ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ. ಇನ್ನು ಪವಿತ್ರಾ ಗೌಡ ಗೆಳತಿಯಷ್ಟೇ. ಪವಿತ್ರ ಗೌಡ ನಟಿಸಿದ್ದು ಮೂರೂ ಮತ್ತೊಂದು ಸಿನಿಮಾ. ನಟಿಸಿದ ಚಿತ್ರಗಳೆಲ್ಲ ಅಟ್ಟರ್ ಫ್ಲಾಪ್. ಮಾಡೆಲಿಂಗ್ ಮಾಡಿದ್ದರೂ, ಯಾವುದಕ್ಕೆ ಮಾಡೆಲ್ ಆಗಿದ್ದೆ ಎನ್ನುವುದು ಆಕೆಗೂ ಮರೆತು ಹೋಗಿರಬಹುದು. ಆದರೆ ಪವಿತ್ರಾ ಗೌಡ ಈಗ ಕೋಟಿಗಳ ಒಡತಿ. ದೊಡ್ಡ ಐಷಾರಾಮಿ ಮನೆ, ಕೋಟಿ ಬೆಲೆ ಬಾಳುವ ಕಾರುಗಳು, ಕೋಟಿ ಬಂಡವಾಳದ ಬಿಸಿನೆಸ್, ಚಿನ್ನ.. ಎಲ್ಲವೂ ಇವೆ.
ವಿಜಯಲಕ್ಷ್ಮಿ ಬಳಿ ಕಾರ್ ಇದ್ದರೆ, ಅದೇ ಮಾಡೆಲ್ ಕಾರು ಈಕೆಗೂ ಬೇಕು. ಆಕೆ ತೊಟ್ಟಿದ್ದ ಒಡವೆಗಳೂ ಈಕೆಗೂ ಬೇಕು. ಧರಿಸಿದ್ದ ಡ್ರೆಸ್, ಡಿಸೈನ್ ಎಲ್ಲವೂ ಅದದೇ ಆಗಿರಬೇಕು. ಮತ್ತು ಆಕೆ ಅದೆಲ್ಲವನ್ನೂ ಪಡೆದಿದ್ದಾರೆ ಕೂಡಾ. ಅದಕ್ಕೆಲ್ಲ ಹಣ ಕೊಟ್ಟವರು ದರ್ಶನ್. ಪವಿತ್ರಾ ಗೌಡ ತಮ್ಮ ಮೊದಲ ಚಿತ್ರಕ್ಕೆ ಪಡೆದಿದ್ದ ಸಂಭಾವನೆ 20ರಿಂದ 25 ಸಾವಿರ ಅಷ್ಟೆ. ಮೊದಲ ಸಿನಿಮಾ ಆಗಮ್ಯ.
ವಿಜಯಲಕ್ಷ್ಮಿ ಮತ್ತು ಪವಿತ್ರಾ ಗೌಡ ಅವರ ನಡುವಿನ ಜಗಳ ಬೀದಿಯಲ್ಲೇ ಆಗಿದೆ. ವಿಜಯಲಕ್ಷ್ಮಿ, ದರ್ಶನ್ ಅವರ ಧರ್ಮಪತ್ನಿ. ಆದರೆ, ಪವಿತ್ರಾ ಗೌಡ ಹಾಗಲ್ಲ. ರಿಮ್ಯಾಂಡ್ ಕಾಪಿಯಲ್ಲಿ ಕೂಡಾ ಪವಿತ್ರಾ ಗೌಡ ಅವರ ಅಡ್ರೆಸ್ ಬಿನ್ ಪುಟ್ಟಣ್ಣ ಎಂದಿದೆಯೇ ಹೊರತು, ದರ್ಶನ್ ಅವರ ಹೆಸರು ಎಲ್ಲೂ ಇಲ್ಲ. ಆದರೆ, ಪ್ರಕರಣದಲ್ಲಿ ಆಕೆ ಆರೋಪಿ ನಂ.1.
ದರ್ಶನ್ ಆರೋಪಿ ನಂ.2.
ಆದರೆ ಪವಿತ್ರಾ ಗೌಡ ಅವರಿಗೆ ವಿಜಯಲಕ್ಷ್ಮಿ ಮೇಲೆ ಹೊಟ್ಟೆಕಿಚ್ಚು ಇತ್ತಾ..? ವಿಜಯಲಕ್ಷ್ಮಿ, ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡುವ ʻಮೈ ಫ್ರೆಶ್ ಬಾಸ್ಕೆಟ್ʼ ಎಂಬ ಆ್ಯಪ್ ಲಾಂಚ್ ಮಾಡಿದರೆ, ಪವಿತ್ರಾ ತಾವೂ ಒಂದು ಬಿಸಿನೆಸ್ ಮಾಡಬೇಕು ಎಂದು ಉರಿದುಬಿದ್ದಿದ್ದರು. ಪವಿತ್ರಾ ಗೌಡ ಅವರು ರೆಡ್ ಕಾರ್ಪೆಟ್ ಹೆಸರಿನ ಬೊಟಿಕ್ ಆರಂಭಿಸಿದರು.
