ಶ್ರೀರಾಮನವಮಿ ದಿನವೇ.. ಜೈ ಶ್ರೀರಾಮ್ ಎಂದಿದ್ದವರ ಮೇಲೆ ಹಲ್ಲೆ ಮಾಡಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೇ ಈ ಘಟನೆ ಜರುಗಿದೆ. ಬುಧವಾರ ಶ್ರೀರಾಮ ನವಮಿಯನ್ನು ಮುಗಿಸಿ ಕಾರಿನಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿಕೊಂಡು ಹೋಗುತ್ತಿದ್ದ ಮೂವರು ಹಿಂದೂ ಯುವಕರ ಕಾರನ್ನು ಮುಸ್ಲಿಂ ಯುವಕರ ಗುಂಪೊಂದು ಅಡ್ಡಗಟ್ಟದೆ. ಇಲ್ಲಿ ಶ್ರೀರಾಮ್ ಎನ್ನಂಗಿಲ್ಲ, ಓನ್ಲಿ ಅಲ್ಲಾ.. ಅಲ್ಲಾ ಹು ಅಕ್ಬರ್ ಎನ್ನಬೇಕು ಎಂದು ಹಲ್ಲೆ ಮಾಡಿದೆ.
ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಬೆಟ್ಟಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿರುವ ಘಟನೆ ಇದು. ಮೂವರು ಬಾಲಕರು ಕಾರಿನಲ್ಲಿ ಹೋಗುತ್ತಿದ್ದಾಗ ಜೈ ಶ್ರೀರಾಮ್ ಎಂದು ಕೂಗಿದ್ದಾರೆ. ಈ ವೇಳೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕರು ಕಾರನ್ನು ಅವರನ್ನು ತಡೆದು ನಿಲ್ಲಿಸಿ ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ಕಾರಿನ ಬಳಿ ಬಂದು ಯುವಕರು ಏನು ನೀವು ಜೈ ಶ್ರೀರಾಮ್ ಎಂದು ಹೇಳಬೇಕಾ? ಇಲ್ಲಿ ಜೈ ಶ್ರೀ ರಾಮ್ ಇಲ್ಲಾ… ಒನ್ಲೀ ಅಲ್ಲಾ… ಅಲ್ಲಾ ಹು ಅಕ್ಬರ್ ಎಂದು ಹೇಳಬೇಕು ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.
ಆಗ ಕಾರಿನಲ್ಲಿ ಕುಳಿತಿದ್ದ ಹಿಂದೂ ಯುವಕರು ನಮ್ಮ ಹಬ್ಬ ನಾವು ಏನಾದ್ರೂ ಮಾಡ್ಕೋತೀವಿ. ನಾವು ನಿಮ್ಮ ಹಬ್ಬದಲ್ಲಿ ಹೀಗೆ ಮಾಡ್ತಿವಾ? ನಿಮ್ಮ ಹಬ್ಬದಲ್ಲಿ ಬಂದು ನಾವು ಹೀಗೆ ಮಾಡ್ತೀವಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದಾದ ನಂತರ ಅವ್ಯಾಚ್ಯ ಶಬ್ದಗಳ ನಿಂದನೆ ಹೆಚ್ಚಾಗಿದೆ. ಈ ವೇಳೆ ಮುಸ್ಲಿಂ ಯುವಕರು ಕಾರಿನಲ್ಲಿದ್ದವರ ಮೇಲೆ ಹಲ್ಲೆ ಮಾಡಲು ಮುಂದಾದಾಗ, ಇವರೂ ಕೂಡ ಕಾರಿನಿಂದ ಇಳಿದು ಹೊರಗೆ ಬಂದು ಮಾರಾಮಾರಿ ಹೊಡೆದಾಡಿಕೊಂಡಿದ್ದಾರೆ. ಇನ್ನು ಬೈಕ್‌ನಲ್ಲಿದ್ದ ಮುಸ್ಲಿಂ ಇಬ್ಬರು ಮುಸ್ಲಿಂ ಯುವಕರ ಜೊತೆಗೆ ಅಲ್ಲಿಯೇ ಇದ್ದ ಮತ್ತಿಬ್ಬರು ಮುಸ್ಲಿಂ ಯುವಕರು ಸೇರಿ ಕಾರಿನಲ್ಲಿ ಬಂದಿದ್ದವರ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ. ಈ ಘಟನೆ ನಂತರ ಕಾರಿನಲ್ಲಿದ್ದ ಯುವಕರು ವಿದ್ಯಾರಣ್ಯ ಪುರ ಪೊಲೀಸ್ ಠಾಣೆಗೆ ಬಂದು ದೂರು ದಾಖಲು ಮಾಡಿದ್ದಾರೆ.
ರಾಮನವಮಿ ಇದ್ದ ಕಾರಣ ನಾವು ರಾಮನ ಫ್ಲಾಗ್ ಹಿಡಿದುಕೊಂಡು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ರಸ್ತೆಯಲ್ಲಿ ಹೋಗುತ್ತಿದ್ದೆವು. ಸಡನ್ ಆಗಿ ಇಬ್ಬರು ಮುಸ್ಲಿಂ ಯುವಕರು ಬಂದು.. ಕ್ಯಾ ಮದರ್ ಚು** ಕ್ಯಾ ಬೋಲೆಗಾ.. ಶ್ರೀ ರಾಮ್ ನಹಿ ಅಲ್ಲಾ ಅಕ್ಬರ್ ಬೋಲೋ ಅಂದ್ರು. ನಾವು ಇದು ನಮ್ ಹಬ್ಬ.. ನಿಮ್ ಹಬ್ಬ ಇದ್ದಾಗ ನಾವು ನಿಮ್ ತಂಟೆಗೆ ಬರ್ತಿವಾ ಅಂತ ಕೇಳುದ್ವಿ. ಆಗ ನಮ್ಮ ಕಾರು ಮತ್ತು ನಮ್ಮ ಕೈಲಿದ್ದ ಕೇಸರಿ ಬಾವುಟವನ್ನು ಕಿತ್ತು ಹಾಕಿದರು. ಅಕ್ಕಪಕ್ಕದಲ್ಲಿದ್ದ ಯಾರೊಬ್ಬರೂ ನಮ್ಮನೆರವಿಗೆ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ ಹಲ್ಲೆಗೊಳಗಾದ ಪವನ್, ವಿನಾಯಕ್ ಮತ್ತು ರಾಹುಲ್.
ಘಟನೆಗೆ ಸಂಬಂಧಪಟ್ಟಂತೆ ಒಟ್ಟು ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ. ಫರ್ಮಾನ್ ಹಾಗು ಸಮೀರ್ ಎಂಬುದು ಆರೋಪಿಗಳ ಹೆಸರು. ಇನ್ನಿಬ್ಬರು ಅಪ್ರಾಪ್ತ ಬಾಲಕರು. ಹೀಗಾಗಿ ಆರೋಪಿಗಳು ಎಂದು ಹೆಸರು ಹೇಳುವಂತಿಲ್ಲ. ಘಟನೆಯ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರಿಂದ ವಿದ್ಯಾರಣ್ಯಪುರ ಠಾಣೆ ಎದುರು ಬೃಹತ್ ಪ್ರತಿಭಟನೆ ನಡೆಯುತ್ತಿದೆ.



