Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಕೆಂಪೇಗೌಡರ ಸಿನಿಮಾ ನೋಡೋ ಭಾಗ್ಯ ಸದ್ಯಕ್ಕಿಲ್ಲ : ನಾಗಾಭರಣ ಬ್ರೇಕ್..‌ ಆದರೆ..

SpeciallU by SpeciallU
April 23, 2024
in Cinema, News
Reading Time: 1 min read
0 0
0
ಕೆಂಪೇಗೌಡರ ಸಿನಿಮಾ ನೋಡೋ ಭಾಗ್ಯ ಸದ್ಯಕ್ಕಿಲ್ಲ : ನಾಗಾಭರಣ ಬ್ರೇಕ್..‌ ಆದರೆ..

ಕರ್ನಾಟಕದಲ್ಲಿ ಯಾರ್‌ ಯಾರದ್ದೋ ಸಿನಿಮಾಗಳು ಬಂದಿವೆ. ದೊಡ್ಡ ದೊಡ್ಡ ಸಾಧಕರ ಚಿತ್ರಗಳು ಬಂದಿವೆ. ಮಯೂರ, ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣದೇವರಾಯ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ.. ಹೀಗೆ ಹಲವು ವೀರರ ಚಿತ್ರಗಳು ಬಂದಿವೆ. ಸರ್ವಜ್ಞ, ಕನಕದಾಸ, ಪುರಂದರದಾಸ, ಬಸವಣ್ಣ.. ರಂತಹ ಮಹನೀಯರ ಜೀವನ ಚಿತ್ರಗಳನ್ನೂ ನೋಡಿದ್ದೇವೆ. ಆದರೆ.. ಅದೇಕೋ ಏನೋ.. ಕೆಂಪೇಗೌಡರ ಜೀವನ ಚರಿತ್ರೆ ಸಿನಿಮಾ ಆಗಿಲ್ಲ.

