ಆಪರೇಷನ್ ಸಿಂದೂರ ಕಾರ್ಯಾಚರಣೆ ಭಾಗವಾಗಿ, ಮೇ 10 ರಂದು ಪಾಕ್ ವಾಯುನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಪಾಕ್ ಅಣ್ವಸ್ತ್ರಗಾರದ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ ಅಣ್ವಸ್ತ್ರಾಗಾರಕ್ಕೆ ಹಾನಿಯಾಗಿದ್ದು.. ಅದ್ರಿಂದ ಪರಮಾಣು ವಿಕಿರಣಗಳು ಸೋರಿಕೆಯಾಗ್ತಿವೆ ಅನ್ನೋ ಸುದ್ದಿಗಳು ಹರಿದಾಡ್ತಿವೆ. ಆದ್ರೆ, ಯಾರೂ ಇದನ್ನ ಖಚಿತ ಪಡಿಸ್ತಿಲ್ಲ.
ಕಾರಣ ೦1 : ಅಣುಸ್ಥಾವರದ ಸುತ್ತ ಮುತ್ತ ಸಣ್ಣ ಪ್ರಮಾಣದ ಭೂಕಂಪಗಳಾಗುತ್ತಿವೆ. ಅವುಗಳ ತೀವ್ರತೆ ರಿಕ್ಟರ್ ಮಾಪಕದಲ್ಲಿ ಶೇ.20ರಷ್ಟು ಮಾತ್ರವೇ ದಾಖಲಾಗುತ್ತಿದೆ. ಇದರಲ್ಲೊಂದು ಸೈನ್ಸ್ ಇದೆ. ಏನೆಂದರೆ ಯಾವುದೇ ಭೂಕಂಪ, ಅದು ಎಷ್ಟೇ ತೀವ್ರತೆ ಇರಲಿ, ಕಂಪನದ ಅಲೆಗಳು ಶೇ.80ರಷ್ಟು ದಾಖಲಾಗುತ್ತವೆ. ಈಗ ಆಗುತ್ತಿರುವುದು ಶೇ.20 ಮಾತ್ರ. ಹೀಗಾಗಿ ಇದು ನೈಸರ್ಗಿಕ ಭೂಕಂಪ ಅಲ್ಲ ಎನ್ನುವ ವಾದವಿದೆ.
ಕಾರಣ 02 : ಸ್ಥಳೀಯರನ್ನು ಒಕ್ಕಲ್ಲೆಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಲ್ಲಿಯೂ ಪಾಕಿಸ್ತಾನದ ತಾರತಮ್ಯ ಇದೆ. ಶ್ರೀಮಂತರನ್ನು ಮಾತ್ರವೇ ಓಡಿಸಲಾಗುತ್ತಿದೆ. ಬಡವರನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ. ಪಾಕಿಸ್ತಾನದ ರಕ್ತದ ಗುಣ ಗೊತ್ತಿದ್ದವರಿಗೆ ಇದು ಹೊಸದೇನಲ್ಲ.
ಪಹಲ್ಗಾಂ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸ್ತಿದೆ. ಮೇ 7 ರಂದು ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ನಡೆಸಿತ್ತು. ಮೇ 7 ರಂದು ಸುಮ್ಮನಿದ್ದ ಪಾಕಿಸ್ತಾನ ಮೇ 8 ಮತ್ತು 9 ರಂದು ಭಾರತದ ಮೇಲೆ ಡ್ರೋಣ್ಗಳು, ಕ್ಷಿಪಣಿಗಳನ್ನ ಬಳಸಿ ದಾಳಿ ಮಾಡಿತ್ತು. ಪಾಕಿಸ್ತಾನದ ಈ ಕ್ರಮಕ್ಕೆ ಪ್ರತಿಯಾಗಿ ಭಾರತ ಮೇ 10 ರಂದು ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿ ವೇಳೆ ಪಾಕಿಸ್ತಾನದ ಅಣ್ವಸ್ತ್ರ ಸಂಗ್ರಹಾರಗಳ ಮೇಲೆ ಭಾರತ ದಾಳಿ ನಡೆಸಿದೆ. ದಾಳಿಯಿಂದ ಅಣ್ವಸ್ತ್ರಾಗಾರಕ್ಕೆ ಹಾನಿಯಾಗಿದ್ದು.. ಅಲ್ಲಿಂದ ವಿಕಿರಣಗಳು ಹೊರ ಸೂಸುತ್ತಿವೆ ಅನ್ನೋ ಸುದ್ದಿಗಳು ಕೇಳಿ ಬರ್ತಿವೆ.
