ಪ.ಬಂಗಾಳದದಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಂಭವಿಸಿ, ಮೋಚಾ(ಮೋಖಾ) ಚಂಡಮಾರುತ ಉದ್ಭವವಾಗಿದೆ. ಇಂಗ್ಲಿಷಿನ ಸ್ಪೆಲ್ಲಿಂಗ್ ಪ್ರಕಾರ ಮೋಚಾ ಎನ್ನುತ್ತಾರಾದರೂ, ಉಚ್ಛಾರಣೆ ಮೋಖಾ ಚಂಡಮಾರುತ. ಸುಮಾರು 500 ವರ್ಷಗಳ ಹಿಂದೆ ಕಾಫಿ ಬೆಳೆಗೆ ಜನ್ಮ ಕೊಟ್ಟ ಊರು ಎಂದು ಕರೆಯಲ್ಪಡುವ ನಗರದ ಹೆಸರನ್ನು ಈ ಚಂಡಮಾರುತಕ್ಕೆ ಇಡಲಾಗಿದೆ. ಮೋಖಾ ಎನ್ನುವ ಮಾದರಿಯ ಕಾಫಿಯೂ ಇದೆ. ಚಾಕಲೇಟ್ ಮತ್ತು ಕಾಫಿ ಮಿಶ್ರಿತ ಕಾಫಿಯ ಟೇಸ್ಟ್ ಅದು. ಈ ಚಂಡಮಾರುತಕ್ಕೆ ಹೆಸರಿಟ್ಟಿರುವುದು ಯೆಮನ್. ಯೆಮನ್`ನ ಕರಾವಳಿ ಬಳಿ ಬೆಳೆಯುವ ಮೋಖಾ ಬೀನ್‍ನಿಂದಲೇ ಮೋಕಾ ಕಾಫಿಯ ಟೇಸ್ಟ್ ಸಿಕ್ಕಿತು ಎನ್ನುವ ನಂಬಿಕೆ ಇದೆ. ಕಾಫಿಯ ಹೆಸರನ್ನಿಟ್ಟಿರೋದ್ರಿಂದ ಇದನ್ನು ಕಾಫಿ ಚಂಡಮಾರುತ ಎಂದೂ ಕರೆಯುತ್ತಾರೆ. ಈ ಮಳೆ, ಚಂಡಮಾರುತದ ಆರ್ಭಟ ಇನ್ನೂ ಕೆಲವು ದಿನ ಇರಲಿದೆ.
ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ಇದರಿಂದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿಐದು ದಿನ ಮಳೆಯ ಪ್ರಮಾಣ ಅಧಿಕವಾಗಲಿದೆ. ಬೆಂಗಳೂರಿನಲ್ಲಿ ಸತತ ಒಂದು ವಾರದಿಂದಲೂ ಮಳೆ ಸ್ನೇಹಿ ವಾತಾವರಣ ಇದ್ದು, ಸೋಮವಾರ ಸುರಿದ ಮಳೆ ಚಂಡಮಾರುತದ ಎಫೆಕ್ಟ್. ವಿಶೇಷವೆಂದರೆ ಈ ಚಂಡಮಾರುತ ಪ.ಬಂಗಾಳಕ್ಕೇ ಎಂಟ್ರಿಯಾಗುವುದಿಲ್ಲ.
ಸೋಮವಾರ ರಾಜಧಾನಿಯ ಹಲವು ಕಡೆ ಸಾಧಾರಣ ಮಳೆಯಾಗಿದೆ. ಪ್ರಮುಖವಾಗಿ ಬೆಳ್ಳಂದೂರು, ಸಿಂಗಸಂದ್ರ, ಕೋರಮಂಗಲ, ನಾಯಂಡಹಳ್ಳಿ, ಮೆಜೆಸ್ಟಿಕ್, ವಿದ್ಯಾಪೀಠದಲ್ಲಿ ಹೆಚ್ಚು ಮಳೆಯಾಗಿದೆ. ಕೆಲವು ಕಡೆ ಅರ್ಧ ತಾಸು, ಇನ್ನೂ ಕೆಲವು ಕಡೆ 15-20 ನಿಮಿಷ ಹಗುರದಿಂದ ಕೂಡಿದ ಸಾಧಾರಣ ಮಳೆಯಿಂದ ತಗ್ಗು ಪ್ರದೇಶದ ಕೆಲವು ರಸ್ತೆಗಳಲ್ಲಿನೀರು ನಿಂತು ವಾಹನ ಸವಾರರು ಪರದಾಡಿದರು. ಪಾದಚಾರಿಗಳು, ತಳ್ಳುಗಾಡಿಯವರು ಅಂಗಡಿ ಮುಂಗಟ್ಟು ಬಸ್ಟ್ ನಿಲ್ದಾಣದಲ್ಲಿಕೆಲಕಾಲ ಆಶ್ರಯ ಪಡೆದರು. ಮಳೆಯಿಂದ ಯಾವುದೇ ದೊಡ್ಡ ಅನಾಹುತವಾದ ಬಗ್ಗೆ ವರದಿಯಾಗಿಲ್ಲ.