ಕೆಂಪೇಗೌಡರು ಚಕ್ರವರ್ತಿಯಾಗಿದ್ದವರೇನಲ್ಲ. ಆದರೆ.. ಕರ್ನಾಟಕ ಇರುವವರೆಗೆ ಕೆಂಪೇಗೌಡರನ್ನು ಮರೆಯುವ ಹಾಗಿಲ್ಲ. ಬೆಂಗಳೂರು ಎಂಬ ಈ ಅದ್ಭುತವನ್ನು ಕಟ್ಟಿದ್ದು ಕೆಂಪೇಗೌಡ. ಶಿವಗಂಗೆಯ ಭಕ್ತ. ಕೆರೆಗಳನ್ನು ಕಟ್ಟಿಸಿದ್ದು ಕೆಂಪೇಗೌಡರ ಸಾಧನೆ. ಆದರೆ.. ಅಂತಹ ಮಹಾನ್‌ ವ್ಯಕ್ತಿಯ ಬಗ್ಗೆ ಸಿನಿಮಾ ಮಾಡುವುದಕ್ಕೆ ಯಾರೋ ಹೊರಟರೆ.. ಅಡ್ಡಗಾಲು ಹಾಕುತ್ತಿದ್ದಾರೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಧರ್ಮಭೀರು ನಾಡಪ್ರಭು ಕೆಂಪೇಗೌಡ. ಕೆಲವೇ ದಿನಗಳ ಹಿಂದೆ ಘೋಷಣೆಯಾಗಿದ್ದ ಸಿನಿಮಾ. ಕಿರಣ್ ತೋಟಂಬೈಲ್ ಸಿನಿಮಾವನ್ನು ಘೋಷಿಸಿದ್ದರು. ನಿರ್ದೇಶಕರಾಗಿ ದಿನೇಶ್‌ ಬಾಬು ಆಯ್ಕೆಯಾಗಿದ್ದರು. ಈ ಸಿನಿಮಾಗೀಗ ನಿರ್ದೇಶಕ ನಾಗಾಭರಣ ಬ್ರೇಕ್‌ ಹಾಕಿದ್ಧಾರೆ. ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಧರ್ಮಭೀರು ನಾಡಪ್ರಭು ಕೆಂಪೇಗೌಡ ಸಿನಿಮಾಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಈಶ್ವರ ಎಂಟರ್‌ಟೈನ್‌ಮೆಂಟ್ ಪ್ರೈವೇಟ್‌ ಲಿಮಿಟೆಡ್ ಬಳಿ ನಾಡಪ್ರಭು ಕೆಂಪೇಗೌಡ ಟೈಟಲ್‌ ಇದೆ. ಡಾ ಎಂ ಎನ್ ಶಿವರುದ್ರಪ್ಪ, ರಾಹುಲ್ ಗುಂಡಾಲ, ನಿರ್ದೇಶಕ ಟಿ ಎಸ್ ನಾಗಾಭರಣ, ಸಹ ಲೇಖಕಿ ಪ್ರತಿಭಾ ನಂದಕುಮಾರ್ ಈ ಸಂಸ್ಥೆಯ ಪ್ರತಿನಿಧಿಗಳು. ನಾಡಪ್ರಭು ಕೆಂಪೇಗೌಡ ಚಿತ್ರದ ಚಿತ್ರಕಥೆಯ ಟ್ರೇಡ್‌ಮಾರ್ಕ್, ಶೀರ್ಷಿಕೆ, ಬ್ರಾಂಡ್, ರೀಮೇಕ್‌.. ಸೇರಿದಂತೆ ಒಂದು ಸಿನಿಮಾದ ಯಾವೆಲ್ಲ ಬೌದ್ಧಿಕ ಹಕ್ಕುಗಳಿರುತ್ತವೆಯೋ.. ಅದೆಲ್ಲವೂ ತಮ್ಮದೇ ಸ್ವತ್ತು. ಬೇರೆಯವರು ಬಳಸುವ ಹಾಗಿಲ್ಲ ಎಂದು ನಾಗಾಭರಣ ಕೋರ್ಟಿಗೆ ಹೋಗಿದ್ದಾರೆ. ಪ್ರಸ್ತಾವಿತ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಚಲನಚಿತ್ರ ಕುರಿತ ನಿರ್ಮಾಣ, ನಿರ್ದೇಶನ, ಜಾಹೀರಾತು ನೀಡಬಾರದು ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ. ನಾಡಪ್ರಭು ಕೆಂಪೇಗೌಡ’ ಕುರಿತಂತೆ ಟಿ ಎಸ್ ನಾಗಾಭರಣ ಮತ್ತು ನಿರ್ಮಾಪಕ ಡಾ ಎಂ ಎನ್ ಶಿವರುದ್ರಪ್ಪ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿ, ನಂತರ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಏನಿದು ನಾಗಾಭರಣರ ಕೆಂಪೇಗೌಡರ ಸಿನಿಮಾ ಕಥೆ..?

ನಾಗಾಭರಣ ಅವರು ಕೆಂಪೇಗೌಡರ ಸಿನಿಮಾ ಘೋಷಿಸಿ 12 ವರ್ಷಗಳಾಗಿವೆ. ಕೆಂಪೇಗೌಡರ ಪಾತ್ರಕ್ಕೆ ಡಾಲಿ ಧನಂಜಯ ಅವರ ಆಯ್ಕೆ ಇತ್ತೀಚೆಗೆ ಆಗಿದೆ. ಆದರೆ.. 12 ವರ್ಷಗಳಿಂದ ಟೈಟಲ್‌ ನವೀಕರಣವಾಗುತ್ತಿದೆಯೇ ಹೊರತು, ಬೇರೆ ಬೆಳವಣಿಗೆಗಳಾಗಿಲ್ಲ. ಸದ್ಯಕ್ಕೆ ಕೋರ್ಟ್‌ ತಡೆಯಾಜ್ಞೆ ನೀಡಿದ್ದರೂ, ಇದು ಶಾಶ್ವತ ಎಂದು ಹೇಳುವುದಕ್ಕೆ ಬರುವುದಿಲ್ಲ.

