ಮೀಡಿಯಾಗಳ ಹಣೆಪಾಡೇ ಇದು. ಮೀಡಿಯಾಗಳನ್ನು ಕಾಂಗ್ರೆಸ್ ಮತ್ತು ಅವರ ಬೆಂಬಲಿತ ಪಕ್ಷಗಳು ಟೀಕೆ ಮಾಡುತ್ತಲೇ ಇರುತ್ತವೆ. ಬಿಜೆಪಿ ಮತ್ತು ಎನ್‌ಡಿಎ ಒಕ್ಕೂಟದಲ್ಲಿ ಇಲ್ಲದ ಪಕ್ಷಗಳ ಪಾಲಿಗೆ ಮೀಡಿಯಾಗಳು ʻಗೋದಿ ಮೀಡಿಯಾʼ ಆಗಿದ್ದರೆ, ಕಾಂಗ್ರೆಸ್ ಪಕ್ಷವನ್ನು ಸಪೋರ್ಟ್ ಮಾಡುವ ಮಾಧ್ಯಮಗಳು ಗಂಜಿ ಮೀಡಿಯಾ ಆಗಿವೆ. ಹೀಗಿರುವಾಗಲೇ ಈಗ ಪ್ರಧಾನಿ ನರೇಂದ್ರ ಮೋದಿಯವರೂ ಮೀಡಿಯಾಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೋದಿಯವರ ಮಾಧ್ಯಮಗಳ ಕುರಿತ ಟೀಕೆಗೆ ಕಾರಣ ಇಷ್ಟೇ. ಇತ್ತೀಚೆಗೆ ಕಾಂಗ್ರೆಸ್ ನಡೆಸಿದ ಪ್ರತಿಭಟನೆಗಳನ್ನು ಮಾಧ್ಯಮಗಳು ವಿರೋಧ ಪಕ್ಷಗಳ ಪ್ರತಿಭಟನೆ ಎಂದು ವರದಿ ಮಾಡಿದ್ದವು. ಮೊದಲನೆಯದ್ದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರ್ಚಿಯತ್ತ ಮಹಿಳಾ ಸಂಸದರು ನುಗ್ಗಿದ್ದ ಘಟನೆ, ಎರಡನೆಯದ್ದು ವಿಶ್ವ ಮಟ್ಟದ ಎಐ ಶೃಂಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅರೆಬೆತ್ತಲೆ ಪ್ರತಿಭಟನೆ. ಈ ಎರಡೂ ಘಟನೆಗಳನ್ನು ಪ್ರಸ್ತಾಪಿಸಿರುವ ಮೋದಿ ಮಾಧ್ಯಮಗಳು ಇದನ್ನು ಕಾಂಗ್ರೆಸ್ ಪ್ರತಿಭಟನೆ ಎಂದು ಕರೆಯದೇ, ವಿಪಕ್ಷಗಳ ಪ್ರತಿಭಟನೆ ಎಂದು ಉಲ್ಲೇಖಿಉತ್ತಿವೆ. ಮಾಧ್ಯಮಗಳೇಕೆ ಕಾಂಗ್ರೆಸ್‌ನ್ನು ರಕ್ಷಿಸುತ್ತಿವೆ ತಿಳಿಯುತ್ತಿಲ್ಲ” ಎಂದು ಹರಿಹಾಯ್ದಿದ್ದಾರೆ.
