Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಗ್ಲೆನ್‌ ಮ್ಯಾಕ್ಸ್‌ʻವೆಲ್‌ ಸೃಷ್ಟಿಸಿದ ದಾಖಲೆಗಳು ಒಂದೆರಡಲ್ಲ.. ಕಪಿಲ್‌ ದೇವ್‌ ದಾಖಲೆಯೂ ಪುಡಿಪುಡಿ

SpeciallU by SpeciallU
November 8, 2023
in News, Sports
Reading Time: 1 min read
0 0
0
ಗ್ಲೆನ್‌ ಮ್ಯಾಕ್ಸ್‌ʻವೆಲ್‌ ಸೃಷ್ಟಿಸಿದ ದಾಖಲೆಗಳು ಒಂದೆರಡಲ್ಲ.. ಕಪಿಲ್‌ ದೇವ್‌ ದಾಖಲೆಯೂ ಪುಡಿಪುಡಿ

ಅಫ್ಘಾನಿಸ್ತಾನ (Afghanistan) ವಿರುದ್ಧದ ವಿಶ್ವಕಪ್‌ ಪಂದ್ಯಲ್ಲಿ ಗ್ಲೆನ್‌ ಮ್ಯಾಕ್ಸ್‌ʻವೆಲ್‌ (Glenn Maxwell) ಪವಾಡವನ್ನೇ ಮಾಡಿಬಿಟ್ಟರು. ಸೋಲು ಖಚಿತ ಎನ್ನುವಂತಿದ್ದ ಪಂದ್ಯವನ್ನ್ ಅ‍ದ್ಧೂರಿ ಆಟವಾಡಿ ಗೆಲ್ಲಿಸಿಕೊಂಡುಬಿಟ್ಟರು. ಆಡಿದ್ದು ಆಟ, ಹೊಡೆದಿದದ್ದು ಅಜೇಯ ದ್ವಿಶತಕ. ನಡೆದದ್ದು ಮಾತ್ರ ಪವಾಡ. ಅಜೇಯ 201 ರನ್‌ಗಳ (201 Runs) ಮಹಾನ್‌ ಇನ್ನಿಂಗ್ಸ್‌ನೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಬಹಳ ಅಪರೂಪದ ದಾಖಲೆಗಳನ್ನು ಮುರಿದಿದ್ದಾರೆ.

