ಪ್ರಕಾಶ್ ರಾಜ್ ಅನುಮಾನವೇ ಇಲ್ಲದಂತೆ ಮೋದಿಯವರ ವಿರೋಧಿ ಎನ್ನುವುದು ಜಗತ್ತಿಗೇ ಗೊತ್ತಿರುವ ವಿಷಯ. ಈಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಂದಿಲ್ಲ. ನಿರೀಕ್ಷೆಯಂತೆ 400ರ ಗಡಿ ದಾಟಿಲ್ಲ. ಮುನ್ನೂರರ ಹತ್ತಿರ ಮುಗ್ಗರಿಸಿ ಬಿದ್ದಿದೆ. ಸರ್ಕಾರ ಮಾಡುತ್ತಿರುವುದು ಬಿಜೆಪಿ ನೇತೃತ್ವದ ಎನ್ʻಡಿಎ ಆದರೂ.. ಈ ಹಿಂದಿನಂತೆ ಏಕಾಂಗಿಯಾಗಿ ಬಿಜೆಪಿಗೆ ಬಹುಮತ ಸಿಕ್ಕಿಲ್ಲ. ಇದನ್ನು ಪ್ರಕಾಶ್ ರೈ ಸೆಲಬ್ರೇಟ್ ಮಾಡುತ್ತಿದ್ಧಾರೆ.
ಯುವತಿಯೊಬ್ಬಳ ‘ಅಬ್ಕಿ ಬಾರ್ 400 ಪಾರ್’ ಘೋಷಣೆಯನ್ನು ಹಂಚಿಕೊಂಡಿರುವ ಪ್ರಕಾಶ್ ರೈ, ಮೋದಿಯ ಕಾಲೆಳೆದಿದ್ದಾರೆ. ‘ಚಕ್ರವರ್ತಿ ಈಗ ಬೆತ್ತಲಾಗಿದ್ದಾನೆ. ಬೇರೆ ಯಾರದ್ದೋ ಬೆಂಬಲದೊಂದಿಗೆ ಆತ ಈಗ ನಡೆಯಬೇಕಿದೆ. ಆತನ ಅಂಹಕಾರ ಮುರಿದು, ಸ್ಥಾನ ತೋರಿಸಿದ್ದಕ್ಕಾಗಿ ಇಂಡಿಯಾ ಮತ್ತು ಜವಾಬ್ದಾರಿಯುತ ಸಮಾಜಕ್ಕೆ ಧನ್ಯವಾದಗಳು. ನಾವು ನಮ್ಮ ದೇಶಕ್ಕಾಗಿ ಉತ್ತಮವಾಗಿ ಹೋರಾಡಿದ್ದೇವೆ. ಈ ಹೋರಾಟವನ್ನು ನಾವು ಮುಂದುವರಿಸುತ್ತೇವೆ. ಜೈ ಹಿಂದ್’ ಎಂದು ಪ್ರಕಾಶ್ ರಾಜ್ ಅವರು ಟ್ವೀಟ್ ಮಾಡಿದ್ದಾರೆ.
ಸಂಘಿಗಳೇ.. ನೀವು ಯಾವತ್ತೂ ತಮಿಳುನಾಡು ಗೆಲ್ಲೋಕೆ ಆಗಲ್ಲ ಎಂಬ ಡಿಎಂಕೆ ಕಾರ್ಯಕರ್ತರ ವಿಡಿಯೋ ಶೇರ್ ಮಾಡಿದ್ಧಾರೆ. ಅಯೋಧ್ಯೆಯಲ್ಲಿ ನಾವು ಹಿಂದೂಗಳು ಚೂತ್ಯಾಗಳಲ್ಲ.. ಎಂಬ ಪೋಸ್ಟರ್ ಹಿಡಿದಿರುವ ಯುವಕನ ಪೋಸ್ಟರ್ ಹಾಕಿ ಸಂಭ್ರಮಿಸಿದ್ಧಾರೆ. ಮೋದಿಯ ಸೋಲನ್ನು ಸಂಭ್ರಮಿಸುತ್ತಿರುವ ಸ್ಟಾರ್ ನಟರಲ್ಲಿ ಮುಂಚೂಣಿಯಲ್ಲಿದ್ಧಾರೆ ಪ್ರಕಾಶ್ ರೈ.



