ಒಂದು ಸಖತ್ ರೊಮ್ಯಾಂಟಿಕ್ ಸಾಂಗು.. ಕೇಳುತ್ತಿದ್ದರೆ ಪಂಚೇಂದ್ರಿಯಗಳಿಗೂ ರೋಮಾಂಚನ ಹುಟ್ಟಿಸುವ ಹಾಡು.. ಲವ್ ಯೂ ಕಣೇ..
ಮತ್ತೊಂದು ಸೈಕ್ ಮಾಡುವ ಟಪ್ಪಾಂಗುಚ್ಚಿ ಸಾಂಗು.. ಬ್ಯಾಡ್ ಬಾಯ್ಸ್.. ಫುಲ್ ಸೈಕ್..
ಇನ್ನೊಂದು ಮಿಕ್ಸಿಂಗ್ ಸಾಂಗು.. ಇದು ಭೀಮ ಚಿತ್ರದ ಹೊಸ ಹಾಡಿನ ಮಿಕ್ಸಿಂಗು..
ನೂರ್ ರುಪಾಯ್ ಮಿಕ್ಸ್..
ನಿನ್ ಗುರ್ದಾ ಒಡೀತಿನಿ ಫಿಕ್ಸ್..
ಥೇಟು ಕಲಾಸಿಪಾಳ್ಯದ ಭಾಷೆ ಸ್ಟೈಲಿನಲ್ಲೇ ಬಂದಿದೆ ಭೀಮನ ಹೊಸ ಸಾಂಗ್. ಬೋಟಿ, ಕಲೇಜಾ, ತಲೆ ಮಾಂಸ, ಕಳ್ಳು, ಲಿವರ್ ಫ್ರೈ, ಕಿಡ್ನಿ.. ಎಲ್ಲವೂ ನೂರ್ ರುಪಾಯಿ ಮಿಕ್ಸಿನಲ್ಲಿ ಬರುತ್ತೆ. ಈ ಹಾಡಿಗೆ ಸಾಹಿತ್ಯ ಬರೆದಿರೋದು ಎಂಸಿ ಬಿಜ್ಜು. ಚರಣ್ ರಾಜ್ ಮ್ಯೂಸಿಕ್ಕಿಗೆ ಬಿಜ್ಜು ಮತ್ತು ಚರಣ್ ರಾಜ್ ಇಬ್ಬರೂ ಸೇರಿ ಮಿಕ್ಸ್ ಮಾಡಿದ್ದಾರೆ.
ನಿರ್ಮಾಪಕ ಜಗದೀಶ್ ಮತ್ತು ಕೃಷ್ಣ ಸಾರ್ಥಕ್ ‘ಭೀಮ’ನಿಗೆ ಸಿಗ್ತಿರುವ ರೆಸ್ಪಾನ್ಸ್ ನೋಡಿ ಖುಷಿಯಾಗಿದ್ದಾರೆ. ‘ಭೀಮ’ ಈ ಚಿತ್ರವನ್ನು ಅದ್ದೂರಿಯಾಗಿ ತೆರೆಯ ಮೇಲೆ ತೋರಿಸಲು ಕೋಟಿ ಕೋಟಿ ಸುರಿದಿದ್ದಾರೆ. ಈಗಾಗಲೇ ಭೀಮ ಚಿತ್ರದ ಸೈಕ್ ಸಾಂಗ್ ಸೂಪರ್ ಹಿಟ್ ಆಗಿದೆ. ಬ್ಯಾಡ್ ಬಾಯ್ಸ್ ಅಬ್ಬರದ ಗೀತೆಯಲ್ಲಿ ಬೈಗುಳಗಳ ಸುರಿಮಳೆಯೇ ಇದೆ. ಐ ಲವ್ ಯೂ ಕಣೆ ಹಾಡು ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿ ಹಿಟ್ ಆಗಿದೆ.
ಚಿತ್ರಕ್ಕೆ ದುನಿಯಾ ವಿಜಯ್ ಅವರದ್ದೇ ಡೈರೆಕ್ಷನ್. ಅವರೇ ಹೀರೋ. ಸಲಗ ಚಿತ್ರದ ಸೂಪರ್ ಸಕ್ಸಸ್ಸಿನ ನಂತರ ಮಾಡ್ತಿರೋ ಸಿನಿಮಾ ಭೀಮ. ಒನ್ಸ್ ಎಗೇನ್ ಇದೂ ಅಂಡರ್ ವರ್ಲ್ಡ್ ಕಥೆ. ಆದರೆ ಇಲ್ಲಿ ವಿಜಯ್ ಅವರ ಅವತಾರ ಬೇರೆಯದೇ ಇರುತ್ತೆ. ಹಾಡುಗಳಂತೂ ಬೆಂಗಳೂರಿನ ಗಲ್ಲಿ ಗಲ್ಲಿಗಳನ್ನೂ ಸುತ್ತಿ ಸುತ್ತಿ ಬರುತ್ತಿವೆ.



