ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಾತನಾಡುತ್ತಾ 3ನೇ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿ 370+ ಸೀಟು ಗೆಲ್ಲಲಿದೆ. ಎನ್ʻಡಿಎ ಒಕ್ಕೂಟ ಒಟ್ಟಾರೆ 400+ ಸೀಟು ಗೆಲ್ಲಲಿದೆ ಎಂದು ಹೇಳಿದ್ದರು. ಹಾಗೆ ಹೇಳಿದ ಬೆನ್ನಲ್ಲೇ ಟೈಮ್ಸ್ ನೌ ಸಮೀಕ್ಷೆ ಹೊರಬಿದ್ದಿದೆ. ಇದು ಚುನಾವಣಾ ಪೂರ್ವ ಸಮೀಕ್ಷೆ.
ಲೋಕಸಭೆಗೆ ಇದೀಗ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 366 ಸ್ಥಾನಗಳನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಯಾವುದೇ ಮ್ಯಾಜಿಕ್ ಮಾಡುವ ಸಾಧ್ಯತೆ ಇಲ್ಲ. ಅದು ಕೇವಲ 104 ಸ್ಥಾನ ಗೆಲ್ಲಬಹುದು. ಇತರರು 74 ಗೆಲ್ಲಬಹುದು ಎಂದು ಸಮೀಕ್ಷಾ ವರದಿ ಹೇಳಿದೆ. ಎಲೆಕ್ಷನ್ನೇನೂ ದೂರ ಇಲ್ಲ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಚುನಾವಣೆ ಇದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆಯಬೇಕು. ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಟೈಮ್ಸ್ ನೌ ಮತ್ತು ಮ್ಯಾಟ್ರಿಜ್ ಸಮೀಕ್ಷೆ ರಿಸಲ್ಟ್ ಹೊರಬಿದ್ದಿದೆ.
ಎನ್ʻಡಿಎಗೆ ಎಷ್ಟು ಸೀಟು.. ಬಿಜೆಪಿಗೆ ಎಷ್ಟು ಸೀಟು..?
ಇದೀಗ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿಕೂಟ ಒಟ್ಟಾರೆಯಾಗಿ 366 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 303 ಮತ್ತು ಎನ್‌ಡಿಎ ಮೈತ್ರಿಕೂಟ ಒಟ್ಟಾರೆ 353 ಸ್ಥಾನ ಗೆದ್ದುಕೊಂಡಿತ್ತು. ಇನ್ನು ಎನ್‌ಡಿಎ ಸೋಲಿಸಲು ರೂಪುಗೊಂಡಿದ್ದ ಇಂಡಿಯಾ ಮೈತ್ರಿಕೂಟ 104 ಸ್ಥಾನಕ್ಕೆ, ಇತರರು 74 ಗೆಲ್ಲಲಿದ್ದಾರೆ ಎಂದು ಟೈಮ್ಸ್ ನೌ ಸಮೀಕ್ಷೆ ಹೇಳುತ್ತಿದೆ.
ಕರ್ನಾಟಕದಲ್ಲಿ ಬಿಜೆಪಿಗೆ ಮೈನಸ್
ಸಮೀಕ್ಷೆ ಅನ್ವಯ ಕರ್ನಾಟಕದಲ್ಲಿ ಬಿಜೆಪಿ 21 ಸ್ಥಾನ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೂ ಇದು ಮೈನಸ್ ಎಂದೇ ಹೇಳಬೇಕು. ಕಳೆದ ಬಾರಿ ಬಿಜೆಪಿ ಕರ್ನಾಟಕದಲ್ಲಿ 25 ಸ್ಥಾನ ಗೆದ್ದಿತ್ತು. ಸುಮಲತಾ ಅವರನ್ನೂ ಸೇರಿಸಿದರೆ 26. ಇನ್ನುಳಿದ ಎರಡು ಕ್ಷೇತ್ರಗಳಲ್ಲಿ ಒಂದನ್ನು ಜೆಡಿಎಸ್ ಮತ್ತೊಂದನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಆದರೆ.. ಈ ಬಾರಿ.. ಬಿಜೆಪಿ 21 ಸ್ಥಾನ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾದರೆ ಜೆಪಿ ಜೊತೆ ಮೈತ್ರಿ ಘೋಷಿಸಿರುವ ಜೆಡಿಎಸ್ 2 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆ ಪ್ರಕಾರ ನೋಡಿದರೆ.. ಬಿಜೆಪಿ ದೊಡ್ಡ ಪಕ್ಷವಾದರೂ.. 4+1 ಮೈನಸ್. ಜೆಡಿಎಸ್ಸಿಗೆ 1+1 ಲಾಭ. ಕಾಂಗ್ರೆಸ್ಸಿಗೆ 5 ಲಾಭವಾಗಲಿದೆ.
