ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸುಗಳಲ್ಲಿ ರಾಜ್ಯ ಸರ್ಕಾರ ʻನಿಷ್ಪಕ್ಷಪಾತ ತನಿಖೆʼ ನಡೆಸುತ್ತಿದೆ ಎಮದು ಹೇಳುತ್ತಿದೆಯಾದರೂ.. ಆ ಮಾತನ್ನು ಕಟ್ಟರ್ ಕಾಂಗ್ರೆಸ್ಸಿಗರೂ ನಂಬುವ ಸ್ಥಿತಿಯಲ್ಲಿ ಇಲ್ಲ. ಪ್ರಜ್ವಲ್ ವಿಡಿಯೋ ಕೇಸಿನಲ್ಲೂ ಅಷ್ಟೆ, ರೇವಣ್ಣ ಅವರನ್ನು ಅರೆಸ್ಟ್ ಮಾಡಿ ಜೈಲಿಗೆ ಕೂರಿಸೋದ್ರಲ್ಲಿ ತೋರಿಸಿದ ಅವಸರ, ತನಿಖೆಯಲ್ಲಿ ಆಗಲಿಲ್ಲ. ಬಿಜೆಪಿ ಮುಖಂಡ ದೇವರಾಜೇ ಗೌಡ ಅವರು ಆರೋಪ ಮಾಡಿ, ಆಡಿಯೋ ರಿಲೀಸ್ ಮಾಡಿದ ಗಂಟೆಗಳಲ್ಲಿಯೇ ಅರೆಸ್ಟ್ ಆದರು. ಆದರೆ.. ಇದೂವರೆಗೆ ಯಾರ ಮೇಲೆ ವಿಡಿಯೋ ಲೀಕ್ ಮಾಡಿದರು ಎನ್ನುವ ಆರೋಪ ಇದೆಯೋ.. ಅವರನ್ನು ಪೊಲೀಸರು ಶಾಸ್ತ್ರಕ್ಕಾದರೂ ವಿಚಾರಣೆ ಮಾಡಿಲ್ಲ.
ವಿಡಿಯೋ ಹೊರಬಿದ್ದು ಒಂದು ತಿಂಗಳಾಗಿದೆ. ಏಪ್ರಿಲ್ 26ರಂದು ಹಾಸನ ಲೋಕಸಭೆಗೆ ಮತದಾನ ಇತ್ತಾದರೂ.. ವಿಡಿಯೋಗಳು ಅದಕ್ಕೆ ಮುಂಚೆ ಏಪ್ರಿಲ್ 21-22ರಂದು ಎಲ್ಲರ ಮೊಬೈಲಿಗೆ ತಲುಪಿದ್ದವು. ಏಪ್ರಿಲ್ 23ರಂದು ಜೆಡಿಎಸ್ ಮುಖಂಡರು ಪೊಲೀಸರಿಗೆ ದೂರನ್ನೂ ಕೊಟ್ಟಿದ್ದರು. ಪ್ರಜ್ವಲ್ ವಿಡಿಯೋ ಕೇಸಿನಲ್ಲಿ ಅಧಿಕೃತವಾಗಿ ದಾಖಲಾದ ಮೊಟ್ಟ ಮೊದಲ ದೂರು ಇದೇ. ಆದರೆ.. ಈ ಪ್ರಕರಣದಲ್ಲಿ ಯಾರೆಲ್ಲ ಆರೋಪಿಗಳಿದ್ದಾರೋ.. ಅವರೆಲ್ಲರಿಗೂ ಬೇಲ್ ರಿಜೆಕ್ಟ್ ಆಗಿದೆ. ಯಾರೊಬ್ಬರಿಗೂ ಜಾಮೀನು ಸಿಕ್ಕಿಲ್ಲ. ಕುಮಾರಸ್ವಾಮಿ, ಅಶೋಕ್ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರೆಲ್ಲ ಮಾತನಾಡುತ್ತಲೇ ಇದ್ದಾರಾದರೂ.. ಪೊಲೀಸರು ವಿಚಾರಣೆ ಶುರು ಮಾಡಿಲ್ಲ.
