ಪಹಲ್‌ಗಾಂ ದಾಳಿ, 26 ಜನರ ಹತ್ಯೆ, ಆಪರೇಷನ್ ಸಿಂದೂರ, ಪಾಕಿಸ್ತಾನದ ಸೇನಾ ನೆಲೆಗಳೆಲ್ಲವೂ ಧ್ವಂಸ, ಪಾಕಿಸ್ತಾನದ ಹೃದಯಕ್ಕೇ ನುಗ್ಗಿ ಹೊಡೆದಿದ್ದು.. ಎಲ್ಲವೂ ಸುಗಮವಾಗಿ ನಡೆಯುತ್ತಿರುವಾಗಲೇ ಅನಿರೀಕ್ಷಿತವಾಗಿ ಕದನ ವಿರಾಮ ಘೋಷಣೆ, ಭಾರತ ಘೋಷಿಸುವುದಕ್ಕೂ ಮೊದಲೇ ಅಮೆರಿಕದ ಟ್ರಂಪ್ ಟ್ವೀಟ್ ಮಾಡಿದ್ದು.. ಎಲ್ಲವೂ ಆಯ್ತು. ಇದೀಗ ರಾಜಕೀಯ ಮೇಲಾಟವೂ ನಡೀತಾ ಇದೆ.
ಮೋದಿ ಮಾಡಿದ್ದು ಸರೀನಾ.. ತಪ್ಪಾ..? ಕದನ ವಿರಾಮ ಘೋಷಿಸಿದ್ದು ಓಕೆನಾ..? ಮಿಲಿಟರಿ ಮೇಲೆ ಭಾರತೀಯರ ವಿಶ್ವಾಸ ಎಷ್ಟಿದೆ..? ಇನ್ನು ಮುಂದೆ ಪಾಕಿಸ್ತಾನ.. ಮತ್ತೆ ಉಗ್ರರನ್ನು ನುಗ್ಗಿಸುವ ದುಸ್ಸಾಹಸ ಮಾಡುವುದಿಲ್ಲವಾ.. ಎಂಬಂತಹ ಹಲವಾರು ಪ್ರಶ್ನೆಗಳನ್ನಿಟ್ಟುಕೊಂಡು ಬೃಹತ್ ಸಮೀಕ್ಷೆ ನಡೆದಿದೆ. ಈ ಸಮೀಕ್ಷೆ ನಡೆಸಿರುವುದು ಸಿ ವೋಟರ್. ಫೋನ್ ಕಾಲ್ ಮೂಲಕವೇ ಸಾವಿರಾರು ಜನರನ್ನು ಸಂಪರ್ಕಿಸಿರುವ ಸಿ ವೋಟರ್, ಸಮೀಕ್ಷೆಯನ್ನು ಸಿದ್ಧ ಮಾಡಿದೆ. ಸಮೀಕ್ಷೆಯಲ್ಲಿ ಕೇಳಿರುವ ಪ್ರಶ್ನೆಗಳು ಮತ್ತು ಅವುಗಳಿಗೆ ಭಾರತೀಯರು ಕೊಟ್ಟ ಉತ್ತರಗಳು ಇವು.
ಸಿಂದೂರ ಸಮೀಕ್ಷೆ
ಮೋದಿ ಸರ್ಕಾರದ ಆಕ್ಷನ್ ತೃಪ್ತಿ ತಂದಿದೆಯಾ..? (ಕದನ ವಿರಾಮಕ್ಕೆ ಮುನ್ನ)
ಸಂಪೂರ್ಣ ಸಮಾಧಾನ : ಶೇ.64
ಸ್ವಲ್ಪ ಸಮಾಧಾನ : ಶೇ.17
ಅಸಮಾಧಾನ ಇದೆ : ಶೇ.7
ಸ್ವಲ್ಪ ಅಸಮಾಧಾನ ಇದೆ : ಶೇ. 10
ಗೊತ್ತಿಲ್ಲ : ಶೇ.2
ಮೋದಿ ಸರ್ಕಾರದ ಆಕ್ಷನ್ ತೃಪ್ತಿ ತಂದಿದೆಯಾ..? (ಕದನ ವಿರಾಮದ ನಂತರ)
ಸಂಪೂರ್ಣ ಸಮಾಧಾನ : ಶೇ.68
ಸ್ವಲ್ಪ ಸಮಾಧಾನ : ಶೇ.16
ಅಸಮಾಧಾನ ಇದೆ : ಶೇ.5
ಸ್ವಲ್ಪ ಅಸಮಾಧಾನ ಇದೆ : ಶೇ. 5
ಗೊತ್ತಿಲ್ಲ : ಶೇ.6
ಕದನ ವಿರಾಮ ಘೋಷಿಸಿದ್ದಕ್ಕೆ ಬೆಂಬಲ ಇದೆಯಾ..?
ಸಂಪೂರ್ಣ ಬೆಂಬಲ : ಶೇ.43
ಬೆಂಬಲ ಕೊಡಬಹುದು : ಶೇ.22
ಬೆಂಬಲ ಇಲ್ಲ : ಶೇ.29
ಗೊತ್ತಿಲ್ಲ : ಶೇ.6
ಆಪರೇಷನ್ ಸಿಂದೂರದ ಗುರಿ ಈಡೇರಿತಾ..?