ಐತಿಹಾಸಿಕ, ಪೌರಾಣಿಕ ಚಿತ್ರಗಳ ಕಾಪಿರೈಟ್‌ ಯಾವ ಸ್ವತ್ತೂ ಅಲ್ಲ..!

ಇದು ಈ ಹಿಂದೆ ಹಲವು ಬಾರಿ ಸಾಬೀತಾಗಿರುವ ವಿಷಯ. ಐತಿಹಾಸಿಕ ಹಾಗೂ ಪೌರಾಣಿಕ ಕಥೆಗಳು ಯಾರ ಸ್ವತ್ತೂ ಅಲ್ಲ. ರಾಮಾಯಣ, ಮಹಾಭಾರತದ ಕಥೆಗಳು ನೂರಾರು ಸಿನಿಮಾಗಳಾಗಿ ಬಂದಿವೆ. ಇನ್ನು ಇತಿಹಾಸದ ವಿಷಯಕ್ಕೆ ಬಂದರೆ.. ಕನ್ನಡದಲ್ಲಿಯೇ

ಕವಿರತ್ನ ಕಾಳಿದಾಸ (ಡಾ.ರಾಜ್‌) ಮಹಾಕವಿ ಕಾಳಿದಾಸ (ಹೊನ್ನಪ್ಪ ಭಾಗವತರ್)‌

ಬಸವಣ್ಣನವ ಕುರಿತಂತೆ.. ಜಗಜ್ಯೋತಿ ಬಸವೇಶ್ವರ (ಹೊನ್ನಪ್ಪ ಭಾಗವತರ್)‌ ಹಾಗೂ ಕ್ರಾಂತಿಯೋಗಿ ಬಸವಣ್ಣ (ಅಶೋಕ್‌) ಸೇರಿದಂತೆ ಹಲವು ಚಿತ್ರಗಳು ಬಂದಿವೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೂಡ ಎರಡು ಬಾರಿ ಸಿನಿಮಾ ಆಗಿದೆ. ಸಿಂಧೂರ ಲಕ್ಷ್ಮಣ ಚಿತ್ರವೂ ಅಷ್ಟೆ, 2ನೇ ಬಾರಿ ಸಿನಿಮಾ ಆಗುತ್ತಿದೆ.

ಇನ್ನು ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲೂ ಈ ರೀತಿಯ ಒಬ್ಬರೇ ವ್ಯಕ್ತಿ, ಜೀವನ ಚರಿತ್ರೆಗಳ ಕುರಿತಂತೆ ಹಲವು ಸಿನಿಮಾಗಳು ಬಂದಿವೆ. ಭಗತ್‌ ಸಿಂಗ್‌ ಜೀವನದ ಸಿನಿಮಾದಲ್ಲಂತೂ ಒಂದೇ ವಾರದಲ್ಲಿ ಎರಡು ಮೂರು ಸಿನಿಮಾಗಳು ರಿಲೀಸ್‌ ಆದ ದಾಖಲೆ ಇದೆ. ಗಾಂಧೀಜಿ, ಅಂಬೇಡ್ಕರ್‌, ಶಿವಾಜಿ, ಸುಭಾಷ್‌ ಚಂದ್ರ ಭೋಸ್..‌ ಸೇರಿದಂತೆ ಹಲವು ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಹಲವು ಚಿತ್ರಗಳು ಬಂದಿವೆ. ಕಾಪಿರೈಟ್‌ ಹಕ್ಕು ಅಲ್ಲಿ ಕೆಲಸ ಮಾಡಿಲ್ಲ.

