ಶಿವಣ್ಣನ (Shivarajkumar) ಕಣ್ಣುಗಳಲ್ಲಿ ಪವರ್ ಇದೆ ಎಂದು ಉಪೇಂದ್ರ ಹೇಳ್ತಾನೆ ಇರ್ತಾರೆ. ಆದರೆ ಆ ಕಣ್ಣುಗಳನ್ನು ಅದ್ಭುತವಾಗಿ ಬಳಸಿಕೊಂಡವರು ಕಡಿಮೆ. ಇನ್ನು (OM) ಓಂ ಚಿತ್ರ ಶಿವಣ್ಣನ ಟ್ರೇಡ್ ಮಾರ್ಕ್ ಸಿನಿಮಾ. ಅದನ್ನು ಅಷ್ಟೇ ಅದ್ಭುತವಾಗಿ ಬೇರೆಯದೇ ರೀತಿಯಲ್ಲಿ ರೀ-ಕ್ರಿಯೇಟ್ ಮಾಡಲಾಗಿದೆ. ಶಿವಣ್ಣ ಅವರ 61ನೇ ಹುಟ್ಟುಹಬ್ಬವನ್ನು ಸಂಭ್ರಮದ ಹೊಳೆಯಾಗಿ ಹರಿಸಿದೆ ಘೋಸ್ಟ್ ಸಿನಿಮಾ. ಘೋಸ್ಟ್ (Ghost) ಚಿತ್ರದ ಬಿಗ್ ಡ್ಯಾಡಿ (Big Daddy) ವಿಡಿಯೋ ರಿಲೀಸ್ ಮಾಡಿ, ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ್ದಾರೆ ಶ್ರೀನಿ.
ವಿಡಿಯೋದ ಒಂದೊಂದು ದೃಶ್ಯವೂ ಬೆಂಕಿ. ಕೊಲ್ಲಲು ಬರುವ ವಿಲನ್ನುಗಳಿಗೆ ಬೆನ್ನ ಹಿಂದೆ ಟ್ಯಾಂಕರ್`ನ್ನೇ ಇಟ್ಟು ಹೆದರಿಸುವ, ಪಾನಿಪೂರಿಯನ್ನು ತಿನ್ನುವ ದೃಶ್ಯ.. ಸಿಗರೇಟು ಹಚ್ಚಿಕೊಳ್ಳುವ ದೃಶ್ಯವಂತೂ ಓಂನ್ನು ನೆನಪಿಸುತ್ತದೆ. ಅಭಿಮಾನಿಗಳು ಥ್ರಿಲ್..ಖುಷ್.. ಜೊತೆಗೆ ನೀನು ಗನ್ನಲ್ಲಿ ಎಷ್ಟು ಜನರನ್ನ ಹೆದರಿಸಿದ್ದೀಯೋ.. ಅದಕ್ಕಿಂತ ಹೆಚ್ಚು ಜನರನ್ನ ನಾನು ಕಣ್ಣಲ್ಲೇ ಹೆದರಿಸಿದ್ದೇನೆ.. ಎನ್ನೋ ಡೈಲಾಗ್..
ಶ್ರೀನಿ ನಿರ್ದೇಶನದ ಘೋಸ್ಟ್ ಚಿತ್ರ ದಸರಾ ಹೊತ್ತಿಗೆ ರಿಲೀಸ್ ಆಗುವಂತಿದೆ ಎನ್ನುತ್ತಿದ್ದಾರೆ ಖುದ್ದು ಶಿವಣ್ಣ. ಸಂದೇಶ್ ಪ್ರೊಡಕ್ಷನ್ಸ್‍ನಲ್ಲಿ ಶಿವಣ್ಣ ಇದೇ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಘೋಸ್ಟ್ ಚಿತ್ರದಲ್ಲಿ ಶಿವಣ್ಣ ಜೊತೆಗೆ ಅನುಪಮ್ ಖೇರ್, ಜಯರಾಂ, ಪ್ರಶಾಂತ್ ನಾರಾಯಣನ್, ಅರ್ಚನಾ ಜೋಯಿಸ್, ಸತ್ಯಪ್ರಕಾಶ್, ದತ್ತಣ್ಣ ಮೊದಲಾದವರು ನಟಿಸುತ್ತಿದ್ದಾರೆ. ಚಿತ್ರದಲ್ಲಿ ಶಿವ ರಾಜ್`ಕುಮಾರ್ ವಿಭಿನ್ನ ಶೇಡ್`ಗಳಲ್ಲಿ ನಟಿಸುತ್ತಿದ್ದು, ಘೋಸ್ಟ್ ಪಾತ್ರವೂ ಅವುಗಳಲ್ಲಿ ಒಂದು ಎಂದಿದ್ದಾರೆ ಶಿವಣ್ಣ.