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಹಮ್ಮಿಕೊಂಡಿದ್ದ AI ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ ಯುವ ಕಾಂಗ್ರೆಸ್ ನಡೆಸಿದ ಅರೆನಗ್ನ ಪ್ರತಿಭಟನೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ತೀವ್ರವಾಗಿ ಕೆರಳಿಸಿದೆ. ಪ್ರಧಾನಿ ಮೋದಿ ತಮ್ಮ ಸಿಟ್ಟನ್ನು ಮಾಧ್ಯಮಗಳ ವಿರುದ್ಧವೂ ಹೊರಹಾಕಿದ್ದಾರೆ. AI ಇಂಪ್ಯಾಕ್ಟ್ ಶೃಂಗಸಭೆ ಆವರಣದ ಹೊರಗೆ ಯುವ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯನ್ನು ʻಪ್ರಜಾಪ್ರಭುತ್ವದ ಬೆತ್ತಲೆ ಮಾಡುವ ವಿಧಾನʼ ಎಂದು ಕರೆದಿರುವ ಮೋದಿ ಈಗಾಗಲೇ ಬೆತ್ತಲಾಗಿರುವ ಕಾಂಗ್ರೆಸ್‌ಗೆ ಅರೆ ಬೆತ್ತಲಾಗುವ ಅಗತ್ಯ ಏನಿತ್ತು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ದೆಹಲಿಯಲ್ಲಿ ನಡೆದ ನಾಚಿಕೆಗೇಡಿನ ಘಟನೆಯ ನಂತರ, ವಿರೋಧ ಪಕ್ಷದ ಇತರ ಮಿತ್ರಪಕ್ಷಗಳು ಕಾಂಗ್ರೆಸ್‌ನ್ನು ಬಹಿರಂಗವಾಗಿ ಟೀಕಿಸುವ ಧೈರ್ಯವನ್ನು ತೋರಿಸಿವೆ. ಟಿಎಂಸಿ, ಡಿಎಂಕೆ, ಬಿಎಸ್‌ಪಿ ಮತ್ತು ಎನ್‌ಸಿಯಂತಹ ಪಕ್ಷಗಳು ಈ ಕೀಳು ಪ್ರತಿಭಟನೆಯಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ. ಸತ್ಯದ ಪರವಾಗಿ ನಿಂತಿದ್ದಕ್ಕಾಗಿ ನಾನು ಈ ಮಿತ್ರಪಕ್ಷಗಳಿಗೆ ಸಾರ್ವಜನಿಕವಾಗಿ ಧನ್ಯವಾದ ಹೇಳುತ್ತೇನೆ ಎಂದಿರುವ ಮೋದಿ, ಮಾಧ್ಯಮಗಳು ವಿರೋಧ ಪಕ್ಷದ ಜೊತೆ ಕಾಂಗ್ರೆಸ್‌ನ್ನು ಸೇರಿಸುವ ಬದಲು ಅದರ ಹೆಸರನ್ನು ಪ್ರತ್ಯೇಕವಾಗಿ ದೇಶದ ಜನರ ಮುಂದಿಡಬೇಕು. ಕಾಂಗ್ರೆಸ್ ಪಾಪವನ್ನು ಬೇರೆ ಪಕ್ಷಗಳ ಹೆಗಲಿಗೆ ಹೊರಿಸುವ ತಪ್ಪು ಮಾಡಬಾರದು. ಮಾಧ್ಯಮಗಳು ಕಾಂಗ್ರೆಸ್ ಎಂಬ ಪದವನ್ನು ಬಳಸದೇ ವಿರೋಧ ಪಕ್ಷ ಎಂಬ ಪದವನ್ನು ಮಾತ್ರ ಬಳಸುತ್ತಿರುವುದು ಏಕೆ ಎಂದು ಅರ್ಥವಾಗುತ್ತಿಲ್ಲ. ನೀವು ಕಾಂಗ್ರೆಸ್‌ನ್ನು ಏಕೆ ರಕ್ಷಿಸುತ್ತಿದ್ದೀರಿ.. ಎಂದು ಮಾಧ್ಯಮಗಳನ್ನು ಪ್ರಶ್ನೆ ಮಾಡಿದ್ದಾರೆ.
ಒಟ್ಟಿನಲ್ಲಿ ಮಾಧ್ಯಮಗಳು ಯಾರನ್ನು ಟೀಕೆ ಮಾಡಿದರೂ.. ಕಷ್ಟ ಕಷ್ಟ.



