ಪ್ರಧಾನಮಂತ್ರಿ ಸ್ಥಾನವೇನೂ ಖಾಲಿ ಇಲ್ಲ. ಆದರೆ, ಆ ಸ್ಥಾನದಲ್ಲಿ ಕುಳಿತಿರುವುದು ಬಿಜೆಪಿಯ ನರೇಂದ್ರ ಮೋದಿ. ಅವರು ತಮಗೆ ತಾವೇ ೭೫ರ ನಂತರ ಹುದ್ದೆಯಲ್ಲಿ ಮುಂದುವರೆಯುವುದಿಲ್ಲ ಎಂದು ಹೇಳಿರೋದ್ರಿಂದ, ಆಗಲೇ ಒಂದು ತಲ್ಲಣ ಶುರುವಾಗಿದೆ. ಹಾಗೆ ನೋಡಿದರೆ, ಈ ಬಾರಿ ನಡೆದ ಲೋಕಸಭೆ ಚುನಾವಣೆಯಲ್ಲಿ ಅದೂ ಕೂಡಾ ಒಂದು ಪ್ರಮುಖ ಚರ್ಚಾ ವಿಷಯವಾಗಿತ್ತು. ಇದೀಗ ಮೋದಿ ನಂತರ ಯಾರು ಎಂಬ ಪ್ರಶ್ನೆಗೆ ಹುಡುಕಾಟವೂ ನಡೆಯುತ್ತಿದೆ. ಸಮೀಕ್ಷೆಗಳು ಒಂದು ಕಡೆ ಇದ್ದರೆ, ಜಾತಕ, ಕುಂಡಲಿಗಳು ಹೇಳುತ್ತಿರುವ ಕಥೆಯೇ ಬೇರೆ. ವಿಕಾಸ್ ವಿದ್ಯಾಕೀರ್ತಿ ಎಂಬುವವರು ವಿಶ್ಲೇಷಿಸಿರುವ ಪ್ರಕಾರ..
ಯೋಗಿ ಆದಿತ್ಯನಾಥ್ : ಪ್ರಧಾನಿ ಮೋದಿ ಬಳಿಕ ಅಂದರೆ 2029ರಲ್ಲಿ ಪ್ರಧಾನಿಯಾಗುವ ರಾಜಯೋಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗಿದೆ. ಯೋಗಿ ಆದಿತ್ಯನಾಥ್ ಕುಂಡಲಿ ಹಾಗೂ ರಾಶಿ ಭವಿಷ್ಯಗಳು ರಾಜಯೋಗ ದೃಢಪಡಿಸುತ್ತಿದೆ. 2017ರಿಂದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಯೋಗಿ ಆದಿತ್ಯನಾಥ್‌ಗೆ 2019ರಲ್ಲೂ ರಾಜಯೋಗ ಮುಂದುವರಿಯಲಿದೆ. ಜೊತೆಗೆ ಉನ್ನತ ಸ್ಥಾನ ಅಲಂಕರಿಸುವ ಅವಕಾಶಗಳು ಒದಗಿಬರಲಿದೆ. ಹೀಗಾಗಿ ಜ್ಯೋತಿಷ್ಯದ ಪ್ರಕಾರ ಮೋದಿ ಬಳಿಕ ಪ್ರಧಾನಿಯಾಗಬಲ್ಲ ಎಲ್ಲಾ ಸಾಧ್ಯೆತೆಗಳು ಯೋಗಿ ಆದಿತ್ಯನಾಥ್ ಅವರಿಗೆ ಇದೆ.
