ಕಾಟೇರ ಸಿನಿಮಾದ ಬಾಕ್ಸಾಫೀಸ್ ಗೆಲುವು 100 ಕೋಟಿ ದಾಟಿದ ನಂತರವೂ ನಿಲ್ಲುತ್ತಿಲ್ಲ. ಮೊದಲೆಲ್ಲ ಸಿನಿಮಾ ಬಾಕ್ಸಾಫೀಸ್ ರಿಪೋರ್ಟ್ ಕೊಡುತ್ತಿದ್ದ ವಿತರಕ ಗುರು ದೇಶಪಾಂಡೆ 100 ಕೋಟಿ ದಾಟಿದ ಮೇಲೆ ಸೈಲೆಂಟ್ ಆಗಿದ್ದಾರೆ. ಆದರೆ.. ಕಾಟೇರ ಸಿನಿಮಾ ಯಶಸ್ಸು ನಿಲ್ಲುತ್ತಿಲ್ಲ. ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. ಸತತ 2ನೇ ವಾರವೂ ಚಿತ್ರ ಹೌಸ್ʻಫುಲ್ ಪ್ರದರ್ಶನ ಕಾಣುತ್ತಿದೆ. ಜಡೇಶ್, ತರುಣ್, ಮಾಸ್ತಿ ಹಾಗೂ ದರ್ಶನ್ ಅವರ ಶ್ರಮಕ್ಕೆ ಪ್ರತಿಫಲ ಸಿಗುತ್ತಿದೆ. ರಾಕ್ʻಲೈನ್ ವೆಂಕಟೇಶ್ ಖುಷಿಯಾಗಿದ್ಧಾರೆ. ಚಿತ್ರ ವಿದೇಶಗಳಲ್ಲೂ ರಿಲೀಸ್ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ದರ್ಶನ್ ಒಂದು ಮಾತು ಹೇಳಿದ್ಧಾರೆ.
ದುಬೈನಲ್ಲಿ ಪ್ರೇಕ್ಷಕರ ಜೊತೆ ಮಾತನಾಡಿದ ದರ್ಶನ್ ಕಾಟೇರ’ನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮೈ ನಮಃ ಎಂದಿದ್ದಾರೆ.
ದರ್ಶನ್ ಈ ಮಾತು ಹೇಳಿರೋದ್ರ ಹಿಂದಿನ ಮರ್ಮವೇನು ಅನ್ನೋ ಹುಡುಕಾಟ ನಡೆಯುತ್ತಿದೆ. ಆದರೆ ದರ್ಶನ್ ಕೋಪ ಮಾಡ್ಕೊಳ್ಳಲ್ಲ. ನೊಂದ್ಕೊಳ್ಳೋಲ್ಲ. ಕಾಲಾಯ ತಸ್ಮೈ ನಮಃ ಎನ್ನುತ್ತಿದ್ಧಾರೆ. ಮೊದಲೆಲ್ಲ ಹೀಗಿರಲಿಲ್ಲ.. ಡೈರೆಕ್ಟ್ ಡೈರೆಕ್ಟ್ ಆಗಿಯೇ ತಮ್ಮನ್ನು ಟೀಕಿಸಿದವರಿಗೆ ಟಾಂಗ್ ಕೊಡುತ್ತಿದ್ದ ದರ್ಶನ್, ಈಗ ಇನ್ʻಡೈರೆಕ್ಟ್ ಆಗಿ ಹೇಳೋದು ಪ್ರಾಕ್ಟೀಸ್ ಮಾಡಿಕೊಂಡಿದ್ದಾರೆ. ಹಾಗಂತ ದರ್ಶನ್ ಪೂರ್ತಿ ಬದಲಾಗಿಲ್ಲ. ಬದಲಾಗದೆಯೂ ಇಲ್ಲ.
ಕಾಟೇರ ಚಿತ್ರಕ್ಕೂ ಮೊದಲು ದರ್ಶನ್ ಮಾಧ್ಯಮಗಳ ವಿರೋಧ ಎದುರಿಸಿದ್ದರು. ರಾಕ್ʻಲೈನ್ ವೆಂಕಟೇಶ್ ಅವರಿಂದಾಗಿ ವಿವಾದ ಒಂದು ಹಂತಕ್ಕೆ ಬಗೆಹರಿದಿತ್ತು. ದರ್ಶನ್ ಅವರೂ ಕ್ಷಮೆ ಕೇಳುವುದರೊಂದಿಗೆ ವಿವಾದಕ್ಕೆ ಒಂದು ಲೆವೆಲ್ಲಿಗೆ ತೆರೆ ಬಿದ್ದಿತ್ತು. ಕಾಟೇರದ ಸುದ್ದಿಗಳೂ ಪ್ರಸಾರವಾಗಿದ್ದವು. ಈಗ ಸಿನಿಮಾ ಹಿಟ್ ಆಗಿದೆ. ಆದರೆ ಮುಂಜಾನೆವರೆಗಗೂ ಕಾಟೇರದ ಸಕ್ಸಸ್ ಪಾರ್ಟಿ ಮಾಡಿದ್ದಕ್ಕೆ ಕೇಸು ಬಿದ್ದಿದೆ. ಹಾಗಾದರೆ ಈ ಎಚ್ಚರಿಕೆ ಸಂದೇಶ ಯಾರಿಗೆ ಕೊಟ್ಟಿದ್ದು? ಚರ್ಚೆಗಳು ನಡೆಯುತ್ತಲೇ ಇವೆ. ದರ್ಶನ್ ಯಾರಿಗೆ ಮೆಸೇಜ್ ಕೊಟ್ಟಿದ್ಧಾರೋ.. ಯಾವನಿಗ್ಗೊತ್ತು..



