ಮಕ್ಕಳು ಚೆನ್ನಾಗಿ ಬಾಳಿ ಬದುಕಲಿ ಎಂದು ಮದುವೆ ಮಾಡ್ತಾರೆ ಅಪ್ಪ ಅಮ್ಮ. ಅದು ಯಾರೇ ಇರಬಹುದು, ಮಕ್ಕಳ ಬದುಕು ಮೂರಾಬಟ್ಟೆಯಾಗಲಿ ಎಂದು ಯಾರೂ ಬಯಸುವುದಿಲ್ಲ. ಅದು ಸಹಜ. ಯುವ ಮತ್ತು ಶ್ರೀದೇವಿ ಅವರನ್ನು ಮದುವೆ ಮಾಡಿಸಿದ್ದೂ ಚೆಂದವಾಗಿ ಬಾಳಲಿ. ಹಾಲು ಜೇನಿನಂತೆ ಒಬ್ಬರಿಗೊಬ್ಬರು ಅನ್ಯೋನ್ಯವಾಗಿರಲಿ ಎಂದೇ. ಆದರೆ.. ಯುವ ರಾಜ್ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ಡೈವೋರ್ಸ್ ಕೇಸ್ ಬೀದಿಗೆ ಬಂದಾಗಿದೆ.
ಯುವ ಪರ ವಕೀಲ ಸಿರಿಲ್ ಪ್ರಸಾದ್ ಯುವ ಪತ್ನಿ ಶ್ರೀದೇವಿ ವಿರುದ್ಧ ಅಕ್ರಮ ಸಂಬಂಧ, ಕೋಟಿ ಕೋಟಿ ಲೂಟಿ, ಕುಟುಂಬದ ಹೆಸರು ದುರುಪಯೋಗ, ಮನೆತನದ ಘನತೆಗೆ ಧಕ್ಕೆ ತರುವ ಬೆದರಿಕೆ.. ಮುಂತಾದ ಆರೋಪ ಮಾಡುತ್ತಿದ್ದರೆ, ಅತ್ತ ಶ್ರೀದೇವಿ ಭೈರಪ್ಪ ಕೂಡಾ ಯುವ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಿದ್ದಾರೆ. ಅಳಿಯ ಯುವ ಕೋರ್ಟಿನಲ್ಲಿ ಮಾನಸಿಕ ಕಿರುಕುಳದ ಆರೋಪ ಮಾಡಿದ್ದಾರೆ. ಮಗಳು ಹಾಗೂ ಅಳಿಯ ನಡುವಿನ ರಂಪಾಟದ ಮಧ್ಯೆ ಶ್ರೀದೇವಿ ಭೈರಪ್ಪ ಅವರ ತಂದೆ ಸಿಡಿದು ನಿಂತಿದ್ದಾರೆ ಭೈರಪ್ಪ. ಆದರೆ, ಅವರು ಈಗಲೂ ಹೇಳೋದು ಅದೇ ಮಾತು. ಡೈವೋರ್ಸ್ ಬೇಡ ಎನ್ನುವುದೇ.
ಯುವ ಮತ್ತು ಶ್ರೀದೇವಿ ಅವರದ್ದು ಲವ್ ಮ್ಯಾರೇಜ್. ಮದುವೆಗೆ ನಾನು ಬೇಡ ಎಂದಿದ್ದೆ. ಆದರೆ ಮಗಳು ಒಪ್ಪಿಕೊಂಡಿದ್ದಳು. ನಾವೇ ಮನಸೋತ್ವಿ. ಮದುವೆ ಮಾಡಿಕೊಳ್ಳಲು ಬಲವಂತ ಮಾಡಿದವರು ಯುವ, ರಾಘವೇಂದ್ರ ರಾಜ್ ಕುಮಾರ್ ಮತ್ತು ಮಂಗಳಾ. ಮದುವೆಗೂ ಮುನ್ನವೇ ಡಾ ರಾಜ್‌ಕುಮಾರ್ ಅಕಾಡೆಮಿ ಮಾಡಿದ್ದು ನನ್ನ ಮಗಳೇ. ಅದು ಚೆನ್ನಾಗಿ ನಡೆಯುತ್ತಿತ್ತು. ಈ ಮಧ್ಯೆದಲ್ಲಿ ಯುಎಸ್‌ಎಗೆ ಕಳುಹಿಸಿದರು. ಸಮಸ್ಯೆ ಶುರುವಾಗಿದ್ದು ಅಲ್ಲಿಂದಲೇ. ಡಿಸ್ಪ್ಯೂಟ್ ಶುರು ಆಗೋಕೆ ಅವರೇ ಕಾರಣ ಎಂದಿದ್ದಾರೆ ಭೈರಪ್ಪ.
