ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಈ ಬಾರಿಯೂ ಅಭ್ಯರ್ಥಿಯಾಗಲಿ ಎಂದು ಜೆಡಿಎಸ್ ನಾಯಕರು ಕೇಳುತ್ತಿದ್ದಾರೆ. ಅತ್ತ ಕುಮಾರಸ್ವಾಮಿ ಅವನನ್ನು ಈ ರಾಜಕೀಯಕ್ಕೆ ಎಳೆಯಬೇಡಿ, ಎಲ್ಲೋ ನೆಮ್ಮದಿಯಾಗಿದ್ದಾನೆ ಎನ್ನುತ್ತಿದ್ದಾರೆ. ಅದರೆ ನಿಖಿಲ್ ಕುಮಾರಸ್ವಾಮಿ ಆಕ್ಟಿವ್ ಆಗಿಯೇ ಇದ್ಧಾರೆ. ಅಮಿತ್ ಶಾ, ಜೆಪಿ ನಡ್ಡಾ ಜೊತೆಗಿನ ಭೇಟಿಯಲ್ಲಿ, ಯಡಿಯೂರಪ್ಪ ಮನೆಗೆ ಹೋಗಿದ್ದು ನಿಖಿಲ್ ಕುಮಾರಸ್ವಾಮಿಯವರೇ. ಇನ್ನು ವಿಜಯೇಂದ್ರ ಕುಮಾರಸ್ವಾಮಿ ಭೇಟಿ ವೇಳೆ ನಿಖಿಲ್ ಮತ್ತು ವಿಜಯೇಂದ್ರ ಅಣ್ಣ ತಮ್ಮಂದಿರಂತೆ ಪಕ್ಷವನ್ನು ಸಂಘಟಿಸುತ್ತಾರೆ ಎಂದು ಹೇಳಿಕೆ ನೀಡಿದ್ದರು.
ಆದರೆ ಅದೇ ವಿಜಯೇಂದ್ರ ದೇವೇಗೌಡರ ಮನೆಗೆ ಹೋದಾಗ ಎದುರು ನಿಂತು ಸ್ವಾಗತಿಸಿದ್ದು ಪ್ರಜ್ವಲ್ ರೇವಣ್ಣ. ಪರಿಸ್ಥಿತಿ ಹೀಗುರುವಂತೆಯೇ ದೇವೇಗೌಡರು ಈ ಬಾರಿ ಹಾಸನದಿಂದ ಮತ್ತೆ ಲೋಕಸಭೆಗೆ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರತೊಡಗಿದ್ದವು. ಇದೀಗ ಖುದ್ದು ದೇವೇಗೌಡರೇ ಇವುಗಳಿಗೆಲ್ಲ ಫುಲ್ ಸ್ಟಾಪ್ ಇಟ್ಟಿದ್ದಾರೆ.
ನನಗೆ ಇನ್ನೂ ಎರಡೂವರೆ ವರ್ಷ ರಾಜ್ಯಸಭೆ ಅಧಿಕಾರ ಇದೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದರ ಬಗ್ಗೆ ಸಂಶಯ, ಗೊಂದಲಬೇಡ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾನು ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ಧಾರೆ.
ಕಳೆದ ಬಾರಿ ಎಲ್ಲಾ ಮುಖಂಡರು ಕಾಂಗ್ರೆಸ್ ಮತ್ತು ಜೆಡಿಎಸ್‌ನ ನಾಯಕರು ಸೇರಿಯೇ ಪ್ರಜ್ವಲ್ ರೇವಣ್ಣನನ್ನು ಆಯ್ಕೆ ಮಾಡಿದ್ದರು. ಈ ಬಾರಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಜೆಡಿಎಸ್ ಸೇರಿ ಹೋರಾಡುತ್ತೇವೆ ಎಂದು ಹೇಳಿದ್ದಾರೆ. ಸೀಟು ಹೊಂದಾಣಿಕೆ ಸಂಬಂಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಮಿತ್‌ಶಾರವರು ಮೊದಲನೇ ಹಂತದಲ್ಲಿ ಮಾತನಾಡಿದ್ದಾರೆ ಐದು ರಾಜ್ಯಗಳ ಚುನಾವಣೆ ನಂತರ ಬಿಜೆಪಿ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರ ತೆ ಸಮಾಲೋಚನೆ ಮಾಡಿ ಅಂತಿಮಗೊಳಿಸಲಾಗುವುದು ಎಂದಿದ್ದಾರೆ ದೇವೇಗೌಡ.
ಹಾಸನ ಲೋಕಸಭೆ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪರ್ಧಿಸುತ್ತಾರಾ ಎಂಬ ಚರ್ಚೆಯನ್ನು ಹಲವರು ಮಾಡುತ್ತಿದ್ದಾರೆ. ದೊಡ್ಡಗೌಡರು ನನಗೆ ದೊಡ್ಡ ಆಲದಮರವಿದ್ದಂತೆ. ಅವರ ನೆರಳಲ್ಲಿ ಬದುಕಿದ್ದೇನೆ, ಅವರ ನೆರಳಲ್ಲಿ ರಾಜಕೀಯ ಮಾಡಿದ್ದೇನೆ ಅವರ ಆಶೀರ್ವಾದದ ಮೇಲೆ ನಾನು ಬಂದಿದ್ದೇನೆ ದೊಡ್ಡವರು ಹಾಸನದಿಂದ ಸ್ಪರ್ಧೆ ಮಾಡಿದ್ರೆ 24 ಗಂಟೆ ನಾನು ಜನರ ಜೊತೆ ಇದ್ದುಕೊಂಡು ಪ್ರಾಮಾಣಿಕವಾಗಿ ಕೆಲಸಮಾಡಿ ನಾನು ಗೆದ್ದಿದ್ದಕ್ಕಿಂತ ಹೆಚ್ಚಿನ ಅಂತರದಲ್ಲಿ ಗೆಲ್ಲಿಸುವ ಕೆಲಸ ಮಾಡುತ್ತೇನೆ ಎಂದು ಅಭಿಪ್ರಾಯಪಟ್ಟರು.
ಪ್ರಜ್ವಲ್ ರೇವಣ್ಣ ಆ ಹೇಳಿಕೆ ನೀಡಿದ ಅದೇ ವೇದಿಕೆಯಲ್ಲಿ ದೇವೇಗೌಡರು ಈ ಹೇಳಿಕೆ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದರು.



