ಉಪೇಂದ್ರ ಅವರ ಇಡೀ ಕುಟುಂಬವೇ ಹ್ಯಾಕ್ ಆಗಿದೆ. ಉಪೇಂದ್ರ, ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ, ಮಗ ಆಯುಷ್ ಉಪೇಂದ್ರ.. ಮೂವರೂ ದುಡ್ಡು ಕಳ್ಕೊಂಡಿದ್ದಾರೆ. ಆಕ್ಚುವಲಿ ಪ್ರಿಯಾಂಕಾಗೆ ಆಗಿದ್ದು ಹ್ಯಾಕ್ ಅಲ್ಲ.. ಅವರೇ ಮಾಡಿದ ತಪ್ಪು. ಅವರ ಬಳಿ ಇರೋದು ಐಫೋನ್. ಹೀಗಿದ್ರೂ ಅವರ ಫೋನ್ ಹ್ಯಾಕ್ ಆಗೋಕೆ ಹೇಗೆ ಸಾಧ್ಯ ಅಂತೀರಾ..
ಈ ತಪ್ಪು ಮಾಡಿದ್ರೆ.. ಐಫೋನ್ ಇದ್ರೂ ಅಷ್ಟೇ, ಎಸ್-24 ಮೊಬೈಲ್ ಇದ್ರೂ ಅಷ್ಟೇ, ಅಂಡ್ರಾಯ್ಡ್ ಮೊಬೈಲ್ ಇದ್ರೂ ಅಷ್ಟೇ.. ನೋ ಯೂಸ್.
ವಂಚಕರಿಗೆ *21*(10 ನಂ)# ವೆಪನ್..!
ಉಪೇಂದ್ರ, ಪ್ರಿಯಾಂಕಾ ಹಾಗೂ ಆಯುಷ್, ಮೂವರದ್ದೂ ಐಫೋನ್. ಹ್ಯಾಕ್ ಆಗಿದ್ದು ಹೇಗೆ ಎಂದು ನೋಡಿದರೆ.. ವಾಸ್ತವವಾಗಿ ಅದು ಸೈಬರ್ ಕಳ್ಳರು ಸರ್ಕಸ್ ಮಾಡಿ ಹ್ಯಾಕ್ ಮಾಡಿದ್ದಲ್ಲ. ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿ ಇಬ್ಬರೂ ತಮ್ಮ ಅಜ್ಞಾನದಿಂದ ಮಾಡಿಕೊಂಡ ಪ್ರಮಾದ ಅದು. ಅವರಿಗೆ ವೆಪನ್ ಆಗಿರುವುದು *21*(10 ನಂ)#.
ಹೇಗೆ ನಡೀತು ಚೀಟಿಂಗ್..?
ಇತ್ತೀಚೆಗೆ ದುಬೈಗೆ ಹೋಗಿದ್ದಾಗ ಅಲ್ಲಿ ಏನನ್ನೋ ಬುಕ್ ಮಾಡಿದ್ದಾರೆ. ಅದು ಸದಾಶಿನಗರದ ಮನೆಗೆ ರೀಚ್ ಆಗುವಾಗ ಡೆಲಿವರಿ ಬಾಯ್, ಡೆಲಿವರಿ ಮಾಡೋದಕ್ಕೆ ಅಡ್ರೆಸ್ ಸಿಕ್ತಾ ಇಲ್ಲ ಅಂದಿದ್ದಾನೆ. ಇರಬಹುದೇನೋ.. ಕಾಮನ್ ಮ್ಯಾಟರ್ ಅಲ್ವಾ ಅಂದ್ಕೋಂಡಿದ್ದಾರೆ ಪ್ರಿಯಾಂಕಾ.
ಆಮೇಲೆ.. ನಾವು ಹೇಳುವ ನಂಬರ್ ಅನ್ನು ಡಯಲ್ ಮಾಡಿ, ತಕ್ಷಣ ಆರ್ಡರ್ ಸಿಗುತ್ತೆ ಅಂದಿದ್ದಾನೆ. ಪ್ರಿಯಾಂಕಾ ಆತ ಹೇಳಿದ್ದ ನಂಬರ್ ಡಯಲ್ ಮಾಡಿದ ತಕ್ಷಣವೇ ಫೋನ್ ಹ್ಯಾಕ್ ಆಗಿದೆ. ಅದಾದ ನಂತರ ಉಪೇಂದ್ರ ನಂಬರಿಂದ ಡಯಲ್ ಮಾಡಿದ್ದಾರೆ. ಅವರ ಫೋನ್ ಕೂಡಾ ಹ್ಯಾಕ್ ಆಗಿದೆ. ಆಯುಷ್ ನಂಬರಿಂದಲೂ ಸೇಮ್ ಪ್ಯಾಟರ್ನ್. ಮೂವರಿಂದಲೂ ತಲಾ 55 ಸಾವಿರ ಇಸ್ಕೊಂಡಿರೋ ವಂಚಕ, ಆಮೇಲೆ ಮಿಸ್ಸಿಂಗ್.
ಸೈಬರ್ ವಂಚಕರು ಮಾಡಿದ್ದೇನು..?
