ಬಿಗ್ ಬಾಸ್ ಶೋ ಮುಗಿದಿದೆ. ವಿನ್ನರ್ ಆಗಿ ಗಿಲ್ಲಿ ಬಂದಿದ್ದಾರೆ. ಫಸ್ಟ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ, 2ನೇ ರನ್ನರ್ ಅಪ್ ಆಗಿ ಅಶ್ವಿನಿ ಗೌಡ ಗೆದ್ದಿದ್ದಾರೆ. 4ನೇ ಸ್ಥಾನ ಕಾವ್ಯ, 5ನೇ ಸ್ಥಾನ ರಘು, 6ನೇ ಸ್ಥಾನ ಧನುಷ್ ಅವರಿಗೆ ಸಿಕ್ಕಿದೆ. ಈ ಬಾರಿ ವಿನ್ನರ್ ಮತ್ತು ರನ್ನರ್ ಅಷ್ಟೇ ಅಲ್ಲ, ಬೇರೆಯವರಿಗೂ ಬಹುಮಾನ ಸಿಕ್ಕಿದೆ. ಗಿಲ್ಲಿ ನಟ ವಿನ್ನರ್ ಆಗಿ 50 ಲಕ್ಷ ಪಡೆದಿದ್ದಾರೆ. ಜೊತೆಯಲ್ಲೇ ಸಿಕ್ಕಿರುವ ಬಹುಮಾನ, ಮೊತ್ತಗಳು ಕೋಟಿಯನ್ನೂ ದಾಟಿದೆ. ಆದರೆ.. ಗಿಲ್ಲಿಗೆ ಕೋಟಿ ಸಿಕ್ಕರೂ, ಕೋಟಿ ಪೂರ್ತಿ ಮನೆಗೆ ಬರಲ್ಲ.
ಈ ಬಾರಿ ಬೇರೆಯದೇ ಲೆವೆಲ್ಲಿನ ಪ್ರಚಾರ ಪಡೆದಿದ್ದ ಬಿಗ್ ಬಾಸ್ ಶೋ, ಇತಿಹಾಸದಲ್ಲೇ ಮೊದಲ ಬಾರಿಗೆ ಖಾಸಗಿ ಟಿವಿ ರಿಯಾಲಿಟಿ ಶೋ ಸ್ಪರ್ಧಿಯ ಪರವಾಗಿ ಶಾಸಕರು ಪ್ರಚಾರ ಮಾಡಿದ್ದರು. ಗಿಲ್ಲಿ ನಟನ ಪರ ಮಳವಳ್ಳಿ ಶಾಸಕ, ಕಾವ್ಯ ಶೈವ ಪರ ಕೆಆರ್ ಪೇಟೆ ಶಾಸಕರು, ಅಶ್ವಿನಿ ಗೌಡ ಪರ ಕನ್ನಡ ಸಂಘಟನೆಗಳು ಪ್ರಚಾರ ಮಾಡಿದ್ದರು. ಕರವೇ ನಾರಾಯಣ ಗೌಡ ಅಶ್ವಿನಿ ಪರ ನಿಂತಿದ್ದರೆ, ನಟ ಶಿವರಾಜ್ ಕುಮಾರ್, ಜಗ್ಗೇಶ್ ಗಿಲ್ಲಿ ಪರ ಪ್ರಚಾರ ಮಾಡಿದ್ರು. ಈಗ ಗಿಲ್ಲಿ ನಟ ವಿನ್ನರ್ ಆಗಿದ್ದಾರೆ.
ಬಿಗ್ ಬಾಸ್ ಗೆದ್ದಿರುವ ಗಿಲ್ಲಿ ನಟನಿಗೆ ಪ್ರಾಯೋಜಕರು 50 ಲಕ್ಷ ರೂ. ಬಹುಮಾನ ನೀಡಿದರೆ, ಮಾರುತಿ ಸುಜುಕಿ, ತಮ್ಮ ಹೊಸ ಮಾಡೆಲ್ ವಿಕ್ಟೋರಿಸ್ ಕಾರು ಕೊಟ್ಟಿದೆ. ಕಾರಿನ ಬೆಲೆ ಹೆಚ್ಚೂ ಕಡಿಮೆ 20 ಲಕ್ಷ. ಇನ್ನು ಚಿನ್ನದಂಗಡಿ ಸರವಣ 20 ಲಕ್ಷ ಕೊಟ್ಟಿದ್ದಾರೆ. ಇನ್ನೂ ಕೆಲವು ಆಯೋಜಕರು ಬಹುಮಾನ ನೀಡಿದ್ದು, ಹಣದ ಬಹುಮಾನವೇ ಒಂದು ಕೋಟಿ ದಾಟಿದೆ.
