ಪ್ರೊ.ಎಸ್.ಕೆ. ಭಗವಾನ್ (Bhagavan). ಈ ವ್ಯಕ್ತಿ ಪ್ರೊಫೆಸರ್ Professor ಆಗಿದ್ದರೂ, ವಿವಾದಗಳಿಂದಲೇ controversy ಹೆಚ್ಚು ಫೇಮಸ್. ಇಂಗ್ಲಿಷ್ ಪ್ರೊಫೆಸರ್ ಆಗಿದ್ದವರು. ಹಿಂದೂ ವಿರೋಧಿ (anti hindu) ಹೇಳಿಕೆ, ಲೇಖನ, ಬರಹಗಳಿಂದಲೇ ಹೆಚ್ಚು ವಿಖ್ಯಾತಿಯನ್ನೂ ಕುಖ್ಯಾತಿಯನ್ನೂ ಪಡೆದವರು. ಶ್ರೀರಾಮ-ಸೀತೆ ಮದ್ಯಪಾನ ಮಾಡುತ್ತಿದ್ದರು, ಶ್ರೀರಾಮ ತಂದೆಗೆ ಹುಟ್ಟಿದ ಮಗ ಅಲ್ಲ ಎನ್ನುವಂತಹ ಹೇಳಿಕೆಗಳು, ಹಿಂದೂ ಧರ್ಮ, ದೇವರು, ಪುರಾಣ, ಶಂಕರಾಚಾರ್ಯ, ಭಗವದ್ಗೀತೆಗಳನ್ನು ಟೀಕಿಸಿವುದರಿಂದಲೇ ಹೆಚ್ಚು ಖ್ಯಾತರಾದವರು. ಇದೀಗ ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಹೇಳಿ ಹೊಸ ವಿವಾದ ಸೃಷ್ಟಿಸಿದ್ದಾರೆ.
ಈ ವಿವಾದವೂ ಅಷ್ಟೆ, ಮೈಸೂರಿನ ಚಾಮುಂಡೇಶ್ವರಿ ದಸರಾಗೆ ವಿರುದ್ಧವಾಗಿ ಮಹಿಷ ದಸರಾ ಮಾಡಲು ಹೋರಾಟ ನಡೆಸುತ್ತಿರುವವರಲ್ಲಿ ಭಗವಾನ್ ಕೂಡಾ ಒಬ್ಬರು. ಆ ಮಹಿಷ ದಸರಾದ ಕಾರ್ಯಕ್ರಮದಲ್ಲಿಯೇ ಪ್ರೊ.ಎಸ್.ಕೆ. ಭಗವಾನ್ “ಒಕ್ಕಲಿಗರು (Okkaliga) ಸಂಸ್ಕೃತಿ ಹೀನರು. ಹೀಗೆಂದು ಕುವೆಂಪು (kuvempu) ಹೇಳಿದ್ದರು” ಎಂದು ಹೇಳಿಕೆ ನೀಡಿದ್ದರು. ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಕುವೆಂಪು ಅವರು ಹೇಳಿದ್ಧಾರೆ ಎಂದು ಹೇಳಿದ್ದು ಹಾಗೂ ವಿನಾಕಾರಣ ಒಕ್ಕಲಿಗ ಸಮುದಾಯವನ್ನು ವಿವಾದದ ಸುಳಿಗೆ ಸಿಲುಕಿಸಿದ್ದೇ ವಿವಾದ ಮೂಲ.
ಭಗವಾನ್ ಅವರು ಹೇಳಿದ್ದು ಇಷ್ಟೆ..!
