ಶಿವರಾಜ್ ಕುಮಾರ್ ಮತ್ತೆ ಆಕ್ಟಿವ್ ಆಗಿದ್ದಾರೆ. ಸಡನ್ ಆಗಿ ಯಾವುದೇ ವಿಶ್ರಾಂತಿ ಪಡೆಯದೇ ಶೂಟಿಂಗ್, ಸಂದರ್ಶನಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಗಲೇ ಒಂದು ಹಂತದ ಡ್ಯೂಟಿಗೆ ಜಾಯಿನ್ ಆಗಿದ್ದಾರೆ. ಜೀ ಕನ್ನಡದ ಸರಿಗಮಪ ಶೋಗೆ ಶಿವಣ್ಣ-ಗೀತಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳು, ತೀರ್ಪುಗಾರರು, ಜ್ಯೂರಿ ಮೆಂಬರ್ಸ್, ನಿರೂಪಕಿ ಅನುಶ್ರೀ ಹಾಗೂ ಇತರ ಅತಿಥಿಗಳು ಶಾಕ್ ಆಗಿದ್ದು, ಶಿವಣ್ಣನನ್ನು ನೋಡಿ ಭಾವುಕರಾಗಿದ್ದಾರೆ. ಶಿವಣ್ಣ ಅವರನ್ನು ತಬ್ಬಿಕೊಂಡಿದ್ದಾರೆ. ಅಷ್ಟೇ ಅಲ್ಲ ಕಣ್ಣೀರಿಟ್ಟಿದ್ದಾರೆ.
ಇನ್ನು ಯೂಟ್ಯೂಬ್ ಚಾನೆಲ್ಲುಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ತಮಗೆ ಕ್ಯಾನ್ಸರ್ ಇದ್ದ ವಿಷಯವನ್ನು ತಮಗೂ ಪತ್ನಿ ಹೇಳಿರಲಿಲ್ಲ. ನೋವನ್ನು ಒಳಗೊಳಗೇ ನುಂಗಿಕೊಂಡು, ಚಿಕಿತ್ಸೆಗೆ ಎಲ್ಲ ರೆಡಿ ಮಾಡಿಟ್ಟುಕೊಂಡು ಹೇಳಿದರು ಎನ್ನವ ಶಿವಣ್ಣ ʻಸಾರಿ ಎನ್ನುವ ಪದ ತುಂಬಾ ಚಿಕ್ಕದುʼ ಎನ್ನುವ ಶಿವಣ್ಣ ‘ಎಲ್ಲಾ ಸ್ಥಾನವನ್ನು ಪತ್ನಿ ತುಂಬೋಕೆ ಆಗಲ್ಲ. ಆದರೆ, ಗೀತಾ ಅದನ್ನು ತುಂಬಿದ್ದಾಳೆ. ನಾನು ಹಲವು ತಪ್ಪನ್ನು ಮಾಡಿದ್ದೇನೆ. ನಾನು ಫಿಟ್ ಹೌದೋ ಅಲ್ಲವೋ ಅನಿಸುತ್ತದೆ’ ಎನ್ನುತ್ತಲೇ ಕಣ್ಣೀರಿಟ್ಟಿದ್ದಾರೆ.
ಅಂದಹಾಗೆ ಶಿವಣ್ಣ ಅವರು ತುಂಬಾ ಹತ್ತಿರದ ಸಂಬಂಧಿಕರು ಹಾಗೂ ಪರಮಾಪ್ತ ಗೆಳೆಯರಿಗೆ ನಾವೇ ವಿಷಯವನ್ನು ತಿಳಿಸಿಬಿಡೋಣ, ಇನ್ಯಾರಿಂದಲೋ ತಿಳಿಯುವುದು ಬೇಡ ಎಂದು ಹೇಳಿದ್ದರಂತೆ. ಅದರಂತೆ ಗೀತಾ, ಆತ್ಮೀಯರಿಗೆ ಹೇಳಿದ್ದರಂತೆ. ವಿಷಯ ತಿಳಿದ ತಕ್ಷಣ ರವಿಚಂದ್ರನ್ ಮನೆಗೆ ಧಾವಿಸಿ ಬಂದರು. ತುಂಬಾ ಟೆನ್ಷನ್ ಆಗಿದ್ದರು ಎನ್ನುವ ಗೀತಾ, ಯಾರಿಗಾದರೂ ಹೇಳುವುದು ಮರೆತಿದ್ದರೆ ಕ್ಷಮಿಸಿಬಿಡಿ ಎಂದಿದ್ದಾರೆ.