ಕಿಚ್ಚ ಸುದೀಪ್ ಅವರೂ ಗಿಲ್ಲಿ ನಟನಿಗೆ ಬಹುಮಾನ ಘೋಷಿಸಿದ್ದಾರೆ. ʻʻಗಿಲ್ಲಿ ಅದ್ಭುತವಾಗಿ ಆಡಿದ್ದಾರೆ. ಈ ವೇದಿಕೆಯಲ್ಲಿ ನನ್ನ ಕಡೆಯಿಂದ ಗಿಲ್ಲಿಗೆ ನಾನು ಪ್ರೀತಿಯಿಂದ 10 ಲಕ್ಷ ರೂಪಾಯಿ ಕೊಡುತ್ತಿದ್ದೇನೆʼʼ ಎಂದು ಘೋಷಿಸಿದ್ದಾರೆ ಕಿಚ್ಚ ಸುದೀಪ್.
ಫಸ್ಟ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಅವರಿಗೆ ಟಿ ಎ ಶರವಣ 20 ಲಕ್ಷ ರೂ. ಚೆಕ್ ನೀಡಿದ್ದಾರೆ. ಬಿಗ್ ಬಾಸ್ ಪ್ರಾಯೋಜಕರು 25 ಲಕ್ಷ ರೂಪ ಪ್ರೈಜ್ ನೀಡಿದ್ದಾರೆ.
2ನೇ ರನ್ನರ್ ಅಪ್ ಅಶ್ವಿನಿ ಅವರಿಗೆ 10 ಲಕ್ಷ ರೂ. ಬಹುಮಾನ ಸಂದಾಯವಾಗಿದೆ. ಇನ್ನೊಬ್ಬ ಪ್ರಾಯೋಜಕರು 5 ಲಕ್ಷ ರೂ. ಕ್ಯಾಷ್ ನೀಡಿದ್ದಾರೆ. ಅಲ್ಲಿಗೆ ಅವರಿಗೆ 15 ಲಕ್ಷ ಸಿಕ್ಕಿದೆ.
4ನೇ ಸ್ಥಾನ ಪಡೆದ ಕಾವ್ಯ ಶೈವಗೆ ಪ್ರಾಯೋಜಕರ ಕಡೆಯಿಂದ 10 ಲಕ್ಷ ರೂಪಾಯಿ ಬಹುಮಾನ ಲಭಿಸಿದೆ.
5ನೇ ಸ್ಥಾನ ಪಡೆದ ರಘು ಅವರಿಗೆ ಪ್ರಾಯೋಜಕರ ಕಡೆಯಿಂದ 2 ಲಕ್ಷ + 1.5 ಲಕ್ಷ ರೂಪಾಯಿ ಕ್ಯಾಶ್ ಪ್ರೈಝ್ ಲಭಿಸಿದೆ.
6ನೇ ಸ್ಥಾನ ಪಡೆದ ಧನುಷ್ ಅವರಿಗೆ ಪ್ರಾಯೋಜಕರಿಂದ ಒಬ್ಬರಿಂದ 2 ಲಕ್ಷ ಹಾಗೂ ಮತ್ತೊಬ್ಬರಿಂದ ಒಂದೂವರೆ ಲಕ್ಷ ಕ್ಯಾಷ್ ಪ್ರೈಜ್ ಸಿಕ್ಕಿದೆ. ಅಲ್ಲಿಗೆ ರಘು ಮತ್ತು ಧನುಷ್ ಇಬ್ಬರಿಗೂ ತಲಾ ಮೂರೂವರೆ ಲಕ್ಷ ಸಂದಾಯವಾಗಿದೆ.
ಇನ್ನು ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಿಗೆ ಕೊಡುವ ಸಂಭಾವನೆ ಪ್ರತ್ಯೇಕ. ಅದು ಗುಟ್ಟಾಗಿಯೇ ಇರಲಿದೆ. ಬಹಿರಂಗಪಡಿಸಿದರೆ ಸ್ಪರ್ಧಿಗಳೇ ಹೇಳಬೇಕು. ಅಗ್ರಿಮೆಂಟ್ ಪ್ರಕಾರ ಹೇಳುವಂತಿಲ್ಲ.
