉಂಟು, ತಮ್ಮಲ್ಲೆ ಪರ ಉಂಟು. ತಮ್ಮಲ್ಲೆ ಗುರು ಉಂಟು, ತಮ್ಮಲ್ಲೆ ಲಿಂಗವಿದ್ದೆಡೆ, ತಮ್ಮ ತಾವರಿಯದೇ ಕೆಟ್ಟಿತು ಜಗವೆಲ್ಲ. ಇದು ಕೊಡೆಕಲ್ ಬಸವಣ್ಣನ ನುಡಿ. ಮುಂದೆ ನಡೆಯುವ ಘಟನೆಗಳು, ಹಾಗು ಭವಿಷ್ಯವಾಣಿಗಳನ್ನ ಕಾಲಜ್ಞಾನದ ಶಕ್ತಿಯಿಂದ ತಮ್ಮ ವಚನಗಳ ಮೂಲಕ ಅಖಂಡ ಜ್ಞಾನವನ್ನು ಜಗತ್ತಿಗೆ ಕೊಟ್ಟಿ ಹೋಗಿದ್ದಾರೆ.
ರಾಜ್ಯ ಸರ್ಕಾಕ್ಕೆ ಎಚ್ಚರಿಕೆ ಕೊಟ್ಟಿತಾ?
ಈ ಭವಿಷ್ಯವಾಣಿಯಲ್ಲಿ ಈ ಬಾರಿ ರಾಜಕೀಯದ ಸುಳಿವಿದೆ ಎನ್ನುವುದು ಕಾಲಜ್ಞಾನವನ್ನ ಅರ್ಥ ಮಾಡಿಕೊಂಡವರ ಮಾತು.
ನಂಟು ಪಕ್ಷದ ನುಡಿ ಕಂಟಕ..
ಎದೆಯೋಳ್ ಉಂಟಾಗಿಹನ ನೆರವಲ್ಲ..
ತುಂಟತನವ ಮಾಡಿ ತೊಡಗಿಸಿ ಹಲವರ..
ಗಂಟಲಾ ಕೊಯ್ವ ಘಾತುಕನಾ..
ಸ್ನೇಹದಿಂದಿದ್ದವರೇ ಶತ್ರುಗಳಾಗುತ್ತಾರೆ. ಏನೋ ರಾಜಕೀಯ ತುಂಟಾಟ ಮಾಡಲು ಹೋಗಿ, ಇನ್ನೇನೋ ಆಗಲಿದೆ. ತಮಗೆ ತಾವೇ ಕೆಡುಕು ಮಾಡಿಕೊಳ್ತಾರೆ. ಎದೆಯಿಂದ ಹುಟ್ಟಿ ಬಂದ ಆಕ್ರೋಶವಲ್ಲ, ತುಂಟತನವ ಅಂದರೆ ತಮಾಷೆ ಮಾಡಲು ಹೋಗಿ, ಹೆದರಿಸಲು ಹೋಗಿ ಕೊನೆಗೆ ತಾವು ಆಡಿದ ಆಟಕ್ಕೆ ಅಂಟಿಕೊಳ್ಳುವ ಕಾಲ ಬಂದು ಕೆಡುಕಾಗಲಿದೆ ಎಂಬುದು ಇದರ ಅರ್ಥ ಎಂದಿದ್ಧಾರೆ ಜ್ಞಾನಿಗಳು.
ಏಕೆಂದರೆ ನಂಟು ಪಕ್ಷದ ನುಡಿ ಕಂಟಕ ಅಂದರೆ ಪಕ್ಷದೊಳಗಿನ ಮಾತುಗಳೇ ಕಂಟಕವಾಗುತ್ತವೆ.
ಎದೆಯೊಲ್ ಉಂಟಾಗಿಹನ ನೆರವಲ್ಲ
ತುಂಟತನವ ಮಾಡಿ ತೊಡಗಿಸಿ ಹಲವರ..
ಅಂದರೆ ಅದು ಹೃದಯಾಂತರಾಳದ ಕಿಚ್ಚಲ್ಲ. ಪೊಲಿಟಿಕಲ್ ಗೇಮ್ ಆಡಲು ಹೋಗಿ ಹಲವರಿಗೆ ಸಂಕಷ್ಟ ತಂದಿಡುತ್ತಾರೆ ಎನ್ನುವುದು ಇದರ ಅರ್ಥ.
ಗಂಟಲ ಕೊಯ್ವಾ ಘಾತುಕನಾ..
ಕೊನೆಗೆ ತಾವು ಮಾಡಿದ ಪ್ರಮಾದಗಳೇ ಮುಳುವಾಗುತ್ತವೆ ಎನ್ನುವುದೇ ಇದರ ಸಾರ ಎನ್ನಲಾಗಿದೆ.