ವಿಡಿಯೋ ಲೀಕ್ ಮಾಡಿದ ಆರೋಪ ಇರುವುದು ಡ್ರೈವರ್ ಕಾರ್ತಿಕ್ ಮೇಲೆ. ಆತ ಹಿಂದೆ ಪ್ರಜ್ವಲ್ ಅವರ ಡ್ರೈವರ್ ಆಗಿದ್ದವನು, ಈಗ ಹಾಸನ ಕಾಂಗ್ರೆಸ್ ಅಭ್ಯರ್ಥಿಯ ಡ್ರೈವರ್ ಆಗಿದ್ಧಾರೆ. ಇನ್ನೊಬ್ಬ ನವೀನ್ ಗೌಡ. ಈತ ಕೂಡಾ ಕಾಂಗ್ರೆಸ್ಸಿಗ. ಈತ ಜೆಡಿಎಸ್ ಶಾಸಕ ಎ.ಮಂಜು ಅವರೇ ಸೂತ್ರಧಾರಿ ಎಂದು ಇತ್ತೀಚೆಗೆ ಪೋಸ್ಟ್ ಹಾಕಿ, ಎ.ಮಂಜು ಕೂಡಾ ಈತನ ಬಗ್ಗೆ ದೂರು ಕೊಟ್ಟಿದ್ಧಾರೆ. ಮಾಜಿ ಪುರಸಭೆ ಸದಸ್ಯ ಪುಟ್ಟರಾಜ್ ಆಲಿಯಾಸ್ ಪಾಪಣ್ಣಿ ಹಾಗೂ ಚೇತನ್ ಹೆಸರೂ ಇದೆ. ವಿಶೇಷ ಏನಂದ್ರೆ.. ಈ ಇಷ್ಟೂ ಜನ ಆರೋಪಿಗಳಲ್ಲಿ ಯಾರೊಬ್ಬರ ವಿಚಾರಣೆಯೂ ಶುರುವಾಗಿಲ್ಲ.
ಹಾಗಾದರೆ.. ಸರ್ಕಾರ ಹಾಗೂ ಪೊಲೀಸರು ವಿಡಿಯೋ ರಿಲೀಸ್ ಮಾಡಿದ್ದವರನ್ನು ರಕ್ಷಿಸುತ್ತಿದ್ದಾರೆಯೇ.. ಯಾರು ಏನ್ ಬಾಯ್ ಬಡ್ಕೊಂಡ್ರೂ.. ಕೇರ್ ಮಾಡಲ್ಲ ಅನ್ನೋ ಸಂದೇಶ ರಾಜ್ಯ ಸರ್ಕಾರದಿಂದ ಇದೆಯೇ.. ಗೊತ್ತಿಲ್ಲ. ಈ ಬಗ್ಗೆ ಪೊಲೀಸರು ದಾಖಲೆ ತೆಗೆದುಕೊಂಡು ಅರೆಸ್ಟ್ ಮಾಡುವುದಕ್ಕೆ ಮುಂದಾದಾಗ ರಾಜ್ಯ ಸರ್ಕಾರ ಹಿರಿಯ ಸಚಿವರೊಬ್ಬರು ಅರೆಸ್ಟ್ ಮಾಡಬೇಡಿ, ನಾವು ಹೇಳಿದಷ್ಟು ಮಾಡಿ ಎಂದು ಹುಕುಂ ಹೊರಡಿಸಿದ್ದಾರಂತೆ. ಪೊಲೀಸರು ಅಸಹಾಯಕರಾಗಿದ್ಧಾರೆ ಎನ್ನುತ್ತಿವೆ ಮೂಲಗಳು. ಆದರೆ.. ಅತ್ತ ಪೊಲೀಸರು ಸರ್ಕಾರವನ್ನು ಎದುರು ಹಾಕಿಕೊಂಡು ಕ್ರಮ ತೆಗೆದುಕೊಳ್ಳುವುದಕ್ಕೂ ಆಗದೆ.. ಇತ್ತ ಸುಮ್ಮನಿರುವುದಕ್ಕೆ ಹಾಕಿಕೊಂಡಿರುವ ಖಾಕಿಗೆ ನಿಯತ್ತಾಗಿ ಇರಲೂ ಆಗದ ಇಕ್ಕಟ್ಟಿನ ಸ್ಥಿತಿಯಲ್ಲಿದ್ಧಾರೆ.