ವಿಜಯಲಕ್ಷ್ಮಿ ಅವರು ರೇಂಜ್ ರೋವರ್ ಕಾರು ಖರೀದಿ ಮಾಡಿದರೆ, ಪವಿತ್ರಾ ಕೂಡಾ ರೇಂಜ್ ರೋವರ್ ಕಾರನ್ನೇ ಪಡೆದರು. ವಿಜಯಲಕ್ಷ್ಮಿ ಹತ್ತಿರ ಏನೆಲ್ಲ ಇದೆಯೋ ಅದು ತಮಗೂ ಬೇಕು ಎಂದು ದರ್ಶನ್ʻಗೆ ಹೇಳುತ್ತಿದ್ದರಂತೆ ಪವಿತ್ರಾ ಗೌಡ.ಸೇಮ್ ಡ್ರೇಸ್, ಒಡವೆ, ಕಾರ್ ಎಲ್ಲವೂ ಬೇಕು ಎಂದು ಪವಿತ್ರಾ ಗೌಡ ಡಿಮ್ಯಾಂಡ್ ಮಾಡುತ್ತಿದ್ದರು. ವಿಜಯಲಕ್ಷ್ಮಿ ಪೋಟೋ ಹಾಕುತ್ತಿದ್ದ ಹಾಗೆ ಪವಿತ್ರಾ ಬಳಿಯು ಅದೇ ರೀತಿಯ ಡ್ರೆಸ್, ಒಡವೆ ಇರುತ್ತಿತ್ತು. ಒಟ್ಟಿನಲ್ಲಿ ಪವಿತ್ರಾ ಗೌಡ ಅವರ ಹಠಮಾರಿತನಕ್ಕೆಲ್ಲ ಶರಣಾಗುತ್ತಿದ್ದ ದರ್ಶನ್, ಕೊನೆಗೆ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ.
ಆಕ್ಟಿಂಗ್ ಬರ್ತಾ ಇರಲಿಲ್ಲ. ಎಲ್ಲರೊಂದಿಗೆ ಬೆರೆಯುತಿದ್ದಳು : ಆಗಮ್ಯ ಡೈರೆಕ್ಟರ್ ಉಮೇಶ್ ಗೌಡ
ಅಗಮ್ಯ ಸಿನಿಮಾಕ್ಕಾಗಿ ನಾವು ನಟಿಯರನ್ನು ಹುಡುಕುತ್ತಿದ್ದೆವು. ಬಜೆಟ್ ಕಡಿಮೆ ಇತ್ತು. ಹಾಗಾಗಿ ದೊಡ್ಡ ನಟಿಯರು ಬೇಕಾಗಿರಲಿಲ್ಲ. ಕೋಆರ್ಡಿನೇಟರ್ ಒಬ್ಬರಿಂದ ಪವಿತ್ರಾ ಗೌಡ ಪರಿಚಯವಾಯ್ತು. ರಂಗಶಂಕರದಲ್ಲಿ ಭೇಟಿಯಾದೆವು. ಪವಿತ್ರಾ ಗೌಡ ಪಾತ್ರಕ್ಕೆ ಸೂಕ್ತ ಅನ್ನಿಸಲಿಲ್ಲ. ನಟನೆಯೂ ಬರುತ್ತಿರಲಿಲ್ಲ. ಆದರೆ ಆ ಕೋಆರ್ಡಿನೇಟರ್ ಪದೇ ಪದೇ ಕಾಲ್ ಮಾಡಿ, ಆ ಹುಡುಗಿಗೆ ಚಾನ್ಸ್ ಕೊಡಿ, ಗಂಡ ಇಲ್ಲ, ಕಷ್ಟದಲ್ಲಿದ್ದಾರೆ ಎಂದೆಲ್ಲ ಹೇಳುತ್ತಿದ್ದರು. ಹೀಗಿದ್ದರೂ ನಾವು ಆಕೆಯನ್ನು ಆಯ್ಕೆ ಮಾಡಿರಲಿಲ್ಲ. ಆದರೆ, ಇನ್ನೇನು ಸಿನಿಮಾದ ಚಿತ್ರೀಕರಣ ಶುರು ಮಾಡಬೇಕು ಎಂಬ ಸಮಯದಲ್ಲಿ ಒಪ್ಪಿಕೊಂಡಿದ್ದ ನಟಿ ಕೈಕೊಟ್ಟರು. ಆಗ ಆ ಜಾಗಕ್ಕೆ ನಾವು ಪವಿತ್ರಾ ಗೌಡ ಅವರನ್ನು ಸೇರಿಸಿಕೊಂಡೆವು ಎನ್ನುತ್ತಾರೆ ಉಮೇಶ್ ಗೌಡ. ಉಮೇಶ್ ಗೌಡ ಅವರು ಆಗಮ್ಯ ಚಿತ್ರದ ಡೈರೆಕ್ಟರ್.