ರಾಹುಲ್ ಗಾಂಧಿ : ರಾಹುಲ್ ಗಾಂಧಿ ವಿಚಾರದಲ್ಲಿ ಕೆಲ ಅಡೆತಡೆಗಳು ಇವೆ. ಪ್ರಮುಖವಾಗಿ ಮುಂದಿನ 10 ರಿಂ 15 ವರ್ಷ ರಾಹುಲ್ ಕುಂಡಲಿಯಲ್ಲಿ ರಾಜಯೋಗ ಕಾಣುತ್ತಿಲ್ಲ. ರಾಹುಲ್ ಗಾಂಧಿ ಪ್ರಧಾನಿಯಾಗುವ ಸಾಧ್ಯತೆಗಳು ಮುಂದಿನ 10 ರಿಂದ 15 ವರ್ಷದಲ್ಲಿ ಕಡಿಮೆ. ಆದರೆ ರಾಹುಲ್ ಗಾಂಧಿಗೆ ಉನ್ನತ ಸ್ಥಾನ ಅಲಂಕರಿಸುವ ಸಾಧ್ಯತೆಗಳು ಸುದೀರ್ಘ ವರ್ಷಗಳ ಬಳಿಕ ಬರುವ ಸಾಧ್ಯತೆ ಇದೆ. ಆದರೆ ಸದ್ಯಕ್ಕಿಲ್ಲ. ಸದ್ಯದ ಪರಿಸ್ಥಿತಿಗಳು ರಾಹುಲ್ ಗಾಂಧಿಗೆ ಪ್ರತಿಕೂಲವಾಗಿಯೇನೂ ಇಲ್ಲ. ಹಲವು ಸವಾಲುಗಳಿವೆ. ಆದರೂ ರಾಹುಲ್ ಗಾಂಧಿಗೆ ರಾಜಯೋಗದ ಅದೃಷ್ಠ ಬಾಗಿಲು ಸದ್ಯಕ್ಕೆ ತೆರೆದಿಲ್ಲ.
ಜ್ಯೋತಿಷ್ಯ ಪ್ರಕಾರ ಯೋಗಿ ಆದಿತ್ಯನಾಥ್ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸುವ ಸಾಧ್ಯತೆಯನ್ನು ಕುಂಡಲಿ ಹೇಳುತ್ತಿದೆ ಎಂದಿದ್ದಾರೆ. ಇತ್ತ ರಾಜಕೀಯ ವಿಶ್ಲೇಷಣೆಕಾರರು ಮುಂದಿನ ಬಿಜೆಪಿ ಪ್ರಧಾನಿ ಅಭ್ಯರ್ಥಿಗಳ ಸಾಲಿನಲ್ಲಿ ಯೋಗಿ ಆದಿತ್ಯನಾಥ್ ಮುಂಚೂಣಿಯಲ್ಲಿದ್ದಾರೆ ಎಂದು ಹಲವು ಬಾರಿ ಹೇಳಿದ್ದಾರೆ. ಮೂರನೇ ಅವಧಿಯಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನ ಪಡೆಯಲು ವಿಫಲವಾಗಿದೆ. ಏಕಾಂಗಿಯಾಗಿ ಸ್ಪಷ್ಟಬಹುಮತ ದಾಟಿಲ್ಲ. ಇದರ ನಡುವೆ 2029ರ ಚರ್ಚೆ ಶುರುವಾಗಿದೆ. ಹೀಗಾಗಿ 2029ರ ಲೋಕಸಭಾ ಚುನಾವಣೆ ಚರ್ಚೆಗಳು ಈಗಾಗಲೇ ಶುರುವಾಗತೊಡಗಿದೆ. ಪ್ರಮುಖವಾಗಿ ಪ್ರಧಾನಿ ಅಭ್ಯರ್ಥಿಯೇ ಚರ್ಚಾ ವಿಷಯವಾಗಿದೆ.
ಅಂದಹಾಗೆ ಈ ಜ್ಯೋತಿಷಿ ಅಮಿತ್ ಶಾ ಅವರ ಕುಂಡಲಿಯನ್ನು ನೋಡಿಯೇ ಇಲ್ಲವಂತೆ. ಇವರ ಪ್ರಕಾರ ಅಮಿತ್ ಶಾ ಅವರಿಗೆ ಪ್ರಧಾನಿಯಾಗುವ ಅವಕಾಶವೇ ಸಿಗುವುದಿಲ್ಲ. ಹೀಗಾಗಿ ಶಾ ಕುಂಡಲಿನ್ನು ನೋಡುವ ಅಗತ್ಯವೂ ಇಲ್ಲ ಎನ್ನುತ್ತಾರೆ. ಅಮಿತ್ ಶಾ ಅವರದ್ದಷ್ಟೇ ಅಲ್ಲ, ಪ್ರಿಯಾಂಕಾ ವಾದ್ರಾ, ಮಲ್ಲಿಕಾರ್ಜುನ ಖರ್ಗೆ ಅವರಿಗೂ ಪ್ರಧಾನಿಯಾಗುವ ಯೋಗ ಇಲ್ಲವಂತೆ.



