ಕಾವೇರಿ ಹೋರಾಟ (kaveri horata) ತೀವ್ರಗೊಳ್ಳುತ್ತಿದೆ. ಮಂಗಳವಾರ ಬಂದ್‍ಗೆ (Karnataka bundh) ಕರೆ ಕೊಡಲಾಗಿದೆ. ಚಿತ್ರರಂಗವೂ (film industry) ಬೆಂಬಲ ಕೊಟ್ಟಿದೆ. ಕನ್ನಡ ಕಲಾವಿದರಾದ ಶಿವಣ್ಣ ಸೇರಿದಂತೆ ಎಲ್ಲರೂ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಈ ವೇಳೆ ಶಿವಣ್ಣ (Shiva rajkumar) , ಸುದೀಪ್ (Sudeep) , ಯಶ್ (Yash) , ದರ್ಶನ್ (Darshan) ಅವರನ್ನು ಬಾಯಿಗೆ ಬೀಗ ಹಾಕಿಕೊಂಡಿರುವ ಪೋಸ್ಟ್ ಮಾಡಿ ವೈರಲ್ ಮಾಡಲಾಗಿತ್ತು. ಬೆನ್ನಲ್ಲೇ ಚಿತ್ರನಟರ ಬೆಂಬಲದ ಹೇಳಿಕೆಗಳೂ ಹೊರಬಿದ್ದವು. ಇದೀಗ ದರ್ಶನ್ ಒಂದು ಪ್ರಶ್ನೆ ಎತ್ತಿದ್ದಾರೆ.
ಮೈಸೂರು ಜಿಲ್ಲೆಯ ಬನ್ನೂರಿನಲ್ಲಿ (bannuru) ಈ ಬಗ್ಗೆ ಮಾತನಾಡಿರೋ ನಟ ದರ್ಶನ್, ಕಾವೇರಿ ಹೋರಾಟದ (cauvery horata) ಬಗ್ಗೆ ಮೌನ ಮುರಿದಿದ್ದು ನಟರು ಹೋರಾಟಕ್ಕೆ ಬರುತ್ತಿಲ್ಲ ಎಂಬ ಕೂಗಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ದರ್ಶನ್, ಸುದೀಪ್, ಶಿವಣ್ಣ, ಯಶ್, ಅಭಿ ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ ಎಂದು ಪ್ರಶ್ನಿಸಿದ್ದಾರೆ. ಮೊನ್ನೆ ಬಂದ ತಮಿಳು ಚಿತ್ರದಲ್ಲಿ ಕರ್ನಾಟಕದಲ್ಲೇ ಕೋಟಿ ಕೋಟಿ ಮಾಡಿದವನು ನಿಮಗೆ ಕಾಣ್ತಿಲ್ವ? ಕರ್ನಾಟಕದಲ್ಲೇ ಒಬ್ಬ ವಿತರಕ ತಮಿಳು ಚಿತ್ರದಿಂದ ಕರ್ನಾಟಕದದಲ್ಲೇ 36 ಕೋಟಿ ರೂ. ಮಾಡಿದ. 6 ಕೋಟಿ ಹಾಕಿ 36 ಕೋಟಿ ಮಾಡಿದ. ಅವನಿಗೆ ಯಾಕೆ ನೀವು ಕೇಳಲ್ಲ? ನಾವು ಮಾತ್ರ ನಿಮಗೆ ಕಾಣೋದಾ? ನಿಮಗೆ ಪ್ರಶ್ನೆ ಕೇಳ್ತಾ ಇದ್ದೀನಿ ಹೇಳಿ ಎಂದು ಜನರನ್ನು ದರ್ಶನ್ ಪ್ರಶ್ನಿಸಿದ್ದಾರೆ.
ನಟ ದರ್ಶನ್ ಕಾವೇರಿ ಪರ ಹೋರಾಟದ ವೇದಿಕೆಯಲ್ಲಿ ನಿಂತೇ ಈ ಪ್ರಶ್ನೆ ಎತ್ತಿದ್ದಾರೆ. ನೀವುಗಳು ಕನ್ನಡ ಸಿನಿಮಾಗೆ ಕೊಟ್ರೆ ಮಾತ್ರ ಕನ್ನಡ ಕಲಾವಿದರು ಬರ್ತಾರೆ ಸ್ವಾಮಿ, ಯಾವುದೋ ಒಂದು ತಮಿಳು ಸಿನಿಮಾಗೆ ಕೊಟ್ರೆ ಹೇಗೆ? ಅವರು ದೊಡ್ಡ ಕಲಾವಿದರೇ ಅವರ ಬಗ್ಗೆ ನಾನು ಮಾತಾಡೋದಿಲ್ಲ. ಆದ್ರೆ ಆ ಸಿನಿಮಾ ನೋಡಿದ್ದು ಯಾರು? ಕನ್ನಡದವರು, ಕರ್ನಾಟಕದಿಂದ 36 ಕೋಟಿ ಹೋಗಿದೆ. ಈಗ ಯಾಕೆ ಅವರ ಬಾಯಿ ಬಂದ್ ಆಗಿಲ್ಲ. ಒಂದು ಟ್ವೀಟ್ ಕೇಳಿಲ್ಲ ಎಂದು ದರ್ಶನ್ ಚಳಿ ಬಿಡಿಸಿದ್ದಾರೆ.
https://x.com/dasadarshan/status/1704405986113696113?s=20
ನಾನು ಹುಟ್ಟು ರೈತ, ಈಗಲೂ ಕೃಷಿ ಮಾಡ್ತಿದ್ದೇನೆ. ಕಾವೇರಿ ನೀರು ಬಳಸಿಯೇ ಬೆಳೆ ಕೂಡ ಬೆಳೆಯುವೆ. ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವಿದೆ. ಆದೇಶ ಆಗುವವರೆಗೆ ನಮ್ಮವರು ಏನು ಮಾಡ್ತಿದ್ದರು? ಹೋರಾಟಕ್ಕೆ ಧುಮುಕಿರುವವರು ಬಡ ಕೂಲಿ ಕಾರ್ಮಿಕರು. ದರ್ಶನ್ ಮಾತು ಹರಿತವಾಗಿರುತ್ತೆ. ಕೆಟ್ಟದಾಗಿ ಮಾತನಾಡ್ತಾರೆ. ಅವನಿಗೆ ಮಾನ ಮರ್ಯಾದೆ ಇಲ್ಲ ಅಂತಾರೆ. ಆದರೆ ನನ್ನ ಮಾತು ಸತ್ಯವಾಗಿಯೇ ಇರುತ್ತದೆ ಎಂದಿದ್ದಾರೆ ನಟ ದರ್ಶನ್.
ದರ್ಶನ್ ಮಾತಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ದರ್ಶನ್ ಮಾತು ಕಟುವಾದ್ರೂ 100 ಪರ್ಸೆಂಟ್ ನಿಜ ಎಂದು ನೆಟ್ಟಿಗರು ಹೇಳಿದ್ದಾರೆ. ದರ್ಶನ್ ಮಾತಾಡಿರುವ ವಿಡಿಯೋವನ್ನು ರಜನಿ ಎಕ್ಸ್ಪ್ರೆಸ್ ರೆಕಾರ್ಡ್ ಮಾಡಿದೆ. ದರ್ಶನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡ್ತಿದೆ.