ಪವಿತ್ರಾಗೆ ನಟನೆ ಅಷ್ಟಕ್ಕಷ್ಟೆ. ಆದರೆ ಎಲ್ಲರೊಟ್ಟಿಗೆ ತಮಾಷೆ ಮಾಡಿಕೊಂಡು ಇರುತ್ತಿದ್ದಳು. ತುಂಬಾ ರೀಟೇಕ್ ತೆಗೆದುಕೊಳ್ಳುತ್ತಿದ್ದಳು. ನಟನೆ ವಿಷಯಕ್ಕೆ ಎಷ್ಟು ಬಾರಿ ಬೈದರೂ, ಸ್ವಲ್ಪವೇ ಹೊತ್ತಿನಲ್ಲಿ ರಿಲ್ಯಾಕ್ಸ್ ಆಗಿ ನಮ್ಮನ್ನೇ ನಗಿಸುತ್ತಿದ್ದಳು. ಆಕೆಗೆ ಡಿಮ್ಯಾಂಡ್ಸ್ ಇರಲಿಲ್ಲ. ಸಂಭಾವನೆ ಸಹ ಫಿಕ್ಸ್ ಮಾಡಿರಲಿಲ್ಲ. ಹಣ ಕೇಳಿದಾಗ ಕೊಡುತ್ತಿದ್ದೆ, ಆಗಾಗ್ಗೆ ಐದು ಸಾವಿರ, ಎರಡು ಸಾವಿರ ಪಡೆದುಕೊಳ್ಳುತ್ತಿದ್ದಳು. ಮೊದಲ ಸಿನಿಮಾಕ್ಕೆ ಸುಮಾರು 20-25 ಸಾವಿರ ರೂಪಾಯಿ ಕೊಟ್ಟಿರಬಹುದು ಅಷ್ಟೆ ಎನ್ನುವ ಉಮೇಶ್ ಅವರಿಗೆ ಶಾಕ್ ಆಗಿದ್ದು ಸಿನಿಮಾ ರಿಲೀಸ್ ಆದ 6 ತಿಂಗಳ ನಂತರ.
ಕೋಣನಕುಂಟೆ ಕ್ರಾಸ್ ನಲ್ಲಿ ಬಾಡಿಗೆ ಮನೆಯಲ್ಲಿದ್ದ ಪವಿತ್ರಾ ಗೌಡ ಸಿನಿಮಾ ಬಿಡುಗಡೆ ಆಗಿ ಆರು ತಿಂಗಳಾದ ಮೇಲೆ ಒಮ್ಮೆ ದುಬಾರಿ ಮಿನಿ ಕೂಪರ್ ಕಾರಿನಲ್ಲಿ ಬಂದಳು, ಆಗ ಆಕೆ ಬದಲಾಗಿದ್ದ ರೀತಿ ನೋಡಿ ಆಶ್ಚರ್ಯಾಯ್ತು. ಅದಾದ ಮೇಲೆ ಸಂಪರ್ಕದಲ್ಲಿರಲಿಲ್ಲ. ಜೆಪಿ ನಗರದಲ್ಲಿ ದೊಡ್ಡ ಮನೆಯಲ್ಲಿದ್ದಾಳೆ ಎಂದು ಕೇಳಿ ಪಟ್ಟೆವು. ಸಿನಿಮಾದಲ್ಲಿ ಕ್ಲಿಕ್ ಆಗಲಿಲ್ಲ, ಆದರೂ ದೊಡ್ಡ ಮನೆ, ಕಾರು ಎಲ್ಲ ಹೇಗೆ ಬಂತು ಎಂದು ಆಶ್ಚರ್ಯಪಟ್ಟೆವು. ಆದರೆ ಅಷ್ಟರಲ್ಲೇ ದರ್ಶನ್ ಹಾಗೂ ಪವಿತ್ರಾರ ಸ್ನೇಹದ ಕುರಿತು ಮಾಹಿತಿ ಹೊರಗೆ ಬಂದಿತ್ತು. 2017 ರಲ್ಲಿ ಪವಿತ್ರಾ ಹಾಗೂ ದರ್ಶನ್ ಸ್ನೇಹ ಮೀಡಿಯಾಗಳಿಂದ ಆಚೆ ಬಂತು ಎಂದಿದ್ದಾರೆ.
ಒಟ್ಟಿನಲ್ಲಿ ನಟಿಸಿದ ಮೂರ್ನಾಲ್ಕು ಸಿನಿಮಾಗಳಿಂದಾಗಿ ಕೋಟಿ ಕೋಟಿ ಸಂಪಾದನೆ ಮಾಡಿದ ಪವಿತ್ರಾ ಗೌಡ ಈಗ ಜೈಲಿನಲ್ಲಿದ್ದಾರೆ.