ಇನ್ನು ಈ ಬಾರಿ ಫನ್ನಿ ಅವಾರ್ಡ್ ಕೂಡಾ ಕೊಡಲಾಗಿದ್ದು, ಅವುಗಳಿಗೂ ಬಹುಮಾನ ನೀಡಲಾಗಿದೆ.
‘ಮೈ-ಕೈ ಜಾಕ್ಸನ್’ ಅವಾರ್ಡ್‌ನಲ್ಲಿ ಯಾರು ಹೆಚ್ಚು ಚಿತ್ರ-ವಿಚಿತ್ರವಾಗಿ ಬಾಡಿ ಲ್ಯಾಂಗ್‌ವೇಜ್ ಬಳಸಿದ್ದಾರೋ ಅವರಿಗೆ ನೀಡುವಂಥದ್ದು. ಆ ಅವಾರ್ಡ್ ಗೆದ್ದಿದ್ದು ಧ್ರುವಂತ್. ಒಂದು ಲಕ್ಷ ಬಹುಮಾನ ಸಿಕ್ಕಿದೆ.
‘ಲೌಡ್ ಸ್ಪೀಕರ್’. ಬಿಗ್ ಬಾಸ್ ಮನೆಯಲ್ಲಿ ಯಾರು ಕಿರುಚಾಟ, ಜೋರು ಧ್ವನಿ ಮಾಡುತ್ತಿದ್ದವರು. ಈ ಅವಾರ್ಡ್ ಸಿಕ್ಕಿದ್ದು ರಿಷಾಗೆ. ಜೊತೆಗೆ 1 ಲಕ್ಷ.
ಇನ್ನು ‘ಕಣ್ಣೀರ ಕಣ್ಮಣಿ’ ಅವಾರ್ಡ್ ರಾಶಿಕಾಗೆ ಅವರಿಗೆ ಸಿಕ್ಕಿದೆ. ಜೊತೆಗೆ ಒಂದು ಲಕ್ಷ ಬಹುಮಾನವೂ ಸಿಕ್ಕಿದೆ.
ಆದರೆ ಇಷ್ಟಿದ್ದರೂ.. ಕೋಟಿಯನ್ನೇ ಗೆದ್ದರೂ, ಲಕ್ಷ ಲಕ್ಷ ಗೆದ್ದರೂ.. ಪೂರ್ತಿ ಹಣ ಗೆದ್ದವರ ಕೈ ಸೇರೋದಿಲ್ಲ. ಸರ್ಕಾರದ ನಿಯಮಗಳ ಪ್ರಕಾರ ಎಂಟರ್ ಟೈನ್ ಮೆಂಟ್ ಟ್ಯಾಕ್ಸ್ 30% ಇರುತ್ತೆ. ಪ್ರೈಜ್ ಮನಿಯಾಗಿ ಬಂದ 50 ಲಕ್ಷದಲ್ಲೇ 15 ಲಕ್ಷವನ್ನು ಸರ್ಕಾರಕ್ಕೆ ಗಿಲ್ಲಿ ನಟ ಟ್ಯಾಕ್ಸ್ ಕಟ್ಟಬೇಕು. ಇನ್ನು ಸುದೀಪ್ ಕೊಡುವ 10 ಲಕ್ಷಕ್ಕೆ ಕೂಡಾ ಅದೇ ಟ್ಯಾಕ್ಸ್ ಆಗುತ್ತಾ.. ಗೊತ್ತಿಲ್ಲ. ಪ್ರಾಯೋಜಕರು ಕೊಟ್ಟಿರುವ ಬಹುಮಾನಗಳೂ ಅಷ್ಟೇ. ತಮಗೆ ಸಿಕ್ಕ ಬಹುಮಾನದ 30% ಹಣವನ್ನ ಟ್ಯಾಕ್ಸ್ ಕಟ್ಟಲೇಬೇಕು. 25 ಲಕ್ಷ ಪಡೆದ ರಕ್ಷಿತಾ ಶೆಟ್ಟಿ ಕೂಡಾ ಟ್ಯಾಕ್ಸ್ ಕಟ್ಟಿ ಹದಿನೇಳುವರೆ ಲಕ್ಷ ಮನೆಗೆ ತಗೊಂಡ್ ಹೋಗ್ತಾರೆ. ಮಿಕ್ಕವರು ಕೊಟ್ಟ ಪ್ರೈಜಿನಲ್ಲೂ ಅಷ್ಟೇ, 30% ಕಟ್ ಆಗುತ್ತೆ.



