ಶಿವಣ್ಣ (Shivanna) ನಿಂಗ್ ವಯಸ್ಸಾಯ್ತೋ ಅನ್ನೋವ್ರಿಗೆಲ್ಲ ಶಿವಣ್ಣ ಪದೇ ಪದೇ ಉತ್ತರ ಕೊಡೋದು ಯಂಗ್ & ಎನರ್ಜೆಟಿಕ್ ಆಕ್ಟಿವಿಟಿಗಳಿಂದ. ಟುವ್ವಿ ಟುವ್ವಿ (tuvvi tuvvi) ಅಂತಾ ಹಾಡ್ಕೊತಾ ಬಂದು ಮೂರು ದಶಕಗಳೇ ಆಗಿ ಹೋಗಿವೆ. ಹ್ಯಾಟ್ರಿಕ್ ಹೀರೋ (Hatrick hero) ಸೆಂಚುರಿ ಸ್ಟಾರ್ (century star) ಕೂಡಾ ಆಗಿ 125 ಸಿನಿಮಾದಲ್ಲಿ ನಟಿಸಿದ್ಧಾಗಿದೆ. ಆದರೆ ಶಿವಣ್ಣ ಈಗಲೂ ಯಂಗ್.. ಇದೀಗ ಮತ್ತೊಮ್ಮೆ ಘೋಸ್ಟ್ʻನಲ್ಲಿ (Ghost) ಶಿವಣ್ಣ ಸಖತ್ ಯಂಗ್ ಆಗಿ ಇದೇನು ಆಕ್ಷನ್ ಸಿನಿಮಾನೋ.. ಲವ್ ಸ್ಟೋರಿನೋ ಎಂದು ಕನ್ʻಫ್ಯೂಸ್ ಆಗುವಷ್ಟು ಯಂಗ್ ಆಗಿ ಕಾಣಿಸ್ಕೊಂಡಿದ್ದಾರೆ ಶಿವಣ್ಣ.
ಯುದ್ಧ..ಬುದ್ಧ..ಸೋಲು..ಧ್ವಂಸ..ಬುಲೆಟ್ಟು..ಗನ್ನುಗಳು..ಗ್ಯಾಂಗ್ಸ್ಟರ್.. ಊಹೂಂ.. ಮೊದಲಿಗೆ ಶಿವಣ್ಣನ ಅಭಿಮಾನಿಗಳು ಫಿದಾ ಆಗಿರುವುದು ಶಿವಣ್ಣನ ಯಂಗ್ ಲುಕ್ಕಿಗೆ. ಇತ್ತೀಚೆಗೆ ಶಿವಣ್ಣ ಅಬಿನಯದ ವೇದ, ಜೈಲರ್ ಮೊದಲಾದ ಚಿತ್ರಗಳಲ್ಲೆಲ್ಲ ಪೆಪ್ಪರ್ ಸಾಲ್ಟ್ ಲುಕ್ಕಿನ ಗಡ್ಡವೇ ಇರುತ್ತಿತ್ತು. ಇಲ್ಲಿಯೂ ಹಾಗೆಯೇ ಇದೆಯಾದರೂ.. ಆನಂದ್ ಚಿತ್ರದಲ್ಲಿ ಕಂಡಂತಹ ಶಿವಣ್ಣ ಕಾಣಿಸೋದ್ರೊಂದಿಗೆ ಮತ್ತೇನೋ ಇದೆ ಅನ್ನೋ ಸಸ್ಪೆನ್ಸ್ ಇಡ್ತಾರೆ ಡೈರೆಕ್ಟರ್ ಶ್ರೀನಿ.
ಸಾಮ್ರಾಜ್ಯ ಕಟ್ಟಿದವರನ್ನು ಇತಿಹಾಸ ನೆನಪಿಡಲ್ಲ. ಸಾಮ್ರಾಜ್ಯ ಧ್ವಂಸ ಮಾಡುವ ನನ್ನಂಥವರನ್ನು ಸಮಾಜ, ಇತಿಹಾಸ ಎಂದೂ ಮರೆತಿಲ್ಲ ಅನ್ನೋ ಡೈಲಾಗಿನೊಂದಿಗೆ ಘೋಸ್ಟ್ ಟ್ರೇಲರ್ ಶುರುವಾಗುತ್ತೆ. ಕಾಲ್ ಮಿ ಘೋಸ್ಟ್ ಎನ್ನುತ್ತಲೇ ಆರ್ಭಟಿಸುವ ಶಿವಣ್ಣ ಕಿಚ್ಚು ಹಚ್ಚುತ್ತಾರೆ.