ಸಂಪೂರ್ಣ ಯಶಸ್ಸು : ಶೇ.45
ಭಾಗಶಃ ಯಶಸ್ಸು : ಶೇ.37
ಗುರಿ ಈಡೇರಿಲ್ಲ : ಶೇ.13
ಗೊತ್ತಿಲ್ಲ : ಶೇ.5
ಕದನ ವಿರಾಮಕ್ಕೆ ಪಾಕಿಸ್ತಾನ ಎಷ್ಟು ಅವಧಿ ಬದ್ಧವಾಗಿರುತ್ತದೆ..?
ಕೆಲವು ಗಂಟೆ : ಶೇ. 26
ಕೆಲವು ದಿನ : ಶೇ. 35
ಕೆಲವು ತಿಂಗಳು : ಶೇ.16
ಕೆಲವು ವರ್ಷ : ಶೇ. 6
ಶಾಶ್ವತವಾಗಿ : ಶೇ. 4
ಕದನ ವಿರಾಮಕ್ಕೆ ಏನು ಕಾರಣ ಇರಬಹುದು..?
ಜಾಗತಿಕ ಮಟ್ಟದ ರಾಜತಾಂತ್ರಿಕ ಒತ್ತಡ : ಶೇ. 42
ಭಾರತ, ಪಾಕ್ ಆರ್ಥಿಕ ಮತ್ತು ಆಂತರಿಕ ಸವಾಲು : ಶೇ. 18
ಅಣು ಬಾಂಬ್ ಭೀತಿ : ಶೇ. 11
ಶಾಂತಿಯ ಸ್ಥಾಪನೆ : ಶೇ. 11
ಗೊತ್ತಿಲ್ಲ : ಶೇ.18
ರಷ್ಯಾ ಮತ್ತು ಅಮೆರಿಕಗಳಲ್ಲಿ ಯಾವ ದೇಶ ನಂಬಿಕೆಗೆ ಅರ್ಹ..?
ರಷ್ಯಾಗಿಂತ ಅಮೆರಿಕ ನಂಬಿಕಸ್ಥ : ಶೇ. 12
ಅಮೆರಿಕಕ್ಕಿಂತ ರಷ್ಯಾ ನಂಬಿಕಸ್ಥ : ಶೇ. 68
ಎರಡೂ ದೇಶಗಳೂ ಸಮಾನ : ಶೇ. 6
ಯಾವ ದೇಶವೂ ನಂಬಿಕಸ್ಥ ಅಲ್ಲ : ಶೇ. 6
ಭಾರತದ ದೊಡ್ಡ ಶತ್ರು ಯಾರು..? (ಕದನ ವಿರಾಮಕ್ಕೂ ಮುನ್ನ)
ಚೀನಾ : ಶೇ.47.4
ಪಾಕಿಸ್ತಾನ : ಶೇ.27.7
ಚೀನಾ ಮತ್ತು ಪಾಕ್ ಇಬ್ಬರೂ ಶತ್ರು : ಶೇ.12.2
ಭಾರತದ ದೊಡ್ಡ ಶತ್ರು ಯಾರು..? (ಕದನ ವಿರಾಮದ ನಂತರ)
ಚೀನಾ : ಶೇ. 51.8
ಪಾಕಿಸ್ತಾನ : ಶೇ. 19.6
ಚೀನಾ ಮತ್ತು ಪಾಕ್ : ಶೇ. 20.7
ಭಾರತದ ಮಿಲಟರಿ ವಿಶ್ವಾಸ ಇದೆಯೇ..? (ಕದನ ವಿರಾಮಕ್ಕೆ ಮುನ್ನ)
ವಿಶ್ವಾಸ ಇದೆ : ಶೇ. 91
ವಿಶ್ವಾಸ ಇಲ್ಲ : ಶೇ. 6.1
ದುರ್ಬಲ : ಶೇ. 01
ಭಾರತದ ಮಿಲಟರಿ ಬಗ್ಗೆ ವಿಶ್ವಾಸ ಇದೆಯೇ..? (ಕದನ ವಿರಾಮದ ನಂತರ)
ವಿಶ್ವಾಸ ಇದೆ : ಶೇ.93
ವಿಶ್ವಾಸ ಇಲ್ಲ : ಶೇ. 3.4
ದುರ್ಬಲ : ಶೇ. 0.7
ಈ ಸಂಘರ್ಷದಲ್ಲಿ ಭಾರತ ಸುರಕ್ಷಿತ ಎಂಬ ಭಾವನೆ ಇದೆಯೇ..? (ಕದನ ವಿರಾಮಕ್ಕೆ ಮುನ್ನ )
ಸಂಪೂರ್ಣ ಸೇಫ್ : ಶೇ.67.5
ಭಾಗಶಃ ಸೇಫ್ : ಶೇ.20
ಸುರಕ್ಷಿತ ಅಲ್ಲ : ಶೇ.12
ಗೊತ್ತಿಲ್ಲ : ಶೇ.4
ಈ ಸಂಘರ್ಷದಲ್ಲಿ ಭಾರತ ಸುರಕ್ಷಿತ ಎಂಬ ಭಾವನೆ ಇದೆಯೇ..? (ಕದನ ವಿರಾಮದ ನಂತರ )
ಸಂಪೂರ್ಣ ಸೇಫ್ : ಶೇ.63.9
ಭಾಗಶಃ ಸೇಫ್ : ಶೇ.21
ಸುರಕ್ಷಿತ ಅಲ್ಲ : ಶೇ.10
ಗೊತ್ತಿಲ್ಲ : ಶೇ.2