ದೊಡ್ಮನೆಯ ಒಬ್ಬ ಹುಡುಗ ಅನಪೇಕ್ಷಿತ ವಿವಾದಕ್ಕೆ ತುತ್ತಾಗಿದ್ದಾನೆ. ಯುವ ರಾಜ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ಮದುವೆ ಮುರಿದು ಬೀಳುವ ಹಂತದಲ್ಲಿದೆ. ಒಬ್ಬರಿಗೊಬ್ಬರು ʻಅಕ್ರಮ ಸಂಬಂಧʼದ ಆರೋಪ ಮಾಡಿಕೊಂಡಿದ್ದಾರೆ. ಶ್ರೀದೇವಿ, ಯುವನ ವಿರುದ್ಧ ಚಾಲೆಂಜ್ ಹಾಕಿದ್ದರೆ, ಯುವ, ಶ್ರೀದೇವಿಗೆ ಚಾಲೆಂಜ್ ಹಾಕಿದ್ದಾರೆ. ಈ ಎಲ್ಲದರ ನಡುವೆ ಯುವನ ಅಣ್ಣ ವಿನಯ್ ರಾಜಕುಮಾರ್ ಅವರ ಮದುವೆಯ ಸುದ್ದಿಯೊಂದು ಧುತ್ತೆಂದು ಎದುರಾಗಿ ಆಮೇಲೆ ತಣ್ಣಗಾಗಿದೆ.
ಆಗಿದ್ದು ಏನಪ್ಪಾಂದ್ರೆ………
ನಟಿ ಸ್ವಾತಿಷ್ಟಾ ಕೃಷ್ಣನ್ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಅದು ಒಂದು ಸರಳ ಪ್ರೇಮಕಥೆ ಚಿತ್ರದ ಫೋಟೋ ಮತ್ತು ವಿಡಿಯೋಗಳು. ಅವುಗಳಲ್ಲಿ ವಿನಯ್ ಮತ್ತು ಸ್ವಸ್ತಿಷ್ಟಾ ಮದುವೆಯಾಗುವ ದೃಶ್ಯಗಳಿವೆ. ತಮ್ಮ ಇನ್ಸ್‌ಟಾಗ್ರಾಂ ಪೋಸ್ಟಿನಲ್ಲಿ ಸ್ವಸ್ತಿಷ್ಠಾ ಅದನ್ನು ಸ್ಪಷ್ಟವಾಗಿ ಬರೆದಿದ್ದಾರೆ. ಬಿಹೈಂಡ್ ದಿ ಸೀನ್ ಒಂದು ಸರಳ ಪ್ರೇಮಕಥೆ ಎಂದೂ ಹೇಳಿದ್ದಾರೆ.. ಫ್ರಮ್ ದ ಆರ್ಚೀವ್ಸ್ ಎಂದು ಬರೆದುಕೊಂಡಿದ್ದಾರೆ. ಹಾಗಂದ್ರೆ ಸಂಗ್ರಹದಿಂದ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಲೈಬ್ರೈರಿಯಿಂದ ಎಂದರ್ಥ ಅಷ್ಟೆ. ಒಂದು ಸರಳ ಪ್ರೇಮ ಕಥೆ ಸೂಪರ್ ಹಿಟ್ ಆಗದೇ ಇದ್ದರೂ, ಹಿಟ್ ಅಂತೂ ಆಯ್ತು. ಈಗ ಒಟಿಟಿಯಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿರುವ ಒಂದು ಸರಳ ಪ್ರೇಮ ಕಥೆ, ಪ್ರೇಮಿಗಳಿಗೆ ಇಷ್ಟವಾಗುತ್ತಿದೆ. ಮ್ಯೂಸಿಕಲ್ ಲವ್ ಸ್ಟೋರಿ.
ಆದರೆ.. ಅಭಿಮಾನಿಳಿಗೆ ಇದನ್ನು ಸಿನಿಮಾದ ಸೀನ್ ಎಂದು ಗೊತ್ತಿದ್ದರೂ ಇಲ್ಲದ ಪ್ರಶ್ನೆ ಮಾಡಿದ್ದಾರೆ. ಕೆಲ ಅಭಿಮಾನಿಗಳು, ‘ನಿಮ್ಮ ಜೋಡಿ ಚೆನ್ನಾಗಿದೆ. ಇಬ್ಬರೂ ಮದುವೆಯಾಗಿ..’ ಎಂದು ಬರೆದುಕೊಂಡಿದ್ದರೆ, ತುಂಬಾ ಕ್ಯೂಟ್ ಆಗಿದೆ ಜೋಡಿ. ದೊಡ್ಮನೆಗೆ ತಕ್ಕ ಸೊಸೆ ನೀವು ಒಳ್ಳೆಯದಾಗಲಿ ಎಂದು ಇನ್ನೊಬ್ಬರು ಬರೆದಿದ್ದಾರೆ.ಮೇಡಮ್ ಏನ್ ಇದು ನಿಜವಾಗ್ಲೂ ನೀವು ಮದುವೆಯಾದ್ರಾ ಎಂದು ಕೆಲವರು ಪ್ರಶ್ನೆ ಮಾಡಿದ್ದರೆ ಇನ್ನೂ ಕೆಲವರು ಇದು ಒಂದು ಸರಳ ಕಥೆ ಸಿನಿಮಾದ ಸೀನ್ ಎಂದೂ ಸ್ಪಷ್ಟನೆ ಕೊಟ್ಟಿದ್ದಾರೆ.
