ಸಾಮಾನ್ಯವಾಗಿ ಹೀರೋಗಳು ಸ್ಟಾರ್ ಹೀರೋ ಆದ್ಮೇಲೆ.. ಹಳೆಯದನ್ನೆಲ್ಲ ಮರೆತು ಬಿಡ್ತಾರೆ. ಹೀರೋಗಳು ಮೊದಲ ಬಾರಿ ಸಿನಿಮಾ ಮಾಡಿದಾಗ.. ನನ್ನನ್ನು ಹರಸಿ ಎಂದು ಹಾಡು ಹಾಡ್ತಾರೆ.. ಅದು ಹಿಟ್ ಆಯ್ತಂದ್ರೆ.. ಹರಸಿದ್ದರೆ ಋಣಿ ಎಂದು ಎರಡನೇ ಸಿನಿಮಾ ಮಾಡ್ತಾರೆ. ಅದೂ ಹಿಟ್ ಆಯ್ತು ಅಂದ್ಕೊಳಿ.. 3ನೇ ಸಿನಿಮಾದಲ್ಲಿ ಕನ್ನಡಿಗರೆಲ್ಲ ನನ್ನ ಬೆನ್ನ ಹಿಂದೆ.. ಪ್ರಶ್ನೆ ಮಾಡೋವ್ರೆಲ್ಲ ನನ್ನ ಕಾಲ ಕೆಳಗೆ ಅನ್ನೋ ಹಾಡು ಮಾಡ್ತಾರೆ.. ಇದು ಇತ್ತೀಚೆಗೆ ಟ್ರೆಂಡ್ ಆಗಿರೋ ಕಲ್ಚರ್.
ಸುಮ್ಮನೆ ಇತ್ತೀಚಿನ ವರ್ಷಗಳಲ್ಲಿ ಸ್ಟಾರ್ ಆಗಿರುವ ಯಾವುದೇ ನಟರ ಸಂದರ್ಶನ ತೆಗೆದುನೋಡಿ.. ಅವರು ತಮ್ಮ ಬಗ್ಗೆ ಮಾತ್ರವೇ ಮಾತನಾಡ್ತಾ ಇರ್ತಾರೆ. ತಾನು ಇಂತಹ ನಟನ ಅಭಿಮಾನಿ, ಫ್ಯಾನ್ ಎಂದು ಅಪ್ಪಿತಪ್ಪಿಯೂ ಹೇಳೋದಿಲ್ಲ. ಹೀಗಿರುವಾಗ.. ಇಂತಹವರೇ ಹೆಚ್ಚಿರುವಾಗ.. ರಿಷಬ್ ಶೆಟ್ಟಿ ಫುಲ್ ಡಿಫರೆಂಟ್ ಅನ್ನಿಸೋದು ಇದೇ ಕಾರಣಕ್ಕೆ. ಕಾಂತಾರದಂತಹ ಅಪ್ಪನಂತಹ ಸಿನಿಮಾ ಮಾಡಿದ್ರೂ ಅಷ್ಟೆ.. ನಾನು ಸುದೀಪ್ ಫ್ಯಾನ್ ಎಂದಿದ್ದಾರೆ ರಿಷಬ್ ಶೆಟ್ಟಿ.
ರಿಷಬ್ ಶೆಟ್ಟಿ ಈ ಹಿಂದೆಯೂ ಹಲವು ಬಾರಿ ವೇದಿಕೆಗಳಲ್ಲಿ, ಸಂದರ್ಶನಗಳಲ್ಲಿ ನಾನು ಕಿಚ್ಚ ಸುದೀಪ್ ಅಭಿಮಾನಿ ಎಂದು ಹೇಳಿಕೊಂಡಿದ್ದರು. ಇತ್ತೀಚೆಗೆ ಅದೇ ಮಾತನ್ನು ಮತ್ತೊಮ್ಮೆ ಹೇಳಿದ್ದಾರೆ. ರಿಷಬ್ ಶೆಟ್ಟಿ ಈಗ ಲಾಫಿಂಗ್ ಬುದ್ಧ ಚಿತ್ರದ ಪ್ರಮೋಷನ್ನಿನಲ್ಲಿದ್ದಾರೆ. ಲಾಫಿಂಗ್ ಬುದ್ಧ, ರಿಷಬ್ ಶೆಟ್ಟಿಯವರೇ ನಿರ್ಮಾಣ ಮಾಡಿರುವ ಪ್ರಮೋದ್ ಶೆಟ್ಟಿ ನಾಯಕತ್ವದ ಸಿನಿಮಾ. ಭರತ್ ರಾಜ್ ನಿರ್ದೇಶನದ ಲಾಫಿಂಗ್ ಬುದ್ಧ ಇದೇ ಆಗಸ್ಟ್ 30ಕ್ಕೆ ರಿಲೀಸ್ ಆಗ್ತಿದೆ. ಈ ಚಿತ್ರದ ಪ್ರಮೋಷನ್ ವೇಳೆ ನೀಡುತ್ತಿದ್ದ ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿಯವರ ಎದುರು ಸುದೀಪ್ ವಿಚಾರ ಪ್ರಸ್ತಾಪವಾಗಿದೆ.
