ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರೋದು ಯಾವಾಗ..? ಈ ಪ್ರಶ್ನೆಗೆ ಉತ್ತರ ಖುದ್ದು ರೇವಣ್ಣ, ಭವಾನಿ ಅವರಿಗೂ ಗೊತ್ತಿಲ್ಲ. ಇತ್ತ ರೇವಣ್ಣ ಅರೆಸ್ಟ್ ಆಗಿ ಜಾಮೀನು ಪಡೆದು ಬಿಡುಗಡೆಯನ್ನೂ ಪಡೆದುಕೊಂಡಿದ್ಧಾರೆ. ಆದರೆ.. ಕಾನೂನಿನ ಕುಣಿಕೆ ಬಿಟ್ಟಿಲ್ಲ. ಪ್ರಜ್ವಲ್ ರೇವಣ್ಣ ಅವರಿರೋದು ಜರ್ಮನಿಯಲ್ಲಿ.
ಜರ್ಮನಿಯ ಮ್ಯೂನಿಚ್ʻನಲ್ಲಿರುವ ಪ್ರಜ್ವಲ್ ರೇವಣ್ಣ ಇದುವರೆಗೆ ಒಟ್ಟು 5 ಬಾರಿ ಟಿಕೆಟ್ ಬುಕ್ ಮಾಡಿದ್ಧಾನೆ. ಆದರೆ.. ಒಮ್ಮೆಯೂ ಪ್ರಯಾಣ ಮಾಡಿಲ್ಲ. 4 ಬಾರಿ ಟಿಕೆಟ್ ಬುಕ್ ಮಾಡಿ, ಕ್ಯಾನ್ಸಲ್ ಮಾಡಿರುವ ಪ್ರಜ್ವಲ್, 5ನೇ ಬಾರಿ ಟಿಕೆಟ್ ಕ್ಯಾನ್ಸಲ್ ಕೂಡಾ ಮಾಡಿಲ್ಲ. ಅಂದಹಾಗೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿರುವುದು ರಾಜತಾಂತ್ರಿಕ ವೀಸಾದಲ್ಲಿ. ಹೀಗಾಗಿ.. ವೀಸಾ ಅವಧಿ ಮುಕ್ತಾಯವಾಗುತ್ತೆ ಎಂಬ ಆತಂಕವೂ ಇಲ್ಲ.
ಜರ್ಮನಿಯಲ್ಲೇ ಇರುವ ಪ್ರಜ್ವಲ್ ರೇವಣ್ಣ, ಅಲ್ಲಿ ಎಲ್ಲಿದ್ದಾರೆ.. ಹೇಗಿದ್ಧಾರೆ ಅನ್ನೋ ಬಗ್ಗೆ ಮಾಹಿತಿ ಇಲ್ಲ. ಆದರೆ.. ಪೊಲೀಸರು ಪ್ರಜ್ವಲ್ ರೇವಣ್ಣ ಅವರ ಬ್ಯಾಂಕ್ ಅಕೌಂಟ್ ಮತ್ತಿತರ ವ್ಯವಹಾರಗಳ ಮೇಲೆ ಕಣ್ಣಿಟ್ಟಿದ್ಧಾರೆ. ಜರ್ಮನಿಯಲ್ಲಿ ಇಲ್ಲಿರುವ ಹಾಗೆ.. ಎಲ್ಲವೂ ಗೂಗಲ್ ಪೇ/ಫೋನ್ ಪೇ ರೀತಿ ಆನ್ʻಲೈನ್ ಪೇಮೆಂಟುಗಳಿಲ್ಲ. ಅಲ್ಲಿ ಈಗಿನ್ನೂ ಈ ರೀತಿಯ ಫೋನ್ ಪೇಮೆಂಟ್ ಡೆವಲಪ್ ಆಗುತ್ತಿದೆ. ಹೀಗಾಗಿ ಆನ್ ಲೈನ್ ಪೇಮೆಂಟ್ ಮೂಲಕ ಆಗುವುದಿಲ್ಲ.