ಕಪಿಲ್‌ ದೇವ್‌ ಅವರ 40 ವರ್ಷ ಹಳೆಯ ದಾಖಲೆ ಪುಡಿ ಪುಡಿ :   ಭಾರತದ ಕಪಿಲ್‌ ದೇವ್‌ (Kapil Dev) ಅವರ ,40 ವರ್ಷಗಳ ಹಿಂದಿನ ದಾಖಲೆ ಇಲ್ಲಿಯವರೆಗೂ ಅಭೇದ್ಯವಾಗಿತ್ತು. 1983ರ ವಿಶ್ವಕಪ್‌ ಪಂದ್ಯದಲ್ಲಿ (World Cup Match) 18ಕ್ಕೆ 5 ವಿಕೆಟ್‌ ಕಳೆದುಕೊಂಡಿದ್ದಾಗ ಬ್ಯಾಟಿಂಗ್‌ʻಗೆ ಆಗಮಿಸಿದ್ದ ಕಪಿಲ್‌ ದೇವ್‌ ಅಜೇಯ 175 ರನ್‌ ಬಾರಿಸಿ ತಂಡವನ್ನು ಗೆಲ್ಲಿಸಿದ್ದರು. ಈ ದಾಖಲೆಯನ್ನು ಗ್ಲೆನ್‌ ಮ್ಯಾಕ್ಸ್‌ವೆಲ್‌ ಮುಂಬೈನ ವಾಂಖೆಡೆ ಮೈದಾನದಲ್ಲಿ ತಮ್ಮ ಸಾಹಸಿಕ ಇನ್ನಿಂಗ್ಸ್‌ ಮೂಲಕ ಮುರಿದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 6 ಹಾಗೂ 6ಕ್ಕಿಂತ ಕೆಳಗಿನ ಕ್ರಮಾಂಕದ ಬ್ಯಾಟ್ಸ್‌ಮನ್‌ನ ಗರಿಷ್ಠ ಮೊತ್ತದ ದಾಖಲೆ ಈಗಿನವರೆಗೂ ಕಪಿಲ್‌ ದೇವ್‌ ಹೆಸರಲ್ಲೇ ಇತ್ತು. ಅದೀಗ ಬರೋಬ್ಬರಿ 40 ವರ್ಷಗಳ ನಂತರ ಗ್ಲೆನ್‌ ಮ್ಯಾಕ್ಸ್‌ವೆಲ್‌ ಪಾಲಾಗಿದೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದ್ವಿಶತಕ ಗಳಿಸಿದ ಮ್ಯಾಕ್ಸ್‌ʻವೆಲ್‌ ಓಪನರ್‌ ಅಲ್ಲ : ಹೌದು, ಇದೂ ಒಂದು ದಾಖಲೆಯೇ. ಇದುವರೆಗೆ ಏಕದಿನ ಕ್ರಿಕೆಟ್‌ʻನಲ್ಲಿ ದ್ವಿಶತಕ ಸಾಧಿಸಿರುವ ಆಟಗಾರರೆಲ್ಲರೂ ಓಪನರ್‌ ಆಗಿ ಆಡಿದ್ದವರು. ಏಕದಿನ ಕ್ರಿಕೆಟ್‌ ಇತಿಹಾಸದ ಮೊದಲ ದ್ವಿಶತಕ ಬಾರಿಸಿದ್ದ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌, (Sachin Tendulkar) 3 ದ್ವಿಶತಕ ಬಾರಿಸಿರುವ ಏಕೈಕ ಅಂತಾರಾಷ್ಟ್ರೀಯ ಕ್ರಿಕೆಟರ್‌ ರೋಹಿತ್‌ ಶರ್ಮಾ, (Rohit Sharma) ವೀರೇಂದ್ರ ಸೆಹ್ವಾಗ್‌, (Virender Sehwag), ಶುಭ್‌ʻಮನ್‌ ಗಿಲ್‌, (Shubman Gill), ಇಶಾನ್‌ ಕಿಶಾನ್‌, (Ishaan Kishan), ಕ್ರಿಸ್‌ ಗೇಲ್‌, (Chris Gayle), ಮಾರ್ಟಿನ್‌ ಗುಪ್ಪಿಲ್‌, (Martin Guppil), ಫಖರ್‌ ಜಮಾನ್‌ (Fakhr Zaman), ಎಲ್ಲರೂ ಓಪನರ್‌ʻಗಳೇ.

ರನ್‌ ಚೇಸಿಂಗ್‌ನಲ್ಲಿ ಮೊದಲ ದ್ವಿಶತಕ : ಏಕೆಂದರೆ ಈ ಮೊದಲು ಬಂದಿದ್ದ 8 ಆಟಗಾರರ 10 ಡಬಲ್‌ ಸೆಂಚುರಿಗಳೂ ಮೊದಲು ಬಾರಿ ಬ್ಯಾಟ್‌ ಮಾಡಿದ್ಧಾಗ ಬಂದಿದ್ದಂತಹವು. ಚೇಸ್‌ ಮಾಡುವಾಗ ದ್ವಿಶತಕ ಹೊಡೆದ ಮೊದಲ ಆಟಗಾರ ಗ್ಲೆನ್‌ ಮ್ಯಾಕ್ಸ್‌ʻವೆಲ್.‌

 

ಡಬಲ್‌ ಸೆಂಚುರಿ ದಾಖಲಿಸಿದ ಮೊದಲ ಆಸ್ಟ್ರೇಲಿಯ ಆಟಗಾರ (First Australian Player to Score a double century)

ವಿಶ್ವಕಪ್‌ʻನಲ್ಲಿ ಗರಿಷ್ಠ ಸಿಕ್ಸರ್‌ 3ನೇ ಸ್ಥಾನಕ್ಕೆ : 49 ಸಿಕ್ಸರ್ ಬಾರಿಸಿರುವ ಕ್ರಿಸ್‌ ಗೇಲ್‌ ಮೊದಲ ಸ್ಥಾನದಲ್ಲಿದ್ದರೆ, 45 ಸಿಕ್ಸರ್‌ ಸಿಡಿಸಿರುವ ರೋಹಿತ್‌ ಶರ್ಮ 2ನೇ ಸ್ಥಾನದಲ್ಲಿದ್ದಾರೆ. ಈ ಪಂದ್ಯದಲ್ಲಿ 10 ಸಿಕ್ಸರ್‌ ಸಿಡಿಸಿದ ಗ್ಲೆನ್‌, ಮ್ಯಾಕ್ಸ್‌ವೆಲ್‌ 3ನೇ ಸ್ಥಾನಕ್ಕೇರಿದ್ದಾರೆ.

