ಮೂಗುತಿ ಸುಂದರಿಯರಿಯರಿದ್ದಾರೆ. ನಯನತಾರಾ, ಸಾನಿಯಾ ಮಿರ್ಜಾರಂತಹ ಚೆಲುವೆಯರು ಮೂಗುತಿಯಿಂದಲೇ ಸುಂದರಿಯೆನಿಸಿಕೊಂಡವರು. ಆದರೆ, ರಾಜ್ ಬಿ.ಶೆಟ್ಟಿ ಮೂಗುತಿ ಸುಂದರನಾಗಿದ್ದಾರೆ. ಆದರೆ, ಧರಿಸಿರುವುದು ಮಾತ್ರ ಮೂಗುತಿಯಂತಹ ಬಳೆ. ಹೆಚ್ಚೂ ಕಡಿಮೆ ಬಳೆಯೇ. ಆದರೆ ಧರಿಸಿರುವುದು ಮಾತ್ರ ಮೂಗಿನಲ್ಲಿ.
ಮೂಗುತಿಯಂತೆ. ಬಳೆಯನ್ನೇ ಮೂಗುತಿಯಂತೆ ಧರಿಸಿರುವ ರಾಜ್ ಬಿ.ಶೆಟ್ಟಿ, ಮುಖದ ಮೇಲೆಲ್ಲ ರಕ್ತಸಿಕ್ತ ಗಾಯಗಳ ಗುರುತುಗಳ ಜೊತೆ ಭಯಂಕರವಾಗಿ ಕಾಣಿಸಿಕೊಂಡಿದ್ದಾರೆ. ಇದು ಟೋಬಿಯ ಫಸ್ಟ್ ಪೋಸ್ಟರ್. ಇತ್ತೀಚೆಗೆ ಒಂದು ಪೋಸ್ಟರ್ ಈ ಪರಿ ಅಚ್ಚರಿ ಹುಟ್ಟಿಸಿದ್ದು ಅಪರೂಪ.
ನಾನು ಮೊದಲಿಂದಲೂ ಉಪೇಂದ್ರರನ್ನು ನೋಡುತ್ತಲೇ ಬಂದವನು. ಅವರ ಎ, ಉಪೇಂದ್ರ ಚಿತ್ರಗಳ ಪೋಸ್ಟರ್`ಗಳು ವಿಭಿನ್ನವಾಗಿದ್ದವು. ಅದೇ ರೀತಿಯಲ್ಲಿ ವಿಭಿನ್ನವಾಗಿ ಪೋಸ್ಟರ್ ಬರಬೇಕು ಎಂದು ಪೋಸ್ಟರ್ ಸಿದ್ಧ ಪಡಿಸಿದೆವು ಎನ್ನುತ್ತಾರೆ ರಾಜ್ ಬಿ.ಶೆಟ್ಟಿ. ಹಾಗಂತ ಇಡೀ ಚಿತ್ರದುದ್ದಕ್ಕೂ ಈ ಉಂಗುರ ಧರಿಸಿರುವುದಿಲ್ಲ. ಚಿತ್ರದ ಬಹುಮುಖ್ಯ ಸೀನ್`ಗಳಲ್ಲಿ ಈ ರೀತಿಯ ಗೆಟಪ್ ಬರುತ್ತೆ ಅನ್ನೋ ರಾಜ್ ಬಿ.ಶೆಟ್ಟಿ, ಉಳಿದಂತೆ ಕಥೆಯ ಗುಟ್ಟು ಬಿಟ್ಟು ಕೊಡುವುದಿಲ್ಲ.
ಟೋಬಿಗೆ ರಾಜ್ ಬಿ.ಶೆಟ್ಟಿ ಹೀರೋ ಮತ್ತು ಪ್ರೊಡ್ಯೂಸರ್. ಆದರೆ ಡೈರೆಕ್ಟರ್ ಬಾಸಿಲ್. ಕಥೆ ಟಿ.ಕೆ.ದಯಾನಂದ್ ಅವರದ್ದು. ರಾಜ್ ಬಿ.ಶೆಟ್ಟಿ ಎದುರು ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್ ನಾಯಕಿಯರಾಗಿದ್ದಾರೆ. ಸಿನಿಮಾ ಆಗಸ್ಟ್ 25ರಂದು ರಿಲೀಸ್ ಆಗುತ್ತಿದೆ.