ಪಾಕಿಸ್ತಾನ ಅಣ್ವಸ್ತ್ರಗಳನ್ನ ಸಂಗ್ರಹಿಸಿದ್ದ ಸರ್ಗೋಧಾ ಜಿಲ್ಲೆಯ ಕಿರಾಣ ಪರ್ವತ ಶ್ರೇಣಿ, ನೂರ್ ಖಾನ್ ನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ. ಇದ್ರಿಂದ ಅಣ್ವಸ್ತ್ರಾಗಾರಗಳಿಗೆ ಹಾನಿಯಾಗಿದೆ. ಕಿರಾನಾ ಪರ್ವತ ಶ್ರೇಣಿಯಲ್ಲಿನ ಪಾಕ್ ಅಣ್ವಸ್ತ್ರಾಗಾರಕ್ಕೆ ಭಾರಿ ಹಾನಿಯಾಗಿದ್ದು, ಪರಮಾಣು ವಿಕಿರಣಗಳು ಸೋರಿಕೆಯಾಗ್ತಿವೆ ಅನ್ನೋ ಸುದ್ದಿಗಳು ಜೋರು ಸದ್ದು ಮಾಡ್ತಿವೆ. ಆದ್ರೆ, ಇದನ್ನು ಯಾರೂ ಸಹ ಖಚಿತ ಪಡಿಸಿಲ್ಲ. ಆದ್ರೆ, ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಭಾರಿ ವೈರಲ್ ಆಗಿದ್ದು, ಸರ್ಗೋಧಾ ಜಿಲ್ಲೆಯಲ್ಲಿ ಜನ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಅನ್ನೋ ಮಾಹಿತಿ ಹರಿದಾಡ್ತಿದೆ.
ಇನ್ನು ಅಣ್ವಸ್ತ್ರ ಸೋರಿಕೆಯಾದರೆ ತೀವ್ರತೆ ತಡೆಯುವುದಕ್ಕೆ ಈಜಿಪ್ಟ್ ದೇಶದ ನೈಲ್ ನದಿಯ ಮರಳನ್ನು ಟನ್ನುಗಟ್ಟಲೆ ತಂದು ಸುರಿಯಲಾಗಿದೆ ಎನ್ನಲಾಗುತ್ತಿದೆ. ನೈಲ್ ನದಿಯ ಮರಳಿನಲ್ಲಿ ಬೋರಾನ್ ಎನ್ನುವ ಕೆಮಿಕಲ್ ಇದೆ. ಇದು ವಿಕಿರಣವನ್ನು ತಡೆಯುವ ಶಕ್ತಿ ಹೊಂದಿದೆ. ಈ ರೀತಿಯ ಕೆಮಿಕಲ್ ಸಿಗುವುದು ನೈಲ್ ನದಿಯ ಮರಳಿನಲ್ಲಿ ಮಾತ್ರ ಎನ್ನುವುದೇ ವಿಶೇಷ. ಈ ನದಿಯ ಮರಳಿನಿಂದ ಬೋರಾನ್ ಎನ್ನುವ ಕೆಮಿಕಲ್ ಟ್ಯಾಬ್ಲೆಟ್ ಕೂಡಾ ತಯಾರಾಗುತ್ತದೆ. ಇತ್ತೀಚೆಗೆ ಜಪಾನ್ʻನಲ್ಲಿ ಅಣು ವಿಕಿರಣ ಸೋರಿಕೆಯಾದಾಗ ಆ ಪ್ರದೇಶದ ಜನರಿಗೆ ಕೊಟ್ಟಿದ್ದುದೇ ಈ ಬೋರಾನ್ ಟ್ಯಾಬ್ಲೆಟ್. ಹೀಗಾಗಿ ನೈಲ್ ನದಿಯ ಮರಳನ್ನು ತಂದು ಕಿರಾನಾ ಕಣಿವೆಯ ಸುತ್ತ ಮುತ್ತ ಎರಚಲಾಗಿದೆ ಎಂಬ ಸುದ್ದಿಯೂ ಇದೆ.



