Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ವಾರಾಹಿ ದೀಕ್ಷೆ ವ್ರತ : ಈ ವ್ರತ ಮಾಡಿದರೆ ಬಯಸಿದ್ದೆಲ್ಲ ಕೈಗೂಡಿ.. ದುಷ್ಟಶಕ್ತಿಗಳಿಂದ ಮುಕ್ತಿ..!

SpeciallU by SpeciallU
June 28, 2024
in Cinema, News, Politics
0 0
0
ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ವಾರಾಹಿ ದೀಕ್ಷೆ ವ್ರತ : ಈ ವ್ರತ ಮಾಡಿದರೆ ಬಯಸಿದ್ದೆಲ್ಲ ಕೈಗೂಡಿ.. ದುಷ್ಟಶಕ್ತಿಗಳಿಂದ ಮುಕ್ತಿ..!

ಭಕ್ತ ಪ್ರಹ್ಲಾದ ಸಿನಿಮಾ ನೋಡಿದ್ದೀರಲ್ಲ, ಆ ಸಿನಿಮಾದಲ್ಲಿ ಹಿರಣ್ಯಕಶಿಪುವಿನ ತಮ್ಮ ಹಿರಣ್ಯಾಕ್ಷ, ಭೂದೇವಿಯನ್ನು ಅಟ್ಟಿಸಿಕೊಂಡು ಹೋಗುತ್ತಾನೆ. ಭೂದೇವಿ, ಶ್ರೀಮಹಾವಿಷ್ಣುವಿನ ಇನ್ನೊಬ್ಬ ಪತ್ನಿ. ಹೀಗಾಗಿ ಪತ್ನಿಯ ಪ್ರಾಣ ರಕ್ಷಣೆಗೆ ಹಂದಿಯ ರೂಪದಲ್ಲಿ ಬರುತ್ತಾನೆ ಮಹಾವಿಷ್ಣು. ಭೂಮಿಯನ್ನು ತನ್ನ ಕೊಂಬಿನ ಮೇಲೆ ಎತ್ತಿಕೊಂಡು ಹೋಗಿ ಸ್ವಸ್ಥಾನಕ್ಕೆ ಸೇರಿಸುತ್ತಾನೆ, ಆನಂತರ ಹಿರಣ್ಯಾಕ್ಷನನ್ನು ಕೊಲ್ಲುತ್ತಾನೆ. ಇದು ಪುರಾಣ. ವಿಷ್ಣುವಿನ ದಶಾವತಾರಗಳಲ್ಲಿ ವರಾಹ ಅವತಾರವೂ ಒಂದು. ಆದರೆ, ಆ ವರಾಹ ರೂಪಿ ವಿಷ್ಣುವಿಗೂ ಒಂದು ವ್ರತ ಇದೆ. ಆಚರಣೆ, ಪದ್ಧತಿಗಳಿವೆ ಎನ್ನುವುದು ಹೊಸ ವಿಷಯ.