ಯುದ್ಧ, ಮಾನವ ಲೋಕದ ಮಾಗದ ಕರಗ, ಇಂತಹ ಯುದ್ಧಗಳಿಂದ, ಸಾಮ್ರಾಜ್ಯಗಳಿಂದ ಕಟ್ಟಿದ್ದಕ್ಕಿಂತ ಅಧಃಪತನವೇ ಜಾಸ್ತಿ. ಸಾಮ್ರಾಜ್ಯ ಕಟ್ಟಿರೋವರನ್ನ ಇತಿಹಾಸ ಮರೆತಿರಬಹುದು. ಆದರೆ ಧ್ವಂಸ ಮಾಡೋನ ನನ್ನಂಥವರನ್ನ ಎಂದಿಗೂ ಮರೆತಿಲ್ಲ ಎನ್ನುತ್ತಾರೆ. ಶಿವಣ್ಣನವರ ಎಂಟ್ರಿ ಗನ್ ಹಿಡಿಯುವ ಮೂಲಕ ಆರಂಭವಾಗುತ್ತದೆ. ಕೈದಿಗಳೆಲ್ಲ ತಲೆಬಗ್ಗಿಸಿ ಕುಳಿತ ದೃಶ್ಯವಿದೆ. ಅವರ ಮುಂದೆ ಶಿವಣ್ಣ ಡಾನ್ ಲುಕ್ ನೀಡಿದ್ದಾರೆ. ಅಕ್ಟೊಬರ್ 19 ರಂದು ಎಲ್ಲಡೆ ರಿಲೀಸ್ ಆಗ್ತಿರೋ ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.
ಇತಿಹಾಸ ಬರೆಯೋದೆ ತಾಕತ್ತು ಇರೋ ಮನುಷ್ಯನ ಬಗ್ಗೆ, ಸಲಾಂ ಹೊಡೆಯೋನ ಬಗ್ಗೆ ಒಂದೂ ಸಾಲು ಬರೆಯೋದಿಲ್ಲ. ಸಾಮಾನ್ಯವಾಗಿ ನಾನು ಯಾರ ತಂಟೆಗೂ ಹೋಗೋದಿಲ್ಲ. ಹಾಂ, ಸೋಲ್ತೇನೇ ಅನ್ನೋ ಭಯಕ್ಕಲ್ಲ, ನಾನು ಹೋದ್ರೆ ಯುದ್ಧ ಭೂಮಿ ರುದ್ರಭೂಮಿ ಆಗುತ್ತೆ ಅನ್ನೋ ಡೈಲಾಗ್ ಹೊಡೀತಾರೆ ಶಿವಣ್ಣ.
ಸ್ಲೋ ಮೋಷನ್ನಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಹಾಗೂ ಶಿವರಾಜ್ಕುಮಾರ್ ಅವರು ನಡೆದುಕೊಂಡು ಬರುವ ದೃಶ್ಯ ಸಖತ್ ಆಗಿದೆ. ಯಾಕಂದ್ರೆ ಅಲ್ಲಿಯೇ ಟುವ್ವಿ ಟುವ್ವಿ ಶಿವಣ್ಣ ಕಾಣಿಸೋದು. ಈಗಲೂ ಶಿವಣ್ಣ ಕೈಗೊಂದು ಟ್ರೋಫಿ ಕೊಟ್ಟು, ಹಿಂದೆ ಒಂದಿಪ್ಪತ್ತು ಜನ ಡ್ಯಾನ್ಸರ್ ನಿಲ್ಲಿಸಿ ಕಬ್ಬನ್ ಪಾರ್ಕಿನ ಒಳಗೆ ಟುವ್ವಿ ಟುವ್ವಿ ಎಂದು ಕುಣಿತಾ ಹೋಗಿ ಅಂದ್ರೆ, ಶಿವಣ್ಣ ಏನೋ ರೆಡಿ. ಆದರೆ.. ಆನಂದ್ ಚಿತ್ರವನ್ನು ಥಿಯೇಟರಿನಲ್ಲಿ ಕಂಡು ಶಿಳ್ಳೆ ಹಾಕಿದ್ದ ಹುಡುಗರೆಲ್ಲ ಈಗ ವಯಸ್ಸಾಯ್ತು ಕಣ್ರಪ್ಪ.. ಮೊದಲಿನ್ ಹಂಗೆ ತಿನ್ನೋಕಾಗಲ್ಲ.. ಅಂತಿದ್ದಾರೆ.



