ರಾಮ ಜನ್ಮ ಭೂಮಿಯಲ್ಲಿ Rama janma bhoomi ನಿರ್ಮಾಣವಾಗುತ್ತಿರುವ ನೂತನ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ Sri ram mandir grabha gudi ಜನವರಿ 22 ರಂದು ರಾಮ ಲಲ್ಲಾ ಮೂರ್ತಿಯ Ayodhya ಪ್ರಾಣ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ PM Narendra modi ಅವರು ತಮ್ಮ ಎಲ್ಲಾ ಶಿಷ್ಟಾಚಾರಗಳನ್ನೂ ಬದಿಗಿಟ್ಟು ರಾಮ ಲಲ್ಲಾ ಮೂರ್ತಿಯನ್ನು ರಾಮ ಮಂದಿರದ ಗರ್ಭ ಗೃಹಕ್ಕೆ ಹೊತ್ತು ತರುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ವಿಗ್ರಹವನ್ನು ಹೊತ್ತು ತಂದರೆ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ UP CM yogi Adithyanath ಮೋದಿ ಜೊತೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಮೂರ್ತಿಯನ್ನು ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗೃಹದವರೆಗೂ ಪ್ರಧಾನಿ ಮೋದಿ ಅವರು ಕಾಲ್ನಡಿಗೆ ಮೂಲಕ ತಮ್ಮ ಕೈಯ್ಯಾರೆ ಹೊತ್ತು ತಂದು ಪ್ರತಿಷ್ಠಾಪನೆಗೆ ನೆರವಾಗಲಿದ್ದಾರೆ ಎನ್ನಲಾಗಿದೆ.
ರಾಮ ಲಲ್ಲಾ (ಬಾಲ ರಾಮ) Rama lalla ಮೂರ್ತಿಯನ್ನು ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ಶ್ರೀರಾಮ ಮಂದಿರದ ಗರ್ಭಗೃಹದಲ್ಲಿ ನೆಲೆಗೊಳಿಸಲಾಗುವುದು. ರಾಮ ಲಲ್ಲಾ ಮೂರ್ತಿಯನ್ನು 8 ಅಡಿ ಎತ್ತರದ ಚಿನ್ನ ಲೇಪಿತ ಅಮೃತ ಶಿಲೆಯ ಸಿಂಹಾಸನದ ಮೇಲೆ ಪ್ರತಿಷ್ಠಾಪನೆ ಮಾಡಲಾಗುವುದು. ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇಂಥಾದ್ದೊಂದು ಪ್ರತಿಷ್ಠಿತ ಗೌರವವನ್ನು ಪ್ರಧಾನಿ ಮೋದಿ ಅವರಿಗೆ ನೀಡಲು ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.
ರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಪೂಜಾ ಕೈಂಕರ್ಯಗಳ ನೇತೃತ್ವವನ್ನೂ ಪ್ರಧಾನಿ ಮೋದಿ ಅವರೇ ವಹಿಸಲಿದ್ದಾರೆ. ಮೋದಿ ಅವರ ಮೂಲಕವೇ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ. ಜನವರಿ 22 ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರ ಒಳಗಿನ ಶುಭ ಗಳಿಗೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದೇಶದ ಉದ್ದಗಲಕ್ಕೂ ಇರುವ ಹಲವು ಧಾರ್ಮಿಕ ಕ್ಷೇತ್ರಗಳ ಸಾಧು ಸಂತರು ಹಾಗೂ ಧಾರ್ಮಿಕ ಮುಖಂಡರು ಭಾಗಿಯಾಗಲಿದ್ದಾರೆ. ಸದ್ಯ ಉತ್ಸವ ಮೂರ್ತಿಯಂತೆ ಕಂಗೊಳಿಸುತ್ತಿರುವ ರಾಮ ಲಲ್ಲಾ ಮೂರ್ತಿಯನ್ನು ತಾತ್ಕಾಲಿಕ ದೇಗುಲದಿಂದ ಭವ್ಯ ಶ್ರೀರಾಮ ಮಂದಿರಕ್ಕೆ ಪ್ರಧಾನಿ ಮೋದಿ ಅವರು ಹೊತ್ತು ತಂದ ಬಳಿಕ ಅದನ್ನು ರಾಮ ಮಂದಿರದ ಗರ್ಭ ಗೃಹದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿ ನೆಲೆಗೊಳಿಸಲಾಗುವುದು.
ಭಗವಾನ್ ಶ್ರೀರಾಮನ 3 ಮೂರ್ತಿಗಳನ್ನೂ ಕೆತ್ತನೆ ಮಾಡಲಾಗಿದ್ದು, ಅವುಗಳ ಪೈಕಿ ಒಂದು ಮೂರ್ತಿಯನ್ನು ಕೂಡಾ ರಾಮ ಲಲ್ಲಾ ವಿಗ್ರಹದ ಜೊತೆಯಲ್ಲೇ ಗರ್ಭ ಗೃಹದಲ್ಲಿ ನೆಲೆಗೊಳಿಸಲಾಗುವುದು. ಈ ಮೂಲಕ ‘ಅಚಲ ಮೂರ್ತಿ’ ಹಾಗೂ ‘ಚಲ ಮೂರ್ತಿ’ ಎರಡಕ್ಕೂ ಭವ್ಯ ರಾಮ ಮಂದಿರದ ಗರ್ಭ ಗೃಹದಲ್ಲಿ ಸ್ಥಾನ ಸಿಗಲಿದೆ..