ರನ್‌ ಚೇಸ್‌ʻನಲ್ಲಿ ಗರಿಷ್ಠ ಸ್ಕೋರ್‌ :  ಏಕದಿನ ಕ್ರಿಕೆಟ್‌ನ ರನ್‌ ಚೇಸ್‌ನಲ್ಲಿ ಆಟಗಾರನೊಬ್ಬನ ಗರಿಷ್ಠ ಮೊತ್ತ ಇದಾಗಿದೆ. 2021ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಫಖರ್‌ ಜಮಾನ್‌ ಬಾರಿಸಿದ 193 ರನ್‌ ಸಾಧನೆ 2ನೇ ಸ್ಥಾನಕ್ಕೆ ಕುಸಿದಿದೆ. ಶೇನ್‌ ವ್ಯಾಟ್ಸನ್‌ (183*), ಎಂಎಸ್‌ ಧೋನಿ (183*) (Dhoni) ನಂತರದ ಸ್ಥಾನದಲ್ಲಿದ್ದಾರೆ. ಇನ್ನು ವಿಶ್ವಕಪ್‌ನಲ್ಲಿ ಈ ಸಾಧನೆ ಆಂಡ್ರ್ಯೂ ಸ್ಟ್ರಾಸ್‌ ಹೆಸರಲ್ಲಿತ್ತು. 2011ರ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಅವರು 158 ರನ್‌ ಸಿಡಿಸಿದ್ದರು.

ಆರಂಭಿಕ ಆಟಗಾರನಲ್ಲದ ಬ್ಯಾಟ್ಸ್‌ಮನ್‌ನ ಗರಿಷ್ಠ ಮೊತ್ತ: ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕನಲ್ಲದ ಆಟಗಾರನ ಗರಿಷ್ಠ ಮೊತ್ತ ಇದು. 2009ರಲ್ಲಿ ಬಾಂಗ್ಲಾದೇಶ ವಿರುದ್ಧ ಜಿಂಬಾಬ್ವೆಯ ಚಾರ್ಲ್ಸ್‌ ಕಾವೆಂಟ್ರಿ ಅಜೇಯ 194 ರನ್‌ ಬಾರಿಸಿದ್ದು ಹಿಂದಿನ ದಾಖಲೆಯಾಗಿತ್ತು. ಇನ್ನು ವಿಶ್ವಕಪ್‌ನಲ್ಲಿ 1987ರಲ್ಲಿ ವೆಸ್ಟ್‌ ಇಂಡೀಸ್‌ನ ವಿವಿಯನ್‌ ರಿಚರ್ಡ್ಸ್‌ ಶ್ರೀಲಂಕಾ ವಿರುದ್ಧ ಕರಾಚಿಯಲ್ಲಿ 181 ರನ್‌ ಬಾರಿಸಿದ್ದು ದಾಖಲೆ ಎನಿಸಿತ್ತು.

2ನೇ ಅತ್ಯಂತ ವೇಗದ ದ್ವಿಶತಕ: ಏಕದಿನ ಕ್ರಿಕೆಟ್‌ನಲ್ಲಿ ಬಾಲ್‌ ಲೆಕ್ಕಾಚಾರದಲ್ಲಿ 2ನೇ ಅತ್ಯಂತ ವೇಗದ ದ್ವಿಶತಕ ಇದಾಗಿದೆ. 2022ರಲ್ಲಿ ಬಾಂಗ್ಲಾದೇಶ ವಿರುದ್ಧ ಇಶಾನ್‌ ಕಿಶನ್‌ 126 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದು ದಾಖಲೆಯಾಗಿದೆ. ಮ್ಯಾಕ್ಸ್‌ವೆಲ್‌ 128 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದಾರೆ.

Tags: #ಗ್ಲೆನ್‌ ಮ್ಯಾಕ್ಸ್‌ʻವೆಲ್‌ #ಅಫ್ಘಾನಿಸ್ತಾನ #ಆಸ್ಟ್ರೇಲಿಯ #GlennMaxwell #Afghanistan #Australia
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.