ಪ್ರಜ್ವಲ್ ರೇವಣ್ಣ ಅವರು ಒಂದೋ.. ಕಾರ್ಡ್ ಮೂಲಕ ಪೇಮೆಂಟ್ ಮಾಡಬೇಕು. ಇಲ್ಲವಾದರೆ.. ಕಾರ್ಡ್ ಮೂಲಕ ಎಟಿಎಂಗಳಲ್ಲಿ ಡ್ರಾ ಮಾಡಿ, ಕ್ಯಾಷ್ ವ್ಯವಹಾರ ಮಾಡಬೇಕು. ಹೀಗೂ ಆಗಿಲ್ಲ. ಇಷ್ಟೆಲ್ಲ ಆಗಿ ಪ್ರಜ್ವಲ್ ರೇವಣ್ಣ ಒಮ್ಮೆ ಟಿಕೆಟ್ ಬುಕ್ ಮಾಡಿದರೆ.. ಆಗುವ ಖರ್ಚು ಒಂದೂವರೆ ಲಕ್ಷ. ಕಡೆಯ ಗಳಿಗೆಯಲ್ಲಿ ಕ್ಯಾನ್ಸಲ್ ಮಾಡಿದರೆ..ಆ ಹಣ ವಾಪಸ್ ಬರಲ್ಲ. ಅಂದರೆ.. ಒಟ್ಟು 5 ಬಾರಿ ಟಿಕೆಟ್ ಬುಕ್ ಮಾಡಿರುವ ಪ್ರಜ್ವಲ್ ರೇವಣ್ಣ, ಕೇವಲ ಟಿಕೆಟ್ʻಗಳಿಗಾಗಿಯೇ ಏಳೂವರೆ ಲಕ್ಷ ಖರ್ಚು ಮಾಡಿದ್ಧಾನೆ. ಆದರೆ.. ಭಾರತಕ್ಕೆ ಬಂದಿಲ್ಲ. ಒಂದು ಮೂಲದ ಪ್ರಕಾರ ಪ್ರಜ್ವಲ್ ರೇವಣ್ಣ ಅವರು ಮೂರೂವರೆ ಲಕ್ಷದ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ಟಿಕೆಟ್ಟಿಗೆ ಮೂರೂವರೆ ಲಕ್ಷ ಎಂದರೆ.. ಐದು ಬಾರಿ ಬುಕ್ ಮಾಡಿದ್ದಕ್ಕೆ.. ಹದಿನೇಳೂವರೆ ಲಕ್ಷ.
ಇದೂ ಒಂದು ತಂತ್ರವಾ..? ಹೀಗೊಂದು ಅನುಮಾನ ಪೊಲೀಸರಿಗೆ ಕಾಡುತ್ತಿದ್ದರೆ ಅಚ್ಚರಿ ಪಡಬೇಕಿಲ್ಲ. ಏಕೆಂದರೆ.. ಈ ಹಿಂದೆ ಪ್ರಜ್ವಲ್ ಅವರು ಬುಕ್ ಮಾಡಿದ್ದ ಟಿಕೆಟ್ ನ್ನು ರದ್ದು ಮಾಡಿದ್ದರು. ಆದರೂ ಅದರ ಹಣ ವಾಪಸ್ ಪಡೆಯದೆ ಗೊಂದಲ ಮೂಡಿಸಿದ್ದರು. ಯಾವುದೇ ಕ್ಷಣದಲ್ಲಾದರೂ ಮತ್ತೆ ಟಿಕೆಟ್ ಖರೀದಿಸಲು ಪ್ರಜ್ವಲ್ ಈ ತಂತ್ರ ಹೂಡಿರಬಹುದು ಎಂದು ಹೇಳಲಾಗುತ್ತಿತ್ತು. ಮರಳಿ ಟಿಕೆಟ್ ಬುಕ್ ಆಗಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಎಸ್ಐಟಿ ತಂಡ ಬೀಡುಬಿಟ್ಟು ವಾಪಸ್ ಬರುತ್ತಿದೆ.
ಇತ್ತೀಚೆಗೆ.. ಮಧ್ಯರಾತ್ರಿ 12:30ಕ್ಕೆ ಬಂದ ಲುಫ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಬರುವ ಸಾಧ್ಯತೆ ಇದ್ದ ಕಾರಣ ಪೊಲೀಸರು ಕಾದಿದ್ದರು. ನಂತರ ಬ್ರಿಟೀಷ್ ಏರ್‌ಲೈನ್ಸ್‌ನಲ್ಲಿ ಬರುವ ಮಾಹಿತಿ ತಿಳಿದು ಮಂಜಾನೆ 5 ಗಂಟೆಯ ವರೆಗೆ ಕಾದಿದ್ದರು. ಆದರೆ ಪ್ರಜ್ವಲ್ ರೇವಣ್ಣ ಈ ಎರಡೂ ವಿಮಾನದಲ್ಲಿ ಬಾರದ ಕಾರಣ ಪೊಲೀಸರು ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.
ಹೀಗೆ ಹಲವು ಬಾರಿ ಸತಾಯಿಸಿದರೆ.. ಒಮ್ಮೆ ಪೊಲೀಸರು ಯಾಮಾರುತ್ತಾರೆ. ಆಗ ಭಾರತಕ್ಕೆ ಬಂದು ನಾಪತ್ತೆಯಾಗಬಹುದು ಎಂಬ ತಂತ್ರವನ್ನೇನಾದರೂ ಪ್ರಜ್ವಲ್ ಮಾಡುತ್ತಿದ್ದಾರೆಯೇ ಎಂಬುದು ಪೊಲೀಸರ ಅನುಮಾನ. ಹೀಗಾಗಿಯೇ ಪೊಲೀಸರು ಫುಲ್ ಅಲರ್ಟ್ ಆಗಿದ್ಧಾರೆ.



