ದರ್ಶನ್ ಮತ್ತು ಗ್ಯಾಂಗ್ನಿಂದ ಕೊಲೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ತನಿಖೆಯ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ನಟ ದರ್ಶನ್ ವಿರುದ್ಧ ಸಮಗ್ರ ಚಾರ್ಜ್ಶೀಟ್ನ್ನು ಪೊಲೀಸರು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಒಟ್ಟು 17 ಮಂದಿ ಅರೆಸ್ಟ್ ಆಗಿದ್ದು, ತನಿಖೆಯಲ್ಲಿ ಪ್ರತ್ಯಕ್ಷ, ಸಾಧರ್ಭಿಕ, ತಾಂತ್ರಿಕ, ವೈಜ್ಞಾನಿಕ ಹಾಗೂ ಇತರೆ ಸಾಕ್ಷ್ಯಾಧಾರಗಳು ಸಂಗ್ರಹಿಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ.
ದೋಷಾರೋಪಣಾ ಪಟ್ಟಿಯಲ್ಲಿ ಒಟ್ಟು 231 ಸಾಕ್ಷಿದಾರರನ್ನು ಒಳಗೊಂಡಂತೆ ಒಟ್ಟು 3991 ಪುಟಗಳುಳ್ಳ 07 ಸಂಪುಟಗಳ 10 ಕಡತಗಳನ್ನು ಒಳಗೊಂಡಿರುವ ಚಾರ್ಜ್ಶೀಟನ್ನು ಪೊಲೀಸರು ಸಲ್ಲಿಸಿದ್ದಾರೆ.
27 ಸಾಕ್ಷಿಗಳ ಸೆಕ್ಷನ್ 164 ಹೇಳಿಕೆಗಳೂ ಇವೆ.
1.ಪವನ್ಗೆ ಹೇಳಿ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಕರೆಸಿರುವುದು ನಟ ದರ್ಶನ್
2. ಅದೇ ಪವನ್, ರಾಘವೇಂದ್ರನಿಗೆ ಹೇಳಿ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಸಿ ಕರೆತರುತ್ತಾನೆ. 3. ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿದೆ
4. ಪವನ್ ಪವಿತ್ರಾ ಗೌಡ ಮನೆಗೆ ಹೋಗಿದ್ದರ ದಾಖಲೆಗಳು ಪೊಲೀಸರಿಗೆ ಸಿಕ್ಕಿವೆ
5. ಪವಿತ್ರಾ ಗೌಡರನ್ನು ಕರೆದುಕೊಂಡು ಪಟ್ಟಣಗೆರೆ ಶೆಡ್ಗೆ ಹೋಗಿದ್ದು ಮತ್ತು ಅಲ್ಲಿ ರೇಣುಕಾ ಮೇಲೆ ಹಲ್ಲೆ ಮಾಡಿ ಪಬ್ಗೆ ಬಂದಿರುವುದಕ್ಕೆ ಸಾಕ್ಷಿಗಳು ಲಭ್ಯವಾಗಿವೆ
6. ಪಬ್ನಲ್ಲಿ ಇರುವಾಗಲೇ ರೇಣುಕಾಸ್ವಾಮಿ ಫೋಟೋ ಬಂದಿದೆ. ಅದಕ್ಕೆ ಸಾಕ್ಷಿಗಳು ಸಿಕ್ಕಿವೆ
8. ಮತ್ತೆ ಪಬ್ನಿಂದ ಪಟ್ಟಣಗೆರೆ ಶೆಡ್ಗೆ ಹೋಗಿದ್ದಕ್ಕೆ ದಾಖಲೆಗಳಿವೆ.