ಯಾವ ರಾಜ್ಯಗಳಲ್ಲಿ ಯಾವ ಪಕ್ಷಕ್ಕೆ ವೋಟು..?
ದೇಶದಲ್ಲಿಯೇ ಅತಿ ದೊಡ್ಡ ರಾಜ್ಯ ಹಾಗೂ ಅತೀ ಹೆಚ್ಚು ಲೋಕಸಭಾ ಕ್ಷೇತ್ರ ಇರುವ ಉತ್ತರಪ್ರದೇಶದಲ್ಲಿ ಬಿಜೆಪಿ 77 ಸ್ಥಾನ ಗೆಲ್ಲಲಿದೆ. ಅಂದ್ರೆ 80ರಲ್ಲಿ 77. ಉಳಿದ 3 ಸ್ಥಾನಗಳಲ್ಲಿ ಎಸ್‌ಪಿ ಮತ್ತು ಆರ್‌ಎಲ್‌ಡಿ 3 ಸ್ಥಾನ ಗೆಲ್ಲಲಿವೆ.
ಗುಜರಾತ್‌ನಲ್ಲಿ ಬಿಜೆಪಿ ಎಲ್ಲ 26; ರಾಜಸ್ಥಾನದಲ್ಲಿ ಎಲ್ಲ 25; ಛತ್ತೀಸ್‌ಗಢ ಎಲ್ಲ 11; ದೆಹಲಿ ಎಲ್ಲ 7 ಸ್ಥಾನಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ.
ಮಹಾರಾಷ್ಟ್ರದಲ್ಲಿ ಎನ್‌ಡಿಎ 39, ಮಹಾವಿಕಾಸ ಅಘಾಡಿ 9; ಆಂಧ್ರದಲ್ಲಿ ವೈಎಸ್‌ಆರ್ ಕಾಂಗ್ರೆಸ್ 19, ಟಿಡಿಪಿ-ಜನಸೇನಾ 6; ತೆಲಂಗಾಣದಲ್ಲಿ ಕಾಂಗ್ರೆಸ್ 9, ಬಿಜೆಪಿ 5, ಬಿಆರ್‌ಎಸ್ 2, ಎಐಎಂಐಎಂ 1; ತಮಿಳುನಾಡಲ್ಲಿ ಇಂಡಿಯಾ ಮೈತ್ರಿಕೂಟ 36, ಎಐಎಡಿಎಂಕೆ 2, ಬಿಜೆಪಿ 1, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 26, ಬಿಜೆಪಿ 15, ಕಾಂಗ್ರೆಸ್ ಮತ್ತು ಎಡಪಕ್ಷಗಳು 1; ಪಂಜಾಬ್ ಆಪ್ 5, ಬಿಜೆಪಿ ಮತ್ತು ಕಾಂಗ್ರೆಸ್ ತಲಾ 3, ಶಿರೋಮಣಿ ಅಕಾಲಿದಳ 1; ಹರ್ಯಾಣ ಬಿಜೆಪಿ 9, ಕಾಂಗ್ರೆಸ್ 1; ಒಡಿಶಾದಲ್ಲಿ ಬಿಜೆಪಿ 11, ಬಿಜೆಡಿ 9, ಕಾಂಗ್ರೆಸ್ 1; ಬಿಹಾರದಲ್ಲಿ ಎನ್‌ಡಿಎ 35, ಇಂಡಿಯಾ 5; ಜಾರ್ಖಂಡ್‌ನಲ್ಲಿ ಎನ್‌ಡಿಎ 13, ಇಂಡಿಯಾ ಮೈತ್ರಿಕೂಟ 1 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
ಇನ್ನು ಪ್ರಧಾನಿ ಅಭ್ಯರ್ಥಿ ರೇಸಿನಲ್ಲೂ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರ ಹತ್ತಿರದಲ್ಲೂ ಇಲ್ಲ. ನರೇಂದ್ರ ಮೋದಿ ಶೇ.61.4 ರಷ್ಟು ಬೆಂಬಲ ಪಡೆದಿದ್ದರೆ, ನಂತರದ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಶೇ.31.8 ಬೆಂಬಲ ಪಡೆದಿದ್ದಾರೆ. ಇಂಪ್ರೂವ್ʻಮೆಂಟ್ ಇದೆಯಾದರೂ.. ಹೆಚ್ಚೂ ಕಡಿಮೆ ಅರ್ಧದಷ್ಟು ಕಡಿಮೆ ಬೆಂಬಲ ಇದೆ. ಇನ್ನು ಕೇಜ್ರಿವಾಲ್ ಪರ
ಕೇಜ್ರಿವಾಲ್ ಶೇ.3.7 ಬೆಂಬಲ ಇದ್ದರೆ, ಇತರರೆಲ್ಲ ಸೇರಿ ಶೇ.3.1 ಬೆಂಬಲ ಪಡೆದುಕೊಂಡಿದ್ದಾರೆ.



