ಧರ್ಮಸ್ಥಳ ತಲೆಬುರುಡೆ ಕೇಸ್ ತನಿಖೆಯ ಮೊದಲ ಹಂತ ಮುಕ್ತಾಯದ ಸ್ಟೇಜ್ ತಲುಪಿದೆ. 8ನೇ ದಿನ 13ನೇ ಪಾಯಿಂಟ್ ಕೂಡಾ ಅಗೆಯಲಾಗುತ್ತಿದೆ. ಇದುವರೆಗೆ ಆಗಿರುವ 12 ಪಾಯಿಂಟುಗಳಲ್ಲಿ ಕೇವಲ 6ನೇ ಪಾಯಿಂಟಿನಲ್ಲಿ ಮಾತ್ರ ಅಸ್ಥಿಪಂಜರ ದೊರೆತಿದೆ. ಅದೂ ಕೂಡಾ ಸುಮಾರು 40 ವರ್ಷಗಳ ಹಿಂದಿನ ಮೃತದೇಹ ಎನ್ನಲಾಗುತ್ತಿದೆ. ಹೀಗಿರುವಾಗಲೇ.. ಇಡೀ ಪ್ರಕರಣದ ತನಿಖೆಗೆ ಮೆಗಾ ಟ್ವಿಸ್ಟ್ ಸಿಕ್ಕಿದೆ.
ಅಂದಹಾಗೆ ಧರ್ಮಸ್ಥಳದಲ್ಲಿ ಈಗ ದೇಶಾದ್ಯಂತ ಸುದ್ದಿ ಸದ್ದು ಮಾಡ್ತಿರೊ ತಲೆಬುರುಡೆ ಕೇಸ್ ಹೊರಬಂದಿದ್ದು ಹಣ ಹೂತಿಟ್ಟವನಿಗೆ ಪಾಪಪ್ರಜ್ಞೆ ಕಾಡಿದ್ದರಿಂದ ಎನ್ನಲಾಗಿತ್ತು. 1995-2014ರ ವರೆಗೂ ಧರ್ಮಸ್ಥಳದಲ್ಲಿ ಹೆಣ ಹೂತಿದ್ದ ಅನಾಮಿಕ ಭೀಮ, ಧರ್ಮಸ್ಥಳ ಬಿಟ್ಟು 11 ವರ್ಷದ ನಂತರ ಪಾಪಪ್ರಜ್ಞೆ ಕಾಡಿ, ವಕೀಲರ ಮೂಲಕ ಕೋರ್ಟ್, ಪೊಲೀಸ್ ಇಲಾಖೆ ಸಂಪರ್ಕಿಸಿ ನಾನೇ ನೂರಾರು ಶವ ಹೂತಿಟ್ಟಿದ್ದೇನೆ. ಹಲವು ಹೆಣಗಳು ಅತ್ಯಾಚಾರಕ್ಕೊಳಗಾಗಿದ್ದವು. ಕೊಲೆಯಾಗಿದ್ದವು ಎಂದೆಲ್ಲ ಹೇಳಿದ್ದ. ಅಷ್ಟೇ ಅಲ್ಲ, ತಾನು ಹೆಣ ಹೂತಿಟ್ಟ ಜಾಗಗಳನ್ನು ತೋರಿಸುತ್ತೇನೆ ಎಂದೂ ಹೇಳಿದ್ದ. ಇದೀಗ 8ನೇ ದಿನ. 13ನೇ ಪಾಯಿಂಟ್ ಅಗೆಯಬೇಕು.
ಹೀಗಿರುವಾಗಲೇ..