ಒಕ್ಕಲಿಗ Okkaliga ಸಮುದಾಯದವರು ಸಂಸ್ಕೃತಿ ಹೀನರು culture less people ಅಥವಾ ಅವರು ಹೀನ ಸಂಸ್ಕೃತಿಯುಳ್ಳವರು. ನಾನು ಈ ಮಾತು ಹೇಳಿಲ್ಲ. ಕುವೆಂಪು Kuvempu ಅವರು ಹೇಳಿದ್ದನ್ನು ನಾನಿಲ್ಲಿ ಉಲ್ಲೇಖ ಮಾಡುತ್ತಿದ್ದೇನೆ, ಅಷ್ಟೇ. ಇದು ಭಗವಾನ್ ಅವರು ವೇದಿಕೆಯಲ್ಲಿ ಹೇಳಿದ್ದ ಮಾತು.
ಭಗವಾನ್ ಮನೆಗೆ ಮುತ್ತಿಗೆ : ಮೈಸೂರಿನ ಕುವೆಂಪು ನಗರದಲ್ಲಿರುವ ಭಗವಾನ್ ಅವರ ಮನೆಗೆ ಒಕ್ಕಲಿಗ ಸಂಘಟನೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಭಗವಾನ್ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆ ಕೆಲವರು ಮನೆಗೇ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದಿದ್ದಾರೆ. ಮಾತಿನ ಚಕಮಕಿಯೂ ನಡೆದಿದೆ. ಕೆಲವರನ್ನು ವಶಕ್ಕೆ ತೆಗೆದುಕೊಂಡು ಆಮೇಲೆ ಬಿಡುಗಡೆ ಮಾಡಿದ್ದಾರೆ.
ಒಕ್ಕಲಿಗರ ಆಗ್ರಹ ಏನು?
ದಲಿತ ಮತ್ತು ಒಕ್ಕಲಿಗ ಸಮುದಾಯದ ನಡುವೆ ಒಡಕು ಮೂಡುವ ರೀತಿಯಲ್ಲಿಭಗವಾನ್ ಮಾತನಾಡಿದ್ದಾರೆ. ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು ಎನ್ನುವುದು ಒಕ್ಕಲಿಗರ ಸಂಘಟನೆಗಳ ಆಗ್ರಹ. ಭಗವಾನ್ ವಿರುದ್ಧ ಕೇಸು ಹಾಕಬೇಕು. ಅದ್ಯಾವ ದಾಖಲೆಗಳನ್ನಿಟ್ಟುಕೊಂಡು ಇಂತಹ ಹೇಳಿಕೆ ಕೊಟ್ಟಿದ್ದಾರೆ ಅನ್ನೋದು ಗೊತ್ತಾಗಬೇಕು ಎನ್ನೋದು ಒತ್ತಾಯ.
ಸಹಜವಾಗಿಯೇ ಭಗವಾನ್ ಅವರ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಮಹಿಷ ದಸರಾ ಸಂಘಟಿಸಿದ್ದವರೂ ಕೂಡಾ ಭಗವಾನ್ ಹೇಳಿಕೆಗೂ ನಮಗೂ ಸಂಬಂಧ ಇಲ್ಲ ಎಂದು ದೂರ ಸರಿದಿದ್ದಾರೆ. ಭಗವಾನ್ ಅವರ ಈ ಹೇಳಿಕೆಗೆ ಬೆಂಬಲ ಸೂಚಿಸಲು ಯಾರೂ ಸಿದ್ಧರಿಲ್ಲ ಎನ್ನುವುದು ವಾಸ್ತವ. ಆದರೆ ಈ ಹಿಂದೆ ಭಗವಾನ್ ಅವರ ಹಿಂದೂ ವಿರೋಧಿ ಹೇಳಿಕೆಗಳಿಗೆ ಬೆಂಬಲ ಸೂಚಿಸಿದ್ದವರಿಗೂ ಭಗವಾನ್ ಅವರ ಈ ಹೇಳಿಕೆ ನುಂಗಲಾರದ ತುತ್ತು. ಈ ಹೇಳಿಕೆಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದೆ.
ದಲಿತ ಮತ್ತು ಒಕ್ಕಲಿಗ ಸಮುದಾಯದ ನಡುವೆ ಒಡಕು ಮೂಡುವ ರೀತಿಯಲ್ಲಿಭಗವಾನ್ ಮಾತನಾಡಿದ್ದಾರೆ. ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು.