ತಮಿಳು ಚಿತ್ರನಟಿಯಾಗಿರುವ ಸ್ವಾತಿಷ್ಟಾ ಕೃಷ್ಣನ್ ಅವರ ಈ ಫೋಟೋಗೆ ತಮಿಳು ಅಭಿಮಾನಿಗಳು ಹ್ಯಾಪಿ ಮ್ಯಾರೀಡ್ ಲೈಫ್ ಎಂದೇ ಬರೆದಿದ್ದಾರೆ. ಕೆಲವರು ನೀವು ಮದುವೆಯಾಗಿದ್ದು ನೋಡಿ ಬೇಸರವಾಗಿದೆ ಎಂದೂ ಕಾಮೆಂಟ್ ಮಾಡಿದ್ದಾರೆ.
ಯಾವಾಗ ಅಭಿಮಾನಿಗಳ ಅತಿರೇಕದ ರಿಯಾಕ್ಷನ್ ಕಣ್ಣಿಗೆ ಬಿತ್ತೋ.. ಆಗ ಸ್ವಸ್ತಿಷ್ಠಾ ಕೃಷ್ಣನ್ ಸ್ಪಷ್ಟನೆ ಕೊಟ್ಟಿದ್ದಾರೆ. ತಮಿಳು ಅಭಿಮಾನಿಗಳಿಗೆ ಉತ್ತರ ನೀಡಿರುವ ಅವರು ʻಇದು ಕನ್ನಡ ಸಿನಿಮಾ ಒಂದು ಸರಳ ಪ್ರೇಮ ಕಥೆಯ ಸ್ಟಿಲ್‌ಗಳು. ಇನ್ನು ಈ ಸಿನಿಮಾದ ಹೀರೋ ಆರ್ಡಿನರಿ ವ್ಯಕ್ತಿಯಲ್ಲ. ದಿಗ್ಗಜ ನಟ ಡಾ.ರಾಜ್‌ಕುಮಾರ್ ಅವರ ಮೊಮ್ಮಗ ವಿನಯ್ ರಾಜ್‌ಕುಮಾರ್. ಬ್ರ್ಯಾಂಡ್ ಇಮೇಜ್‌ಗೆ ಎಂದೂ ಒಗ್ಗಿಕೊಳ್ಳದ ನಟ ತನ್ನ ಸಿನಿಮಾಗಳಲ್ಲಿ ಉತ್ತಮ ಸ್ಕ್ರಿಪ್ಟ್‌ಗಳನ್ನು ಮಾತ್ರವೇ ಆಯ್ಕೆ ಮಾಡಿಕೊಳ್ತಾರೆ ಎಂದು ಹೇಳಿಕೊಂಡಿದ್ದು, ಮದುವೆಗೆ ಬಗ್ಗೆಯೂ ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ.
ʻಅಯ್ಯೋ.. ನಾನು ನನ್ನ ಪೋಸ್ಟ್‌ನಲ್ಲಿಯೇ ಬಹಳ ಕ್ಲಿಯರ್ ಆಗಿ ಬರೆದಿದ್ದೇನೆ. ಇದು ಬಿಹೈಂಡ್ ದ ಸೀನ್ಸಸ್ ಅಂತಾ.. ಪ್ಲೀಸ್’ ಎಂದು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ವಿನಯ್ ಅವರಿನ್ನೂ ಅವಿವಾಹಿತರಾಗಿಯೇ ಉಳಿದಿರೋದ್ರಿಂದ ಇಂತಹ ಗಾಸಿಪ್ʻಗಳು ಉದ್ಭವವಾಗಿವೆ. ಇನ್ನು ಸ್ವಸ್ತಿಷ್ಠಾ ಕೂಡಾ ಅಷ್ಟೆ, ಹುಟ್ಟಿ ಬೆಳೆದಿದ್ದು ತಮಿಳುನಾಡಿನಲ್ಲಿಯೇ ಆದರೂ, ಮೂಲತಃ ಉತ್ತರ ಕರ್ನಾಟಕದವರು. ಸ್ವಸ್ತಿಷ್ಠಾ ಕೂಡಾ ಅವಿವಾಹಿತೆಯೇ. ಹೀಗಾಗಿ.. ಅಭಿಮಾನಿಗಳ ಸ್ವಲ್ಪ ಜಾಸ್ತಿ ಕುತೂಹಲ, ಉತ್ಸಾಹ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ.