ಧರ್ಮಸ್ಥಳದ ಪರ ಹೋರಾಟಗಾರರಾಗಿರುವ ವಸಂತ್ ಗಿಳಿಯಾರ್ ಇಡೀ ಪ್ರಕರಣ ಒಂದು ಸಂಚು ಎಂದು ವಾದಿಸುತ್ತಲೇ ಇದ್ದರು. ಇದೀಗ ಸೌಜನ್ಯ ಪರ ಹೋರಾಟದಲ್ಲಿ ಸಕ್ರಿಯವಾಗಿದ್ದ ವ್ಯಕ್ತಿಯೊಬ್ಬರು ಗಿಳಿಯಾರ್ ಸಂಪರ್ಕಕ್ಕೆ ಬಂದಿದ್ದಾರಂತೆ. ಗಿಳಿಯಾರ್ ಅವರ ಪ್ರಕಾರ ಅವರ ಬಳಿಗೆ ಬಂದಿರುವ ಆ ವ್ಯಕ್ತಿ ಸೌಜನ್ಯ ಪರ ಹೋರಾಟಗಾರರ ಜೊತೆ ಫೋನ್ ಸಂಪರ್ಕದಲ್ಲಿದ್ದರಂತೆ. ಈಗ ಹೇಳುತ್ತಿರುವ ಈ ಶವ ಹೂತಿಟ್ಟ ಪ್ರಕರಣದ ಸಂಚು ಇವತ್ತಿನದ್ದೋ. 6 ತಿಂಗಳ ಹಿಂದಿನದ್ದೋ ಅಲ್ಲ. ವರ್ಷಗಳ ಹಿಂದೆಯೇ ಈ ಕೇಸಿಗೆ ಪ್ಲಾನ್ ಆಗಿತ್ತು. ಸಂಚು ಸಿದ್ಧವಾಗಿತ್ತು. ಅದನ್ನು ತಿಳಿದಿರುವ ವ್ಯಕ್ತಿಯೊಬ್ಬರನ್ನು ನಿಮ್ಮ ಮುಂದೆ ತರಲಿದ್ದೇನೆ ಎಂದಿದ್ದಾರೆ. ಆ ವ್ಯಕ್ತಿ ಹೊರಬಂದರೆ.. ಪ್ರಕರಣ ಇನ್ನೊಂದು ತಿರುವು ಪಡೆಯಲಿದೆ.
https://x.com/i/status/1952750290882736369
ಧರ್ಮಸ್ಥಳ ಬುರುಡೆ ರಹಸ್ಯದ ಬೆಂಬಿದ್ದಿರುವ ಎಸ್ಐಟಿ ಪೊಲೀಸರು, 13 ಸ್ಥಳಗಳ ಪೈಕಿ 12 ಜಾಗಗಳಲ್ಲಿ ಅಗೆದು 13ನೇ ಸ್ಥಳಕ್ಕೆ ಕಾಲಿಟ್ಟಿದ್ದಾರೆ. 6ನೇ ಸ್ಥಳದಲ್ಲಿ 25 ಮೂಳೆಗಳು ಸಿಕ್ಕಿದ್ದು ಬಿಟ್ರೆ ಬೇಱವ ಜಾಗಗಳಲ್ಲೂ ಪತ್ತೆಯಾಗಿಲ್ಲ. ಧರ್ಮಸ್ಥಳ ಪ್ರದೇಶದಲ್ಲಿ ಶವಗಳನ್ನು ಹೂತಿದ್ದಾರೆ ಎಂಬ ಆರೋಪ ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪಿದೆ. ಇದುವರೆಗೆ ನೇತ್ರಾವತಿ ಸ್ನಾನ ಘಟ್ಟದ ಪಕ್ಕದ ಬಂಗ್ಲಗುಡ್ಡ ಪ್ರದೇಶದಲ್ಲಿರುವ ಕಾನನದಲ್ಲಿ 12 ಸ್ಥಳಗಳನ್ನು ಅಗೆಯಲಾಗಿದೆ. ಅದರಲ್ಲಿ 6ನೇ ಸ್ಥಳ ಬಿಟ್ರೆ ಬೇರೆ ಸ್ಥಳಗಳಲ್ಲಿ ಯಾವುದೇ ಕಳೇಬರ ಸಿಕ್ಕಿಲ್ಲ. ಈ ನಡುವೆ 13ನೇ ಸ್ಥಳ ಮಹತ್ವ ಪಡೆದಿದೆ. ದೇ ವೇಳೆ ಸಾಮಾಜಿಕ ಕಾರ್ಯಕರ್ತ ಜಯಂತ್ ಟಿ, ಮತ್ತೊಬ್ಬ ಬಾಲಕಿಯ ಮೃತದೇಹ ಮುಚ್ಚಿದ್ದನ್ನು ನೋಡಿದ್ದೇನೆ ಅಂದಿದ್ದು ಕೂಡ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿದೆ. ಇವೆರಡು ಪ್ರಕರಣಗಳನ್ನು ಮುಂದಿನ ವಿಚಾರಣೆಗೆ SITಗೆ ಹಸ್ತಾಂತರ ಮಾಡಲಾಗಿದೆ.
ಇದೆಲ್ಲ ತನಿಖೆ ನಡೆಯುತ್ತಿರುವಾಗಲೇ.. ಇದ್ದಕ್ಕಿದ್ದಂತೆ ಇಡೀ ಕೇಸಿಗೆ ಮೆಗಾ ಟ್ವಿಸ್ಟ್ ಕೊಟ್ಟಿದ್ದಾರೆ ವಸಂತ ಗಿಳಿಯಾರ್.