ಅಂದಹಾಗೆ ಶಿವಣ್ಣ ಕೈಲಿ ಇನ್ನೂ 10-12 ಸಿನಿಮಾಗಳಿವೆ. ಕರಟಕ ದಮನಕ, ನೀ ಸಿಗೋವರೆಗೂ, 45 ಚಿತ್ರೀಕರವಾಗುತ್ತಿವೆ ಹಾಗೂ ಪ್ರೊಡಕ್ಷನ್ ಸ್ಟೇಜಿನಲ್ಲಿವೆ. ಬೈರತಿ ರಣಗಲ್ ಸೆಟ್ಟೇರಿದೆ. ಧೀರ, ಇನ್ಸ್`ಪೆಕ್ಟರ್ ವಿಕ್ರಂ ರಿಟನ್ರ್ಸ್, ಸತ್ಯಮಂಗಳ, ಗಣೇಶ್ ಜೊತೆಗೊಂದು, ಅಜೇಯ್ ರಾವ್ ಜೊತೆಗೊಂದು ಸಿನಿಮಾ ಅನೌನ್ಸ್ ಆಗಿವೆ. ಕಬ್ಜ 2 ಕ್ಯೂನಲ್ಲಿದೆ. ಟೋಟಲ್ಲಾಗಿ ಶಿವಣ್ಣ ಬ್ಯುಸಿಯೋ ಬ್ಯುಸಿ. Rajkumar) ಕಣ್ಣುಗಳಲ್ಲಿ ಪವರ್ ಇದೆ ಎಂದು ಉಪೇಂದ್ರ ಹೇಳ್ತಾನೆ ಇರ್ತಾರೆ. ಆದರೆ ಆ ಕಣ್ಣುಗಳನ್ನು ಅದ್ಭುತವಾಗಿ ಬಳಸಿಕೊಂಡವರು ಕಡಿಮೆ. ಇನ್ನು ಓಂ ಚಿತ್ರ ಶಿವಣ್ಣನ ಟ್ರೇಡ್ ಮಾರ್ಕ್ ಸಿನಿಮಾ. ಅದನ್ನು ಅಷ್ಟೇ ಅದ್ಭುತವಾಗಿ ಬೇರೆಯದೇ ರೀತಿಯಲ್ಲಿ ರೀ-ಕ್ರಿಯೇಟ್ ಮಾಡಲಾಗಿದೆ. ಶಿವಣ್ಣ ಅವರ 61ನೇ ಹುಟ್ಟುಹಬ್ಬವನ್ನು ಸಂಭ್ರಮದ ಹೊಳೆಯಾಗಿ ಹರಿಸಿದೆ ಘೋಸ್ಟ್ ಸಿನಿಮಾ. ಘೋಸ್ಟ್ ಚಿತ್ರದ ಬಿಗ್ ಡ್ಯಾಡಿ ವಿಡಿಯೋ ರಿಲೀಸ್ ಮಾಡಿ, ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ್ದಾರೆ ಶ್ರೀನಿ.
