ಉತ್ತರ ಕರ್ನಾಟಕವನ್ನು (Uttara Karnataka) ಅಪ್ಪಟ ಅದೇ ಸೊಗಡಿನಲ್ಲಿ ಬಳಸಿಕೊಂಡ ಚಿತ್ರಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಅಲ್ಲೊಂದು ಇಲ್ಲೊಂದು ಉದಾಹರಣೆಗಳನ್ನು ಬಿಟ್ಟರೆ, ಕೆಟ್ಟ ಕಾಮಿಡಿಗಳಿಗಾಗಿ, ಡಬಲ್ ಮೀನಿಂಗ್ ಸಂಭಾಷಣೆಗೆ ಬಳಸಿಕೊಂಡವರೇ ಹೆಚ್ಚು. ಆದರೆ ಉತ್ತರ ಕರ್ನಾಟಕದ ಕನ್ನಡ ಇದ್ಯಲ್ಲ, ಅದರ ಗಮ್ಮತ್ತೇ ಬ್ಯಾರೆ ಐತಿ.. ಆ ಗಮ್ಮತ್ತಿನ ಜೊತೀಗ್ ಅಲ್ಲೀದ ಕಥಿ ಹೇಳ್ಲಾಕ್ ಬಂದದಾ ಕ್ಷೇತ್ರಪತಿ (Kshethrapathi) ಸಿನಿಮಾ.
ಗುಳ್ಟು ಖ್ಯಾತಿಯ ನವೀನ್ ಶಂಕರ್ (Naveen Shankar), ಹೊಯ್ಸಳದದಲ್ಲಿ (Hoysala) ವಿಲನ್ ಆಗಿ ಅಬ್ಬರಿಸಿದ್ದರು. ಇದೀಗ ಉತ್ತರ ಕರ್ನಾಟಕದ ಮಣ್ಣಿನ ಮಕ್ಕಳ ಕಥೆಗೆ ಹೀರೋ ಆಗಿದ್ದಾರೆ. ಅನ್ಯಾಯದ ವಿರುದ್ಧ ಸಿಡಿದೆದ್ದು ನಿಲ್ಲುವ ಯುವಕನಾಗಿ ನವೀನ್ ಶಂಕರ್ (Naveen Shankar) ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಆ್ಯಂಗ್ರಿ ಯಂಗ್ ಮ್ಯಾನ್ ಗೆಟಪ್ ಗಮನ ಸೆಳೆಯುತ್ತಿದೆ. ಟ್ರೇಲರ್ ನೋಡಿದ ಎಲ್ಲರೂ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕದ ಶೈಲಿಯಲ್ಲಿ ನವೀನ್ ಶಂಕರ್ (Naveen Shankar) ಡೈಲಾಗ್ ಹೊಡೆದಿದ್ದಾರೆ. ಅವರ ವೃತ್ತಿಜೀವನದಲ್ಲಿ ಈ ಪಾತ್ರ ಮತ್ತು ಸಿನಿಮಾ ತುಂಬ ಡಿಫರೆಂಟ್ ಆಗಿರಲಿದೆ.
ಈ ಮೊದಲು ಬಿಡುಗಡೆ ಆದ ಟೀಸರ್ ಮೂಲಕ ‘ಕ್ಷೇತ್ರಪತಿ’ (Kshethrapathi) ಸಿನಿಮಾ ಸದ್ದು ಮಾಡಿತ್ತು. ಈಗ ಟ್ರೇಲರ್ ಕೂಡ ಅಬ್ಬರಿಸುತ್ತಿದೆ. (Kshethrapathi) ‘ಕ್ಷೇತ್ರಪತಿ’ ಸಿನಿಮಾಗೆ ಶ್ರೀಕಾಂತ್ ಕಟಗಿ ನಿರ್ದೇಶಕ. ನವೀಶ್ ಶಂಕರ್ ಜೊತೆ ಕೆಜಿಎಫ್ (KGF) ಖ್ಯಾತಿಯ ನಟಿ ಅರ್ಚನಾ ಜೋಯಿಸ್ (Archana Jois) ಪತ್ರಕರ್ತೆಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್ ರಾಹುಲ್ ಐನಾಪುರ್, ಕೃಷ್ಣ ಹೆಬ್ಬಾಳೆ, ನಾಟ್ಯ ರಂಗ, ಶೈಲಶ್ರೀ, ಹರ್ಷ ಅರ್ಜುನ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ರವಿ ಬಸ್ರೂರು ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಟ್ರೇಲರ್ನಲ್ಲಿ ಹಿನ್ನೆಲೆ ಸಂಗೀತ ಹೈಲೈಟ್ ಆಗಿದೆ.
ಗುಳ್ಟು ಯಶಸ್ಸಿನ (Naveen Shankar) ಬಳಿಕ ತಾವು ಕೇಳಿದ ಬೆಸ್ಟ್ ಕಥೆಗಳಲ್ಲಿ ಇದೂ ಒಂದು ಎಂದಿರುವ ನವೀನ್ ಶಂಕರ್ (Naveen Shankar), ‘ಕ್ಷೇತ್ರಪತಿ’ ಸಿನಿಮಾ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನವೀನ್ ಶಂಕರ್ ಅವರು ಉತ್ತರ ಕರ್ನಾಟಕದವರಾಗಿದ್ದು, ಈ ಸಿನಿಮಾ ಕೂಡ ಆ ಭಾಗದ ಕಥೆ ಆದ್ದರಿಂದ ಬಹಳ ಖುಷಿಯಿಂದ ನಟಿಸಿದ್ದಾರೆ. ರೈತಾಪಿ ಕುಟುಂಬದ ಬಸವ ಎಂಬ ಹುಡುಗನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಕ್ಷೇತ್ರಪತಿ ಬರೀ ಗತ್ತು ಗಮ್ಮತ್ತಿನ್ ಭಾಷೇ ಅಷ್ಟೇ ಬಳಸ್ಕೊಂಡಿಲ್ಲ. ಅಪ್ಪಟ ಅಲ್ಲಿನ ಮಣ್ಣಿನ ಮಕ್ಕಳ ಕಥೆ ಬಳಸ್ಕೊಂಡಿದೆ. ಅದು ಉತ್ತರ ಕರ್ನಾಟಕದ ಕೆಲವು ರಾಜಕಾರಣಿಗಳಿಗೆ, ವಂಶಪಾರಂಪರ್ಯವಾಗಿ ಅಧಿಕಾರ ಅನುಭವಿಸಿ ಮೆರೆಯುತ್ತಿರುವವರಿಗೆ ಕಪಾಳಕ್ಕೆ ಫಟೀರ್ ಎಂದು ಹೊಡೆದಂತೆ ಇದೆ.