-ಪಿ.ಪ್ರಶಾಂತ್ಗೌಡ, ನಿರ್ದೇಶಕ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಒಕ್ಕಲಿಗರ ಸಂಘ.
ಭಗವಾನ್ ವಿರುದ್ಧ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ದಸರಾ ಉದ್ಘಾಟನೆಗೆ ಆಗಮಿಸುವ ಮುಖ್ಯಮಂತ್ರಿ ಎದುರು ಕಪ್ಪು ಪಟ್ಟಿ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು.
-ಬಿ.ಸತೀಶ್ಗೌಡ, ಅಧ್ಯಕ್ಷ, ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್.
ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಹೇಳಲು ಕುವೆಂಪು ಹೆಸರು ಬಳಸಿರುವ ಭಗವಾನ್ ಹೇಳಿಕೆ ಎಲ್ಲಿಗೆ ಮುಟ್ಟುತ್ತದೆ ಎಂದು ಹೇಳಲು ಅಸಾಧ್ಯ. ಸರಕಾರದ ಸಹಕಾರವೇ ಮಹಿಷ ದಸರಾ ಕಾರ್ಯಕ್ರಮ ನಡೆಯಲು ಕಾರಣ. ಭಗವಾನ್ನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿ.
ಆರಗ ಜ್ಞಾನೇಂದ್ರ, ಮಾಜಿ ಗೃಹ ಸಚಿವ
ಸನ್ಮಾನ್ಯ ಭಗವಾನ್ ಅವರೇ ನೀವು ವಿದ್ಯಾವಂತರಾ? ನೀವು ಜ್ಞಾನಿಗಳಾ? ನೀವು ಹಿರಿಯರಾ? ನೀವು ಸಮಾಜ ಸುಧಾರಕರಾ? ಒಕ್ಕಲುತನ ಸಮುದಾಯವನ್ನು ಅಣಕಮಾಡಿ, ಅದನ್ನು ಯಾಕೆ ಕುವೆಂಪು ಅವರ ಮೇಲೆ ಹಾಕಿ, ತೆವಲು ತೀರಿಸಿಕೊಂಡು ಪಲಾಯನ ಮಾಡಿದಿರಿ? ಕರ್ನಾಟಕ ಆರಕ್ಷಕ ಇಲಾಖೆ ಯಾಕೆ ಮೌನ?
ಡಿಕೆ ಶಿವಕುಮಾರ್ ಅವರೇ ಯಾಕೆ ಮೌನ? ಸಮಾಜದ ಸ್ವಾಸ್ಥ್ಯ ಕೆಡಿಸುವವರ ಮೇಲೆ ಕ್ರಮ ಜರುಗಿಸಿ ಆರಕ್ಷಕ ಮಹನೀಯರೆ. ಇದು ಪ್ರಚಾರ ತೆವಲಿನ ಹೋರಾಟ
ಜಗ್ಗೇಶ್, ರಾಜ್ಯಸಭಾ ಸದಸ್ಯ
ಪ್ರೊ.ಭಗವಾನ್ ಸ್ವಲ್ಪ ಮೆಂಟಲ್ ಆಗಿದ್ದಾರೆ. ಆದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಬೇಕು. ಅವರು ಕೂಡ ಒಳ್ಳೆಯ ಕುಟುಂಬದಿಂದ ಬಂದವರು. ಯಾರನ್ನೋ ಮೆಚ್ಚಿಸಲು ಈ ರೀತಿಯಾಗಿ ಮಾತನಾಡುತ್ತಾರೆ. ಅವರ ಹೇಳಿಕೆಯನ್ನು ತೀವ್ರವಾಗಿ ನಾನು ಖಂಡಿಸುತ್ತೇನೆ. ಯಾವುದೇ ಸಮುದಾಯದ ಬಗ್ಗೆ ಯಾರು ಕೂಡ ವಿವಾದಾತ್ಮಕ ಹೇಳಿಕೆಯನ್ನು ನೀಡಬಾರದು.
