ಚಂದ್ರಯಾನ 3 (chandrayan 3) ಸಕ್ಸಸ್ ಆಗುವುದಕ್ಕೆ ಇನ್ನೇನು ಕೆಲವೇ ಗಂಟೆಗಳಷ್ಟೇ ಬಾಕಿ. 23ನೇ ತಾರೀಕು ಬುಧವಾರ ಸಂಜೆ 6 ಗಂಟೆ 04 ನಿಮಿಷಕ್ಕೆ ಸರಿಯಾಗಿ ವಿಕ್ರಂ ಲ್ಯಾಂಡರ್ (Vikram Lander) ಚಂದ್ರನ ಮೇಲ್ಮೈ ಸ್ಪರ್ಶ ಮಾಡಲಿದೆ. ಈ ಮುನ್ನ ಬುಧವಾರ ಸಂಜೆ 5.47ಕ್ಕೆ ಲ್ಯಾಂಡ್ ಆಗಲಿದೆ ಎಂದು ಇಸ್ರೋ ಹೇಳಿತ್ತು. ಆದರೆ ಈಗ ಲ್ಯಾಂಡಿಂಗ್ ಅನ್ನು 17 ನಿಮಿಷ ಮುಂದೂಡಲಾಗಿದ್ದು, ಸಂಜೆ 6.04ಕ್ಕೆ ಇಳಿಯುವ ನಿರೀಕ್ಷೆಯಿದೆ. ಅಂದು ಚಂದ್ರನ ಮೇಲೆ ಇಳಿಸುವ ಕೊನೆಯ ಸಾಹಸ ಸಂಜೆ 5.45ಕ್ಕೆ ಆರಂಭವಾಗಲಿದೆ ಎಂದು ಇಸ್ರೋ (ISRO chandrayan 2) ಹೇಳಿದೆ. ರಷ್ಯಾದ ಚಂದ್ರಯಾನ ಈಗಾಗಲೇ ವಿಫಲವಾಗಿದ್ದು ಇಡೀ ಜಗತ್ತಿನ ಭಾರತೀಯ ವಿಜ್ಞಾನಿಗಳ ಮೇಲೆ ನೆಟ್ಟಿದೆ.
ಈ ನಡುವೆ ಮೋದಿ (PM Narendra Modi) ವಿರೋಧಿಗಳು ಚಂದ್ರಯಾನವನ್ನೂ ಲೇವಡಿ ಮಾಡುತ್ತಿರುವುದು ಜನಾಕ್ರೋಶ ಹೊರಹಾಕುವಂತೆ ಮಾಡಿದೆ. ಹೀಗೆ ಚಂದ್ರಯಾನವನ್ನು ವಿರೋಧ ಮಾಡಿದವರ ಲಿಸ್ಟಿನಲ್ಲಿ ನಟ ಪ್ರಕಾಶ್ ರೈ ಕೂಡಾ ಇದ್ದಾರೆ. ಚಂದ್ರಯಾನ – 3 (chandrayan 2)ಬಗ್ಗೆ ದೇಶವೇ ಹೆಮ್ಮೆಪಡುತ್ತಿರುವ ಕೆಜಿಎಫ್ ನಟ ಪ್ರಕಾಶ್ ರಾಜ್ ಅವರು ಮಾಡಿರುವ ಟ್ವೀಟ್ ವೈರಲ್ ಆಗಿದೆ. ಚಂದ್ರಯಾನ 3ನ್ನು (chandrayan 2) ವ್ಯಂಗ್ಯ ಮಾಡಿದ ಪ್ರಕಾಶ್ ರಾಜ್ (Actor Prakash Raj) ಏನಂದಿದ್ದಾರೆ ಗೊತ್ತೇ? ವ್ಯಕ್ತಿಯೊಬ್ಬ ಚಹಾ ಮಗುಚುವ ವ್ಯಂಗ್ಯ ಚಿತ್ರ ಫೋಸ್ಟ್ ಮಾಡಿದ ಪ್ರಕಾಶ್ ರಾಜ್(Actor Prakash Raj), ತಾಜಾ ಸುದ್ದಿ: ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ ಎಂದು ಕ್ಯಾಪ್ಶನ್ ಬರೆದು ಜಸ್ಟ್ ಆಸ್ಕಿಂಗ್ (Just Asking) , ವಿಕ್ರಮ್ ಲ್ಯಾಂಡರ್ ಎಂದು ಕ್ಯಾಪ್ಶನ್ ಬರೆದಿದ್ದಾರೆ.
ಈ ವ್ಯಂಗ್ಯವಾದ ಟ್ವೀಟ್ ನೋಡಿದ ನೆಟ್ಟಿಗರು ನಟನಿಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೋದಿ ಹಾಗೂ ಆರ್ಎಸ್ಎಸ್ನ್ನು ಬಳಸಿಕೊಂಡು ನೀವು ದ್ವೇಷ ಬಿತ್ತುತ್ತೀರಿ. ಆದರೆ ಅವರನ್ನು ಬಳಸಿಕೊಂಡು ದೇಶವನ್ನು ಬೈಯುವುದೇ ನಿಮ್ಮ ಅಸಲಿ ವ್ಯಕ್ತಿತ್ವ ಎಂದಿದ್ದಾರೆ.