ಅಯ್ಯಪ್ಪ ಮಾಲಾಧಾರಿಗಳ ವ್ರತ ಗೊತ್ತು, ಹನುಮಧಾರಿ, ಸುಬ್ರಹ್ಮಣ್ಯ ವ್ರತ, ಓಂಶಾಂತಿ ವ್ರತ.. ಹೀಗೆ ಹಲವು ವ್ರತಾಚರಣೆಗಳಿವೆ. ಆದರೆ, ವಾರಾಹಿ ದೀಕ್ಷೆ ಎಂಬ ವ್ರತ ಇದೆ ಮತ್ತು ಇದು ಮೇಲೆ ಹೇಳಿದ ಎಲ್ಲ ವ್ರತಗಳಿಗಿಂತಲೂ ಹೆಚ್ಚು ಶಿಸ್ತುಬದ್ಧವಾಗಿದೆ. ಅವುಗಳಂತೆಯೇ ಕಠಿಣವಾಗಿದೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಜನ ಈ ವ್ರತದ ಬಗ್ಗೆ ಕೇಳುವುದಕ್ಕೆ ಶುರು ಮಾಡಿರುವುದು ಪವನ್‌ ಕಲ್ಯಾಣ್‌ ವಾರಾಹಿ ದೀಕ್ಷೆ ತೆಗೆದುಕೊಂಡ ಮೇಲೆ. ಹಾಗಂತ ಇದು ಜನರಿಗೆ ಗೊತ್ತೇ ಇರಲಿಲ್ಲ ಎಂದೂ ಅರ್ಥವಲ್ಲ. ವ್ರತ ಆಚರಿಸುವವರಿಗೆ, ಸಂಪ್ರದಾಯ ಗೊತ್ತಿದ್ದವರಿಗೆ ಗೊತ್ತಿತ್ತು. ಪವನ್‌ ಕಲ್ಯಾಣ್‌ ದೀಕ್ಷೆ ಪಡೆದುಕೊಂಡ ಮೇಲೆ, ಜನಸಾಮಾನ್ಯರಿಗೂ ಗೊತ್ತಾಗಿದೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಈ ವಾರಾಹಿ ದೀಕ್ಷೆ ಎಂದರೆ, ವಾರಾಹಿ ದೇವಿಯ ವ್ರತ. ವಾರಾಹಿ ದೇವಿ ಸಪ್ತಮಾತೃಕೆಯರಲ್ಲಿ ಒಬ್ಬಳು. ಈಕೆ ವರಾಹ ಅಂದರೆ ಹಂದಿಯ ಮುಖವನ್ನು ಹೊಂದಿರುವವಳು. ಎಮ್ಮೆ ಮತ್ತು ಹಂದಿ ವಾರಾಹಿ ದೇವಿಯ ವಾಹನ. ವರಾಹ ಈಕೆಯ ಪತಿ. ಹಿರಣ್ಯಕಶಿಪುವಿನ ತಮ್ಮ ಹಿರಣ್ಯಾಕ್ಷನನ್ನು ಸಂಹಾಯ ಮಾಡಿದವನು. ಭೂದೇವಿಯನ್ನು ರಕ್ಷಿಸಿದವನು. ಈತನ ಪತ್ನಿಯೇ ವಾರಾಹಿ. ಅರ್ಥ ಸರಳ ವರಾಹ, ವಿಷ್ಣುವಿನ ಅವತಾರವಾದರೆ, ವಾರಾಹಿ ಲಕ್ಷ್ಮಿದೇವಿಯ ಅವತಾರ. ಈಕೆಯನ್ನು ಪೂಜಿಸಿದರೆ, ವ್ರತ ಆಚರಿಸಿದರೆ ಪೂಜಿಸುವ ವ್ಯಕ್ತಿಗಳಿಗೆ ಅಂಟಿಕೊಂಡಿದ್ದ ದುಷ್ಟಶಕ್ತಿಗಳು ದೂರವಾಗುತ್ತವೆ. ಗುರಿಗೆ ಇದ್ದ ಅಡೆತಡೆಗಳೆಲ್ಲ ನಿವಾರಣೆಯಾಗುತ್ತವೆ ಎನ್ನುವುದು ನಂಬಿಕೆ.

ಸಾಮಾನ್ಯವಾಗಿ ಈ ವ್ರತಾಚರಣೆ ಮಾಡುವವರು ಅಮಾವಾಸ್ಯೆ ಆದ 8 ದಿನಗಳ ನಂತರ ಅಥವಾ ಪೌರ್ಣಮಿಯಾದ 8 ದಿನಗಳ ನಂತರ ವ್ರತ ಆಚರಣೆ ಮಾಡ್ತಾರೆ. ವಾರಾಹಿ ದೇವಿಯ ವ್ರತ 11 ದಿನಗಳ ಆಚರಣೆಯಾಗಿದ್ದು, 11 ದಿನಗಳ ಕಾಲ ವ್ರತಧಾರಿಗಳು ಘನ ಆಹಾರ ತಿನ್ನುವಂತಿಲ್ಲ. ಕೇವಲ ಹಾಲು, ನೀರು, ಹಣ್ಣುಗಳ ದ್ರವಾಹಾರದಲ್ಲಿರಬೇಕು. ಮದ್ಯ, ಮಾಂಸ ಮುಟ್ಟುವಂತಿಲ್ಲ. ಕಠಿಣ ಬ್ರಹ್ಮಚರ್ಯ ಪಾಲಿಸಬೇಕು. ದುಶ್ಚಟಗಳಿಂದ ದೂರ ಇರಲೇಬೇಕು. ಕೆಟ್ಟದ್ದು ಮಾಡುವುದು ಬಿಡಿ, ಕೆಟ್ಟ ಆಲೋಚನೆಗಳನ್ನೂ ಮಾಡುವ ಹಾಗಿಲ್ಲ. ಅಷ್ಟು ಕಠಿಣ ವ್ರತ ಇದು.
ಚುನಾವಣೆಗೂ ಮುನ್ನ ಕಟ್ಟುನಿಟ್ಟಾಗಿ ಚಾತುರ್ಮಾಸ ಆಚರಣೆ ಮಾಡಿದ್ದ ಪವನ್‌ ಕಲ್ಯಾಣ್‌, ನಾಲ್ಕು ತಿಂಗಳ ಕಾಲ ಈ ದೀಕ್ಷೆಯನ್ನು ಅನೂಚವಾಗಿ ಆಚರಿಸಿದ್ದರು.ಸಾತ್ವಿಕ ಆಹಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರು. ದೀಕ್ಷಾ ಸಮಯದಲ್ಲಿ ಹೋಮವನ್ನೂ ನೆರವೇರಿಸಲಾಯಿತು.