ಡೈವೋರ್ಸ್‌ಗೆ ನಮ್ಮ ಒಪ್ಪಿಗೆ ಇಲ್ಲ ಎಂದಿರುವ ಭೈರಪ್ಪ ಕಾನೂನಿನ ಪ್ರಕಾರ ಏನಾಗುತ್ತೋ.. ನೋಡೋಣ. ಜೊತೆಯಲ್ಲಿ ಚೆನ್ನಾಗಿರಬೇಕು ಅಂತ ನನ್ನ ಆಸೆ. ದೊಡ್ಮನೆ ಫ್ಯಾಮಿಲಿಯವರು ಯಾರೂ ಮಾತನಾಡಿಲ್ಲ. ನಾನೇ ಶಿವಣ್ಣ ಅವರ ಬಳಿ ಮಾತನಾಡಬೇಕು ಅಂದುಕೊಂಡೆ. ಆದರೆ, ಅದು ಆಗಲಿಲ್ಲ. ಯಾರನ್ನೂ ನಾನಿನ್ನೂ ಸಂಪರ್ಕ ಮಾಡಿಲ್ಲ. ರಾಘವೇಂದ್ರ ರಾಜ್‌ಕುಮಾರ್ ಕೂಡ ಮಾತಾಡಿಲ್ಲ. ಏಕಾಏಕಿ ಕೋರ್ಟ್‌ಗೆ ಹೋಗಿದ್ದಾರೆ ಎಂದಿದ್ದಾರೆ.
ಅವಳಿಗೆ ಎಷ್ಟು ಹಿಂಸೆ ಕೊಟ್ಟಿದ್ದಾರೆ ಅಂತ ಅವಳಿಗೆ ಮಾತ್ರ ಗೊತ್ತು. ತಂದೆ ಕಷ್ಟಪಡ್ತಾರೆ ಅಂತ ಇಲ್ಲಿತನಕ ಅವಳು ಏನ್ನನ್ನೂ ಹೇಳಿರಲಿಲ್ಲ. ಮಗಳು ಸಿಕ್ಕಾಪಟ್ಟೆ ನೋವಲ್ಲಿ ಇದ್ದಾಳೆ ಎಂದಿರುವ ಭೈರಪ್ಪ ಮಗಳು ಎಂಬಿಎ ಮಾಡಿದ್ದು, ಅವಳನ್ನು ಬಲವಂತವಾಗಿ ಅಮೆರಿಕಕ್ಕೆ ಕಳಿಸಿದ್ದೇ ಯುವ ಮನೆಯವರು. ಸ್ಟೈಫಂಡ್ ಸಿಕ್ಕಿದೆ. ಖರ್ಚೇನಿಲ್ಲ ಎಂದು ಕೂಡಾ ಹೇಳಿದ್ದಾರೆ. ಡೈವೋರ್ಸ್ ಪ್ರಕ್ರಿಯೆ ಶುರುವಾಗುವ ಮೊದಲು ಒಮ್ಮೆ ಯುವ ಮನೆಗೆ ಬಂದಿದ್ದ. ಸುಮ್ಮನೆ ಒಂದಿಷ್ಟು ಹೊತ್ತು ಕೂತು ಎದ್ದು ಹೋದ ಎಂದಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳು ಡಿಸೆಂಬರಿನಲ್ಲೇ ಶುರುವಾದವಂತೆ.
ಅಂದರೆ ಯುವ ಸಿನಿಮಾ ರಿಲೀಸ್ ವಿಳಂಬವಾಗೋದಕ್ಕೆ ಯುವ ಕುಟುಂಬ ಸಮಸ್ಯೆಯೇ ಕಾರಣವಾ..? ಗೊತ್ತಿಲ್ಲ. ಏಕೆಂದರೆ ಯುವ ಸಿನಿಮಾ ಡಿಸೆಂಬರಿನಲ್ಲಿ ರಿಲೀಸ್ ಆಗುತ್ತದೆ ಎಂಬ ಸುದ್ದಿಯಿತ್ತು. ಇದರ ನಡುವೆ ಯುವ ಅವರ ಮಾವ ಭೈರಪ್ಪ ಅವರಿಗೆ ಯುವ ಮತ್ತು ಸಪ್ತಮಿ ಗೌಡ ಅವರಿಗೆ ಇದೆ ಎನ್ನಲಾದ ಅಫೇರ್ ಬಗ್ಗೆ ಮಾಹಿತಿ ಇಲ್ಲ.