ಇನ್ನು ಮಿಯಾಮಿಯಲ್ಲಿ ಶಿವಣ್ಣ ಅವರ ಟ್ರೀಟ್ಮೆಂಟ್ ಸಮಯದಲ್ಲಿ ಎರಡು ವಾರ ನಮ್ಮ ಜೊತೆಗೆ ಇದ್ದ ತನ್ನ ಸೋದರಮಾಮನಿಗೆ ಥ್ಯಾಂಕ್ಸ್ ಹೇಳಿದ್ದಾರೆ. ನನ್ನ ಕೆಲಸಗಳಿಗೆ ಸಹಾಯ, ಶಿವಣ್ಣ ಜೊತೆಗೆ ವಾಕಿಂಗ್, ಕಾಫಿ, ಹಾಸ್ಪಿಟಲ್ ಭೇಟಿಗೆ ಜೊತೆಗೆ ಇರುತ್ತಿದ್ದರು. ಕತ್ತಲಾದಾಗ ಅವರ ಮೊಬೈಲ್ ಫೋನಿಗೆ ಮುಂಜಾವು. ಅವರ ಕ್ಷೇತ್ರದ ಜನರ ಕರೆಗಳು ಬರುತ್ತಿದ್ದವು. ಎಲ್ಲರ ಜೊತೆ ಸ್ವಲ್ಪವೂ ಬೇಜಾರಿಲ್ಲದೆ ಮಾತನಾಡುತಿದ್ದರು. ದೂರದ ಊರಿನಲ್ಲಿದರು, ಕ್ಷೇತ್ರ ಹಾಗೂ ಕ್ಷೇತ್ರದ ಜವಾಬ್ದಾರಿಯನ್ನು ಎಂದಿಗೂ ನಿರ್ಲಕ್ಷ್ಯ ಮಾಡಲಿಲ್ಲ. ನಮ್ಮ ಪ್ರೀತಿಯ ಭೀಮ್ ಮಾಮ.. ಹೀಗೆ ಮುಂದುವರೆಯುತ್ತದೆ ಭೀಮಣ್ಣ ನಾಯ್ಕ್ ಗುಣಗಾನ. ಭೀಮಣ್ಣ ಅವರನ್ನು ಹೀಗೆಲ್ಲ ಹೊಗಳಿರುವುದು ಗೀತಾ ಶಿವರಾಜ್ ಕುಮಾರ್. ಈ ಭೀಮಣ್ಣ ನಾಯ್ಕ್ ಹೊರಗಿನವರೇನಲ್ಲ. ಶಿರಸಿ ಕ್ಷೇತ್ರದ ಶಾಸಕರು. ಸಂಬಂಧದಲ್ಲಿ ಭೀಮಣ್ಣ ನಾಯ್ಕ್ ಅವರು ಗೀತಾ ಅವರಿಗೆ ಮಾಮ ಆಗಬೇಕು. ಗೀತಾ ಶಿವರಾಜ್ ಕುಮಾರ್ ಅವರ ಸೋದರ ಮಾವ. ಶಿವಣ್ಣ ಅವರ ಜೊತೆ ನಿಂತು, ಆಸ್ಪತ್ರೆಯಲ್ಲಿದ್ದು, ಜೊತೆಯಾಗಿದ್ದ ಭೀಮಣ್ಣ ನಾಯ್ಕ್ ಅವರಿಗೆ ಗೀತಾ ಅವರು ಧನ್ಯವಾದ ಅರ್ಪಿಸಿದ್ದಾರೆ
ಆದರೆ ಅಭಿಮಾನಿಗಳು ಹೇಳ್ತಿರೋದು ಒಂದೇ ಮಾತು. ಕೆಲವರಂತೂ ಶಿವಣ್ಣ ಅವರಿಗೆ ಗದರಿದ್ದಾರೆ. ಬೈದಿದ್ದಾರೆ. ಇಷ್ಟು ಬೇಗ ಆಕ್ಟಿವ್ ಆಗೋದು ಬೇಡ. ಒಂದಲ್ಲ ಎರಡು ತಿಂಗಳು ರೆಸ್ಟ್ ಮಾಡಿ.. ಶಿವಣ್ಣ. ಇಷ್ಟು ಬೇಗ ಟಿವಿ, ಸಿನಿಮಾ, ಶೂಟಿಂಗ್ ಅಂತೆಲ್ಲ ಯಾಕೆ ಬರ್ತೀರಿ. ಎಲ್ಲವನ್ನೂ ಮರೆತು ಒಳ್ಳೆಯ ಪರಿಸರ ವಾತಾವರಣದಲ್ಲಿ ಕುಟುಂಬದವರ ಜೊತೆ ಹ್ಯಾಪಿಯಾಗಿರಿ ಎಂದಿದ್ದಾರೆ. ನೀವು ಆರಾಮ್ ಇರಿ, ನೀವು ಎನರ್ಜೆಟಿಕ್ ಅನ್ನೋದು ನಮಗೆ ಗೊತ್ತು. ಅದನ್ನು ಈಗಲೂ ತೋರಿಸುವ ಅಗತ್ಯ ಇಲ್ಲ. ಬಂದು ಹೋಗಿರೋದು ಕ್ಯಾನ್ಸರ್. ಚಿಕಿತ್ಸೆಯಿಂದ ಗುಣಮುಖರಾಗಿ ಆಕ್ಟಿವ್ ಆಗೋಕೆ ಟೈಂ ಕೊಡಿ ಎಂದು ಪ್ರೀತಿಯಿಂದಲೇ ಬುದ್ದಿವಾದ ಹೇಳಿದ್ದಾರೆ.