ಈ ಆಚರಣೆಯಲ್ಲಿ ವಾರಾಹಿಯನ್ನು ಪೂಜಿಸಿದರೆ ಮನಸಿನ ಇಷ್ಟಾರ್ಥಗಳನ್ನು ಪೂರೈಸುವ ವಾರಾಹಿ ಅಮ್ಮ ಅತ್ಯಂತ ಶುಭ ಫಲವನ್ನು ನೀಡುತ್ತಾಳೆ.ಅಮ್ಮನವರಿಗೆ ಜೂನ್ ಅಂತ್ಯದಿಂದ ಪ್ರಾರಂಭವಾಗಿ ಜುಲೈ 9 ರಂದು ಕೊನೆಗೊಳ್ಳುವಂತೆ ಗುಪ್ತ ನವರಾತ್ರಿಗಳನ್ನು ಕೈಗೊಳ್ಳಲಾಗುತ್ತದೆ. ನಾಲ್ಕು ನವರಾತ್ರಿಗಳಲ್ಲಿ ಈ ಮಾಸದ ಗುಪ್ತ ನವರಾತ್ರಿಗಳು ಅತ್ಯಂತ ವೈಭವಯುತ ಮತ್ತು ಶಕ್ತಿಯುತವಾಗಿವೆ. ಈ ನವರಾತ್ರಿಗಳಲ್ಲಿ ಯಾರು ಅತ್ಯಂತ ಶ್ರದ್ದಾ ಭಕ್ತಿಯಿಂದ ದೀಕ್ಷೆಯನ್ನು ಆಚರಿಸುತ್ತಾರೋ ಅವರ ಎಲ್ಲಾ ಸಮಸ್ಯೆಗಳು ದೇವಿಯ ಕೃಪೆಯಿಂದ ಪರಿಹಾರವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.

ಪವನ್‌ ಕಲ್ಯಾಣ್‌ ಅವರು ಈ ವ್ರತಾಚರಣೆ ಮಾಡುವ ಜೊತೆಗೆ ಈ ವ್ರತಕ್ಕೂ ಒಂದು ಸೆಲಬ್ರಿಟಿ ಸ್ಟೇಟಸ್‌ ಕೊಟ್ಟಿದ್ದಾರೆ. ಈ ವ್ರತಾಚರಣೆಯಿಂದ ಇದ್ದಬದ್ದ ದುಷ್ಟಶಕ್ತಿಗಳೆಲ್ಲ ನಾಶವಾಗಿ, ಮನಸ್ಸಿನಲ್ಲಿ ಕಲ್ಪಿಸಿಕೊಂಡಿದ್ದ ಒಳ್ಳೆಯ ಉದ್ದೇಶದ ಎಲ್ಲ ಕಾರ್ಯಗಳೂ ಕೈಗೂಡುತ್ತವಂತೆ.

Tags: #ಪವನ್‌ಕಲ್ಯಾಣ್‌ #ವಾರಾಹಿದೀಕ್ಷೆವ್ರತ #PawanKalyan #VarahiDeekshaVrat
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.