ಜಸ್ಟ್ ವಿಷಯ ತಿಳ್ಕೊಂಡ್ ಬಿಡಿ.. ಅಷ್ಟೆ. ಇದರಲ್ಲಿ ವಿಶೇಷಗಳೇನಿಲ್ಲ. ಒಂದೊಂದೇ ಘಟನೆಗಳನ್ನ ಹೇಳ್ತಾ ಹೋಗ್ತೀವಿ.
ಕೇಸ್ ನಂ.೧
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ. ಆರೋಪಿಗೆ ಜಾಮೀನು ಸಿಕ್ಕಿದೆ
ಒಂದ್ ಲೆಕ್ಕದಲ್ಲಿ ಇದು ಫಸ್ಟ್ ಕೇಸು. ವಿಧಾನಸೌಧದಲ್ಲಿ ಪಾಕಿಸ್ಥಾನಕ್ಕೆ ಜಿಂದಾಬಾದ್ ಕೂಗಿದ್ದು, ಆಮೇಲೆ ನಾವು ಕೂಗೇ ಇಲ್ಲ ಅಂದಿದ್ದು, ಕೊನೆಗೆ ಹಾಗೆ ಕೂಗಿದ್ದೇ ಸತ್ಯ ಎಂದಾಗಿದ್ದು ಗೊತ್ತಿದೆ.
ಆ ಕೇಸಿನಲ್ಲಿ ಆರೋಪಿಯಾಗಿದ್ದ ಕಾಂಗ್ರೆಸ್ಸಿಗನೊಬ್ಬ ಅರೆಸ್ಟ್ ಆಗಿ ಜಾಮೀನಿನ ಮೇಲೆ ರಿಲೀಸ್ ಆಗಿದ್ದೂ ಆಗಿದೆ.
ಕೇಸ್ ನಂ.೨
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ. ಆರೋಪಿಗಳು ಅರೆಸ್ಟ್ ಆಗಿದ್ದಾರೆ
ಇನ್ನು ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದು ದಶಕಗಳ ನಂತರ ಬೆಂಗಳೂರಿನಲ್ಲಿ ಸ್ಫೋಟಿಸಿದ ಬಾಂಬ್. ಆ ಕೇಸಿನಲ್ಲಿ ಆರೋಪಿಗಳು ಇತ್ತೀಚೆಗೆ ತಾನೇ ಅರೆಸ್ಟ್ ಆಗಿದ್ದಾರೆ.
ಕೇಸ್ ನಂ.೩
ಹನುಮಾನ್ ಚಾಲೀಸ ಹಾಕಿದ್ದಕ್ಕೆ ನಡುರಸ್ತೆಯಲ್ಲೇ ಹಲ್ಲೆ
ಇದು ಕೂಡಾ ನಡೆದಿದ್ದು ಬೆಂಗಳೂರಿನಲ್ಲೇ. ನಗರತ್ ಪೇಟೆಯಲ್ಲಿ. ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಅಂಗಡಿ ಮಾಲೀಕನನ್ನ ಹಿಗ್ಗಾ ಮುಗ್ಗಾ ಹೊಡೆದು ರಕ್ತ ಬರುವಂತೆ ಹೊಡೆಯಲಾಗಿದೆ. ಈ ಕೇಸಿನಲ್ಲಿ ಆರೋಪಿಗಳು ಜೈಲಿನಲ್ಲಿದ್ಧಾರೆ. ಅಂದ್ ಹಾಗೆ ಹೊಡೆಸಿಕೊಂಡವನ ವಿರುದ್ಧವೂ ಎಫ್‌ಐಆರ್ ಆಗಿದೆ.
ಕೇಸ್ ನಂ.೪
ʻʻನೋ ಜೈ ಶ್ರೀರಾಂ.. ಅಲ್ಲಾ ಹೋ ಅಕ್ಬರ್ ಅನ್ಬೇಕುʼʼ
ಈ ಘಟನೆ ನಡೆದಿದ್ದೂ ಕೂಡಾ ಬೆಂಗಳೂರಿನಲ್ಲೇ. ಶ್ರೀರಾಮನವಮಿಯ ದಿವಸ ರಸ್ತೆಯಲ್ಲಿ ಜೈಶ್ರೀರಾಮ್ ಎಂದು ಹೇಳಿಕೊಂಡು ಹೋಗುತ್ತಿದ್ದವರನ್ನು ಅಡ್ಡಗಟ್ಟಿ ನೋ ಜೈ ಶ್ರೀರಾಂ.. ಓನ್ಲಿ ಅಲ್ಲಾ ಹೋ ಅಕ್ಬರ್ ಎಂದು ಹೇಳ್ಬೇಕು ಎಂದು ಹೆದರಿಸಿದ್ಧಾರೆ. ಪ್ರಶ್ನಿಸಿದ್ದವರಿಗೆ ಗುಂಪು ಕಟ್ಟಿಕೊಂಡು ಬಂದು ಹೊಡೆದೂ ಇದ್ಧಾರೆ. ಆರೋಪಿಗಳಲ್ಲಿ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಅವರಲ್ಲಿ ಇಬ್ಬರು ಹುಡುಗರಿಗೆ ಇನ್ನೂ ೧೮ ವರ್ಷ ತುಂಬಿಲ್ಲ.
