ಕಾಮಸೂತ್ರ ಎಂದರೆ ಅದು ಕೇವಲ ಸೆಕ್ಸ್ ಬಗ್ಗೆ ಇರುವ ಗ್ರಂಥವಲ್ಲ. ಅದು ಒಂದು ವಿಜ್ಞಾನವೂ ಹೌದು. ಅದನ್ನು ಕೇವಲ ಪೋಲಿ ಪುಸ್ತಕಗಳ ಮಟ್ಟಿಗೆ ಇಳಿಸಲಾಗಿದೆ. ಈಗ ಬರ್ತಿರೋ ಒಂದು ರಿಯಾಲಿಟಿ ಶೋ, ಅದಕ್ಕೆ ತಕ್ಕಂತೆಯೇ ಮಾಡ್ತಾ ಇದೆ. ಇಲ್ಲಿ ʻಕಾಮಸೂತ್ರʼದ ಹೆಸರಲ್ಲಿ ಎಲ್ಲವೂ ಖುಲ್ಲಂಖುಲ್ಲ. ಬ್ರಾಡ್ ಮೈಂಡೆಡ್ ಪೀಪಲ್, ಜಾಲಿ ಜಾಲಿ ವ್ಯಕ್ತಿಗಳೂ ನಾಚಿಕೆಯಿಂದ ತಲೆ ತಗ್ಗಿಸುವಂತೆ ಇದೆ ಈ ರಿಯಾಲಿಟಿ ಶೋ.
ಈ ಹೌಸ್ ಅರೆಸ್ಟ್ ಎನ್ನುವುದು ಬಿಗ್ ಬಾಸ್ ಮಾದರಿಯ ಶೋ. ಉಲ್ಲು ಅನ್ನೋ ಆಪ್ ಮತ್ತು ಯೂಟ್ಯೂಬಿನಲ್ಲಿ ಲಭ್ಯ ಇದೆ. ಇದರಲ್ಲಿ ಅನೇಕ ಯುವಕ-ಯುವತಿಯರು ಭಾಗವಹಿಸಿದ್ದಾರೆ. ಸಭ್ಯತೆಯ ಗಡಿ ಮೀರಿದ ಟಾಸ್ಕ್ಗಳನ್ನೇ ಕೊಡ್ತಾರೆ. ನಿರೂಪಕನ ಹೆಸರು ಏಜಾಜ್ ಖಾನ್. ಈ ಶೋ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೇ ಶುರುವಾಗಿದೆ. ಈ ಅಭಿಯಾನದಲ್ಲಿ ಸಂಸದರು, ಶಾಸಕರೂ ಕೂಡಾ ಸೇರಿದ್ದಾರೆ ಎನ್ನುವುದು ವಿಶೇಷ. ಯುವತಿಯೊಬ್ಬಳಿಗೆ ಕಾಮಸೂತ್ರದ ಭಂಗಿಗಳು ಗೊತ್ತಿಲ್ಲ ಎಂದಾಗ ನಿರೂಪಕ ಅಜೀಜ್ ಖಾನ್ ಇನ್ನೂ ಅವುಗಳನ್ನೆಲ್ಲ ಟ್ರೈ ಮಾಡಿಲ್ವಾ ಎನ್ನುತ್ತಾನೆ. ನೀನು ಬದುಕಿರೋದೆ ವ್ಯರ್ಥ ಎಂಬ ಮುಖಭಾವ ಪ್ರದರ್ಶನ ಮಾಡ್ತಾನೆ. ಆನಂತರ ಕೆಲವು ಭಂಗಿಗಳ ಆಸನ ಪ್ರದರ್ಶನವೂ ನಡೆಯುತ್ತದೆ. ಓಪನ್ ಆಗಿಯೇ..
ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಒಟಿಟಿ, ಸೋಷಿಯಲ್ ಮೀಡಿಯಾಗಳಿಗೆ ಸೆನ್ಸಾರ್ ಬೇಕೇ.. ಬೇಡವೇ..ಹಾಗಿದ್ದರೆ ಒಟಿಟಿ, ಸೊಷಿಯಲ್ ಮೀಡಿಯಾಗಳಿಗೆ ಒಂದು ನೀತಿ ನಿಯಮ ರೂಪಿಸಿ ಎಂದು ಕೇಂದ್ರಕ್ಕೆ ನೋಟಿಸ್ ಕೊಟ್ಟಿದೆ. ಒಟಿಟಿ ವೇದಿಕೆಗಳಿಗೂ ನೊಟೀಸ್ ಕೊಟ್ಟಿದೆ. ಹೌದು, ಸೆನ್ಸಾರ್ ಬೇಕೇ ಬೇಕು ಎನ್ನುವುದಕ್ಕೆ ಇದೀಗ ಉಲ್ಲೂ ಒಟಿಟಿಯಲ್ಲಿ ನಡೆಯುತ್ತಿರುವ ರಿಯಾಲಿಟಿ ಶೋ ಸಾಕ್ಷಿ ಕೊಟ್ಟಿದೆ.
