ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಹೋದಾಗಿನಿಂದ ಅದೊಂದು ಪ್ರಶ್ನೆ ಎದುರಾಗಿತ್ತು. ಸದನದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಯಾರು ಅನ್ನೋದು. ಬಹುತೇಕ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರ ಹೆಸರೇ ಅಂತಿಮವಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಎಲ್ಲವೂ ಬದಲಾಗಿ ಹೋಯ್ತು. ಸುರೇಶ್ ಬಾಬು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಬಿ.ಸುರೇಶ್ ಬಾಬು ಅವರನ್ನು ಆಯ್ಕೆ ಮಾಡುವತ್ತ ಕುಮಾರಸ್ವಾಮಿ ಒಲವು ತೋರಿದ್ದಾರೆ.
ಸುರೇಶ್ ಬಾಬು ಹಿಸ್ಟರಿ :
ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ. ನಾಲ್ಕು ಬಾರಿ ಗೆದ್ದಿದ್ದಾರೆ. ಸಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸುರೇಶ್ ಬಾಬು, ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ವಿರುದ್ದ 10,042 ಮತಗಳಿಂದ ಗೆಲುವನ್ನು ಸಾಧಿಸಿದ್ದರು. 1999, 2008, 2013 ಮತ್ತು 2024ರಲ್ಲಿ ಸುರೇಶ್ ಬಾಬು, ವಿಧಾನಸಭೆಗೆ ಆಯ್ಕೆಗೊಂಡಿದ್ದರು. ಷ್ಣರಾಜನಗರ ಕ್ಷೇತ್ರದ ಮಾಜಿ ಶಾಸಕ ಮತ್ತು ಕುಮಾರಸ್ವಾಮಿಯವರ ಪರಮಾಪ್ತರಲ್ಲೊಬ್ಬರಾದ ಸಾ.ರಾ.ಮಹೇಶ್ ಅವರ ಸಲಹೆಯ ಮೇರೆಗೆ ಎಚ್‌ಡಿಕೆ, ಸುರೇಶ್ ಬಾಬು ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಅಲ್ಲದೆ ಹೆಚ್.ಡಿ.ರೇವಣ್ಣ ಜಾಮೀನಿನ ಮೇಲೆ ಹೊರಗಿರುವುದರಿಂದ ಹಾಗೂ ಅವರ ಮೇಲೆ ರೇಪ್ ಮತ್ತು ಕಿಡ್ನಾಪ್ ಆರೋಪಗಳಿರುವುದರಿಂದ ರೇವಣ್ಣ ಅವರನ್ನು ಪರಿಗಣಿಸಲಿಲ್ಲ ಎನ್ನಲಾಗಿದೆ.
ಜಿಟಿ ದೇವೇಗೌಡ ಬೇಸರ :
ಕುಮಾರಸ್ವಾಮಿಯವರ ಈ ನಿರ್ಧಾರದಿಂದ, ಜಿ.ಟಿ.ದೇವೇಗೌಡ ತೀವ್ರ ಅಸಮಾಧಾನ ಹೊಂದಿದ್ದಾರೆ. ಮತ್ತು, ಕೋರ್ ಕಮಿಟಿ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡುವ ಬಗ್ಗೆ ಚಿಂತಿಸುತ್ತಿದ್ದಾರೆ ಎನ್ನುವ ಮಾಹಿತಿಗಳಿವೆ. ಜಿಟಿಡಿಯವರು ಒಕ್ಕಲಿಗ ಸಮುದಾಯದ ನಾಯಕ. ಕೋರ್ ಕಮಿಟಿ ಅಧ್ಯಕ್ಷ ಸ್ಥಾನ ಒಕ್ಕಲಿಗ ಸಮುದಾಯಕ್ಕೆ ನೀಡಲಾಗಿದೆ, ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನೂ ಅದೇ ಸಮುದಾಯಕ್ಕೆ ನೀಡುವ ಬದಲು, ಕುರುಬ ಸಮುದಾಯಕ್ಕೆ ನೀಡಿದರೆ ಒಳ್ಳೆಯ ಸಂದೇಶ ನೀಡಿದಂತಾಗುತ್ತದೆ ಎನ್ನುವ ಲೆಕ್ಕಾಚಾರದ ಮೇಲೆ ಸುರೇಶ್ ಬಾಬು ಅವರಿಗೆ ಚಾನ್ಸ್ ಸಿಕ್ಕಿದೆ ಎನ್ನಲಾಗ್ತಿದೆ. ಆದರೆ ಮುಡಾ ಹಗರಣದಲ್ಲಿ ಜೆಟಿಡಿಯವರದ್ದೂ ದೊಡ್ಡ ಪಾಲಿದೆ ಎಂಬ ಶಂಕೆ ಹಿನ್ನೆಲೆಯಲ್ಲಿ ಜಿಟಿಡಿವರ ಹೆಸರು ಕೊನೆ ಕ್ಷಣದಲ್ಲಿ ರೇಸ್ʻನಿಂದ ಹಿಂದೆ ಸರಿಯಿತು ಎನ್ನುವ ವಾದವೂ ಇದೆ.
ಕುಮಾರಸ್ವಾಮಿ ಈಗ ಕೇಂದ್ರದ ಮಂತ್ರಿಯಾಗಿರುವುದರಿಂದ, ಈಗ ಹೊಂದಿರುವ ರಾಜ್ಯಾಧ್ಯಕ್ಷ ಸ್ಥಾನವನ್ನು ತೊರೆಯುವ ಸಾಧ್ಯತೆಯೂ ಇದೆ. ಆಗ, ರಾಜ್ಯಾಧ್ಯಕ್ಷ ಹುದ್ದೆಯನ್ನು ಜಿ.ಟಿ.ದೇವೇಗೌಡರಿಗೆ ನೀಡಿ, ಅವರ ಮನವೊಲಿಸಬಹುದು ಎನ್ನುವ ಮಾತುಗಳು ಹರಿದಾಡುತ್ತಿವೆ. ಆದರೆ ಜಿಟಿಡಿ ಕೂಲ್ ಆಗುವ ಸಾಧ್ಯತೆಗಳು ಕಡಿಮೆ.