ಕೇಸ್ ನಂ.೫
ನಟಿ ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಹಲ್ಲೆ ಯತ್ನ
ನಾವಿರೋದು ಪಾಕಿಸ್ತಾನದಲ್ಲಾ.. ಬೆಂಗಳೂರಿನಲ್ಲಾ.. ಎಂದು ನಟಿ ಹರ್ಷಿಕಾ ಪೂಣಚ್ಚ ಅವರು ಪೋಸ್ಟ್ ಹಾಕುವವರೆಗೆ ಇದು ಗೊತ್ತೇ ಇರಲಿಲ್ಲ. ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ಹೋಟೆಲೊಂದಕ್ಕೆ ಊಟಕ್ಕೆ ಹೋಗಿದ್ದಾಗ ಹರ್ಷಿಕಾ ಪೂಣಚ್ಚ ಅವರ ಪತಿ ಮೇಲೆ ಹಲ್ಲೆ ಯತ್ನ ನಡೆದಿದೆ. ಕನ್ನಡ ಮಾತನಾಡಿದ್ದೇ ಅವರು ಮಾಡಿದ್ದ ತಪ್ಪು.
ಈ ಕೇಸಿನಲ್ಲಿ ಪೊಲೀಸರು ಫೋನ್ ಮಾಡಿದ್ರೂ ರಕ್ಷಣೆಗೆ ಬರಲಿಲ್ಲ ಅನ್ನೋದು ಹರ್ಷಿಕಾ ಪೂಣಚ್ಚ ಅವರ ದೂರು. ಇಲ್ಲ.. ಹಾಗೆಲ್ಲ ಆಗಿಲ್ಲ. ಅವರು ದೂರನ್ನೇ ಕೊಟ್ಟಿಲ್ಲ ಅನ್ನೋದು ಪೊಲೀಸರ ವರ್ಷನ್ನು. ಗಲಾಟೆ ಆಗಿರೋದಂತೂ ಸತ್ಯ.
ಕೇಸ್ ನಂ.೬
ಕಾಲೇಜ್ ಕ್ಯಾಂಪಸ್ಸಿನಲ್ಲೇ ನೇಹಾ ಹಿರೇಮಠ್ ಕೊಲೆ. ಫಯಾಜ್ ಅರೆಸ್ಟ್
ಇನ್ನು ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ಎಂಬ ಕಾಂಗ್ರೆಸ್ ಕಾರ್ಪೊರೇಟರ್ ಮಗಳನ್ನೇ ಕೊಲ್ಲಲಾಗಿದೆ. ಕೊಂದವನ ಹೆಸರು ಫಯಾಜ್. ಹಾಡಹಗಲೇ ನಡೆದಿರೋ ರಕ್ತಸಿಕ್ತ ಕೊಲೆ ಇದು. ಘಟನೆ ನಡೆದ ಬೆನ್ನಲ್ಲೇ ಇದು ಲವ್ ದೋಖಾ ಮರ್ಡರ್ ಕಣ್ರೀ. ಲವ್ ಜಿಹಾದ್ ಅಲ್ಲ ಅಂತಾ ಹೋಮ್ ಮಿನಿಸ್ಟರ್ ಪರಮೇಶ್ವರ್ ಹೇಳಿಬಿಟ್ಟಿದ್ಧಾರೆ. ಹೆಣದ ಮೇಲೆ ರಾಜಕೀಯ ಮಾಡ್ಬೇಡಿ. ನನ್ನ ಮಗಳಿಗೆ ಕಳಂಕ ತರಬೇಡಿ ಅಂತಿದ್ಧಾರೆ ಕಾಂಗ್ರೆಸ್ ಕಾರ್ಪೊರೇಟರ್ ಆಗಿರುವ ನೇಹಾ ಹಿರೇಮಠ್ ತಂದೆ ನಿರಂಜನ್ ಹಿರೇಮಠ್.
ಕೇಸ್ ನಂ.೭
ಮೋದಿಯನ್ನು ಹೊಗಳಿ ಹಾಡು ಬರೆದದ್ದಕ್ಕೆ ಹಲ್ಲೆ ಮಾಡಿದ್ರಾ..?