ಜಿ.ಟಿ.ದೇವೇಗೌಡ, ಶಾಸಕ
ಯಾವನೋ ಒಬ್ಬ ತಲೆ ತಿರುಕ ಭಗವಾನ್, ಒಕ್ಕಲಿಗರ ಬಗ್ಗೆ ಮಾತಾಡಿದ್ದಾರೆ. ಅವನೊಬ್ಬ ಮೆಂಟಲ್ ಗಿರಾಕಿ. ಅವಹೇಳನಕಾರಿಯಾಗಿ ಮಾತಾಡಿ ಒಕ್ಕಲಿಗ ಜನಾಂಗಕ್ಕೆ ಅವಮಾನ ಮಾಡಿದ್ದಾರೆ. ನಾನು ನಮ್ಮ ಸ್ವಾಮೀಜಿ ಜೊತೆ ಮಾತಾಡುತ್ತೇನೆ. ಭಗವಾನ್ ಕಾರ್ಯಕ್ರಮಕ್ಕೆ ಹೋಗುವವರು ಎಲ್ಲಾ ಕಾಂಗ್ರೆಸ್ನವರೇ. ರಕ್ಷಣೆ ಕೊಡುವವರೂ ಕಾಂಗ್ರೆಸ್ನವರು, ಬೆಂಬಲ ಕೊಡುವವರೂ ಕಾಂಗ್ರೆಸ್ನವರು. ಈಗ ಭಗವಾನ್ ಹೇಳಿಕೆಗೆ ಕಾಂಗ್ರೆಸ್ ಉತ್ತರಿಸಬೇಕು. ಕೂಡಲೇ ಅವನನ್ನು ಬಂಧಿಸಿ ಜೈಲಿಗಟ್ಟಬೇಕು. ಇಲ್ಲದಿದ್ದರೆ ಇದು ದೊಡ್ಡ ಗಲಾಟೆಗೆ ನಾಂದಿಯಾಗುತ್ತದೆ.
ಆರ್.ಅಶೋಕ್, ಮಾಜಿ ಸಚಿವ
ಒಕ್ಕಲಿಗರಷ್ಟು ಸಂಸ್ಕೃತಿ ಆಚರಣೆಯ ಸಮುದಾಯ ಬೇರೆ ಇಲ್ಲ. ಭಗವಾನ್ ಅವರಂತಹ ಬುದ್ಧಿ ಏರುಪೇರಾಗಿರುವ ವ್ಯಕ್ತಿಗಳು ನಮ್ಮ ಒಕ್ಕಲುತನದ ಬಗ್ಗೆ ತಿಳಿಸುವ ಮೂರ್ಖತನದ ಪ್ರಯತ್ನ ಬೇಕಿಲ್ಲ. ಕುವೆಂಪು ಹೆಸರು ಬಳಸಿಕೊಳ್ಳುವುದು ಬೇಡ. ನಿನಗೇನಾದರೂ ಶಕ್ತಿ, ತಾಕತ್ ಇದ್ದರೆ ನೀನು ಮಾತಾಡಪ್ಪ. ನಿನಗೆ ಭಗವಂತ ಕೊಟ್ಟ ನರ ಅಂತಾ ಏನಾದರೂ ಇದ್ದರೆ ಮಾತಾಡು.
ಅಶ್ವತ್ಥ್ ನಾರಾಯಣ್, ಮಾಜಿ ಸಚಿವ
ಇವರಷ್ಟೇ ಅಲ್ಲದೆ, ಹಲವು ರಾಜಕೀಯ ನಾಯಕರು ಭಗವಾನ್ ಹೇಳಿಕೆಯನ್ನು ಖಂಡಿಸಿದ್ದಾರೆ.