ಒಟ್ಟಿನಲ್ಲಿ ನಾಗಾಭರಣ ಅವರೇನೋ ತಡೆ ತಂದಿದ್ದಾರೆ. ಆದರೆ.. ಇತಿಹಾಸದಲ್ಲಿದ್ದ ವ್ಯಕ್ತಿಯ ಜೀವನ ಸಿನಿಮಾ ಆಗುವ ನಿರ್ಧಾರಕ್ಕೆ ಹಕ್ಕು ಸ್ವಾಮ್ಯ ಉಲ್ಲಂಘನೆ ಪ್ರಸ್ತುತವಾಗುತ್ತದೆಯೇ.. ಇಲ್ಲವೇ.. ಎಂಬುದನ್ನು ಕೋರ್ಟು ನಿರ್ಧಾರ ಮಾಡಲಿದೆ.

ಕಾನೂನು ತೊಡಕು ಆಗುವುದಿಲ್ಲ : ಕಿರಣ್‌ ತೋಟಂಬೈಲ್‌

ನಮಗೆ ಕೋರ್ಟ್‌ ಕಾನೂನು ತೊಡಕು ಆಗುವುದಿಲ್ಲ. ಏಕೆಂದರೆ ನಾವು ಮಾಡ್ತಿರೋದು ಸ್ಟ್ರೈಟ್‌ ಇಂಗ್ಲಿಷ್‌ ಸಿನಿಮಾ. ಕನ್ನಡದದಲ್ಲೂ ತಯಾರಾಗಲಿದೆ. ನಾವು ಮಾಡುತ್ತಿರುವುದು ಇಂಗ್ಲೀಷ್ ಸಿನಿಮಾ. ಇದು ಬ್ರಿಟೀಷ್ ಕೌನ್ಸಿಲ್, ಐಎಂಡಿಬಿ ಎಲ್ಲರದಲ್ಲೂ ನಮ್ಮ ಸಿನಿಮಾ ರಿಜಿಸ್ಟರ್ ಆಗಿದೆ. ಇಂಗ್ಲೀಷ್ ಸಿನಿಮಾ ಆಗಿರುವುದರಿಂದ ಇಲ್ಲಿನ ಕಾನೂನು ಅದಕ್ಕೆ ತೊಡಕಾಗುವುದಿಲ್ಲ ಎನ್ನುವ ಕಿರಣ್‌ ತೋಟಂಬೈಲ್‌ ಜೂನ್‌ 27ರಂದು ಕೆಂಪೇಗೌಡರ ಜಯಂತಿ ದಿನವೇ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಿದ್ದಾರೆ ನಿರ್ಮಾಪಕ ಕಿರಣ್‌ ತೋಟಂಬೈಲ್.‌ 100 ಕೋಟಿ ಬಜೆಟ್ಟಿನಲ್ಲಿ ಸಿನಿಮಾ ಸಿದ್ಧವಾಗುತ್ತಿದ್ದು, ಹೀರೋ ಯಾರು ಎನ್ನುವುದನ್ನ ಜೂನ್‌ 27ರಂದೇ ಹೇಳಲಿದ್ಧಾರಂತೆ. ನಮ್ಮ ಹೀರೋ ಹೈಟ್‌ ಇದ್ಧಾರೆ. ಪಾತ್ರಕ್ಕೆ ಸರಿಯಾಗಿ ಸೂಟ್‌ ಆಗಬಲ್ಲ ಕಲಾವಿದ ಎನ್ನುವ ಕಿರಣ್‌ ತೋಟಂಬೈಲ್‌ ನಾಗಾಭರಣ ಅವರ ಕೋರ್ಟ್‌ ಅರ್ಜಿಯನ್ನು ನಮ್ಮ ಲೀಗಲ್‌ ಟೀಂ ನೋಡಿಕೊಳ್ಳಲಿದೆ ಎಂದಿದ್ದಾರೆ.

Tags: #ಕಿರಣ್ ತೋಟಂಬೈಲ್ #ಧರ್ಮಭೀರುನಾಡಪ್ರಭುಕೆಂಪೇಗೌಡ #ನಾಗಾಭರಣ #KiranThotambail #DharmbhiruNadaprabhuKempegowda #Nagabharana
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.