ದರ್ಶನ್ ಅಭಿಮಾನಿಗಳಿಗೆ ಶಿಕ್ಷೆ ಕೊಡಿಸುವ ಉದ್ದೇಶ ಇಲ್ಲ. ಅವರನ್ನು ನಾನ್ಯಾವಾಗಲೋ ಕ್ಷಮಿಸಿದ್ದೇನೆ.. ಈ ಮಾತು ಹೇಳಿರೋದು ನಟಿ ರಮ್ಯಾ. ನಟಿ ರಮ್ಯಾ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿ ಕಮೆಂಟ್ ಮಾಡಿದ್ದ ಕೆಲವು ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಕೇಸು ಹಾಕಿದ್ದರು. ಒಟ್ಟು 11 ಜನ ಅರೆಸ್ಟ್ ಆಗಿದ್ದರು. ಕಾಲಿಗೆ ಬೀಳ್ತೀವಿ, ದಯವಿಟ್ಟು ಕೇಸ್ ವಾಪಸ್ ತೆಗೆದುಕೊಳ್ಳಿ’ ಎಂದು ಆರೋಪಿಗಳ ಕುಟುಂಬದವರು ರಮ್ಯಾಗೆ ಮನವಿ ಮಾಡಿದ್ದಾರಂತೆ. ಅವರಿಗೆ ಉತ್ತರ ನೀಡಿರುವ ರಮ್ಯಾ ʻʻ ನಾನು ಯಾವಾಗಲೋ ಕ್ಷಮಿಸಿದ್ದೇನೆ. ಆದರೆ ಅವರು ಈ ರೀತಿ ತಪ್ಪು ಮತ್ತೊಮ್ಮೆ ಯಾರಿಗೂ ಮಾಡಬಾರದು ಎಂಬುದು ನನ್ನ ಉದ್ದೇಶ. ಅದಕ್ಕಾಗಿಯೇ ನಾನು ದೂರು ದಾಖಲಿಸಿದ್ದು. ಅವರು ಮತ್ತೆ ತಪ್ಪು ಮಾಡಲ್ಲ ಎಂಬ ಭರವಸೆ ನನಗೆ ಇದೆ. ಶಿಕ್ಷೆ ಕೊಡಿಸಬೇಕು ಎಂಬ ಉದ್ದೇಶ ನನಗೆ ಇಲ್ಲʼʼ ಎಂದಿದ್ದಾರೆ.
ಅಂದಹಾಗೆ ಎಲ್ಲರಿಗೂ ಬೇಲ್ ಸಿಕ್ಕಿದೆ. ಅವರಿಗೆಲ್ಲ ಬೇಲ್ ಆಗಿದ್ದರೂ.. ಜಾಮೀನಿನ ಷರತ್ತಾಗಿದ್ದ ಹಣ ಕಟ್ಟಲಾಗದೆ ಜೈಲಿನಲ್ಲೇ ಇದ್ದರು. ತಿಂಗಳುಗಳ ನಂತರ ಅವರೆಲ್ಲರೂ ರಿಲೀಸ್ ಆಗಿದ್ದಾರಂತೆ. ಸ್ವತಃ ರಮ್ಯಾ ಅವರೇ ಇದನ್ನು ತಿಳಿಸಿದ್ದಾರೆ.
ʻʻಎಲ್ಲ ಆರೋಪಿಗಳೂ ಬೇಲ್ ಮೇಲೆ ಹೊರಗೆ ಬಂದಿದ್ದಾರೆ. ನಾನು ಅವರನ್ನು ಯಾವಾಗಲೋ ಕ್ಷಮಿಸಿದ್ದೇನೆ. ಆದರೆ ಅವರು ಈ ರೀತಿ ತಪ್ಪು ಮತ್ತೊಮ್ಮೆ ಯಾರಿಗೂ ಮಾಡಬಾರದು ಎನ್ನುವುದಷ್ಟೇ ನನ್ನ ಉದ್ದೇಶ. ಅದಕ್ಕಾಗಿಯೇ ನಾನು ದೂರು ದಾಖಲಿಸಿದ್ದು. ಅವರು ಮತ್ತೆ ತಪ್ಪು ಮಾಡಲ್ಲ ಎಂಬ ಭರವಸೆ ನನಗೆ ಇದೆ. ಶಿಕ್ಷೆ ಕೊಡಿಸಬೇಕು ಎಂಬ ಉದ್ದೇಶ ನನಗೆ ಇಲ್ಲʼʼ ಎಂದಿದ್ದಾರೆ.
ಚಾಮರಾಜನಗರದ ಆಟೋ ಡ್ರೈವರ್ ಒಬ್ಬರು ತಮ್ಮ ಮೊಬೈಲಿಂದ ಬೇರೆಯವರು ಪೋಸ್ಟ್ ಹಾಕಿದ್ದರು ಎಂಬ ವಾದಕ್ಕೂ ಉತ್ತರ ಕೊಟ್ಟಿರುವ ರಮ್ಯಾ ʻʻಒಂದು ಕಡೆ ಅವರೆಲ್ಲ ಬಡವರು ಎನ್ನುತ್ತೀರಿ. ಅಶ್ಲೀಲ ಕಮೆಂಟ್ ಮಾಡೋವಾಗ ಬಡತನ ಇರಲಿಲ್ವಾ.. ಫೋನ್ ಇದೆ ಅಂತ ನೀವು ಡೇಟಾ ಖರೀದಿಸಬಹುದು, ಇನ್ಸ್ಟಾಗ್ರಾಮ್ ಬಳಸಬಹುದು, ಕಮೆಂಟ್ ಮಾಡಬಹುದು. ಹಾಗೆಲ್ಲ ಕಮೆಂಟ್ ಮಾಡುವುದು ಸರಿಯಲ್ಲ ಅಂತ ಮಕ್ಕಳಿಗೆ ಹೇಳಿಕೊಡಬೇಕು. ಯಾರೋ ಸ್ನೇಹಿತರು ಕಮೆಂಟ್ ಮಾಡಿದರು ಎನ್ನುವುದಾದರೆ ಇನ್ಮೇಲೆ ನಿಮ್ಮ ಮೊಬೈಲ್ ಯಾರಿಗೂ ಕೊಡಬೇಡಿ ಎಂದು ಬುದ್ದಿ ಹೇಳಿದ್ದಾರೆ.
ಅವರ ಪೋಷಕರು ಬಂದು ನನ್ನನ್ನು ಭೇಟಿ ಮಾಡುವ ಅವಶ್ಯಕತೆ ಇಲ್ಲ. ನನಗೆ ಕೇಳುವ ಬದಲು ನಿಮ್ಮ ಮಕ್ಕಳಿಗೆ ಬುದ್ಧಿ ಹೇಳಿ ಎಂದಿದ್ದಾರೆ ರಮ್ಯಾ.
ಇದೇ ವೇಳೆ ಮುಂದಿನ ತಿಂಗಳು ರಿಲೀಸ್ ಆಗುವ ʻದಿ ಡೆವಿಲ್ʼ ಚಿತ್ರ ಯಶಸ್ಸು ಕಾಣಲಿ ಎಂದು ಶುಭ ಕೋರಿದ್ದಾರೆ. ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಕ್ಕೆ ಶುಭಕೋರಿದ ರಮ್ಯ ಅವರು ಐ ವಿಷ್ ಧೆಮ್ ಅಲ್ ದಿ ಬೆಸ್ಟ್ ಎಂದು ಶುಭ ಕೋರಿದ್ದಾರೆ.