ರಿಯಾಲಿಟಿ ಶೋ ಹೆಸರು ಹೌಸ್ ಅರೆಸ್ಟ್. ಈ ಶೋನಲ್ಲಿ ಕಾಮಸೂತ್ರದ ಭಂಗಿಗಳ ಬಗ್ಗೆ ಹೇಳಿಕೊಡ್ತಾರೆ. ಅದನ್ನು ಸ್ಟೇಜ್ ಮೇಲೆ ಮಾಡಿ ತೋರಿಸ್ತಾರೆ. ಪೊಸಿಷನ್ನುಗಳ ಬಗ್ಗೆ ಡೀಟೈಲ್ ಆಗಿ ಮಾತನಾಡ್ತಾರೆ. ಯಾವ ರೀತಿ ಕಿಸ್ಸಿಂಗ್ ಮಾಡುವುದು ಎನ್ನುವುದೂ ಕೂಡಾ ಇಲ್ಲಿ ಒಂದು ಟಾಸ್ಕ್. ಎಲ್ಲರ ಎದುರು ಪ್ಯಾಂಟಿ, ಬ್ರಾ ಸೇರಿದಂತೆ ಎಲ್ಲ ಬಟ್ಟೆ ಬಿಚ್ಚುವುದು, ಸೈಜ್ ಹೇಳುವುದು ಕೂಡಾ ಒಂದು ಟಾಸ್ಕ್. ಸದ್ಯದ ಮಟ್ಟಿಗೆ ಪ್ರಸಾರವಾಗಿರೋ ಎಪಿಸೋಡುಗಳಲ್ಲಿ ʻಅದೊಂದನ್ನುʼ ಮಾತ್ರ ಕ್ಯಾಮೆರಾ ಎದುರು ಮಾಡಿಲ್ಲ.
ಪ್ರಿಯಾಕಾ ತ್ರಿವೇದಿ, ಶಿವಸೇನಾ ಸಂಸದೆ : ‘ಮಾಹಿತಿ ಮತ್ತು ಪ್ರಸಾರ ಖಾತೆಯ ಬ್ಯಾನ್ನಿಂದ ಉಲ್ಲು ಆ್ಯಪ್, ಆಲ್ಟ್ ಬಾಲಾಜಿ ರೀತಿಯ ಒಟಿಟಿಗಳು ತಪ್ಪಿಸಿಕೊಂಡಿವೆ. ಈ ವಿಷಯವನ್ನು ಸಮಿತಿಯ ಗಮನಕ್ಕೆ ತಂದಿದ್ದೇನೆ. ಪ್ರತಿಕ್ರಿಯೆಯಾಗಿ ಕಾದಿದ್ದೇನೆ’
ನಿಶಿಕಾಂತ್ ದುಬೆ, ಬಿಜೆಪಿ ಸಂಸದ : ‘ಇಂಥದ್ದೆಲ್ಲ ನಡೆಯೋದಿಲ್ಲ. ಇದರ ವಿರುದ್ಧ ನಮ್ಮ ಸಮಿತಿ ಕ್ರಮ ಕೈಗೊಳ್ಳಲಿದೆ’
ಬರುಣ್ ರಾಜ್ ಸಿಂಗ್, ಬಿಹಾರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ : ಅಶ್ವಿನಿ ವೈಷ್ಣವ್ ಅವರೇ, ನಮ್ಮ ಮಕ್ಕಳನ್ನು ಉಳಿಸಿ ಎನ್ನುತ್ತಿದ್ದಾರೆ.
ಒಟ್ಟಿನಲ್ಲಿ ಒಟಿಟಿಯಲ್ಲಿ ಎಲ್ಲವೂ ಫ್ರಿಯಾಗಿ ಸಿಗುತ್ತಿದೆ. ಇನ್ನು ಭಾರತದ ಪೋಷಕರನ್ನು ದೇವರೇ ಕಾಪಾಡಬೇಕು.