ಇಂಟರ್`ನೆಟ್ಟಿನಲ್ಲಿಯೇ ಜನ ಕ್ಲಾಸ್ ತಗೊಂಡಿದ್ದಾರೆ. ಮೋದಿ ಚಾಯ್`ವಾಲಾ ಎಂದೇ ಫೇಮಸ್ ಆಗಿದ್ದವರು. ಇದು ಮೋದಿಗೇ ಕೊಟ್ಟಿರುವ ಟಾಂಗ್ ಎನ್ನುವುದು ಗುಟ್ಟೇನಲ್ಲ. ಪ್ರಕಾಶ್ ರೈ (Actor Prakash Raj) ಅವರು ಮೋದಿ ವಿರೋಧಿ ಬಣದಲ್ಲಿರುವುದೂ ಕೂಡಾ ಓಪನ್ ವಿಷಯವೇ. ಮೋದಿ ಏನು ಮಾಡಿದರೂ ಅದನ್ನು ವಿರೋಧಿಸುವವರ ಲಿಸ್ಟಿನಲ್ಲಿ ಕೆಲವರಿರುತ್ತಾರೆ. ಅಂತಹವರಲ್ಲಿ ಪ್ರಕಾಶ್ ರೈ ಕೂಡಾ ಒಬ್ಬರು. ಚಂದ್ರಯಾನ ಲಾಂಚ್ ವೇಳೆಯಲ್ಲಿ ಒಬ್ಬ ಯುನಿವರ್ಸಿಟಿಯ ಪ್ರೊಫೆಸರ್ ಕೂಡಾ ಅದನ್ನು ಲೇವಡಿ ಮಾಡಿದ್ದರು. ವಿಜ್ಞಾನಿಗಳು ತಿರುಪತಿಗೆ ಹೋಗಿದ್ದು, ದೇವರ ಆಶೀರ್ವಾದ ಪಡೆದಿದ್ದೇ ತಪ್ಪಾಗಿ ಕಂಡಿತ್ತು ಅವರಿಗೆ. ಅದನ್ನು ಕೆಲವು ಸ್ವಯಂಘೋಷಿತ ಬುದ್ದಿಜೀವಿಗಳು ಸಮರ್ಥನೆಯನ್ನೂ ಮಾಡಿಕೊಂಡಿದ್ದರು. ಇದೀಗ ಚಂದ್ರಯಾನ ಸಕ್ಸಸ್ ಹಂತದಲ್ಲಿ ಪ್ರಕಾಶ್ ರೈ ಅಂತಹವರೂ ಅದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಮೋದಿಯರೇನೂ ದೈವ ಮಾನವ ಅಲ್ಲ. ದೇಶದ ಪ್ರಧಾನಿ. ದೇಶದಲ್ಲಿರುವ ಎಲ್ಲರೂ ಅವರನ್ನು ಹೊಗಳಬೇಕು ಎಂದೇನೂ ಇಲ್ಲ. ಟೀಕೆ ಮಾಡುವುದಕ್ಕೂ ಅವರು ಅರ್ಹರು. ಭಾರತೀಯರಾದ ನಮಗಲ್ಲದೆ ಇನ್ಯಾವ ದೇಶದವರಿಗೆ ಮೋದಿಯನ್ನು ಟೀಕಿಸುವ ಹಕ್ಕಿದೆ..? ಅಲ್ಲವೇ.. ಆದರೆ ಮೋದಿಯನ್ನು ಟೀಕಿಸುವ ಭರದಲ್ಲಿ ವಿಜ್ಞಾನಿಗಳ ಅದ್ಭುತ ಸಾಧನೆಯನ್ನೂ ಲೇವಡಿ ಮಾಡುವ ಹಂತಕ್ಕೆ ಇಳಿಯಬೇಕಿತ್ತೇ ನಟ ಪ್ರಕಾಶ್ ರೈ.. ಇದು ಕೇವಲ ಪ್ರಕಾಶ್ ರೈ ಅವರಿಗಷ್ಟೇ ಅನ್ವಯಿಸಲ್ಲ. ಪಾಠ ಮಾಡುವ ಮೇಷ್ಟ್ರುಗಳು, ಲೆಕ್ಚರರುಗಳಲ್ಲಿಯೂ ಇಂತಹವರಿದ್ದಾರೆ. ವಿಜ್ಞಾನಿಗಳ ಸಾಧನೆಯಲ್ಲೂ ಅಯ್ಯೋ.. ಇದೂ ಮೋದಿ ಸರ್ಕಾರದಲ್ಲಿ ಅಗ್ತಿದೆಯಲ್ಲ ಎಂದು ಹುಳುಕುಕ ಹುಡುಕುವವರ ಅಸಹ್ಯಕರ ವರ್ತನೆ ಪ್ರದರ್ಶನವಾಗುತ್ತಲೇ ಇದೆ.
ಚಂದ್ರಯಾನ 2 ಇನ್ನೂ 100% ಸಕ್ಸಸ್ ಆಗಿಲ್ಲ. ಇನ್ನೂ ಒಂದು ಹಂತ ಬಾಕಿ ಇದೆ. ಅಲ್ಲಿಯೂ ಗೆಲ್ಲಲಿ ಎನ್ನುವುದು ದೇಶದ ಭಾರತೀಯರ ಹಾರೈಕೆ. ಅದರ ನಡುವೆ ಅಕಸ್ಮಾತ್ ಆ ಹಂತದಲ್ಲೇನಾದರೂ ಫೇಲ್ ಆದರೆ ಈ ವಿಕೃತಿಗಳು ಅದನ್ನೂ ಸಂಭ್ರಮಿಸುತ್ತಾರೇನೋ..