9. ಪಬ್ನಿಂದ RR ನಗರ ಮನೆಗೆ ಬಂದ ಆರೋಪಿ ದರ್ಶನ್ ಬಟ್ಟೆ ಬದಲಿಸಿ ಬೆಳಗ್ಗೆ ಬನಶಂಕರಿಯ ವಿಜಯಲಕ್ಷ್ಮಿ ಮನೆಗೆ ಹೋಗುತ್ತಾನೆ. ಅದಕ್ಕೂ ಸಾಕ್ಷಿಗಳಿವೆ
10. ತದನಂತರ ವಿಜಯಲಕ್ಷ್ಮಿ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆಯಲ್ಲಿ ಭಾಗಿಯಾಗುತ್ತಾನೆ ಮತ್ತು ಹೋಗುವಾಗ ವಿಜಯಲಕ್ಷ್ಮಿ ಮನೆಯಲ್ಲಿ ಶೂ ಬಿಟ್ಟು ಹೋಗುತ್ತಾನೆ.
11. ಅಲ್ಲಿಂದ ಮೈಸೂರಿನ ಫಾರ್ಮ್ ಹೌಸ್ಗೆ, ಅಲ್ಲಿಂದ ಹೋಟೆಲ್ಗೆ ಹೋಗಿ, ಅಲ್ಲಿಂದ ಶೂಟಿಂಗಿಗೆ ಹೋಗಿರುವುದು ಹಾಗೂ ಮತ್ತೆ ಹೋಟೆಲ್ಗೆ ಬಂದಿದ್ದಕ್ಕೆ ದಾಖಲೆಗಳಿವೆ.
12. ಈ ಎಲ್ಲ ಘಟನೆಗಳ ಸಿಸಿಟಿವಿ, ಟವರ್ ಲೊಕೇಷನ್ ತನಿಖೆಯಲ್ಲಿ ಸಿಕ್ಕಿವೆ ಅಲ್ಲದೆ, ಸಿಸಿಟಿವಿ ದೃಶ್ಯಗಳಿಗೂ ಟವರ್ ಲೊಕೇಷನ್ಗಳಿಗೂ ಮ್ಯಾಚ್ ಆಗಿದೆ.
13. ಪ್ರದೋಶ್ ಮೊಬೈಲ್ನಲ್ಲಿ ಘಟನೆಗೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋ ಸಿಕ್ಕಿವೆ. ಅಲ್ಲದೆ ಫೋನ್ ಕಾಲ್, ಚಾಟಿಂಗ್ನಲ್ಲಿ ಸಂಚಿನ ಬಗ್ಗೆ ಮಾಹಿತಿ ಸಿಕ್ಕಿದೆ
14. ಸರೆಂಡರ್ ಮಾಡಿಸಲು ಮನವೊಲಿಸಿದ್ದ ಮತ್ತು ಹಣ ಕೊಟ್ಟಿರುವುದಕ್ಕೆ ಸಾಕ್ಷಿಗಳು ಲಭ್ಯವಾಗಿವೆ.
ದರ್ಶನ್ ಎ2 ಆರೋಪಿ ಆಗಿ ಮುಂದುವರಿದಿದ್ದಾರೆ. ಕಿಡ್ನಾಪ್ ಮಾಡಿಸಿದ್ದು, ಹಲ್ಲೆ ಮಾಡಿದ್ದು, ಕೊಲೆ ನಡೆದ ಬಳಿಕ ಅದನ್ನು ಮುಚ್ಚಿ ಹಾಕಲು ಹಣ ನೀಡಿದ್ದು ದರ್ಶನ್ ಅನ್ನೋದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿದೆ. ದರ್ಶನ್ ಕೊಲೆ ನಡೆದ ಸ್ಥಳದಲ್ಲಿ ಇರುವುದು ಹಾಗೂ ಕೊಲೆ ಬಳಿಕ ಸ್ಥಳದಿಂದ ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾ ಸ್ವಾಮಿ ರಕ್ತ ಇರುವುದು ಪತ್ತೆ ಆಗಿದೆ. ಇದಕ್ಕೆ ಸಾಕ್ಷ್ಯಗಳು ಕೂಡ ಸಿಕ್ಕಿವೆ. ದರ್ಶನ್ ಹಲ್ಲೆ ಮಾಡಿರುವ ಬಗ್ಗೆ ಮತ್ತು ಕೊಲೆಯಲ್ಲಿ ಭಾಗಿಯಾದ್ದು ಚಾರ್ಜ್ಶೀಟ್ನಲ್ಲಿ ದೃಢಪಟ್ಟಿದೆ.
ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳನ್ನೂ ಸಾಕ್ಷಿಗಳನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ದಯಾನಂದ್ ಮಾಹಿತಿ ನೀಡಿದ್ಧಾರೆ. ಸರ್ಕಾರಿ ಅಧಿಕಾರಿಗಳೂ ಸೇರಿದಂತೆ ಒಟ್ಟು 231 ಸಾಕ್ಷಿದಾರರನ್ನ ಉಲ್ಲೇಖ ಮಾಡಲಾಗಿದೆ. ಬೆಂಗಳೂರಿನ ಎಫ್ ಎಸ್ ಎಲ್ ನಿಂದ ಎಲ್ಲಾ ವರದಿ ಬಂದಿವೆ. ಸಿಎಫ್ ಎಸ್ ಎಲ್ ಹೈದ್ರಾಬಾದ್ ನಿಂದ ಎಲೆಕ್ಟ್ರಾನಿಕ್ ಡಿವೈಸ್ ಗಳ ವರದಿ ಬಂದಿದೆ. ಇನ್ನೂ ಒಂದಷ್ಟು ವರದಿ ಬರಬೇಕಿದೆ. ದರ್ಶನ್ ಮತ್ತವರ ತಂಡದ ವಿರುದ್ಧ ಸಾಕಷ್ಟು ತಾಂತ್ರಿಕ ಸಾಕ್ಷಿಗಳು ದೊರೆತಿವೆ. ತನಿಖೆಯಲ್ಲಿ ಎಲ್ಲವನ್ನೂ ಅಳವಡಿಸಲಾಗಿದೆ ಎಂದು ದಯಾನಂದ್ ಹೇಳಿದ್ದಾರೆ.
ದರ್ಶನ್ ಗ್ಯಾಂಗ್ ಕ್ರೌರ್ಯದ ಬಗ್ಗೆ 8 FSL , CFSL ವರದಿಗಳು ಚಾರ್ಜ್ಶೀಟ್ನಲ್ಲಿವೆ. ಒಟ್ಟು 59 ಪಂಚರು ಹಾಗೂ 8 ಸರ್ಕಾರಿ ಅಧಿಕಾರಿಗಳಿಂದ ಮಹಜರು ಮಾಡಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ 56 ಪೊಲೀಸರಿಂದ ಕಾರ್ಯನಿರ್ವಹಿಸಿದ್ದಾರೆ.
ಪವಿತ್ರಾ ಗೌಡ ಅವರು ಕೊಲೆ ಮಾಡಲು ಮೂಲ ಕಾರಣ ಅನ್ನೋದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿದೆ. ಹಲ್ಲೆ ನಡೆಸುವ ಸ್ಥಳದಲ್ಲಿ ಹಾಜರಿದ್ದರು ಮತ್ತು ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿರೋದು ಅಧಿಕೃತ ಆಗಿದೆ. ಸಿಸಿಟಿವಿಯಲ್ಲಿ ಪವಿತ್ರಾ ಗೌಡ ಸೆರೆ ಆಗಿದ್ದಾರೆ. ಪವಿತ್ರಾ ಗೌಡ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆ್ಯಕ್ಟೀವ್ ಆಗಿತ್ತು. ಉಳಿದವರ ಪಾತ್ರದ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ.
ಬೆಂಗಳೂರು ಪೊಲೀಸ್ ಆಯುಕ್ತರು ಬಿ.ದಯಾನಂದ, ಅಪರ ಪೊಲೀಸ್ ಆಯುಕ್ತರು ಪಶ್ಚಿಮ ವಲಯ ಸತೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಗಿರೀಶ್.ಎಸ್. ಐ.ಪಿ.ಎಸ್ ರವರ ನೇತೃತ್ವದಲ್ಲಿ ವಿಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಚಂದನ್ಕುಮಾರ್.ಎನ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ತಂಡ ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಭೇದಿಸುವಲ್ಲಿ ಮತ್ತು ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.