ಈ ವೇಳೆ ತಾವು ಎಂದೆಂದಿಗೂ ಸುದೀಪ್ ಅಭಿಮಾನಿ ಎಂದು ಹೇಳಿಕೊಂಡ ರಿಷಬ್ ಶೆಟ್ಟಿ ತಾವು ಕಾಂತಾರ ಆದ ಮೇಲೆ ಸುದೀಪ್ ಅವರ ಹುಟ್ಟುಹಬ್ಬದಲ್ಲಿ ಸಿಕ್ಕಾಗ ತೆಗೆದುಕೊಂಡಿರುವ ಫೋಟೋ ಎಂದು ಕೂಡಾ ತೋರಿಸಿದ್ದಾರೆ. ಅದೇ ಬರ್ತ್ ಡೇ ಪಾರ್ಟಿಯಲ್ಲಿ ನಟರೂ ಆಗಿರುವ ದ್ಯಾನಿಷ್ ಸೇಠ್ ಪಾರ್ಟಿಯನ್ನ ಹೋಸ್ಟ್ ಮಾಡ್ತಾ ಇದ್ರು. ಕಾಂತಾರ ಗೆದ್ದಿದ್ದ ಸಮಯ ಅದು. ಅವರು ನನಗೆ ಪ್ಯಾನ್ ಇಂಡಿಯಾ, 400 ಕೋಟಿ ಸ್ಟಾರ್ ಅಂತೆಲ್ಲ ಬಿಲ್ಡಪ್ ಕೊಡ್ತಾ ಇದ್ರು.
ಈ ವೇಳೆ ನನಗೆ ಅಲ್ಲಿ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ಈಗ ನೀವು ಏನೆಲ್ಲ ಹೇಳಿದ್ರಿ, ಇದರ ಅಪ್ಪನಷ್ಟು ಆದರೂ ಕೂಡ ಯಾವತ್ತೂ ಸುದೀಪ್ ಸರ್ ಫ್ಯಾನ್ ಬಾಯ್ ಆಗಿಯೇ ಇರುತ್ತೇನೆ ಅಂತ ಹೇಳಿದ್ದೆ. ಸೋ ಯಾವಾಗಲೂ ನಾನು ಅವರಿಗೆ ಅಭಿಮಾನಿಯಾಗಿರುತ್ತೇನೆ.” ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ಪಟ್ಟ ಬಂದ ಮೇಲೆ ಹಳೆಯ ಸ್ನೇಹ ಸಂಬಂಧಗಳೇ ಮಾಯವಾಗುವುದನ್ನು ನೋಡಿದ್ದೇವೆ. ಇದು ಸಿನಿಮಾ ಇಂಡಸ್ಟ್ರಿಯಲ್ಲಿ ಕಾಮನ್. ಎಲ್ಲ ರಂಗದಲ್ಲೂ ಗೆಲುವು ಸಿಕ್ಕ ಮೇಲೆ ಇದು ಇದ್ದದ್ದೇ. ಆದರೆ ರಿಷಬ್ ಶೆಟ್ಟಿಯವರ ಈ ಮಾತು ಸುದೀಪ್ ಅಭಿಮಾನಿಗಳಿಗಂತೂ ಖುಷಿ ಕೊಟ್ಟಿದೆ. ರಿಷಬ್ ಶೆಟ್ಟಿಯವರ ತಲೆ, ಇನ್ನೂ ಕುತ್ತಿಗೆ ಮೇಲೆಯೇ ಇದೆ ಎನ್ನುತ್ತಿದ್ದಾರೆ ಕಿಚ್ಚನ ಹುಡುಗ್ರು.
ರಿಷಬ್ ಶೆಟ್ಟಿ ಈ ಹಿಂದೆಯೂ ಹಲವು ಬಾರಿ ಹೇಳಿದ್ದಾರೆ. ನನಗೆ ಪುನೀತ್ ಸರ್ ಇಷ್ಟ, ಜಗ್ಗೇಶ್ ಅಂದ್ರೆ ತುಂಬಾ ಇಷ್ಟ. ಆದರೆ.. ಸುದೀಪ್ ಅಂದ್ರೆ ಪ್ರಾಣ ಎಂದು ಹೇಳಿದವರು ರಿಷಬ್ ಶೆಟ್ಟಿ. ಕನ್ನಡದ ಹಲವು ಹೀರೋ ಕಂ ಸ್ಟಾರ್ ನಟರು ಹೀಗೆ ಹೇಳಲ್ಲ. ಕಿಚ್ಚ ಸುದೀಪ್ ಕನ್ನಡದಲ್ಲಿ ವಿಷ್ಣುವರ್ಧನ್ ಅವರ ಫ್ಯಾನ್ ಎಂದು ಹೇಳಿಕೊಳ್ತಾರೆ. ಈಗ ಅವರ ಅಭಿಮಾನಿ ನಟ, ಸ್ಟಾರ್ ಆಗಿದ್ದರೂ.. ತಾನು ಸುದೀಪ್ ಫ್ಯಾನ್ ಅಂತಾ ಹೇಳ್ಕೊಳ್ತಾರೆ.