ಇದು ನಡೆದಿರೋದು ಮೈಸೂರಿನಲ್ಲಿ. ರೋಹಿತ್ ಎಂಬ ಯುವಕ ಮೋದಿಯ ಅಭಿಮಾನಿ. ಆತ ಒಂದು ಹಾಡು ಮಾಡಿದ್ದ. ಆ ಹಾಡನ್ನು ತೋರಿಸಿದಾಗ.. ಯಾಮಾರಿಸಿ ತಮ್ಮ ಏರಿಯಾಗೆ ಕರೆದುಕೊಂಡು ಹೋಗಿ ಹೊಡೆದಿದ್ಧಾರೆ. ರೋಹಿತ್ ಹೇಳೋ ಪ್ರಕಾರ ಹಾಗೆ ಕರೆದುಕೊಂಡು ಹೋದವರು ಅಲ್ಲಾ ಹೋ ಅಕ್ಬರ್ ಅನ್ನು, ಪಾಕಿಸ್ತಾನ್ ಜಿಂದಾಬಾದ್ ಅನ್ನು ಅಂತೆಲ್ಲ ಹೇಳಿ.. ಸಿಗರೇಟಿನಿಂದ ಸುಟ್ಟು, ತಲೆ ಮೇಲೆ ಉಚ್ಚೆ ಮಾಡಿದ್ಧಾರಂತೆ.
ಕೇಸ್ ನಂ.೮
ಡ್ರಾಪ್ ನೀಡಿದ್ದ ಯುವಕನ ಮೇಲೆ ಹಲ್ಲೆ..!
ಈ ಘಟನೆ ನಡೆದಿರೋದು ಚಿತ್ರದುರ್ಗದಲ್ಲಿ. ಮುಸ್ಲಿಂ ಮಹಿಳೆಯೊಬ್ಬರಿಗೆ ಡ್ರಾಪ್ ನೀಡಿದ ಯುವಕನಿಗೆ ಹಲ್ಲೆ ಮಾಡಿದ್ಧಾರೆ. ಅಷ್ಟೇ ಅಲ್ಲ, ಆತ ಆ ಮುಸ್ಲಿಂ ಮಹಿಳೆಗೆ ಕಿರುಕುಳ ನೀಡಿದ ಎಂದು ಆತನ ಮೇಲೆ ಕಂಪ್ಲೇಂಟ್ ಕೂಡಾ ಆಗಿದೆ.
ಇವಿಷ್ಟೂ ಇತ್ತೀಚೆಗೆ ಕೇವಲ ಎರಡ್ಮೂರು ತಿಂಗಳ ಗ್ಯಾಪಿನಲ್ಲಿ ಅದಂತಹ ಘಟನೆಗಳು. ಇವಿಷ್ಟೂ ಪ್ರಕರಣಗಳಲ್ಲಿ ಸರ್ಕಾರದವರು ಪ್ರಕರಣವನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡಿರುವುದು ಜಗಜ್ಜಾಹೀರಾಗಿದೆ.
ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗೇ ಇಲ್ಲ ಎಂದು ಸರ್ಕಾರದ ಮಿನಿಸ್ಟರುಗಳೇ ಟಾಂಟಾಂ ಹೊಡೆದು, ಸತ್ಯ ಎಂದು ಗೊತ್ತಾದಾಗ ಬಾಯ್ಮುಚ್ಚಿಕೊಂಡಿದ್ದರು. ಕೆಫೆ ಬಾಂಬ್ ಕೇಸು ಪರ್ಸನಲ್ ರೀಸನ್ನಿಗೆ ಆಗಿದೆ ಎಂದಿದ್ದರು. ಬಿಜೆಪಿ ಕಾರ್ಯಕರ್ತನೊಬ್ಬನನ್ನು ವಿಚಾರಣೆ ಮಾಡಿದಾಗ ಏಕ್ʻಧಂ ಆತನೇ ಬಾಂಬಿಟ್ಟ ಎಂಬಂತೆ ಟ್ವೀಟ್ ಮಾಡಿದ್ದರು. ಇನ್ನು ಈಗ ನೇಹಾ ಹಿರೇಮಠ್ ಮರ್ಡರ್ ಕೇಸಿನಲ್ಲಿ ಲವ್ ಸ್ಟೋರಿಯನ್ನು ತೋರಿಸ್ತಿದ್ಧಾರೆ. ಸರ್ಕಾರದ ಮಂತ್ರಿಗಳು ಹಿಂಗ್ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಗೊತ್ತಿದ್ದವರೂ.. ಹೇಳ್ತಿಲ್ಲ.