ಸೈಬರ್ ವಂಚಕರು ಮಾಡಿರುವುದು ಇಷ್ಟೇ. ಬೇರೆ ನಂಬರ್ ಕೊಡ್ತೇನೆ. ಮೊದಲು ಸ್ಟಾರ್ ಒತ್ತಿ. ನಂತರ 21 ಒತ್ತಿ. ನಾವು ಹೇಳಿದ ನಂಬರ್ ಡಯಲ್ ಮಾಡಿ. ಆಮೇಲೆ ಹ್ಯಾಷ್ ಒತ್ತಿ ಎಂದಿದ್ದಾರೆ. ಅಂದ್ರೆ.. ʻʻ*21 (ಅವರು ಹೇಳಿದ 10 ನಂಬರ್) #ʼʼ ಇಷ್ಟು ಹೇಳಿದ್ದಾರೆ. ಇವರೂ ಅದನ್ನೇ ಮಾಡಿದ್ದಾರೆ. ಅಷ್ಟೇ..
ಇದು ಕೀಪ್ಯಾಡ್ ಮಾತ್ರವೇ ಇದ್ದ ಕಾಲದಿಂದಲೂ ಬಳಸುವ ಹಳೆಯ ಟೆಕ್ನಿಕ್. ಇಷ್ಟು ಮಾಡಿದರೆ, ನಿಮಗೆ ಬರುವ ಫೋನ್, ಮೆಸೇಜ್ ಆ ವ್ಯಕ್ತಿ ಡಯಲ್ ಮಾಡಿಸಿದ್ದ ನಂಬರಿಗೆ ಹೋಗುತ್ತದೆ. ಅಂದ್ರೆ ಕಾಲ್ ಫಾರ್ವರ್ಡ್ ಆಗಿರುತ್ತದೆ. ನಿಮ್ಮ ಫೋನ್ ಇದ್ದರೂ, ಅದರ ಕಂಟ್ರೋಲ್ ನಿಮ್ಮ ಕಡೆ ಇರಲ್ಲ. ಒಟಿಪಿ ಕೂಡಾ ಆ ನಂಬರಿಗೇ ಹೋಗುತ್ತದೆ.
ಉಪ್ಪಿ *21*9279295167# ನಂಬರಿಗೆ ಕಾಲ್ ಮಾಡಿ ತಗ್ಲಾಕ್ಕೊಂಡಿದ್ದಾರೆ. ಕಳೆದುಕೊಂಡಿರೋದು 1 ಲಕ್ಷದ 65 ಸಾವಿರ. ಮೊದಲು ಪ್ರಿಯಾಂಕಾ, ನಂತರ ಉಪೇಂದ್ರ.. ಆನಂತರ ಅವರ ಮಗ ಆಯುಷ್, ಮೂವರ ಬಳಿಯೂ ತಲಾ 55 ಸಾವಿರ ಪಡೆದು ಮೋಸ ಮಾಡಿದ್ದಾನೆ ಸೈಬರ್ ಚೀಟರ್.
ಉಪೇಂದ್ರ ಪ್ರಿಯಾಂಕಾ ಅವರು ಮಾಡಿಕೊಂಡಿರುವ ಎಡವಟ್ಟು ಇದೇ. ಸಾಮಾನ್ಯವಾಗಿ ನೀವು ಬುಕ್ ಮಾಡಿದಾಗ ನೀವು ಒಂದು ನಂಬರ್ ಕೊಟ್ಟಿರುತ್ತೀರಿ. ಡೆಲಿವರಿ ಕೊಡುವ ವೇಳೆ ಮತ್ತೆ ಬೇರೆ ನಂಬರ್ ಕೊಡಬಾರದು. ಕೊಡುವಂತೆಯೂ ಇಲ್ಲ. ಇದು ಜನರಲ್ ನಾಲೆಡ್ಜ್. ಅದನ್ನೂ ಮೀರಿ ಪ್ರಿಯಾಂಕಾ ಮತ್ತು ಉಪೇಂದ್ರ ಎಡವಟ್ಟು ಮಾಡಿಕೊಂಡಿದ್ಧಾರೆ. ದುಡ್ಡು ಹೊಗೆ ಆಗಿದೆ. ಅಷ್ಟೇ.
ಕನ್ನಡ ಚಿತ್ರರಂಗದ ಬುದ್ದಿವಂತ ಅಂತಾನೇ ಫೇಮಸ್ ಆಗಿರುವ, ಅಡ್ವಾನ್ಸ್ ಟೆಕ್ನಾಲಜಿಗಳ ಬಗ್ಗೆ ಮಾತನಾಡುವ ಉಪೇಂದ್ರ, ಪತ್ನಿ ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಫೋನ್ ಹ್ಯಾಕ್ ಆಗಿದೆ ಎಂದು ದೂರು ಕೊಟ್ಟಿದ್ದಾರೆ. ಸಾಮಾನ್ಯವಾಗಿ ಸೈಬರ್ ವಂಚಕರು ಉದ್ಯಮಿಗಳ ಫೋನ್ ಹ್ಯಾಕ್ ಮಾಡಿ ವಂಚಿಸುತ್ತಿದ್ದರು. ಅದು ಉಪೇಂದ್ರ ಫ್ಯಾಮಿಲಿಗೂ ತಟ್ಟಿದೆ.



