ಪ್ರಭುದೇವ ಅವರಿಗೀಗ 50 ವರ್ಷ. ಮೊದಲ ಪತ್ನಿಗೆ ಮೂವರು ಇಬ್ಬರು ಮಕ್ಕಳು. ಇದೀಗ ಪ್ರಭುದೇವ ಮತ್ತೊಮ್ಮೆ ತಂದೆಯಾಗಿದ್ದಾರೆ. ಪ್ರಭುದೇವ 2ನೇ ಪತ್ನಿ ಹಿಮಾನಿ ಸಿಂಗ್ ಅವರು ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. 2020ರಲ್ಲಿ ಸೈಕಾಲಜಿಸ್ಟ್ ಆಗಿದ್ದ ಹಿಮಾನಿ ಸಿಂಗ್ ಅವರನ್ನು ಪ್ರಭುದೇವ ಮದುವೆಯಾಗಿದ್ದರು. ಹೌದು, ಇದು ನಿಜ. 50ನೇ ವಯಸ್ಸಿನಲ್ಲಿ ನಾನು ಮತ್ತೊಮ್ಮೆ ತಂದೆಯಾಗಿದ್ದೇನೆ ಎಂದು ಖಚಿತ ಪಡಿಸಿದ್ದಾರೆ ಪ್ರಭುದೇವ. ಪ್ರಭುದೇವ ಅವರ ಒಟ್ಟು ಕುಟುಂಬದಲ್ಲೇ ಇದು ಮೊದಲನೇ ಹೆಣ್ಣು ಮಗು. ಹೀಗಾಗಿಯೇ ಮೂಗೂರು ಸುಂದರ್ ಮನೆಯಲ್ಲಿ ಸಂಭ್ರಮ. ಪ್ರಭುದೇವ ಅವರು ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕೊರಿಯೋಗ್ರಾಫರ್ ಮತ್ತು ಡೈರೆಕ್ಟರ್ ಆಗಿರುವ ಪ್ರಭುದೇವ ಅವರಿಗೆ ಇದು ಎರಡನೇ ಮದುವೆ. 1995ರಲ್ಲಿ ರಾಮಲತಾ ಜೊತೆ ಮದುವೆಯಾದರು. ಪ್ರಭುದೇವ ಮತ್ತು ರಾಮಲತಾ ದಂಪತಿಗೆ ಮೂವರು ಮಕ್ಕಳು. ಮೊದಲ ಮಗ ವಿಶಾಲ್, 2ನೇ ಮಗ ರಿಷಿ ರಾಘವೇಂದ್ರ ದೇವ ಮತ್ತು ಅದಿತ್ ದೇವ. ಮೊದಲ ಮಗ ವಿಶಾಲ್ ಕ್ಯಾನ್ಸರ್‍ಗೆ ತುತ್ತಾದ ಮೇಲೆ ಪ್ರಭುದೇವ ವಿಚಲಿತರಾಗಿದ್ದರು. ಈ ನಡುವೆ ನಯನತಾರ ಜೊತೆ ಕೆಲಕಾಲ ಸಹಜೀವನ ನಡೆಸಿದ್ದರು. ಮದುವೆಯ ಹಂತಕ್ಕೂ ಹೋಗಿತ್ತು. ಇದರ ಮಧ್ಯೆ ರಾಮಲತಾ ಅವರ ಜೊತೆ ದಾಂಪತ್ಯ ಕ್ಷೀಣಿಸಿತ್ತು. ವಿಚ್ಛೇದನ ನೀಡಿದ್ದರು. ನಂತರ 2020ರಲ್ಲಿ ಹಿಮಾನಿ ಸಿಂಗ್ ಅವರನ್ನು ಮದುವೆಯಾದರು.