ವಿಡಿಯೋದ ಒಂದೊಂದು ದೃಶ್ಯವೂ ಬೆಂಕಿ. ಕೊಲ್ಲಲು ಬರುವ ವಿಲನ್ನುಗಳಿಗೆ ಬೆನ್ನ ಹಿಂದೆ ಟ್ಯಾಂಕರ್`ನ್ನೇ ಇಟ್ಟು ಹೆದರಿಸುವ, ಪಾನಿಪೂರಿಯನ್ನು ತಿನ್ನುವ ದೃಶ್ಯ.. ಸಿಗರೇಟು ಹಚ್ಚಿಕೊಳ್ಳುವ ದೃಶ್ಯವಂತೂ ಓಂನ್ನು ನೆನಪಿಸುತ್ತದೆ. ಅಭಿಮಾನಿಗಳು ಥ್ರಿಲ್..ಖುಷ್.. ಜೊತೆಗೆ ನೀನು ಗನ್ನಲ್ಲಿ ಎಷ್ಟು ಜನರನ್ನ ಹೆದರಿಸಿದ್ದೀಯೋ.. ಅದಕ್ಕಿಂತ ಹೆಚ್ಚು ಜನರನ್ನ ನಾನು ಕಣ್ಣಲ್ಲೇ ಹೆದರಿಸಿದ್ದೇನೆ.. ಎನ್ನೋ ಡೈಲಾಗ್..
ಶ್ರೀನಿ ನಿರ್ದೇಶನದ ಘೋಸ್ಟ್ ಚಿತ್ರ ದಸರಾ ಹೊತ್ತಿಗೆ ರಿಲೀಸ್ ಆಗುವಂತಿದೆ ಎನ್ನುತ್ತಿದ್ದಾರೆ ಖುದ್ದು ಶಿವಣ್ಣ. ಸಂದೇಶ್ ಪ್ರೊಡಕ್ಷನ್ಸ್‍ನಲ್ಲಿ ಶಿವಣ್ಣ ಇದೇ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಘೋಸ್ಟ್ ಚಿತ್ರದಲ್ಲಿ ಶಿವಣ್ಣ ಜೊತೆಗೆ ಅನುಪಮ್ ಖೇರ್, ಜಯರಾಂ, ಪ್ರಶಾಂತ್ ನಾರಾಯಣನ್, ಅರ್ಚನಾ ಜೋಯಿಸ್, ಸತ್ಯಪ್ರಕಾಶ್, ದತ್ತಣ್ಣ ಮೊದಲಾದವರು ನಟಿಸುತ್ತಿದ್ದಾರೆ. ಚಿತ್ರದಲ್ಲಿ ಶಿವ ರಾಜ್`ಕುಮಾರ್ ವಿಭಿನ್ನ ಶೇಡ್`ಗಳಲ್ಲಿ ನಟಿಸುತ್ತಿದ್ದು, ಘೋಸ್ಟ್ ಪಾತ್ರವೂ ಅವುಗಳಲ್ಲಿ ಒಂದು ಎಂದಿದ್ದಾರೆ ಶಿವಣ್ಣ.
ಅಂದಹಾಗೆ ಶಿವಣ್ಣ ಕೈಲಿ ಇನ್ನೂ 10-12 ಸಿನಿಮಾಗಳಿವೆ. ಕರಟಕ ದಮನಕ, ನೀ ಸಿಗೋವರೆಗೂ, 45 ಚಿತ್ರೀಕರವಾಗುತ್ತಿವೆ ಹಾಗೂ ಪ್ರೊಡಕ್ಷನ್ ಸ್ಟೇಜಿನಲ್ಲಿವೆ. ಬೈರತಿ ರಣಗಲ್ ಸೆಟ್ಟೇರಿದೆ. ಧೀರ, ಇನ್ಸ್`ಪೆಕ್ಟರ್ ವಿಕ್ರಂ ರಿಟನ್ರ್ಸ್, ಸತ್ಯಮಂಗಳ, ಗಣೇಶ್ ಜೊತೆಗೊಂದು, ಅಜೇಯ್ ರಾವ್ ಜೊತೆಗೊಂದು ಸಿನಿಮಾ ಅನೌನ್ಸ್ ಆಗಿವೆ. ಕಬ್ಜ 2 ಕ್ಯೂನಲ್ಲಿದೆ. ಟೋಟಲ್ಲಾಗಿ ಶಿವಣ್ಣ ಬ್ಯುಸಿಯೋ ಬ್ಯುಸಿ.